📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕನಕಪುರ ಬಂಡೆ ಬಿಜೆಪಿಗೆ ಎಂಬ ಬೋಗಸ್ ಸುದ್ದಿ

    ಕನಕಪುರ ಬಂಡೆ ಖ್ಯಾತಿಯ ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಆಗೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆಂಬ ಮಾಹಿತಿಯು ಫೋಟೋ ಸಹಿತ ಸಾಮಾಜಿಕ ತಾಣದಲ್ಲಿ ಪ್ರಕಟವಾಗಿರುವುದು ಸಾಕಷ್ಟು ಜನರಿಗೆ ಗೊಂದಲ ತರಿಸಿದೆ. ಆದರೆ ಅದು ಸತ್ಯವಲ್ಲ ಭೋಗಸ್ ಸುದ್ದಿ.

    ರಾಜಕೀಯದಲ್ಲಿ, ಯಾವುದೇ ಸಂದರ್ಭ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈ ಹಿಂದೆ, ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಬಗ್ಗೆ ಬಹಳ ಕಠಿಣವಾಗಿ ಮಾತನಾಡುತ್ತಿದ್ದ ರಾಘವ್ ಚಡ್ಡ ಬಿಜೆಪಿಗೆ ಸೇರ್ಪಡೆಯಾಗಿದ್ದೆ  ಸಾಕ್ಷಿ.

    ಆದರೆ ಡಿಕೆ ಶಿವಕುಮಾರ್ ಕಾಂಗ್ರೆಸ್ನ ಭಕ್ತ, ಕಾಂಗ್ರೆಸಿಗಾಗಿ ಸಾಕಷ್ಟು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದಂತಹ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಭಕ್ತರಲ್ಲ. ಆದರೆ ಡಿಕೆ ಶಿವಕುಮಾರ್ ಕಾಂಗ್ರೆಸ್ ಭಕ್ತ ಎಂಬ ವಿಚಾರ ಪಕ್ಷಕ್ಕೆ ಗೊತ್ತಿದೆ. ಆದ್ರೂ ಡಿಕೆಗೆ, ಅವರ ಕೆಲಸಕ್ಕೆ ಸರಿಸಮಾನವಾದ ಸ್ಥಾನಮಾನ ಸಿಗುತ್ತಿಲ್ಲ, ಕೆಲಸವನ್ನೇ ಮಾಡದವರು ಸ್ಥಾನಮಾನ ಪಡೆದು ಆನಂದಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ಬೇಸರ ಹೊಂದಿದ್ದಾರೆ ಎನ್ನುವುದೂ ಸತ್ಯವೇ. ಆದ್ರೂ ಪಕ್ಷದ ಹೈಕಮಾಂಡ್, ಈ ವಿಚಾರದಲ್ಲಿ ಡಿಕೆ ಜೊತೆಗೆ ನಿಲ್ಲಲೂ ಸಿದ್ದವಿಲ್ಲ ಹಾಗೆಯೇ ಡಿಕೆಯನ್ನು ಬಿಟ್ಟುಕೊಡಲೂ ಅವರಿಂದ ಆಗುತ್ತಿಲ್ಲ.

