📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!

    ಅವಿವೇಕದ ಅತಿರೇಕ — “ಜನಪ್ರತಿನಿಧಿ” ಎಂಬ ಹೆಸರಿನಲ್ಲಿ ಸಾರ್ವಜನಿಕ ಶಿಸ್ತಿಗೆ ಧಕ್ಕೆ

    ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅನಧಿಕೃತ ಪ್ಲೆಕ್ಸ್, ಕಟೌಟ್ ಮತ್ತು ಬ್ಯಾನರ್ ಸಂಸ್ಕೃತಿ ಕೇವಲ ಅಸಹ್ಯಕರವಾಗಿರುವುದಲ್ಲ, ಸಾರ್ವಜನಿಕ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಕಾನೂನು, ನ್ಯಾಯಾಲಯದ ಆದೇಶ, ಪರಿಸರ—allವನ್ನು ನಿರ್ಲಕ್ಷಿಸಿ ತಮ್ಮ ಸ್ವಾರ್ಥದ ಪ್ರಚಾರಕ್ಕಾಗಿ ರಸ್ತೆಗಳು, ವೃತ್ತಗಳು, ಸರ್ಕಾರಿ ಜಾಗಗಳು ತುಂಬಿಸುವ ಈ “ಸೋ-ಕಾಲ್ಡ್” ಜನಪ್ರತಿನಿಧಿಗಳ ವರ್ತನೆ ವಿಷಾದ ಕರ.

    ಇನ್ನಷ್ಟು ವಿಷಾದಕರ ಸಂಗತಿ ಎಂದರೆ, ಇಂತಹ ಅಕ್ರಮಗಳಿಗೆ ಬೆಂಬಲ ನೀಡುವ ಕೆಲ ಸಂಘ ಸಂಸ್ಥೆಗಳು ಮತ್ತು ಅರಿವು ಇಲ್ಲದ ಅನುಯಾಯಿಗಳು. ಸಮಾಜಕ್ಕೆ ಮಾದರಿ ಆಗಬೇಕಾದವರು ನಿಯಮ ಮೀರಿ ನಡೆದುಕೊಂಡರೆ, ಸಾಮಾನ್ಯ ಜನರಲ್ಲಿ ತಪ್ಪು ಸಂದೇಶವೇ ಹೋಗುತ್ತದೆ. ಇದು ನಾಯಕತ್ವವಲ್ಲ—ಇದು ಜವಾಬ್ದಾರಿಯಿಲ್ಲದ, ಅಸಂವೇದನಶೀಲ careless ನಡೆ.dontcare ಮನಸ್ಥಿತಿ.

    Also Read  79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!

    ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳೇ ಸಾಕು ಪ್ರಚಾರಕ್ಕೆ. ಹೆಸರು-ಖ್ಯಾತಿ ಬೇಕಾದರೆ ಉತ್ತಮ ಕೆಲಸ ಮಾಡಿ, ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಿ. ಜನರಿಗೆ ತೊಂದರೆ ಕೊಟ್ಟು, ನಗರವನ್ನು ಕುರೂಪಗೊಳಿಸಿ ಗಮನ ಸೆಳೆಯುವ ಪ್ರಯತ್ನಗಳು ಅಸಹ್ಯಕರ.


    ಮುಖ್ಯ ಸಮಸ್ಯೆಗಳು:

    • ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುವ ಪ್ಲಾಸ್ಟಿಕ್ ಪ್ಲೆಕ್ಸ್
    • ರಸ್ತೆ ತಿರುವುಗಳು, ಪ್ರಮುಖ ಸ್ಥಳಗಳಲ್ಲಿ ಚಾಲನೆಗೆ ಅಡ್ಡಿ → ಅಪಘಾತಗಳ ಅಪಾಯ
    • ಸಾರ್ವಜನಿಕ ಆಸ್ತಿಯ ದುರ್ಬಳಕೆ
    • ಕಾನೂನು ಹಾಗೂ ನ್ಯಾಯಾಲಯದ ಆದೇಶಗಳ ನಿರ್ಲಕ್ಷ್ಯ
    • ತೆರವು ಮಾಡಿದ ನಂತರ ಸರಿಯಾದ ವಿಲೇವಾರಿ ಇಲ್ಲದೆ ಮತ್ತಷ್ಟು ಮಾಲಿನ್ಯ
    • ಹಬ್ಬ-ಉತ್ಸವಗಳ ಹೆಸರಿನಲ್ಲಿ ಹಣದ ದುರುಪಯೋಗ

    ಅಧಿಕಾರಿಗಳ ನಿಷ್ಕ್ರಿಯತೆ ಕೂಡ ಖಂಡನೀಯ. ಕಾನೂನು ಅಧಿಕಾರ ಇದ್ದೂ ಕ್ರಮ ಕೈಗೊಳ್ಳದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸುತ್ತಿದೆ.


