📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ದ.ಕ. ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ?

    ಉಸ್ತುವಾರಿ ಸಚಿವರ ವಿರುದ್ಧ ಹಿರಿಯ ಕಾರ್ಯಕರ್ತರ ಆಕ್ರೋಶ; ಸರ್ಕ್ಯೂಟ್ ಹೌಸ್‌ನಲ್ಲೇ ಬಹಿರಂಗ ಅಸಮಾಧಾನ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲವೇ? ಪಕ್ಷದ ಹಿರಿಯ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಹೆಚ್ಚುತ್ತಿರುವ ಅಸಮಾಧಾನ ಇದೀಗ ಬಹಿರಂಗವಾಗತೊಡಗಿದೆಯೇ? ನಿಗಮ ಮಂಡಳಿಗಳ ನೇಮಕಾತಿ ಮತ್ತು ಪಕ್ಷದ ವಿವಿಧ ಹುದ್ದೆಗಳ ಹಂಚಿಕೆಯಲ್ಲಿ ಹಿರಿಯ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೇ ಅಸಮಾಧಾನದ ಧ್ವನಿ ಕೇಳಿಬಂದಿದೆ ಎಂದು ತಿಳಿದುಬಂದಿದೆ.

    ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಆಪ್ತರೆಂದು ಗುರುತಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಕರುಣಾಕರ ಶೆಟ್ಟಿ ಅವರು ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಸುಮಾರು 35 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿರುವುದೇಕೆ? ನಿಗಮ ಮಂಡಳಿಗಳಲ್ಲಿ ಹಾಗೂ ಪಕ್ಷದ ಹುದ್ದೆಗಳಲ್ಲಿ ಕೆಲವರಿಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ. ಪಕ್ಷಕ್ಕಾಗಿ ದಶಕಗಳಿಂದ ದುಡಿದ ಹಿರಿಯ ಕಾರ್ಯಕರ್ತರಿಗೆ ಅವಕಾಶ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ಏಕೆ ಎಂಬ ಪ್ರಶ್ನೆಗಳನ್ನು ಅವರು ಸಚಿವರ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    Also Read  594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. “ನಾನು ಜಿಲ್ಲಾ ಅಧ್ಯಕ್ಷರಿಗೆ ಮನವಿ ಕೊಡಬೇಕಾ? ಜಿಲ್ಲಾ ಅಧ್ಯಕ್ಷರು ಪಕ್ಷಕ್ಕೆ ಯಾವಾಗ ಬಂದವರು? ಕಾರ್ಯಕರ್ತರ ಅಭಿಪ್ರಾಯವನ್ನು ಕಡೆಗಣಿಸಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕಾ? ಕಾರ್ಯಕರ್ತರು ಯಾರ ಪರವಾಗಿದ್ದರು ಎಂಬುದು ನಮಗೂ ಗೊತ್ತಿದೆ. ನಮ್ಮನ್ನು ನಿರ್ಲಕ್ಷಿಸಿದರೆ ಮುಂದೇನು ಮಾಡಬೇಕೆಂಬುದೂ ಗೊತ್ತಿದೆ. ನಾವು ಕಳೆದುಕೊಳ್ಳಲು ಏನೂ ಇಲ್ಲ” ಎಂಬ ಖಾರವಾದ ಮಾತುಗಳನ್ನು ಆಡಿದ್ದಾರೆ ಎಂದು ಹೇಳಲಾಗಿದೆ.

    ಸಚಿವರು ಸೇರಿದಂತೆ ಅಲ್ಲಿದ್ದ ಕೆಲವು ಮುಖಂಡರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಅಸಮಾಧಾನಗೊಂಡಿದ್ದ ಕರುಣಾಕರ ಶೆಟ್ಟಿ ಅವರು ಸಮಾಧಾನಗೊಳ್ಳದೆ ಅಲ್ಲಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

    30ಕ್ಕೂ ಹೆಚ್ಚು ಹಿರಿಯ ಮುಖಂಡರ ಬೆಂಬಲ?

    ಈ ಬೆಳವಣಿಗೆಯ ಬೆನ್ನಲ್ಲೇ ಸುಮಾರು 30 ಮಂದಿ ಹಿರಿಯ ಕಾಂಗ್ರೆಸ್ ಮುಖಂಡರು ಕರುಣಾಕರ ಶೆಟ್ಟಿಯವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬಳಿಕ ನಗರದ ಹೋಟೆಲ್ ಒಂದರಲ್ಲಿ ಗುಪ್ತ ಸಭೆ ನಡೆಸಿ, ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

    Also Read  ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ - ಖಾದರ್

    ಮುಂದಿನ ರಾಜಕೀಯ ಹೆಜ್ಜೆಗಳ ಕುರಿತು ಜಿಲ್ಲೆಯ ಇನ್ನಷ್ಟು ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಹಿಂದಿನ ಜಿಲ್ಲಾ ಸಭೆಯಲ್ಲೂ ಆಕ್ಷೇಪ