    ಹೆಚ್ಚು ಕಡಿಮೆ ಕಳೆದ ಆರು ತಿಂಗಳಿನಿಂದ ನಾಯಕತ್ವ ಬದಲಾವಣೆ ಆಗಬೇಕು ಎಂಬ ನಿರೀಕ್ಷೆಯಲ್ಲಿ ಡಿಕೆ ಶಿವಕುಮಾರ್ ಇದ್ದರು. ಆದರದು ಆಗುತ್ತಿಲ್ಲ. ಸಿದ್ದರಾಮಯ್ಯನವರ ಕೈ ಮೇಲಾಗುತ್ತಿದೆ. ಹೈಕಮಾಂಡ್ ಡಿಕೆ ಶಿವಕುಮಾರ್ ವಿಚಾರದಲ್ಲಿ  ಸೇಫ್ ಜೋನ್ ಎಂದು ಭಾವಿಸಿದ್ದಾರೆ. ಡಿಕೆ, ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ, ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ಡ್ಯಾಮೇಜ್ ಮಾಡುವುದಿಲ್ಲ ಎಂಬ ಧೈರ್ಯದಲ್ಲಿ ಸಿದ್ದರಾಮಯ್ಯರನ್ನು ಮುಂದುವರೆಸುತ್ತಿದ್ದಾರೆ. ಅತ್ತ ಸಿದ್ದರಾಮಯ್ಯರವರನ್ನು ತೆಗೆದರೆ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಾರೆಂಬ ಸಂಶಯ ಹೈಕಮಾಂಡ್ಗಿದೆ. ಈ ಕಾರಣದಿಂದಾಗಿ, ಡಿಕೆ ಶಿವಕುಮಾರ್ ಅವರ ಬೇಡಿಕೆಗೆ ಹೈಕಮಾಂಡ್ ತೇಪೆ ಹಾಕುತ್ತಿದೆಯಷ್ಟೇ.  ಯಾವುದೇ ನಿರ್ಧಾರವನ್ನು ಪ್ರಕಟಿಸುತ್ತಿಲ್ಲ. ನಿರ್ಧಾರ ಪ್ರಕಟಿಸುವ ಯೋಚನೆಯಲ್ಲೂ ಅದು ಇಲ್ಲ.

    Also Read   ಇಂದಿನ ಪೋಷಕರ ಅತಿಮುದ್ದು…ಕೇಳಿದ್ದನ್ನೆಲ್ಲ ಕೊಡಿಸುವ ಪೋಷಕರು ಒಳ್ಳೆಯವರೇ…???ಇದೇ ಮಕ್ಕಳ ಭವಿಷ್ಯಕ್ಕೆ ದೊಡ್ಡ ಅಪಾಯವೇ?

    ಇದರ ಮಧ್ಯೆ, ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ಕಡೆಯಿಂದ ಸ್ಪಷ್ಟ ಆಹ್ವಾನ ಹೋಗಿದೆ. ನೀವು ಪಕ್ಷಕ್ಕೆ ಬನ್ನಿ, ಮುಂದಿನ ಮುಖ್ಯಮಂತ್ರಿ ನೀವೇ ಆಗುತ್ತೀರಿ ಎಂಬುದನ್ನು ನಾವು ನಿಮಗೆ ಪ್ರಾಮಿಸ್ ಮಾಡುತ್ತೇವೆ. ಸುಮ್ಮನೆ ಮುಳುಗುತ್ತಿರುವ ಹಡಗಿನಲ್ಲಿ ಯಾಕೆ ಮುಂದುವರೆಯುತ್ತಿರಿ. ಆರ್ಥಿಕವಾಗಿ ಸಾಕಷ್ಟು ಬೆಳೆದಿದ್ದೀರಿ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ಬಲಿಷ್ಠ ಸರ್ಕಾರದ ಅಗತ್ಯತೆ ಇದೆ ಏನಂತೀರಿ ಎಂಬ ಪ್ರಶ್ನೆಯನ್ನು ಡಿಕೆ ಮುಂದೆ ಇಡಲಾಗಿದೆ. ಇದೆಲ್ಲಾ ಹಳೆಯ ಸುದ್ದಿಯೂ ಆಗಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆದಿದೆ ಕೂಡ. ಇದನ್ನು ಸ್ವತಃ ಡಿಕೆ ಶಿವಕುಮಾರ್ ಕೂಡ ಹೇಳಿಕೊಂಡಿದ್ದಾರೆ.