    ಕಟ್ಟುನಿಟ್ಟಿನ ಕ್ರಮ ಅಗತ್ಯ:

    • ಭಾರೀ ದಂಡ ಕಡ್ಡಾಯ:
      ಅನಧಿಕೃತ ಪ್ಲೆಕ್ಸ್‌ನಲ್ಲಿ ಯಾರ ಫೋಟೋ/ಹೆಸರು ಇದ್ದರೂ, ಹಾಗೆಯೇ ಅದನ್ನು ಅಳವಡಿಸಿದವರ ಮೇಲೂ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು.
    • ಹೆಸರನ್ನು ಬಹಿರಂಗಪಡಿಸುವ ಕ್ರಮ:
      ನಿಯಮ ಉಲ್ಲಂಘಿಸಿದವರ ಹೆಸರುಗಳನ್ನು ಪತ್ರಿಕೆ, ಮಾಧ್ಯಮಗಳಲ್ಲಿ ಪ್ರಕಟಿಸಬೇಕು.
    • ತಕ್ಷಣ ತೆರವು + ವೆಚ್ಚ ವಸೂಲಿ:
      ಪ್ಲೆಕ್ಸ್ ತೆಗೆದುಹಾಕುವ ವೆಚ್ಚವನ್ನು ಸಂಬಂಧಿಸಿದವರಿಂದಲೇ ವಸೂಲಿ ಮಾಡಬೇಕು.
    Also Read  ಸಾಲದ ಭಾರವೂ ಶಿಸ್ತಿನ ಮುಂದೆ ಸೋಲುತ್ತದೆ…! ಇದಕ್ಕೆ ಸಾಕ್ಷಿಯೇ ಸಾಕ್ಷಿ..!₹80 ಲಕ್ಷ ಸಾಲ-1 ವರ್ಷ ಮತ್ತು ಒಂದು ಡೆಡಿಕೇಟೆಡ್ ಟಾರ್ಗೆಟ್..!

    ಜನಸಾಮಾನ್ಯರ ಪಾಲ್ಗೊಳ್ಳಿಕೆ — ಫ್ಲೆಕ್ಸ್ ಫ್ರೀ ನಗರಕ್ಕೆ ಮಾರ್ಗ:

    • ಹೆಲ್ಪ್‌ಲೈನ್ ವ್ಯವಸ್ಥೆ:
      ಅನಧಿಕೃತ ಪ್ಲೆಕ್ಸ್ ಕಂಡರೆ ತಕ್ಷಣ ದೂರು ನೀಡಲು ವಿಶೇಷ ಹೆಲ್ಪ್‌ಲೈನ್ ಅಥವಾ ಮೊಬೈಲ್ ಆಪ್ ವ್ಯವಸ್ಥೆ ಇರಬೇಕು.
    • ಪ್ರಮಾಣದೊಂದಿಗೆ ದೂರು → ಪ್ರೋತ್ಸಾಹ ಧನ:
      ಫೋಟೋ/ವೀಡಿಯೋ ಸಾಕ್ಷ್ಯಗಳೊಂದಿಗೆ ದೂರು ನೀಡಿದ ನಾಗರಿಕರಿಗೆ ಪ್ರೋತ್ಸಾಹ ಧನ (reward) ನೀಡುವ ವ್ಯವಸ್ಥೆ ಮಾಡಿದರೆ ಜನರು ಸಕ್ರಿಯವಾಗಿ ಭಾಗವಹಿಸುತ್ತಾರೆ.
    • ಜನಜಾಗೃತಿ ಅಭಿಯಾನ:
      “Flex-Free City” ಎಂಬ ಅಭಿಯಾನವನ್ನು ಪ್ರಚಾರ ಮಾಡಿ, ಶಾಲೆ-ಕಾಲೇಜುಗಳು, ಯುವ ಸಂಘಟನೆಗಳು, ಸ್ಥಳೀಯ ನಿವಾಸಿಗಳನ್ನು ಒಳಗೊಂಡಂತೆ ಜಾಗೃತಿ ಮೂಡಿಸಬೇಕು.
    • ಸಾಮಾಜಿಕ ಹೊಣೆಗಾರಿಕೆ ನಿರ್ಮಾಣ:
      ಪ್ಲೆಕ್ಸ್ ಹಾಕಿಸುವವರನ್ನು ಪ್ರಶ್ನಿಸುವ ಧೈರ್ಯ ಸಾಮಾನ್ಯ ಜನರಲ್ಲಿ ಬರಬೇಕು. ಇದು ಕೇವಲ ಸರ್ಕಾರದ ಕೆಲಸವಲ್ಲ—ಪ್ರತಿ ನಾಗರಿಕರ ಜವಾಬ್ದಾರಿ.
    Also Read  ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour

