📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರು ದಸರಾ ಜಾತ್ರೆಯಲ್ಲಿ ನಕಲಿ ₹500 ನೋಟಿನ ವಂಚನೆ!! ಮದುವೆ ಹಾಲ್‌ನಲ್ಲಿ ಮಗುವಿನ ಚಿನ್ನದ ಸರ ಕದ್ದ ಕಳ್ಳಿ ಅಂದರ್‌!ಮಂಗಳೂರಿನಲ್ಲಿ ನಡೆಯುತ್ತಿದೆಯೇ ವಂಚಕರ ಜಾಲ?

    ಮಂಗಳೂರು: ಮದುವೆ ಸಂಭ್ರಮ, ಜನರ ಓಡಾಟ, ಸಂಬಂಧಿಕರ ಭೇಟಿಯ ನಡುವೆ ಪುಟ್ಟ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನೇ ಕಳವು ಮಾಡಿರುವ ಘಟನೆ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಖಾಸಗಿ ಮದುವೆ ಹಾಲ್‌ನಲ್ಲಿ ನಡೆದಿತ್ತು . ಆದರೆ, ಕಳವು ಮಾಡಿ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ಮಹಿಳೆಯನ್ನು ಬರ್ಕೆ ಠಾಣೆ ಪೊಲೀಸರು ಕೇವಲ 24 ಗಂಟೆಯೊಳಗೆ ಪತ್ತೆಹಚ್ಚಿರುವುದು ಪೊಲೀಸರ ತನಿಖಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ.

    ಅ.18ರಂದು ನಡೆದ ವಿವಾಹ ಸಮಾರಂಭದಲ್ಲಿ 3.6 ವರ್ಷದ ಬಾಲಕಿಯ ಕುತ್ತಿಗೆಯಲ್ಲಿದ್ದ ಎರಡು ಪೆಂಡೆಂಟ್‌ಗಳಿರುವ ಸುಮಾರು 10 ಗ್ರಾಂ ತೂಕದ, ಅಂದಾಜು ₹1.35 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮಹಿಳೆಯೊಬ್ಬರು ಕಳವು ಮಾಡಿದ್ದರು. ಈ ಕುರಿತು ಶೀಮಾ ಬಾನು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬರ್ಕೆ ಪೊಲೀಸರು ತನಿಖೆ ಆರಂಭಿಸಿದ್ದರು.

    ಮಾಹಿತಿ ಕಲೆಹಾಕಿ, ಆರೋಪಿಯ ಸುಳಿವು ಪತ್ತೆಹಚ್ಚಿದ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಮಿನ್ನತ್ (42) ಎಂಬ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಿದ್ದ ಚಿನ್ನದ ಸರವನ್ನೂ ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಒಬ್ಬಿಬ್ಬರಲ್ಲ, ಹಲವು ಪ್ರಕರಣಗಳ ಆರೋಪ!

    ಬಂಧಿತ ಮಹಿಳೆಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಐದು ಸೇರಿದಂತೆ ಹಲವು ಕಳವು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಹಿಂದಿನ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲೂ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಕಲಂ 112ರ ಅಡಿಯಲ್ಲಿ ಸಂಘಟಿತ ಅಪರಾಧದ ಆಯಾಮವನ್ನೂ ಪರಿಶೀಲಿಸಲಾಗುತ್ತಿದೆ ಎಂದು ವರದಿಯಾಗಿದೆ.

    Also Read  ಅರೆ ವಾ..! ಕರ್ನಾಟಕದ ಜನರಿಗೆ ಫ್ಯಾನ್ಸಿ ನಂಬರ್‌ಗಳೇ ಫೇವರಿಟ್…RTOಗೆ ₹118 ಕೋಟಿ ಆದಾಯ!

    ಸಣ್ಣ ಸುಳಿವನ್ನೂ ಕಡೆಗಣಿಸದೆ, ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿದ ಬರ್ಕೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರ ಸಮಯಪ್ರಜ್ಞೆ ಮತ್ತು ತನಿಖಾ ಚಾತುರ್ಯ ಜನರಲ್ಲಿ ಭರವಸೆ ಮೂಡಿಸುತ್ತದೆ.

