📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ

    ಒಂದು ಕಾಲದಲ್ಲಿ 20-30 ಸಾವಿರ ರೂ.ಗೆ ಸಿಗುತ್ತಿದ್ದ 10 ಗ್ರಾಂ ಚಿನ್ನ ಇಂದು ಕೆಲವೆಡೆ ಒಂದೂವರೆ ಲಕ್ಷ ರೂಪಾಯಿ ಗಡಿ ದಾಟಿದೆ. ಬೆಲೆ ಕೇಳಿದರೆ ಸಾಮಾನ್ಯ ಜನರಿಗೆ ಶಾಕ್ ಆಗುತ್ತಿದೆ. ಆದರೆ ಭಾರತೀಯರ ಚಿನ್ನದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ…ಚಿಕ್ಕದಾದ್ರೂ ಸರಿ ಅಗತ್ಯ ಬಂದ್ರೆ ಖರೀದಿಸಲೇ ಬೇಕು, ಕೆಲವ್ ಸಂದರ್ಭ ಅನಿವಾರ್ಯ ಕೂಡ ..

    ಚಿನ್ನದ ಬೆಲೆ ಗಗನಕ್ಕೇರಿತು! ಮಹಿಳೆಯರ ನೆಚ್ಚಿನ ಆಭರಣ ಈಗ ಮತ್ತಷ್ಟು ಅಮೂಲ್ಯ.

    ಗೋಲ್ಡ್ ದರ ಏರು ಮುಖದಲ್ಲಿ.. ಬೆಳ್ಳಿಯ ದರ ಎರಡೇ ದಿನದಲ್ಲಿ ಆರು ಸಾವಿರ ಏರಿಕೆ

    ಇಡೀ ಜಗತ್ತಿನ ಆರ್ಥಿಕತೆ ನಿಂತಿರುವುದೇ ಚಿನ್ನ ಬೆಳ್ಳಿಯಂತಹ ಭೂಮಿಯ ಒಡಲಿನಿಂದ ಸಿಗುವಂತಹ ಖನಿಜ ಸಂಪತ್ತಿನಿಂದ. ಡಾಲರ್ ದರ ಕೂಡ ಇದಕ್ಕೆ ಹೊರತಾಗಿಲ್ಲ. ಒಂದೇ ಸಮನೆ ಚಿನ್ನ ಬೆಳ್ಳಿಯ ದರ ಏರುತ್ತಾ ಸಾಗುತ್ತಿದೆ. ಯಾವುದೇ ಬಲಾಡ್ಯರ ಹಿಡಿತಕ್ಕೂ ಆ ದರ ಏರಿಕೆ ಕಡಿವಾಣ ಸಿಗುತ್ತಿಲ್ಲ.


    ಶನಿವಾರ ಒಂದು ಗ್ರಾಂ ಗೆ13, 300ರಷ್ಟಿದ್ದ 22 ಕ್ಯಾರೆಟ್ ಚಿನ್ನದ ದರ ಇಂದು ಬರೋಬ್ಬರಿ 220 ನಷ್ಟು ಏರಿಕೆ ಕಂಡಿದೆ. ಅದೇ ರೀತಿ ಬೆಳ್ಳಿ ೧ ಕೆ.ಜಿಗೆ ಎರಡು ಲಕ್ಷದ 52 ಸಾವಿರ ದರ ಶನಿವಾರದ ಸಂಜೆಯ ಹೊತ್ತಿಗೆ ಇತ್ತು. ಅದೇ ಒಂದು ಕೆಜಿ ಬೆಳ್ಳಿಗೆ ಸೋಮವಾರ ಮುಂಜಾನೆಯ ಹೊತ್ತಿಗೆ ಎರಡು ಲಕ್ಷದ 58000 ಆಗಿದೆ. ಬರೋಬ್ಬರಿ 6000 ನೆಗೆತ ಕಂಡಿದೆ.
    ಚಿನ್ನವೂ ಸಹ 10 ಗ್ರಾಂ ಗೆ ಎರಡು ಸಾವಿರದ ಇನ್ನೂರು ರೂಪಾಯಿ ನೆಗೆತ ಕಂಡಿದೆ.
    ಇದೇ ರೀತಿಯ ದರ ಏರಿಕೆಯು, ಅರಾಜಕತೆ ಹಾಗೂ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಯಾರ ನಿಯಂತ್ರಣಕ್ಕೂ ಸಿಗದಂತೆ ಏರುತ್ತಿರುವ ಈ ದರವನ್ನು ಕಂಟ್ರೋಲಿಗೆ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಅನಾರೋಗ್ಯಕರ ಪ್ರೀತಿಯಲ್ಲಿ ದರ ಏರಿಕೆಯಾಗುತ್ತಿದೆ.

    Also Read  ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!

