📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರಿನ ಪ್ರಜ್ವಲ್ ಶೆಟ್ಟಿ ಈಗ ರಫೇಲ್ ಪೈಲಟ್‌! ಕರಾವಳಿಗೆ ಹೆಮ್ಮೆಯ ಸಾಧನೆ

    UPSCಯಲ್ಲಿ ಅಖಿಲ ಭಾರತ 42ನೇ ರ‍್ಯಾಂಕ್ | ವೈಮಾನಿಕ ತರಬೇತಿಯಲ್ಲಿ ಎರಡು ಬಾರಿ ಪ್ರಥಮ ಸ್ಥಾನ | ‘ನೀಲಕಂಠ’ ರಫೇಲ್ ರಚನೆಯಲ್ಲಿ ಹಾರಾಟ

    ಮಂಗಳೂರು: ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಕಾರ್ಯಾಚರಣಾ ಪೈಲಟ್ ಆಗಿ ನೇಮಕಗೊಂಡಿದ್ದಾರೆ. ಕಠಿಣ ತರಬೇತಿ, ಶೈಕ್ಷಣಿಕ ಸಾಧನೆ ಮತ್ತು ಪರಿಶ್ರಮದ ಮೂಲಕ ಈ ಹಂತ ತಲುಪಿರುವ ಅವರ ಸಾಧನೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದೆ.

    UPSCಯಲ್ಲಿ 42ನೇ ರ‍್ಯಾಂಕ್

    ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಪ್ರಜ್ವಲ್ ಅವರು UPSC ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿದರು. ನಂತರ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA)ಯಲ್ಲಿ ಮೂರು ವರ್ಷಗಳ ಸೈನಿಕ ತರಬೇತಿ ಪಡೆದರು.

    Also Read  108 ಆಂಬ್ಯುಲೆನ್ಸ್ ಸೇವೆಗೆ ಬ್ರೇಕ್ ಬೀಳುತ್ತಾ? ನೌಕರರ ಸಾಮೂಹಿಕ ರಾಜೀನಾಮೆ ಎಚ್ಚರಿಕೆ…

    ವೈಮಾನಿಕ ತರಬೇತಿಯಲ್ಲಿ ಪ್ರಥಮ ಸ್ಥಾನ

    ಎನ್‌ಡಿಎ ತರಬೇತಿಯ ಬಳಿಕ ಹೈದರಾಬಾದ್‌ನ ವಾಯುಪಡೆ ಅಕಾಡೆಮಿಯಲ್ಲಿ ವೈಮಾನಿಕ ತರಬೇತಿ ಪಡೆದರು. ಪಿಲಾಟಸ್ ಮತ್ತು ಕಿರಣ್ ವಿಮಾನಗಳಲ್ಲಿ ಹಾರಾಟದ ತರಬೇತಿ ಪಡೆದ ಅವರು, ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಇದೇ ಅವಧಿಯಲ್ಲಿ ಬಿ.ಟೆಕ್. ಪದವಿಯನ್ನೂ ಪಡೆದರು.

    2022ರ ಡಿಸೆಂಬರ್‌ನಲ್ಲಿ ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ನಿಯೋಜನೆಗೊಂಡ ಪ್ರಜ್ವಲ್, ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ಹಾಕ್ ವಿಮಾನದಲ್ಲಿ ಮೂಲ ಯುದ್ಧವಿಮಾನ ತರಬೇತಿ ಪೂರ್ಣಗೊಳಿಸಿದರು. ಈ ಹಂತದಲ್ಲಿಯೂ ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು.

    ರಫೇಲ್ ಪೈಲಟ್ ಆಗಿ ಮಹತ್ವದ ಸಾಧನೆ

    ನಂತರ ಅಂಬಾಲಾದ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆರೋಸ್‌’ಗೆ ನಿಯೋಜನೆಗೊಂಡ ಅವರು, ರಫೇಲ್ ಯುದ್ಧವಿಮಾನದ ಪರಿವರ್ತನಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪ್ರಸ್ತುತ ರಫೇಲ್ ವಿಮಾನದ ಕಾರ್ಯಾಚರಣಾ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

    Also Read  ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?

    ಇತ್ತೀಚೆಗೆ ವಾರಾಣಸಿಯಲ್ಲಿ ನಡೆದ ಭಾರತೀಯ ವಾಯುಪಡೆಯ ‘ವಿಂಗ್ಸ್ ಓವರ್ ಗಂಗೇಸ್‌’ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದರು. ಮೂರು ರಫೇಲ್ ಯುದ್ಧವಿಮಾನಗಳ ‘ನೀಲಕಂಠ’ ರಚನೆಯಲ್ಲಿ ಮಧ್ಯದ ಸ್ಥಾನದಲ್ಲಿ ಹಾರಾಟ ನಡೆಸಿದ್ದು ಅವರ ಸಾಧನೆಯ ಮತ್ತೊಂದು ವಿಶೇಷವಾಗಿದೆ.

    ಕರಾವಳಿಯ ಹೆಮ್ಮೆಯ ಪುತ್ರ

    ಪ್ರಜ್ವಲ್ ಅವರು ಹರೇಕಳ ಉಳಿದೊಟ್ಟಿನ ರಮೇಶ್ ಶೆಟ್ಟಿ ಮತ್ತು ಕೊಡೆತ್ತೂರು ಮೂಡುದೇವಸ್ಯದ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರ.