    🚨ಇತ್ತ ಮಂಗಳೂರು ದಸರಾ ಸಂಭ್ರಮದಲ್ಲೂ ನಕಲಿ ₹500 ನೋಟಿನ ವಂಚನೆ ಆರೋಪ!

    ಮಂಗಳೂರು ದಸರಾ ಸಂದರ್ಭದಲ್ಲಿ ಚುರುಮುರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ನಕಲಿ ₹500 ನೋಟು ನೀಡಿ ವಂಚಿಸಲಾಗಿದೆ ಎಂಬ ಘಟನೆ ಬೆಳಕಿಗೆ ಬಂದಿದೆ. ಸಣ್ಣ ಮಗುವನ್ನು ಮನೆಯಲ್ಲೇ ಬಿಟ್ಟು, ಕಷ್ಟಪಟ್ಟು ದುಡಿದು ಒಂದಷ್ಟು ಹಣ ಸಂಪಾದಿಸೋಣ ಎಂದು ಬಂದಿದ್ದ ಮಹಿಳೆ ವಂಚನೆಗೆ ಒಳಗಾಗಿರುವುದು ನೋವಿನ ಸಂಗತಿ.

    ವಂಚನೆಗೆ ಒಳಗಾದ ಮಹಿಳೆ ತನ್ನ ಅಳಲನ್ನು ತೋಡಿಕೊಂಡಾಗ, “ಹೇಗೋ ಕಷ್ಟಪಟ್ಟು ಸಣ್ಣ ಮಗುವನ್ನು ಮನೆಯಲ್ಲಿ ಬಿಟ್ಟು, ಅಲ್ಪಸ್ವಲ್ಪ ದುಡಿಯೋಣ ಅಂತ ಬಂದರೆ, ನಮ್ಮಂಥವರಿಗೇ ಹೀಗೆ ಮೋಸ ಮಾಡಿಬಿಟ್ಟರು” ಎಂದು ಕಣ್ಣೀರಿಟ್ಟಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ಸುಮಾರು 15–16 ವರ್ಷದ ಇಬ್ಬರು ಯುವಕರು ಆಕೆಗೆ ನಕಲಿ ನೋಟು ನೀಡಿದ್ದಾರೆ ಎನ್ನಲಾಗಿದೆ. ಅವರಲ್ಲಿ ಒಬ್ಬರು ಕಪ್ಪು ಬಣ್ಣದ ಉಡುಪು ಹಾಗೂ ಮತ್ತೊಬ್ಬರು ಬಿಳಿ ಶರ್ಟ್ ಧರಿಸಿದ್ದರು. ಇಬ್ಬರೂ ತುಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.

    Also Read  ಪಂಜಾಬ್‌ನಲ್ಲಿ ಮಹಿಳೆಗೆ ಒಂದೇ ಹೆರಿಗೆಗೆ ಆರು ಮಕ್ಕಳು….!!ನಿಜವೇನು?

    ಆದರೆ, ನೋಟು ನಕಲಿಯೇ ಎಂಬುದನ್ನು ಅಧಿಕೃತವಾಗಿ ಪರಿಶೀಲಿಸುವುದು ಮತ್ತು ಆರೋಪಿಗಳನ್ನು ಗುರುತಿಸುವುದು ಅಗತ್ಯವಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗದಿದ್ದರೂ , ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿವೆ.ಸ್ವಯಂ ತನಿಖೆಯಿಂದ ಅಪರಾಧಿಗಳ ಬೆನ್ನತ್ತಿ ಹಿಂದಿರುವ ಉದ್ದೇಶವನ್ನ ದೃಢಪಡಿಸಬೇಕಿದೆ..

    🚨 ನಕಲಿ ನೋಟಿನ ಹಿಂದೆ ದೊಡ್ಡ ಜಾಲವಿದೆಯೇ?

    ಇದು ಕೇವಲ ಒಂದು ನಕಲಿ ₹500 ನೋಟಿನ ವಂಚನೆಯೇ? ಅಥವಾ ಇಂತಹ ವಂಚನೆಗಳ ಹಿಂದೆ ಇನ್ನೂ ದೊಡ್ಡ ಜಾಲವಿದೆಯೇ? ಸದ್ಯಕ್ಕೆ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಇಂತಹ ಘಟನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸೂಕ್ತ ತನಿಖೆ ನಡೆಸುವುದು ಅಗತ್ಯ.

