📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಒಂದು ದಿನ ಕೈದಿ ಆಗ್ಬೇಕಾ? ಜೈಲು ಜೀವನ ಹೇಗಿರುತ್ತೆ ಅನ್ನೋ ಕುತೂಹಲಕ್ಕೀಗ ಚಂಚಲ್‌ಗುಡ ಜೈಲು ಬಾಗಿಲು ಈಗ ಸಾರ್ವಜನಿಕರಿಗೆ ಓಪನ್!

    ಹೈದರಾಬಾದ್‌ನ ಪ್ರಸಿದ್ಧ ಚಂಚಲ್‌ಗುಡ ಕೇಂದ್ರ ಕಾರಾಗೃಹ ಇದೀಗ ಹೊಸ ಪ್ರಯೋಗದ ಮೂಲಕ ದೇಶದ ಗಮನ ಸೆಳೆಯುತ್ತಿದೆ. “ಫೀಲ್ ದಿ ಜೈಲ್” ಎಂಬ ವಿನೂತನ ಯೋಜನೆಯಡಿ ಸಾಮಾನ್ಯ ನಾಗರಿಕರಿಗೂ ಜೈಲು ಜೀವನದ ಅನುಭವ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಅಪರಾಧದ ಪರಿಣಾಮ ಎಷ್ಟು ಕಠಿಣವಾಗಿರುತ್ತದೆ ಎಂಬುದನ್ನು ಜನರಿಗೆ ನೇರವಾಗಿ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ತೆಲಂಗಾಣ ಬಂಧಿಖಾನೆ ಇಲಾಖೆ ಈ ವಿಶೇಷ ಕಾರ್ಯಕ್ರಮ ಆರಂಭಿಸಿದೆ.

    ಈ ಯೋಜನೆಗೆ ತೆಲಂಗಾಣ ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ಚಾಲನೆ ನೀಡಿದ್ದು, ಸಮಾಜದಲ್ಲಿ ಅಪರಾಧ ಮುಕ್ತ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಣಿಕ ಕೋಪ ಅಥವಾ ಆವೇಶದಲ್ಲಿ ಮಾಡುವ ತಪ್ಪು ವ್ಯಕ್ತಿಯ ಬದುಕನ್ನು ಹೇಗೆ ನಾಲ್ಕು ಗೋಡೆಗಳ ನಡುವೆ ಸೀಮಿತಗೊಳಿಸುತ್ತದೆ ಎಂಬ ಅನುಭವವನ್ನು ಜನರು ಇಲ್ಲಿ ನೇರವಾಗಿ ಅರಿಯಬಹುದು.

    Also Read  ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು

    ಚಂಚಲ್‌ಗುಡ ಜೈಲು ಆವರಣದಲ್ಲಿ ನಿರ್ಮಿಸಲಾದ ವಿಶೇಷ ಮ್ಯೂಸಿಯಂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ನಿಜಾಮರ ಕಾಲದ ಕಾರಾಗೃಹದ ಇತಿಹಾಸವನ್ನು ಇಲ್ಲಿ ಸಂಗ್ರಹಿಸಲಾಗಿದೆ. ಹಳೆಯ ಕಾಲದಲ್ಲಿ ಕೈದಿಗಳಿಗೆ ಹಾಕುತ್ತಿದ್ದ ಭಾರವಾದ ಬೇಡಿಗಳು, ಪುರಾತನ ಆಯುಧಗಳು, ಶಿಕ್ಷೆಗೆ ಬಳಸುತ್ತಿದ್ದ ನೇಣುಗಂಬ, ಅಪರೂಪದ ದಾಖಲೆಗಳು ಸೇರಿದಂತೆ ಅನೇಕ ಐತಿಹಾಸಿಕ ವಸ್ತುಗಳು ಪ್ರದರ್ಶನಕ್ಕಿಡಲಾಗಿದೆ.

