📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!

    ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಂಟ್ಸ್ ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಮತ್ತು ಕೀಳುಮಟ್ಟದ ಪದಗಳನ್ನು ಬಳಸಿ ಮಾತನಾಡಿರುವ ಆರೋಪದ ಮೇಲೆ ಅನಿತಾ ಕಾಸರಗೋಡು ಅವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಎರಡೂ ಸಮುದಾಯಗಳ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

    ಆರೋಪದ ಪ್ರಕಾರ, ಅನಿತಾ ಕಾಸರಗೋಡು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಲ್ಲದೆ, ಸವಾಲಿನ ಧಾಟಿಯಲ್ಲೂ ಮಾತನಾಡಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಹಲವು ಕಡೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

    ಈ ಸಂಬಂಧ ಬಿರುವೆರ್ ಕುಡ್ಲ ಸಂಘಟನೆಯ ಮುಖಂಡ ರಾಕೇಶ್ ಪೂಜಾರಿ ಅವರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

    Also Read  ಬಾಳೆಕುದ್ರು ಮಠದ ಸ್ವಾಮೀಜಿ ವಿರುದ್ಧ ಭಕ್ತರ ಆಕ್ರೋಶ; ಶಿರ್ವ, ಜಾಗೆಲೆ ಬೃಹತ್ ಪ್ರತಿಭಟನೆ

    ವಿವಾದ ತಾರಕಕ್ಕೇರುತ್ತಿದ್ದಂತೆ ಅನಿತಾ ಕಾಸರಗೋಡು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ತಂಗಿದ್ದರು ಎನ್ನಲಾಗಿದೆ. ಮೊಬೈಲ್ ಲೊಕೇಷನ್ ಮತ್ತು ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಆಕೆಯನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

    ಬಳಿಕ ಆಕೆಯನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅನಿತಾ ಕಾಸರಗೋಡು ಅವರಿಗೆ ಜೂನ್ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

    ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಹೇಳಿಕೆಗಳಿಗೂ ಕಾನೂನಿನ ಹೊಣೆಗಾರಿಕೆ ಅನ್ವಯಿಸುತ್ತದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ವೈಯಕ್ತಿಕ ಅಸಮಾಧಾನ, ಕೋಪ ಅಥವಾ ನಿರಾಶೆಯ ಸಂದರ್ಭದಲ್ಲಿಯೂ ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಭಾಷೆ ಬಳಸಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂಬ ಸಂದೇಶವನ್ನು ಈ ಪ್ರಕರಣ ನೀಡಿದೆ.

    ##AnithaKasaragodu #MangaloreNews #BillavaCommunity #BuntsCommunity #SocialMediaCase #KarnatakaNews #LegalAction #ViralVideo #Mangaluru #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
    ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
    ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರದ ನಿಯಂತ್ರಣವೇ ಇಲ್ಲ! ಆರ್‌ಟಿಐಗೂ ಬಾಧ್ಯತೆ ಇಲ್ಲ ಎಂದ ಸಿಐಸಿ
    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಮತದಾನದ ಹಕ್ಕು ಉಳಿಸಿಕೊಳ್ಳಿ: ಎಸ್‌ಐಆರ್ ಗಡುವು ಆಗಸ್ಟ್.17ರವರೆಗೆ ವಿಸ್ತರಣೆ
    ಬಂಟ್ವಾಳ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ!ಸಂಜೆ ಜನಸಂದಣಿಯಲ್ಲೇ ರಕ್ತದೋಕುಳಿ..ಬಸ್‌ಗಾಗಿ ಕಾಯುತ್ತಿದ್ದ ಯುವತಿ ಮೇಲೆ ಮಾರಕ ದಾಳಿ ಕೊಚ್ಚಿ ಕೊಲೆ..!
    ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!
    ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    ಪಶ್ಚಿಮ ಬಂಗಾಳ ಅಪ್ರಾಪ್ತೆಯ ಸಾವು, ಸಾರ್ವಜನಿಕರಿಂದ ಶಂಕಿತನ ಲಿಂಚಿಂಗ್ ..!ಬಾಲಕಿಯ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ;
    17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
    ಮಕ್ಕಳ ಕೈಗೆ AI ಕೊಡುವ ಮುನ್ನ ಸರ್ಕಾರ ಯೋಚಿಸಬೇಕಾದ ಗಂಭೀರ ವಿಷಯಗಳೇನು…?!!
    ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
    ನಾಲ್ಕು ವರ್ಷದ ಬಾಲಕಿ  ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪೊಲೀಸರು
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ದಕ್ಷಿಣ ಕನ್ನಡದಲ್ಲಿ ಮಳೆ ದುರಂತ: ಎರಡು ಮೃತದೇಹಗಳು ನೀರಲ್ಲಿ ಪತ್ತೆ
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
    “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್
    🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
    “ಗೃಹಲಕ್ಷ್ಮಿಗೆ 3 ವರ್ಷಗಳ ಸಂಭ್ರಮ…!–ಆದರೆ ಹಣಕ್ಕಾಗಿ ಕಾಯುತ್ತಿರುವ ಗೃಹಲಕ್ಷ್ಮಿಯರು”ಪಿಂಕ್ ಲೈಟ್‌ನಲ್ಲಿ ಗೃಹಲಕ್ಷ್ಮಿ … ಖಾತೆಯಲ್ಲಿ ಹಣ ಮಾತ್ರ ಇಲ್ಲ!
    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
    ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!