    ದ್ವಿತೀಯ ಪಿಯುಸಿಯಿಂದ ರಫೇಲ್ ಪೈಲಟ್‌ವರೆಗಿನ ಅವರ ಪಯಣ ಯುವಜನರಿಗೆ ಸ್ಫೂರ್ತಿದಾಯಕ. ಪರಿಶ್ರಮ, ಶಿಸ್ತು ಮತ್ತು ಗುರಿಯೆಡೆಗಿನ ಬದ್ಧತೆ ಇದ್ದರೆ ಉನ್ನತ ಸಾಧನೆ ಸಾಧ್ಯ ಎಂಬುದಕ್ಕೆ ಪ್ರಜ್ವಲ್ ಅವರ ವೃತ್ತಿಜೀವನ ಉತ್ತಮ ಉದಾಹರಣೆಯಾಗಿದೆ.

    ##PrajwalRShetty #RafaleFighterJet #IndianAirForce #MangaluruNews #DakshinaKannada #IndianAirForcePilot #WingsOverGanges

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
    ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ನಿದ್ದೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದ ಕಟ್ಟಡ ಸಾವು ಆರಕ್ಕೆ..!ದಿಲ್ಲಿ ಪಿಜಿ ದುರಂತ ದೇಶದ ಹಳೆಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆ..!
    ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!
    ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
    ಸಿಎಂ ಕುರ್ಚಿಯನ್ನು, ಡಿಕೆಗೆ ಮಗ್ಗಲ ಮುಳ್ಳನ್ನಾಗಿಸಲು ಸಕಲ ತಯಾರಿ
    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    *ಬೈಕಂಪಾಡಿ ಹೆದ್ದಾರಿ ಡಕಾಯಿತಿ, 23 ಲಕ್ಷ ಮೌಲ್ಯದ ಸೊತ್ತು ದರೋಡೆ ಪ್ರಕರಣ: 3 ಆರೋಪಿಗಳು ಸೆರೆ.
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
    40 ವರ್ಷದ ಹಳೆಯ ಕೊಲೆಕೇಸ್‌ಗೆ ಅಂತಿಮ ಕೀ ಆಗಿ ಸಾಕ್ಷಿ ಆಗಿದ್ದು ತಿಂದು ಉಗುಳಿದ ಚೂಯಿಂಗ್ ಗಮ್ …!ಏನಿದು realstory..
    ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
    ದೇಶದ ಹಲವೆಡೆ ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್ ಅಂದ್ರೆ ಮಳೆ ಗ್ಯಾರಂಟಿ ಅಲ್ಲ…IMD ಮುನ್ಸೂಚನೆಯನ್ನು ನಿರ್ಲಕ್ಷಿಸಬೇಡಿ!ಅದು  “ಅಪಾಯದ ಸಾಧ್ಯತೆಯ ಎಚ್ಚರಿಕೆ!”
    ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
     ಇಂದಿನ ಪೋಷಕರ ಅತಿಮುದ್ದು…ಕೇಳಿದ್ದನ್ನೆಲ್ಲ ಕೊಡಿಸುವ ಪೋಷಕರು ಒಳ್ಳೆಯವರೇ…???ಇದೇ ಮಕ್ಕಳ ಭವಿಷ್ಯಕ್ಕೆ ದೊಡ್ಡ ಅಪಾಯವೇ?
    ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್‌ಗೆ ನಕಲಿ ಸಹಿ! ನಕಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದ ಮಾಜಿ ಸಿಬ್ಬಂದಿ…
    ಕೌಶಾಂಬಿಯಲ್ಲಿ ಭೀಕರ LPG ಟ್ಯಾಂಕರ್ ದುರಂತ: ಸಿಸಿಟಿವಿಯಲ್ಲಿ ಸೆರೆಯಾದ ಜೀವಭಯದ ಕ್ಷಣಗಳು – ಮೃತರ ಸಂಖ್ಯೆ 4ಕ್ಕೆ ಏರಿಕೆ
    ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    ಅಮೆರಿಕದಲ್ಲಿ ಭಾರತದ ಧ್ವಜಕ್ಕೆ ಅವಮಾನ…ವೈರಲ್ ವಿಡಿಯೋಗೆ ಕೇಂದ್ರದ ಆಕ್ರೋಶ!
    ದುರಂತ ಸಂಭವಿಸುವ ಮುನ್ನ ಮೆಸ್ಕಾಂ ಎಚ್ಚೆತ್ತುಕೊಳ್ಳುವುದೇ? ಮಂಗಳೂರಿನ PVS ರಸ್ತೆಯಲ್ಲೇ ಮೆಸ್ಕಾಂ ಟ್ರಾನ್ಸ್‌ಫಾರ್ಮರ್ ಅಡಿಯಲ್ಲೇ ಸುತ್ತಲೂ ಒಣ ಕಸದ ಪ್ಲಾಸ್ಟಿಕ್ ಟಾರ್ಪಾಲಿನ್ ಮತ್ತು ಬಾಕ್ಸ್ ರಾಶಿ!
    ಒಂದು ಚಿನ್ನದ ಸರಕ್ಕಾಗಿ ನಿದ್ರೆಯಲ್ಲಿದ್ದ ಗೆಳತಿಯನ್ನೇ ಕೊಲ್ಲಲೆತ್ನಿಸಿದ ಆಕೆಗೆ ಜೈಲೆ ಗತಿ …..ನಂಬಿಕೆಯೇ ರಕ್ತಸಿಕ್ತವಾದ ಮಣಿಪಾಲದ ಭೀಕರ ಘಟನೆ…
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