    ರಚನಾತ್ಮಕ ಸಲಹೆಗಳು:

    • ಸರಿಯಾದ ಜಾಗಗಳಲ್ಲಿ ಮಾತ್ರ ಬಳಕೆ:
      ಸಾರ್ವಜನಿಕ ಶೌಚಾಲಯ, ಗೋಡೆಗಳ ರಕ್ಷಣೆ, ಸ್ವಚ್ಛತಾ ಜಾಗೃತಿ, ಟ್ರಾಫಿಕ್ ನಿಯಮಗಳ ಬಗ್ಗೆ ಮಾಹಿತಿ ನೀಡಲು ಪ್ಲೆಕ್ಸ್ ಬಳಸಬಹುದು.
    • ಅಕ್ರಮ ಪ್ರದೇಶಗಳಲ್ಲಿ ನಿಗಾವಳಿ:
      ಪ್ಲೆಕ್ಸ್ ಜೊತೆಗೆ CCTV ಕ್ಯಾಮೆರಾ, “ನಿಗಾವಳಿ ಪ್ರದೇಶ” ಫಲಕ, ಉತ್ತಮ ಬೆಳಕು ವ್ಯವಸ್ಥೆ.
    • ಪರಿಸರ ಸ್ನೇಹಿ ಪರ್ಯಾಯಗಳು:
      ಡಿಜಿಟಲ್ ಡಿಸ್ಪ್ಲೇ, ಬಟ್ಟೆಯ ಬ್ಯಾನರ್—ಪ್ಲಾಸ್ಟಿಕ್ ಸಂಪೂರ್ಣ ನಿಷೇಧ.

    ಜನಪ್ರತಿನಿಧಿ ಎಂದರೆ ಜನರಿಗಾಗಿ ಕೆಲಸ ಮಾಡುವವರು—ಜನರಿಗೆ ತೊಂದರೆ ಕೊಡುವವರು ಅಲ್ಲ.
    ಜನಸಾಮಾನ್ಯರು, ಅಧಿಕಾರಿಗಳು, ಮತ್ತು ನಾಯಕರು—ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ “Flex-Free City” ಸಾಧ್ಯ.
    ಪ್ರಚಾರಕ್ಕಿಂತ ಜವಾಬ್ದಾರಿ ಮುಖ್ಯ — ಇದೇ ನಿಜವಾದ ನಾಯಕತ್ವ.

    ##FlexFreeCity #StopIllegalFlex #RealLeadersNoFlex#dakshina Kannada news#public voice

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ FIR ..!ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ರಾಜಕೀಯ ಕಾವು ಏರಿಕೆ!
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    ಜಾತಿ ನಿಂದನೆಗೆ ಕೋರ್ಟ್ ಹಾಕಿದ ಕಾನೂನು ಸ್ಪಷ್ಟತೆ!?
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಸಿಜೆಪಿಯ ಪ್ರತಿಭಟನೆ ಬಗ್ಗೆ ತನಿಖೆ ನಡೆಸಲು ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
    ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ 10 ವರ್ಷ ಜೈಲು, ₹10 ಕೋಟಿ ದಂಡ!
    ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
    ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಎಂಟ್ರಿ…“ಕೋಲ್ಡ್ ವಾರ್”. ದಿಗ್ಗಜರ ಟೆನ್ಷನ್!₹10ಕ್ಕೆ ಅಂಬಾನಿ ಐಸ್‌ಕ್ರೀಂ…‘ಬಾಂಬೆ ಕ್ರೀಮರಿ’ ಧಮಾಕಾ!
    ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ SIR ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಳಿಸಬಹುದಾ? ಈಗಲೇ ಎಚ್ಚರ!
    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
    🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
    ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
    ಇದು ಕಾಕ್ರೋಚ್ ಪವರ್, ಯಾರು ಮಾಡಲಾಗದ್ದನ್ನು ಮಾಡಿದ  ಸ್ಟೂಡೆಂಟ್ಸ್
    ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?
    ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    ಸಾರ್ವಜನಿಕವಲ್ಲದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದರೆ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
    ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
    “ದಪ್ಪ, ಕಪ್ಪು ಎಂಬ ಅವಹೇಳನ… ವರದಕ್ಷಿಣೆ ಕಿರುಕುಳ… ಕೊನೆಗೆ ಕತ್ತು ಹಿಸುಕಿ ಹತ್ಯೆ! ಧಾರವಾಡದ ಘಟನೆ ಸಮಾಜದ ಮನಸ್ಸನ್ನೇ ನಡುಗಿಸಿದೆ”