    ಇದಲ್ಲದೆ “ಒಂದು ದಿನದ ಜೈಲು ಅನುಭವ” ಎಂಬ ವಿಶೇಷ ವ್ಯವಸ್ಥೆಯೂ ಜನರಲ್ಲಿ ಕುತೂಹಲ ಮೂಡಿಸಿದೆ. ಭಾಗವಹಿಸುವವರು ಕೈದಿಗಳಂತೆ ವಿಶೇಷ ಕೊಠಡಿಗಳಲ್ಲಿ ವಾಸಿಸಬೇಕು. ಕೈದಿಗಳಿಗೆ ನೀಡುವ ಆಹಾರವೇ ಇಲ್ಲಿ ನೀಡಲಾಗುತ್ತದೆ. ಜೊತೆಗೆ ಲೋಹದ ತಟ್ಟೆ, ಕುಡಿಯುವ ನೀರಿನ ಗ್ಲಾಸ್, ಕಪ್ಪು ಬ್ಲಾಂಕೆಟ್‌ಗಳಂತಹ ಜೈಲು ಉಪಕರಣಗಳನ್ನು ಬಳಸಬೇಕಾಗುತ್ತದೆ.

    ಜೈಲು ಜೀವನದ ಕಠಿಣತೆ ಹಾಗೂ ನಿಯಮಶಿಸ್ತಿನ ನೈಜ ಅನುಭವ ನೀಡುವ ಈ ಯೋಜನೆ ಯುವಜನತೆಯಲ್ಲಿ ವಿಶೇಷ ಆಸಕ್ತಿ ಮೂಡಿಸಿದ್ದು, “ಅಪರಾಧಕ್ಕಿಂತ ಜೀವನವೇ ಅಮೂಲ್ಯ” ಎಂಬ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನವಾಗಿ ಕಾಣಲಾಗುತ್ತಿದೆ.

    ##FeelTheJail #ChanchalgudaJail #Hyderabad #JailExperience #Telangana #PrisonLife #ViralNews #KannadaNews #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ‘ಸೈಯಾರಾ’ ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ
    ಒಂಟಿ – ಆಂಟಿಯರ ನಂಬಿಕೆ ಗಳಿಸಿ ಕೊಲೆಗೈಯುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ …!
    ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
    ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
    TVKಗೆ ಟಕ್ಕರ್? ಅಜಿತ್ ಫ್ಯಾನ್ಸ್‌ TMMK ಎಂಟ್ರಿ!ದಳಪತಿಗೆ ಎದುರಾಗಿ ಅಜಿತ್ ಫ್ಯಾನ್ಸ್‌ ಪಕ್ಷ!
    ನಕಲಿ ಔಷಧ ದಂಧೆ: ಜೀವ ಉಳಿಸಬೇಕಾದ ಔಷಧವೇ ಹಣ ಮಾಡುವ ದಂಧೆಯಾಯಿತೇ?
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ಲಾರ್ಡ್ಸ್‌ನಲ್ಲಿ ಭಾರತ ಮಹಿಳಾ ತಂಡದ ಐತಿಹಾಸಿಕ ಟೆಸ್ಟ್ ಜಯ; ದೇಶದಲ್ಲಿ ಕ್ರಿಕೆಟ್‌ನಿಂದ ಟೆನಿಸ್‌ವರೆಗೆ… ಕ್ರೀಡೆಗಳತ್ತ ಹೆಚ್ಚುತ್ತಿರುವ ಆಸಕ್ತಿ..!
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ಬ್ರೇಕಿಂಗ್ ನ್ಯೂಸ್..!final‘ಸಚಿವರ ಪಟ್ಟಿ’ ವೈರಲ್: ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ!
    ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾ ಅಪ್ಡೇಟ್: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿರೋ ಯಶ್ ಡೈಲಾಗ್!
    Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
    ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….
    ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
    ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
     ಇಂದಿನ ಪೋಷಕರ ಅತಿಮುದ್ದು…ಕೇಳಿದ್ದನ್ನೆಲ್ಲ ಕೊಡಿಸುವ ಪೋಷಕರು ಒಳ್ಳೆಯವರೇ…???ಇದೇ ಮಕ್ಕಳ ಭವಿಷ್ಯಕ್ಕೆ ದೊಡ್ಡ ಅಪಾಯವೇ?
    ‘ಕಾಕ್ರೋಚ್’ಗಳ ದಂಗೆಗೆ ದೆಹಲಿ ನಡುಗಿತೇ? ವಿದ್ಯಾರ್ಥಿಗಳ ‘ಸಂಸತ್ ಚಲೋ’ಗೆ ಲಾಠಿಚಾರ್ಜ್… ಸಂಸತ್ತಿನಲ್ಲೂ ಸದ್ದು!ಕಲಾಪ ಮುಂದೂಡಿಕೆ?!
    ದಿಶಾ ಸಾಲಿಯನ್ ಕೇಸ್‌ ರೀಓಪನ್‌…ಸುಶಾಂತ್ ಸಿಂಗ್ ಸಾವಿನ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ?
    ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