    ಆದರೆ ಕಾಂಗ್ರೆಸ್ ಪಕ್ಷದಲ್ಲಿ, ಡಿಕೆ ವಿಚಾರವಾಗಿ ಒಂದಷ್ಟು ಸಚಿವರು ನಡೆದುಕೊಳ್ಳುತ್ತಿರುವ ರೀತಿ ಮತ್ತು ಪಕ್ಷದ ಅಧ್ಯಕ್ಷ ಎಂಬುದನ್ನು ನೋಡದೆ ಗೌರವವನ್ನು ಕೊಡದೆ ಆಡಿಕೊಳ್ಳುತ್ತಿರುವ ರೀತಿ, ಡಿಕೆ ಮತ್ತು ಡಿಕೆ ಬೆಂಬಲಿಗರಲ್ಲಿ ಬೇಸರ ತರಿಸಿದ್ದರಲ್ಲಿ ಯಾವ ತಪ್ಪು ಇಲ್ಲ. ಈ ಹಿಂದೆ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡದ್ದು ಡಿಕೆ ವಿಚಾರದಲ್ಲಿ ನಡೆದುಕೊಂಡ ರೀತಿಗಲ್ಲ. ಬದಲಿಗೆ, ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ ಕಾಮೆಂಟ್ ಗಾಗಿ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವಾಗಿ ಮಾತನಾಡಿದರೆ ಯಾವ ಕ್ರಮವೂ ಇಲ್ಲ ಅಂದರೆ, ಇಲ್ಲಿ ಪಕ್ಷ ಬೆಳೆಸಿದ್ದಕ್ಕೆ ಏನು ಕೊಡುಗೆ ಸಿಗುತ್ತಿದೆ ಎಂಬ ಪ್ರಶ್ನೆ ಡಿಕೆ ಬೆಂಬಲಿಗರಿಂದ ಬರುತ್ತಿರುವುದು ಸತ್ಯವೇ. ಇದೆಲ್ಲವೂ ಡಿಕೆ ಬಿಜೆಪಿಗೆ ಹೋದರು ಅಚ್ಚರಿ ಇಲ್ಲ ಎಂಬ ಮಾತುಗಳಿಗೆ ಇಂಬು ಕೊಡಬಹುದು, ಅದು ಸುಲಭವೇ?

    Also Read  ತಿಮರೋಡಿ ಸೇರಿ ನಾಲ್ವರಿಗೆ ಕೇಸ್…

    ಹಾಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಹಾಲಿ ಉಪಮುಖ್ಯಮಂತ್ರಿ ಅಷ್ಟು ಈಜಿಯಾಗಿ ಇನ್ನೊಂದು ಪಕ್ಷದ ತೆಕ್ಕೆಗೆ ಹೋಗಲು ಸಾಧ್ಯವೇ? ಹೋದರೆ, ಆ ಪಕ್ಷದ ಆಡಳಿತ ಬರುತ್ತದೆಯೇ? ಸಿದ್ದರಾಮಯ್ಯನವರ ಪಕ್ಷ ಬಿದ್ದು ಹೋಗುತ್ತದೆಯೇ?  ಇನ್ನೂ ಎರಡು ವರ್ಷದ ಆಡಳಿತ ಬಾಕಿ ಇದೆ. ಹೀಗಿರುವಾಗ ಈಗಲೇ ಡಿಕೆ ಶಿವಕುಮಾರ್ ಪಕ್ಷ ಬಿಟ್ಟು ಹೋಗಿ ಹೊಸ ಸರ್ಕಾರ ಮಾಡಬೇಕು ಎಂದರೆ ಕನಿಷ್ಠ ನೂರರಷ್ಟು ಶಾಸಕರನ್ನು ತಮ್ಮ ಜೊತೆಗೆ ಕರೆದೊಯ್ಯ ಬೇಕಾಗುತ್ತದೆ. ಅದು ಸಾಧ್ಯವೇ ಅನ್ನುವುದು ಪ್ರಶ್ನೆ? ಸದ್ಯದ ಮಟ್ಟಿಗೆ ಅದು ಅಸಂಭವ. ಡಿಕೆ ಶಿವಕುಮಾರ್ ಪಕ್ಷ ತ್ಯಜಿಸಿದರೆ ಕಾಂಗ್ರೆಸ್ ಬಲ ನೂರಕ್ಕೆ ನೂರರಷ್ಟು ಕುಸಿಯುತ್ತದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಕಾಂಗ್ರೆಸ್ಸಿಗೆ ದೊಡ್ಡ ಡ್ಯಾಮೇಜ್ ಆಗುವುದು ಗ್ಯಾರಂಟಿ. ಆದರೆ ಈ ಕ್ಷಣಕ್ಕೆ ಡಿಕೆ ಶಿವಕುಮಾರ್ ಗೆ ಲಾಭವೇನು? ಸಿದ್ದರಾಮಯ್ಯರವರನ್ನು ಪದಚ್ಯುತಗೊಳಿಸಲು ಸಾಧ್ಯವಾಗಿಲ್ಲ ಅಂದರೆ, ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳಲಾಗಲಿಲ್ಲ ಅಂದರೆ ಈ ಒಂದು ಪಕ್ಷಾಂತರದಿಂದ ಏನು ಉಪಯೋಗ?

