📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತುಳು ಚಿತ್ರರಂಗದ ನಿರ್ದೇಶಕನ ಮೇಲೆ ಹಲ್ಲೆ- ಗಾಳಿಯಲ್ಲಿ ಗುಂಡು


    ಮೊಬೈಲ್ ಕಸಿದುಕೊಂಡು ಹಲ್ಲೆ; ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ ಆರೋಪ – ಆತ್ಮರಕ್ಷಣೆಗಾಗಿ ಪರವಾನಗಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಆ ಪಾಲುದಾರ


    ಮಂಗಳೂರು: ನಗರದ ಅಶೋಕನಗರದ ಫಲ್ಗುಣಿ 3ನೇ ಅಡ್ಡರಸ್ತೆಯಲ್ಲಿರುವ ಜಾಗವೊಂದರಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಗಂಭೀರ ಗಲಾಟೆ ಸಂಭವಿಸಿದ್ದು, ಪ್ರೆಸ್ಟನ್ ಎಂಬಾತ ಸೇರಿದಂತೆ ಸುಮಾರು ಹತ್ತು ಮಂದಿ ಸೇರಿಕೊಂಡು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
    ಪಿರ್ಯಾದಿದಾರರು ಹಾಗೂ ಅವರ ಪಾಲುದಾರರಾದ ವೀರೇಂದ್ರ ಶೆಟ್ಟಿ ಅವರು ಸುಮಾರು ಎರಡು ವರ್ಷಗಳ ಹಿಂದೆ ಶರತ್ ಕಾಂತ್ ಎಂಬವರಿಂದ ಅಶೋಕನಗರದ ಸರ್ವೆ ನಂಬರ್ 8/1P ರಲ್ಲಿರುವ 36 ಸೆಂಟ್ಸ್ ಜಾಗವನ್ನು ಖರೀದಿಸಿ, ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಬಳಿಕ ಸದರಿ ಜಾಗದಲ್ಲಿ ಲೇಔಟ್ ನಿರ್ಮಿಸಿ ಆರು ಸೈಟ್‌ಗಳನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.
    ನ. 4ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಮಾರಾಟವಾಗದೆ ಉಳಿದಿದ್ದ ಜಾಗಕ್ಕೆ ಕಾಂಪೌಂಡ್ ನಿರ್ಮಿಸುವ ಉದ್ದೇಶದಿಂದ ಪಿರ್ಯಾದಿದಾರರು, ಪಾಲುದಾರ ವೀರೇಂದ್ರ ಶೆಟ್ಟಿ ಹಾಗೂ ಸೈಟ್ ಖರೀದಿದಾರ ಪೃಥ್ವಿ ಶೇಟ್ ಅವರು ಜೆಸಿಬಿ ಮತ್ತು ಕಾರ್ಮಿಕರೊಂದಿಗೆ ಮಣ್ಣು ಅಗೆಯುವ ಕೆಲಸದಲ್ಲಿ ತೊಡಗಿದ್ದಗ ಈ ಘಟನೆ ನಡೆದಿದೆ.

    Also Read  ಏಳು ವರ್ಷದ ನಂತರ ಮಂಗಳೂರಿಗೆ "ಅಮ್ಮ" ಬರುತ್ತಿದ್ದಾರೆ.... 50ಸಾವಿರ ಜನರ ನಿರೀಕ್ಷೆ