    ಒಟ್ಟಾರೆಯಾಗಿ ಜನರ ಆದಾಯದಲ್ಲಿ ಯಾವುದೇ ಏರಿಕೆ ಕಾಣಿಸದಿದ್ದರೂ, ಚಿನ್ನ ಬೆಳ್ಳಿಯಂತಹ ಪ್ರಮುಖ ಆರ್ಥಿಕ ಮೂಲದ ದರವು ಏರಿಕೆಯಾಗುತ್ತಿರುವುದು ಸಾಮಾನ್ಯ ಜನರ ಮನೆಯ ಮೇಲು ಅದರ ಪರಿಣಾಮ ಬೀರುವುದು ಖಚಿತ ಅಂತಲೆ ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

    ಯಾವುದೇ ವಸ್ತುವಿನ ಬೆಲೆ ಆರೋಗ್ಯಕರವಾದ ರೀತಿಯಲ್ಲಿ ಇರಬೇಕು ಆ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ದೇಶ ಹಾಗೂ ಜಗತ್ತಿನ ಎಲ್ಲಾ ದೇಶಗಳ ಆಡಳಿತದ ಕರ್ತವ್ಯವಾಗಿರಬೇಕಿತ್ತು. ಆದರೆ ಈಗ, ಜಗತ್ತಿನ ಯಾವ ದೇಶದ ಆಡಳಿತಕ್ಕೂ ಸೊಪ್ಪು ಹಾಕದ ರೀತಿಯಲ್ಲಿ ನೆಗೆತ ಕಾಣುತ್ತಿರುವುದು ಭವಿಷ್ಯಕ್ಕೆ ಮಾರಕವಾಗಬಹುದು ಎನ್ನಲಾಗುತ್ತಿದೆ

    ಭಾರತೀಯರ ಬದುಕಿನಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ ಮಹಿಳೆಯರಿಗೆ ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದು ಭಾವನೆ, ಸಂಪ್ರದಾಯ ಮತ್ತು ಭದ್ರತೆಯ ಸಂಕೇತ. ಮದುವೆ, ನಾಮಕರಣ, ಹಬ್ಬ-ಹರಿದಿನ, ಶುಭ ಸಮಾರಂಭ ಹೀಗೆ ಯಾವುದೇ ವಿಶೇಷ ಸಂದರ್ಭ ಚಿನ್ನವಿಲ್ಲದೆ ಪೂರ್ಣವಾಗುವುದಿಲ್ಲ.

    Also Read  ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ

    ಈಗ ಚಿನ್ನದ ಬೆಲೆ ಐತಿಹಾಸಿಕ ಏರಿಕೆ ಕಂಡಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು ₹1.00 ಲಕ್ಷದಿಂದ ₹1.10 ಲಕ್ಷ ಗಡಿ ದಾಟಿದೆ. ಇದರಿಂದ ಚಿನ್ನ ಖರೀದಿಸಲು ಯೋಜಿಸಿದ್ದ ಕುಟುಂಬಗಳು ಮತ್ತು ಮಹಿಳೆಯರಲ್ಲಿ ಚರ್ಚೆ ಜೋರಾಗಿದೆ. “ಇನ್ನೂ ಏರುತ್ತದೆಯೇ ಅಥವಾ ಇಳಿಯುತ್ತದೆಯೇ?” ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

    ಭಾರತೀಯ ಕುಟುಂಬಗಳಲ್ಲಿ ಚಿನ್ನವನ್ನು ಯಾವಾಗಲೂ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಷೇರು ಮಾರುಕಟ್ಟೆ ಏರಿಳಿತ ಕಂಡರೂ, ಆರ್ಥಿಕ ಅನಿಶ್ಚಿತತೆ ಎದುರಾದರೂ, ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುವ ಆಸ್ತಿಯಾಗಿದೆ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕಾಗಿಯೇ ಅನೇಕ ಕುಟುಂಬಗಳು ತಮ್ಮ ಉಳಿತಾಯದ ಒಂದು ಭಾಗವನ್ನು ಚಿನ್ನದ ರೂಪದಲ್ಲಿ ಇಡುತ್ತಾರೆ.

    ತಜ್ಞರ ಪ್ರಕಾರ ಜಾಗತಿಕ ಆರ್ಥಿಕ ಅನಿಶ್ಚಿತತೆ, ಯುದ್ಧದ ಆತಂಕ, ಡಾಲರ್ ಮೌಲ್ಯದ ಏರಿಳಿತ ಹಾಗೂ ಸುರಕ್ಷಿತ ಹೂಡಿಕೆಯತ್ತ ಜನರ ಒಲವು ಹೆಚ್ಚುತ್ತಿರುವುದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

    Also Read  24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ

    ಒಂದು ಕಾಲದಲ್ಲಿ “ಚಿನ್ನ ಖರೀದಿಸೋಣ” ಎಂದು ಸುಲಭವಾಗಿ ನಿರ್ಧಾರ ಮಾಡುತ್ತಿದ್ದ ಕುಟುಂಬಗಳು ಇಂದು ಬೆಲೆ ಕೇಳಿ ಅಚ್ಚರಿ ಪಡುತ್ತಿವೆ. ಆದರೆ ಬೆಲೆ ಎಷ್ಟೇ ಏರಿದರೂ ಭಾರತೀಯರ ಚಿನ್ನದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಏಕೆಂದರೆ ಚಿನ್ನ ಕೇವಲ ಲೋಹವಲ್ಲ, ಅದು ಭಾರತೀಯ ಸಂಸ್ಕೃತಿ, ಕುಟುಂಬದ ಗೌರವ ಮತ್ತು ಭವಿಷ್ಯದ ಭದ್ರತೆಯ ಪ್ರತೀಕವಾಗಿದೆ.