    Also Read  ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ

    ಹಾಗಾಗಿ ಪದ್ಯಕ್ಕೆ ಡಿಕೆ ಶಿವಕುಮಾರ್ ಬಿಜೆಪಿಯ ತೆಕ್ಕೆಗೆ ಹೋಗಲಾರರು. 1 ಥರ್ಡ್ ಮೆಜಾರಿಟಿ ಶಾಸಕರ ಬೆಂಬಲ ಇಲ್ಲದೆ ಡಿಕೆ ಅಂತಹ ನಿರ್ಧಾರ ತೆಗೆದುಕೊಳ್ಳಲಾರರು. ಒಂದೊಮ್ಮೆ ಅಂತಹ ನಿರ್ಧಾರಕ್ಕೆ ಅವರು ಬರುತ್ತಾರೆಂದರೆ ಮುಂದಿನ ಚುನಾವಣೆಯ ಹೊತ್ತಿಗೆ ಬರಬಹುದು ಅಷ್ಟೇ. ಹಾಗಾಗಿ, ಈಗ ಪ್ರಕಟವಾಗಿರುವಂತಹ ಸುದ್ದಿ ಬೋಗಸ್ ಮತ್ತು ಆ ಫೋಟೋ ಕೂಡ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಚಂದದಲ್ಲಿ ತಯಾರು ಮಾಡಲಾದ ನಕಲಿ ಫೋಟೋ. ಸೇಮ್ ಫೋಟೋವನ್ನು ಕಾಂಗ್ರೆಸ್ಸಿಗೆ ಮೋದಿ ಬಂದ ಹಾಗೆ ಕೌಂಟರ್ ಆಗಿ ತಯಾರ ಮಾಡಿ ಕಳುಹಿಸಿದ್ದಾರೆ. ಅದನ್ನೂ ನೋಡಿ. ಈ ಎರಡೂ ಫೋಟೋ ನಕಲಿಗಳೆ ಆಗಿವೆ.