    ದುಡಿದು ಜೀವನ ಸಾಗಿಸುವ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಮತ್ತು ದಿನಗೂಲಿ ಕಾರ್ಮಿಕರು ಇಂತಹ ವಂಚನೆಗಳಿಗೆ ಸುಲಭವಾಗಿ ಬಲಿಯಾಗುವ ಸಾಧ್ಯತೆಯಿದೆ. ಅವರಿಗೆ ಆಗುವ ನಷ್ಟ ಸಣ್ಣ ಮೊತ್ತವಾಗಿರಬಹುದು; ಆದರೆ ಆ ಹಣವೇ ಅವರ ದಿನದ ದುಡಿಮೆಯಾಗಿರುತ್ತದೆ.

    ಒಂದು ಕಡೆ ಮಕ್ಕಳ ಆಭರಣ ಕಳವು, ಮತ್ತೊಂದು ಕಡೆ ಸಣ್ಣ ವ್ಯಾಪಾರಿಗಳಿಗೆ ನಕಲಿ ನೋಟಿನ ಮೂಲಕ ವಂಚನೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ನಿಗಾ ವಹಿಸುವುದು, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವುದು ಅಗತ್ಯ.

    Also Read  ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?

    👮 ಬರ್ಕೆ ಪೊಲೀಸರ ತನಿಖಾ ಚಾತುರ್ಯಕ್ಕೆ ಸಲಾಂ; ಸಾರ್ವಜನಿಕರೂ ಎಚ್ಚರವಾಗಿರಲಿ!

    ಬರ್ಕೆ ಪೊಲೀಸರು..ಗುರುಪ್ಪ ಕಾಂತಿ ಹಾಗೂ ವಿನಾಯಕ್ ತೋರುಗಲ್ ತ್ವರಿತ ಕಾರ್ಯಾಚರಣೆಯಿಂದ ಮಗುವಿನ ಚಿನ್ನದ ಸರ ಕಳವು ಪ್ರಕರಣವನ್ನು ಕ್ಷಿಪ್ರವಾಗಿ ಪತ್ತೆಹಚ್ಚಿರುವುದು ಶ್ಲಾಘನೀಯ. ಇದೇ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳು, ಮದುವೆ ಹಾಲ್‌ಗಳು ಮತ್ತು ಹಬ್ಬದ ಜನಸಂದಣಿಯಲ್ಲಿ ನಡೆಯುವ ಕಳ್ಳತನ ಹಾಗೂ ವಂಚನೆಗಳ ಬಗ್ಗೆಯೂ ಎಚ್ಚರಿಕೆ ಅಗತ್ಯ.

    ಇಂದು ಒಂದು ಮಗುವಿನ ಚಿನ್ನದ ಸರ, ಒಬ್ಬ ಬಡ ವ್ಯಾಪಾರಿಯ ದಿನದ ದುಡಿಮೆ! ಸಣ್ಣ ಘಟನೆ ಎಂದು ನಿರ್ಲಕ್ಷಿಸಿದರೆ, ನಾಳೆ ವಂಚಕರಿಗೆ ಮತ್ತಷ್ಟು ಅವಕಾಶ ಸಿಗಬಹುದು.

    ನಕಲಿ ನೋಟಿನ ಘಟನೆಗೂ ಸೂಕ್ತ ತನಿಖೆ ನಡೆದು ಸತ್ಯಾಂಶ ಹೊರಬರಲಿ. ಯಾರೇ ಆಗಿರಲಿ, ಕಾನೂನು ಕ್ರಮ ಕೈಗೊಳ್ಳಲಿ. ಜನರ ಕಷ್ಟದ ದುಡಿಮೆಗೆ ಕನ್ನ ಹಾಕುವವರಿಗೆ ಕಡಿವಾಣ ಬೀಳಲಿ.