    ಇತ್ತೀಚೆಗೆ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲೂ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿತ್ತು ಎನ್ನಲಾಗಿದೆ. ಸಭೆಯಲ್ಲಿ ಸಚಿವ ಖಾದರ್ ಭಾಷಣ ಮಾಡಿದ ಬಳಿಕ ಜಿಲ್ಲಾ ಅಧ್ಯಕ್ಷರು ವಂದನಾರ್ಪಣೆ ಮಾಡಿದ್ದಕ್ಕೆ ಕೆಲವು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪಕ್ಷದ ಹಿರಿಯ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಸೂಕ್ತ ಗೌರವ ಮತ್ತು ಆದ್ಯತೆ ನೀಡಲಾಗುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿತ್ತು.

    ಮೊಯಿಲಿ, ಪೂಜಾರಿ, ಆಸ್ಕರ್ ಬೆಂಬಲಿಗರ ಅಸಮಾಧಾನ?

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಹಿರಿಯ ನಾಯಕ ಜನಾರ್ದನ ಪೂಜಾರಿ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪಾತ್ರ ಮಹತ್ವದ್ದಾಗಿತ್ತು. ಈ ಹಿರಿಯ ನಾಯಕರೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರು ಮತ್ತು ಮುಖಂಡರು ಈಗಿನ ಪಕ್ಷದ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

    ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ನಾಯಕರು ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸುತ್ತಿಲ್ಲ. ಪಕ್ಷಕ್ಕಾಗಿ ವರ್ಷಗಟ್ಟಲೆ ದುಡಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಕೆಲವೇ ವ್ಯಕ್ತಿಗಳಿಗೆ ಮರುಮರು ಅವಕಾಶ ನೀಡಲಾಗುತ್ತಿದೆ ಎಂಬ ಆಕ್ಷೇಪ ಕೇಳಿಬರುತ್ತಿದೆ.

    Also Read  ಪುತ್ತೂರು ಅತ್ಯಾಚಾರ ಪ್ರಕರಣ: ಹೈಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಸ್ತಾಪ..!

    ಕೆಪಿಸಿಸಿಗೆ ದೂರು ನೀಡಲು ಸಿದ್ಧತೆ?

    ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೆಲವೇ ವ್ಯಕ್ತಿಗಳ ಹಿಡಿತ ಹೆಚ್ಚಾಗುತ್ತಿದೆ ಮತ್ತು ಪಕ್ಷದ ಸಂಘಟನಾ ವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಬೆಳವಣಿಗೆಗಳ ಕುರಿತು ಕೆಪಿಸಿಸಿ ನಾಯಕರ ಗಮನಕ್ಕೆ ತಂದು, ಹಿರಿಯ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಮತ್ತು ಗೌರವ ನೀಡುವಂತೆ ಒತ್ತಾಯಿಸಲು ಕೆಲವು ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಹುಕಾಲದಿಂದ ಒಳಗೊಳಗೆ ನಡೆಯುತ್ತಿದ್ದ ಅಸಮಾಧಾನ ಇದೀಗ ಬಹಿರಂಗ ಚರ್ಚೆಗೆ ಗ್ರಾಸವಾಗಿದ್ದು, ಹಿರಿಯ ಕಾಂಗ್ರೆಸ್ಸಿಗರ ಮುಂದಿನ ನಡೆ ಏನು ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