    -ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಅರ್ಧ ಸಂಬಳ ಸಾಕು ಮತ್ತು VIP ಸೌಲಭ್ಯಕ್ಕೆ ‘ನೋ’ ಎಂದ ನ್ಯಾಯಾಧೀಶ!
    ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
    ದೆಹಲಿ ಕೆಂಪುಕೋಟೆ ಸ್ಫೋಟಕ್ಕೆ AQIS ಸಂಪರ್ಕ: UNSC ವರದಿಯಿಂದ ಬೆಚ್ಚಿಬಿದ್ದ ಭದ್ರತಾ ವಲಯ
    ಇನ್ಮುಂದೆ ಗೂಗಲ್‌ನಲ್ಲಿ ನಿಮ್ಮ ಹಳೆಯ ಕೋರ್ಟ್ ಕೇಸ್‌ಗಳ ವಿವರಗಳನ್ನುಮರೆಮಾಡಬಹುದು-ದೆಹಲಿ ಹೈಕೋರ್ಟ್ ಗೈಡ್‌ಲೈನ್ಸ್ ರಿಲೀಸ್! 
    ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
    ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ಬರದ ಭೀತಿ ಎದುರಿಸುತ್ತಿರುವ ಕರ್ನಾಟಕ ,ಮಳೆ ಇಲ್ಲ… ಬೆಳೆ ಇಲ್ಲ… ಅನ್ನ ಇಲ್ಲ!,ಕೇಂದ್ರಕ್ಕೆ ನೆರವಿಗಾಗಿ ಡಿ ಕೆ ಶಿ ಮನವಿ
    ನೂರರ ಸಂಭ್ರಮದಲ್ಲಿ “ಜೈ” ತುಳು ಸಿನಿಮಾ
    ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅಪಮಾನ!
    MRPL ಸ್ಫೋಟದ ಭೀಕರತೆಗೆ 9 ಜನಕ್ಕೆ ತೀವ್ರ ಗಾಯ ….ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ…!
    ರೆಸ್ಯೂಮ್ ಅಲ್ಲ, ಪ್ರಾಜೆಕ್ಟ್ ಮಾತಾಡಿತು! ಒಂದೇ ವರ್ಷದಲ್ಲಿ ₹10 ಲಕ್ಷ ಸಂಬಳದಿಂದ ₹80 LPA ಗಳಿಸಿದ ಯುವತಿಯ ಯಶಸ್ಸಿನ ಸೂತ್ರ ವೈರಲ್..!!
    ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್
    ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
    ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲಾಟಿನಂ ಕಿರೀಟ!
    ಅಮ್ಮನ ಅಂತ್ಯಕ್ರಿಯೆಯಲ್ಲಿ ಗಳಗಳನೇ ಕಣ್ಣೀರಿಟ್ಟು,ಚಿತೆಯ ಮುಂದೆ ಕುಸಿದುಬಿದ್ದ ಚಿನ್ಮಯ್ ದಾಸ್!ಐದು ಗಂಟೆಯ ಪೆರೋಲ್… ಜೈಲಿನಿಂದ ಬಂದ ಸನ್ಯಾಸಿ ಮಗ…
    ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
    ಕೊಡಗು ಬ್ರೇಕಿಂಗ್: ಮಾಜಿ ಸೈನಿಕನ ಮನೆಗೆ ನುಗ್ಗಿದ ಕಳ್ಳರು – ಚಿನ್ನ, ನಗದು ಸೇರಿ ಅಮೂಲ್ಯ ವಸ್ತುಗಳ ದೋಚಾಟ
    ಟ್ರಂಪ್ ಮೇಲೆ ದಾಳಿ ಯತ್ನ -ಗನ್ ಸದ್ದು ಮತ್ತೆ ವೈಟ್ ಹೌಸ್ ರಾಜಕೀಯವನ್ನ ನಡುಗಿಸಿದೆ!ಭದ್ರತಾ ಪ್ರಶ್ನೆ!
    ಬಸ್‌ ಚರಂಡಿಗೆ ಬಿದ್ದರೂ ಪ್ರಯಾಣಿಕರಿಗೆ ಏನೂ ಆಗಲಿಲ್ಲ!ಕಣ್ಣೆದುರೇ ಮಹಾ ಅವಘಡ… ಶ್ರೀಕೃಷ್ಣನೇ ಕಾಪಾಡಿದಂತೆ ಪಾರಾದ ಪ್ರಯಾಣಿಕರು!
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
    ಬೀದಿ ನಾಯಿಗಳ ಹಾವಳಿ ಮಾನವ ಜೀವ ರಕ್ಷಣೆಗೆ ಮೊದಲ ಆದ್ಯತೆ — ಸುಪ್ರೀಂ ಕೋರ್ಟ್‌ನ ಕಠಿಣ ನಿಲುವು
    ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
    ಇಬ್ಬರ ಸಣ್ಣ ಜಗಳದ ಎಫೆಕ್ಟ್ ನೋಡಿ..ಕಡಬದಲ್ಲಿ ಹೈಡ್ರಾಮಾ!ಸಿಲ್ಲಿAngry ಮೂಡ್‌ನಲ್ಲಿ ಎಸೆದ car ಕೀ ಚರಂಡಿಗೆ…
    ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.