    ಜನರೇ ಎಚ್ಚರ! ಹಣ ಸ್ವೀಕರಿಸುವಾಗ ನೋಟುಗಳನ್ನು ಪರಿಶೀಲಿಸಿ. ವಂಚನೆಗೆ ಒಳಗಾದರೆ ಮೌನವಾಗಿರದೆ ಪೊಲೀಸರಿಗೆ ದೂರು ನೀಡಿ. ಸಣ್ಣ ಸುಳಿವೂ ದೊಡ್ಡ ಅಪರಾಧವನ್ನು ಪತ್ತೆಹಚ್ಚಲು ನೆರವಾಗಬಹುದು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೊಡಗಿನಲ್ಲಿ ಪ್ರವಾಸಿ ಬಸ್ ಪಲ್ಟಿ20 ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರು; ಜೆಸಿಬಿಯಿಂದ ಬಸ್‌ ರಕ್ಷಣೆ!
    ಮಳೆ ಅಲರ್ಟ್ ನಡುವೆ ಕರ್ನಾಟಕಕ್ಕೆ ಬರದ ಬಿಸಿ: ಕೇಂದ್ರದ ನೆರವಿಗಾಗಿ ಸರ್ಕಾರದ ಮೊರೆ…!
    ಪಟಾಕಿ ಸಿಡಿಸದೆ ದೀಪಾವಳಿ ಆಚರಿಸಿ: ವಿರಾಟ್ ಕೊಹ್ಲಿ ಮೂಲಕ ಜಾಗೃತಿ ಮೂಡಿಸಲು ಸುಪ್ರೀಂ ಕೋರ್ಟ್ ಸಲಹೆ!
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    ಖಾಸಗಿ ಬಸ್ಸಿನಲ್ಲಿ ಮಹಿಳೆಯ ಮಂಗಳಸೂತ್ರ ಏಗರಿಸಿದ್ರಾ?
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ಸಂಸತ್ ವಿಶೇಷ ಅಧಿವೇಶನ: ಮಹಿಳಾ ಮೀಸಲಾತಿಗೆ ಒಗ್ಗಟ್ಟು, ಡಿಲಿಮಿಟೇಶನ್ ಮೇಲೆ ಭಾರಿ ವಿವಾದ – ಕರ್ನಾಟಕಕ್ಕೂ ಪರಿಣಾಮದ ಚರ್ಚೆ 🔥
    “ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
    ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 
    ಯುಎಇಯಿಂದ ಯುರೋಪ್ ತನಕ ಮೋದಿ ಐತಿಹಾಸಿಕ ವಿದೇಶ ಪ್ರವಾಸ…ಡಿಪ್ಲೊಮಸಿ – ತೈಲದಿಂದ ತಂತ್ರಜ್ಞಾನವರೆಗೆ ಇದು ಭಾರತದ ಭವಿಷ್ಯದ ತಂತ್ರಾತ್ಮಕ ನಡೆ ?!
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
    ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
    🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ 47 ಜೀವಂತ ಅಪರೂಪದ ಪ್ರಾಣಿಗಳು ಪತ್ತೆ! 
    ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
    ಉಡುಪಿ ವಿಧಾನಸಭಾ ಚುನಾವಣೆಗೆ ರೆಡಿಯಾದ ಕಾಂಚನ್..!
    ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
    ಉರ್ವಸ್ಟೋರ್ ಮೈದಾನದಲ್ಲಿ ಕತ್ತಿಯಿಂದ ಕಡಿದು ಹತ್ಯೆಗೆ ಯತ್ನ : ಆರೋಪಿ ಬಂಧನ
    ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
    ಕರಾವಳಿಯಲ್ಲಿಲೋಕಾಯುಕ್ತ ಕಣ್ಣು ಪಂಚಾಯಿತಿಗಳ ಮೇಲೆ; ಸರ್ಕಾರದ ಕಣ್ಣು ಕರಾವಳಿ ಕೃಷಿಯತ್ತ?ಕರಾವಳಿ ಕೃಷಿಗೆ ಪ್ರತ್ಯೇಕ ನೀತಿಗೆ ಡಿಮ್ಯಾಂಡ್!
    ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯ: ಮೊದಲ ಮಹಿಳಾ ಏರ್ ವೈಸ್ ಮಾರ್ಷಲ್ ಆದ ಶಕ್ತಿ ಶರ್ಮಾ