📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?

    ಕರ್ನಾಟಕದಲ್ಲಿ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿರುವ ಪ್ರಕರಣದಲ್ಲಿ, ಅಮೆರಿಕ ಮೂಲದ ಮಿಷನರಿ ಸಂಸ್ಥೆ The Timothy Initiative (TTI) ಹಾಗೂ ಅದರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಆರು ಮಂದಿಯ ವಿರುದ್ಧ ಬೆಂಗಳೂರು ನಗರದ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಯುಎಪಿಎ (UAPA) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ED) ನೀಡಿದ ದೂರಿನ ಆಧಾರದ ಮೇಲೆ ದಾಖಲಿಸಲಾಗಿದೆ.

    ATMಗಳಿಂದ ₹95 ಕೋಟಿ ಡ್ರಾ! 1000 ಕಾರ್ಡ್‌ಗಳ ಹಿಂದೆ ಏನಿದೆ ರಹಸ್ಯ?

    ಇಡಿ ತನಿಖೆಯ ಪ್ರಕಾರ, 2025ರ ನವೆಂಬರ್‌ನಿಂದ 2026ರ ಏಪ್ರಿಲ್‌ವರೆಗೆ ಸುಮಾರು ₹92.55 ಕೋಟಿ ರಿಂದ ₹95 ಕೋಟಿ ವರೆಗೆ ವಿದೇಶಿ ಹಣವನ್ನು ಭಾರತದಲ್ಲಿ ಅಕ್ರಮವಾಗಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಣವನ್ನು ನೇರ ಬ್ಯಾಂಕಿಂಗ್ ವ್ಯವಸ್ಥೆಯ ಬದಲು ವಿದೇಶಿ ಡೆಬಿಟ್ ಕಾರ್ಡ್‌ಗಳ ಮೂಲಕ ಎಟಿಎಂನಲ್ಲಿ ಹಣ ತೆಗೆಯುವ ಮೂಲಕ ಬಳಕೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ.

    Also Read  “ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”

    1,000ಕ್ಕೂ ಹೆಚ್ಚು ಡೆಬಿಟ್ ಕಾರ್ಡ್‌ಗಳ ಜಾಲ!

    ಇಡಿ ತನಿಖೆಯಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಎಂದರೆ, ಅಮೆರಿಕದ ಬ್ಯಾಂಕ್‌ನಿಂದ ನೀಡಲಾಗಿದ್ದ 1,000ಕ್ಕೂ ಹೆಚ್ಚು ಡೆಬಿಟ್ ಕಾರ್ಡ್‌ಗಳನ್ನು ಬಳಸಲಾಗಿದೆ ಎನ್ನುವ ಆರೋಪ. ಹಲವಾರು ಕಾರ್ಡ್‌ಗಳಲ್ಲಿ “Santosh Kumar” ಎಂಬ ಒಂದೇ ಹೆಸರು ಕಂಡುಬಂದಿದ್ದು, ಬೇರೆ ಬೇರೆ ಪ್ರದೇಶಗಳ ಗುರುತುಗಳನ್ನು ಬಳಸಿ ಹಣ ವಹಿವಾಟು ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

    ಕರ್ನಾಟಕದ ಸಂಪರ್ಕ ಮತ್ತು ಆರೋಪ?

    ಈ ಪ್ರಕರಣದಲ್ಲಿ ಬೆಂಗಳೂರಿನ ಕೆಲ ವ್ಯಕ್ತಿಗಳ ಹೆಸರು ಕೂಡ ಕೇಳಿಬಂದಿದೆ. ಹಣಕಾಸು ನಿರ್ವಹಣೆ, ವಿದೇಶಿ ಹಣದ ವಹಿವಾಟು ಹಾಗೂ ಶೆಲ್ ಕಂಪನಿಗಳ ಮೂಲಕ ಹಣ ಸಾಗಣೆ ನಡೆದಿರಬಹುದು ಎಂಬ ಶಂಕೆಯನ್ನು ತನಿಖಾ ಸಂಸ್ಥೆಗಳು ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ಕೂಡ ತನಿಖೆ ನಡೆಸುತ್ತಿದೆ. 

    Also Read  “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”

    ಇಡಿ ಮತ್ತು ಪೊಲೀಸರ ಆರೋಪದ ಪ್ರಕಾರ, ಈ ಹಣದ ಒಂದು ಭಾಗವನ್ನು ಮತಾಂತರ ಚಟುವಟಿಕೆಗಳಿಗೆ ಹಾಗೂ ಮತ್ತೊಂದು ಭಾಗವನ್ನು ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಬಳಸಲಾಗಿದೆ. ವಿಶೇಷವಾಗಿ ಛತ್ತೀಸ್‌ಗಢದ ಬಸ್ತರ್ ಮತ್ತು ಧಮ್ತಾರಿ ಭಾಗಗಳಲ್ಲಿ ಕೋಟಿ ಕೋಟಿ ರೂಪಾಯಿ ಹಣ ಹಿಂಪಡೆಯಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. 