    ಹೀಗಾಗಿ ಈಗ ಎಲ್ಲರಲ್ಲೂ ಒಂದೇ ಪ್ರಶ್ನೆ – ಚಿನ್ನದ ಬೆಲೆ ಇನ್ನೂ ಎಷ್ಟು ಏರಲಿದೆ? ಅಥವಾ ಖರೀದಿಸಲು ಇದೇ ಸರಿಯಾದ ಸಮಯವೇ? ಉತ್ತರ ಮುಂದಿನ ದಿನಗಳ ಮಾರುಕಟ್ಟೆ ಬೆಳವಣಿಗೆಗಳ ಮೇಲೆ ನಿಂತಿದೆ..

    ##GoldRateToday #GoldPriceIndia #GoldNews #KannadaNews #GoldInvestment #GoldLovers

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
    ಶಾಂತಿ ಕಾಪಾಡಿ, ವದಂತಿಗಳಿಗೆ ಕಿವಿಗೊಡಬೇಡಿ: ಪ್ರತಿಭಟನಾಕಾರರಿಗೆ ದೆಹಲಿ ಪೊಲೀಸರ ಮನವಿ
    ಗೃಹ ಜ್ಯೋತಿ ….ಯೋಜನೆ ಪರಿಶೀಲನೆಗೆ ಜುಲೈ 31 ಅಂತಿಮ ಗಡುವಲ್ಲ; ಮೆಸ್ಕಾಂ ವ್ಯಾಪ್ತಿಯಲ್ಲೂ ಆಗಸ್ಟ್ ಅಂತ್ಯದವರೆಗೆ ಸರ್ವೇ ಮುಂದುವರಿಕೆ
    ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
    ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
    ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
    ಬ್ರಹ್ಮಾವರ ಅಪಾರ್ಟ್‌ಮೆಂಟ್ ರೂಮಿನಲ್ಲಿ ಯುವತಿಯ ನಿಗೂಢ ಸಾವು
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
    ರಾಷ್ಟ್ರೀಯ ಹೆದ್ದಾರಿ ಪೊಳಲಿ ದ್ವಾರದ ಸಮೀಪ ಭಾರೀ ಗಾತ್ರದ ಮರ ಬಿದ್ದು ಕಾರ್ ಜಖಂ, ಚಾಲಕ ಆಸ್ಪತ್ರೆಗೆ ದಾಖಲು
    ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
    🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
    ವಿದ್ಯಾರ್ಥಿ ಪ್ರತಿಭಟನಾ ಪ್ರಕರಣಗಳು: ಎಫ್‌ಐಆರ್‌ ಹಿಂಪಡೆಯಲು ಸುಪ್ರೀಂ ಕೋರ್ಟ್‌ ಮಹತ್ವದ ಸ್ಪಷ್ಟನೆ
    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?
    ಉಡುಪಿ ವಿಧಾನಸಭಾ ಚುನಾವಣೆಗೆ ರೆಡಿಯಾದ ಕಾಂಚನ್..!
    ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
    ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ
    ರಷ್ಯಾ–ಉಕ್ರೇನ್ ಯುದ್ಧ ಡ್ರೋನ್ ದಾಳಿಗೆ ರಾಜೀವ್ ಗುಪ್ತಾರ “ಕುಸುಮ್ ಗ್ರೂಪ್‌-ಔಷಧ ಘಟಕ “ಧ್ವಂಸ….!
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
     “ತಪ್ಪು ಮಾಡಿದ್ರೆ ಕೈ-ಕಾಲು ಕತ್ತರಿಸ್ಬೇಕು, ಆಗಲೇ ಕಾನೂನಿನ ಭಯ ಬರೋದು! “ಗಲ್ಫ್ ದೇಶಗಳ ಮಾದರಿ ಶಿಕ್ಷೆ ಜಾರಿಯಾಗ್ಬೇಕು ಅನ್ನೋ ನ್ಯಾಯಮೂರ್ತಿಗಳ ನಿಲುವಿಗೆ ಇಡೀ ರಾಜ್ಯವೇ ಜೈ ಅಂತಿದೆ!
    ದಿವಾ ಉತ್ಕರ್ಷ ಬೆಂಗಳೂರಿನ ಕೇವಲ 17 ವರ್ಷದ ಹೆಣ್ಣುಮಗಳಕಾರ್ಯಕ್ಕೆ ಪ್ರಪಂಚವೇ ಫಿದಾ…ಫೋರ್ಬ್ಸ್ ಟಾಪ್ ಪಟ್ಟಿಯಲ್ಲಿ ಯುವಸ್ಪೂರ್ತಿ ಹೆಸರು ಯಾಕೆ ಬಂತು ..!?
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?
    ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
    ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?