    ಪಕ್ಷದೊಳಗಿನ ಈ ಅಸಮಾಧಾನಕ್ಕೆ ಜಿಲ್ಲಾ ನಾಯಕತ್ವ ಯಾವ ರೀತಿ ಪ್ರತಿಕ್ರಿಯಿಸಲಿದೆ? ಹಿರಿಯ ಕಾರ್ಯಕರ್ತರ ಬೇಡಿಕೆಗಳಿಗೆ ಸ್ಪಂದನೆ ಸಿಗಲಿದೆಯೇ? ಅಥವಾ ಭಿನ್ನಮತ ಮತ್ತಷ್ಟು ತೀವ್ರಗೊಳ್ಳಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಬೆಲೆ ಏರಿಕೆಯ ಬೆಂಕಿಯಿಂದ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಜಗತ್ತು…!ಹೊತ್ತಿ ಉರಿಯುತ್ತಿದೆ ಜನರ ಆಕ್ರೋಶ!
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ
    ಕರಾವಳಿಯಲ್ಲಿ ವಾಪಸ್ ಆದ ಮುಂಗಾರು: ಜುಲೈ 6ರವರೆಗೆ ಆರೆಂಜ್ ಅಲರ್ಟ್ – ಜನರಿಗೆ ಎಚ್ಚರಿಕೆ
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಮಂಗಳೂರು ದಸರಾ ಜಾತ್ರೆಯಲ್ಲಿ ನಕಲಿ ₹500 ನೋಟಿನ ವಂಚನೆ!! ಮದುವೆ ಹಾಲ್‌ನಲ್ಲಿ ಮಗುವಿನ ಚಿನ್ನದ ಸರ ಕದ್ದ ಕಳ್ಳಿ ಅಂದರ್‌!ಮಂಗಳೂರಿನಲ್ಲಿ ನಡೆಯುತ್ತಿದೆಯೇ ವಂಚಕರ ಜಾಲ?
    ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
    ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
    💊 ಜೀವರಕ್ಷಕ ಕ್ಯಾನ್ಸರ್ ಔಷಧಗಳು ದುಬಾರಿ: ಏಕೆ ಬೆಲೆ ಹೆಚ್ಚಳ ಅನಿವಾರ್ಯವಾಯಿತು?ಅಸಲಿ ಕಾರಣ ಗೊತ್ತೇ?
    ವೈರಲ್ ‘Reservation Hatao Movement’ ಹಿಂದೆ ಏನಿದೆ? 7 ಗಂಟೆಗಳಲ್ಲಿ 90 ಸಾವಿರದಿಂದ 4 (40ಲಕ್ಷ) ಮಿಲಿಯನ್ ಫಾಲೋವರ್ಸ್‌! ಮೀಸಲಾತಿ ವಿರುದ್ಧದ ಅಭಿಯಾನಕ್ಕೆ ದೇಶಾದ್ಯಂತ ಭಾರೀ ಬೆಂಬಲ..
    ಅಮ್ಮಾ ಎದ್ದು ಬಾ… ಕಣ್ಣೀರಾಕಿ ಕರೆದರೂ, ಬರಲಾರದೇ ಒದ್ದಾಡಿದ ಅಮ್ಮ …ದುಬಾರೆ ಶಿಬಿರದಲ್ಲಿ ಮನಕಲುಕುವ ಘಟನೆ-ಆನೆಗಳ ಕಾದಾಟ… ಜೀವ ಕಳೆದುಕೊಂಡ ಮಹಿಳೆ
    ಶಸ್ತ್ರಚಿಕಿತ್ಸೆಯ ಪಿತಾಮಹ ಮಹಾನ್ ವೈದ್ಯ….ಸುಶ್ರುತನನ್ನ ಜಗತ್ತು ಗೌರವಿಸಿದ ಕ್ಷಣ…ಆಧುನಿಕ ವೈದ್ಯಕೀಯದ ಬೇರುಗಳು ಭಾರತದಲ್ಲೇ…
    ಕಾಂಗೋದಲ್ಲಿ ಭೀಕರ ವಿಮಾನ ಅಪಘಾತ: ಇಬ್ಬರು ಸೇನಾ ಲೆಫ್ಟಿನೆಂಟ್ ಜನರಲ್ ಸೇರಿ 14 ಮಂದಿ ಸಾವು
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
    ಬಸ್‌ ಚರಂಡಿಗೆ ಬಿದ್ದರೂ ಪ್ರಯಾಣಿಕರಿಗೆ ಏನೂ ಆಗಲಿಲ್ಲ!ಕಣ್ಣೆದುರೇ ಮಹಾ ಅವಘಡ… ಶ್ರೀಕೃಷ್ಣನೇ ಕಾಪಾಡಿದಂತೆ ಪಾರಾದ ಪ್ರಯಾಣಿಕರು!
    ಸಂಸತ್ ವಿಶೇಷ ಅಧಿವೇಶನ: ಮಹಿಳಾ ಮೀಸಲಾತಿಗೆ ಒಗ್ಗಟ್ಟು, ಡಿಲಿಮಿಟೇಶನ್ ಮೇಲೆ ಭಾರಿ ವಿವಾದ – ಕರ್ನಾಟಕಕ್ಕೂ ಪರಿಣಾಮದ ಚರ್ಚೆ 🔥
    ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರಬಂತು ಆಲ್ಬರ್ಟ್ ರೇಗೋ …ಕೊಲೆ ರಹಸ್ಯ ಬಯಲಾಗುತ್ತಾ ?
    ಮುಂಬಯಿಯಲ್ಲಿ ಪಹಲ್ಗಾಮ್ ಮಾದರಿ ದಾಳಿ ಯತ್ನ: ಉಗ್ರ ಚಟುವಟಿಕೆ ಯತ್ನ ವಿಫಲ…!
    ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
    ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
    ಫುಟ್‌ಪಾತ್ ಬೇಕು, ಆದರೆ ಬದುಕಿಗೂ ಜಾಗ ಬೇಕಲ್ಲವೇ?ಮಂಗಳೂರಿನಲ್ಲಿ ಬೀದಿಬದಿ ಹೂವಿನ ವ್ಯಾಪಾರಕ್ಕೆ ‘ಶಾಕ್’ ವ್ಯಾಪಾರಿಗಳ ತೆರವು ನಿಯಮ ಸರಿ… ಪರ್ಯಾಯ ವ್ಯವಸ್ಥೆ ಎಲ್ಲಿ?