    ವಿದೇಶಿ ಹಣವನ್ನು ನಿಯಮಗಳನ್ನು ಮೀರಿ ಭಾರತಕ್ಕೆ ತರಲು ಸಾಧ್ಯವಾಗುತ್ತದೆ.ಹಣದ ಮೂಲವನ್ನು ಮರೆಮಾಚಬಹುದು.ಸ್ಥಳೀಯ ಮಟ್ಟದಲ್ಲಿ ಪ್ರಭಾವ ವಿಸ್ತರಿಸಲು ಬಳಸಬಹುದು.ಮತಾಂತರ ಅಥವಾ ಇತರ ಸಂಘಟನಾ ಚಟುವಟಿಕೆಗಳಿಗೆ ಹಣಕಾಸು ಒದಗಿಸಬಹುದು.ನಕ್ಸಲ್ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಹಣ ತಲುಪಿಸುವ ಸಾಧ್ಯತೆ ಉಂಟಾಗುತ್ತದೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.

    UAPA ಯಾಕೆ ಹಾಕಲಾಗಿದೆ?

    ಯುಎಪಿಎ (Unlawful Activities Prevention Act) ಭಾರತದಲ್ಲಿ ರಾಷ್ಟ್ರದ ಭದ್ರತೆಗೆ ಧಕ್ಕೆ ಉಂಟುಮಾಡುವ ಅಥವಾ ಭಯೋತ್ಪಾದನೆ, ನಿಷೇಧಿತ ಸಂಘಟನೆಗಳಿಗೆ ನೆರವು, ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಳಸುವ ಕಠಿಣ ಕಾನೂನು. ಈ ಪ್ರಕರಣದಲ್ಲಿ ಹಣದ ಹರಿವು ನಕ್ಸಲ್ ಪ್ರಭಾವಿತ ಪ್ರದೇಶಗಳಿಗೆ ಹೋಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

    ##NaxalFundingCase #EDInvestigation #KarnatakaNews #BreakingNewsKannada #UAPAcase #CrimeAlertIndia

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಂಟ್ವಾಳದಲ್ಲಿ ವ್ಯಕ್ತಿಗಳ ಆರೋಪ–ಪ್ರತ್ಯಾರೋಪಕ್ಕಿಂತ “ರಾಜಕೀಯದೊಳಗಿನ ರಾಜಕೀಯ”ಬಿಸಿ…!ಲಾಭ ಯಾರಿಗೆ?
    ತಾಯಿಯನ್ನೇ ಮದುವೆಗೆ ಆಹ್ವಾನಿಸದ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಯುವಕ…!
    ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
    ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
    ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…
    ಆರ್‌ಸಿಬಿ ಎದುರಿಸಲು ರಾಯಲ್ಸ್ ರೆಡಿ??: ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಬಿಹಾರದ ಬಾಲಕ-ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚಿದ ಆ 29 ಎಸೆತಗಳ ರುದ್ರತಾಂಡವ!
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?
    ಗೋವಾ ಕ್ಯಾಲಂಗಟ್ ರೆಸಾರ್ಟ್‌ನಲ್ಲಿ ಕರಾವಳಿಯ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ನಾಪತ್ತೆಯಾದ ಆ ಮಹಿಳೆಗಾಗಿ ತೀವ್ರ ಶೋಧ…
    ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
    ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
    ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಪಂಜಾಬ್‌ನಲ್ಲಿ ಮಹಿಳೆಗೆ ಒಂದೇ ಹೆರಿಗೆಗೆ ಆರು ಮಕ್ಕಳು….!!ನಿಜವೇನು?
    ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ… ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ರೆಡ್ ಅಲರ್ಟ್ ಸನ್ನಾಹ!8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – ಜನರಿಗೆ ಎಚ್ಚರಿಕೆ
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಪುಟ್ಟ ಜೀವವೊಂದು ಬಲಿ.. ಕೆಲವು ಮಕ್ಕಳಿಗೆ ಗಾಯ..
    ಮನುಷ್ಯನಿಗಿಂತ AI ನಿಯಂತ್ರಣ ತಪ್ಪಿ ಶಕ್ತಿಶಾಲಿಯಾದ್ರೆ…ಚೀನಾದ ಎಚ್ಚರಿಕೆ ಬೆಚ್ಚಿಬೀಳಿಸುವಂತಿದೆ!ರಾಷ್ಟ್ರೀಯ ಭದ್ರತೆ ಬಗ್ಗೆ ಶುರುವಾಯ್ತು ಭಾರೀ ಆತಂಕ!
    ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ದೇಶದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್ ಅಂದ್ರೆ ಮಳೆ ಗ್ಯಾರಂಟಿ ಅಲ್ಲ…IMD ಮುನ್ಸೂಚನೆಯನ್ನು ನಿರ್ಲಕ್ಷಿಸಬೇಡಿ!ಅದು  “ಅಪಾಯದ ಸಾಧ್ಯತೆಯ ಎಚ್ಚರಿಕೆ!”
    ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
    ಮೋದಿ ಸರ್ಕಾರಕ್ಕೆ ಮತ್ತೊಂದು ಶಾಕ್ …ಕೇಂದ್ರ ಸಚಿವ ಸಂಪುಟಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