    ಪಾಲುದಾರ ವೀರೇಂದ್ರ ಶೆಟ್ಟಿ ಪ್ರಸಿದ್ಧಿ ಹೊಂದಿರುವ ಚಿರಪರಿಚಿತ ವ್ಯಕ್ತಿ ಹಾಗೂ ತುಳು ಸಿನಿಮಾರಂಗದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.
    ಈ ವೇಳೆ ಮಧ್ಯಾಹ್ನ ಸುಮಾರು 1.30ರ ವೇಳೆಗೆ ನೆರೆಮನೆಯವರಾಗಿದ್ದು, ಪರಿಚಯವಿದ್ದ ಪ್ರೆಸ್ಟನ್ ಎಂಬಾತ ತನ್ನ ಹತ್ತು ಮಂದಿ ಸಹಚರರೊಂದಿಗೆ ಅಕ್ರಮವಾಗಿ ಸ್ಥಳಕ್ಕೆ ಪ್ರವೇಶಿಸಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನು ತಡೆಯಲು ಬಂದ ಪೃಥ್ವಿ ಶೇಟ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
    ಘಟನೆಯನ್ನು ವೀರೇಂದ್ರ ಶೆಟ್ಟಿ ಅವರು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದಾಗ, ಪ್ರೆಸ್ಟನ್ ಮೊಬೈಲ್ ಕಸಿದುಕೊಂಡಿದ್ದು, ಬಳಿಕ ಪ್ರೆಸ್ಟನ್ ಮತ್ತು ಆತನ ಸಹಚರರು ಒಟ್ಟಾಗಿ ವೀರೇಂದ್ರ ಶೆಟ್ಟಿ ಅವರಿಗೆ ಕೈಕಾಲುಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಮಣ್ಣಿನ ಗುಂಡಿಗೆ ತಳ್ಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
    ಇಷ್ಟಕ್ಕೇ ನಿಲ್ಲದೆ ಪ್ರೆಸ್ಟನ್ ವೀರೇಂದ್ರ ಶೆಟ್ಟಿ ಅವರ ಕುತ್ತಿಗೆಯನ್ನು ಬಲವಾಗಿ ಹಿಡಿದು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ವೀರೇಂದ್ರ ಶೆಟ್ಟಿ ಅವರು ತಮ್ಮ ಬಳಿ ಇದ್ದ ಪರವಾನಗಿ ಹೊಂದಿದ ಪಿಸ್ತೂಲ್‌ನಿಂದ ನೆಲದ ಕಡೆಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
    ಗುಂಡಿನ ಶಬ್ದ ಕೇಳುತ್ತಿದ್ದಂತೆ ಹಲ್ಲೆ ನಡೆಸುತ್ತಿದ್ದವರು ದೂರ ಸರಿದಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ರಕ್ಷಣೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
    ಪಿರ್ಯಾದಿದಾರರು ಮತ್ತು ಅವರ ಪಾಲುದಾರರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು, ಕೊಲೆಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರೆಸ್ಟನ್ ಹಾಗೂ ಆತನ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
    ಘಟನೆಯ ಸಂಪೂರ್ಣ ಸತ್ಯಾಸತ್ಯತೆ, ಹಲ್ಲೆಯ ಹಿನ್ನೆಲೆ ಹಾಗೂ ಗುಂಡು ಹಾರಿಸಿದ ಸಂದರ್ಭದ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಕಲಿ ಲೇಡಿ PSI ಅರೆಸ್ಟ್
    ಸ್ಮಾರ್ಟ್‌ಫೋನ್ ಅಗ್ಗವಾಗುತ್ತಾ? ಮೊಬೈಲ್ ಖರೀದಿಗೆ ಇದು ‘Wait & Watch’ ಟೈಮ್!
    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
    ಇನ್ಮುಂದೆ ಗೂಗಲ್‌ನಲ್ಲಿ ನಿಮ್ಮ ಹಳೆಯ ಕೋರ್ಟ್ ಕೇಸ್‌ಗಳ ವಿವರಗಳನ್ನುಮರೆಮಾಡಬಹುದು-ದೆಹಲಿ ಹೈಕೋರ್ಟ್ ಗೈಡ್‌ಲೈನ್ಸ್ ರಿಲೀಸ್! 
    ನಿಮ್ಮದೇ ಜಮೀನು, ಮನೆ ಕಟ್ಟಲೂ ಅಡ್ಡಿಯೇ?ಮಂಗಳೂರಿನಲ್ಲಿ ಭೂ ಪರಿವರ್ತನೆ ನಿಯಮಗಳ ಕಗ್ಗಂಟು!
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
    ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಇಳಿದ ಚಿನ್ನದ ಬೆಲೆ….!ಖರೀದಿದಾರರಿಗೆ ಬಂಪರ್ ರಿಲೀಫ್.
    ₹5ಕ್ಕೆ ಇಡ್ಲಿ… 56 ವರ್ಷಗಳಿಂದ ಅದೇ ರುಚಿ! 70ರ ಹರೆಯದಲ್ಲೂ ಪ್ರತಿದಿನ 1,500 ಇಡ್ಲಿ ಮಾಡಿ ಜನರ ಮನ ಗೆದ್ದ ಕರ್ನಾಟಕದ ಅನ್ನದಾತ…
    ಸಿವಿಲ್ ಕೇಸ್‌ನಲ್ಲಿ ಬಂಧನ..!ಎಸ್‌ಐಗೆ ₹3 ಲಕ್ಷ ದಂಡ — ACP, DCP ವಿರುದ್ಧವೂ ತನಿಖೆ!
    ಸೂರತ್‌ನಲ್ಲಿ ಮಳೆಯ ರೌದ್ರನರ್ತನ: 200ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ₹200 ಕೋಟಿ ನಷ್ಟ – ಕಣ್ಣೀರಿನಲ್ಲಿ ಮುಳುಗಿದ ವ್ಯಾಪಾರಿಗಳು
    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    ಪತ್ರ ಕಳುಹಿಸುವ ಅಂಚೆ ಕಚೇರಿ ಈಗ ಜೀವವಿಮೆಗೂ ಆಸರೆ ..!ಅಂಚೆ ಕಚೇರಿಯಲ್ಲೇ ಕುಟುಂಬದ ಭವಿಷ್ಯಕ್ಕೆ ಭದ್ರತೆ!
    ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    ಮಿಸೆಸ್ ಕೇರಳ ಈಗ ‘ಡ್ರಗ್ ಕ್ವೀನ್’…!?ಕೋಟಿ ಮೌಲ್ಯದ ಡ್ರಗ್ಸ್ ಜೊತೆ ಮಾಜಿ ‘ಮಿಸೆಸ್ ಕೇರಳ’ ಅರೆಸ್ಟ್!”
    BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬರೆ ಹಾಕಿದ ರಾಜ್ಯ ಸರ್ಕಾರ!
    ಶಾಲೆ ಹತ್ತಿರವಿದ್ದರೂ,ಮಕ್ಕಳ ಹೆಲ್ಮೆಟ್ ನಿರ್ಲಕ್ಷಿಸಬೇಡಿ!4 ವರ್ಷದೊಳಗಿನ ಮಗುಗೂ ಹೆಲ್ಮೆಟ್ ಕಡ್ಡಾಯ!
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಕೋರ್ಟ್‌ ಮೆಟ್ಟಿಲು ಹತ್ತಿ ಸುಸ್ತಾದವರಿಗೆ ಆಸರೆಯಾದ ‘ಅದಾಲತ್‌’: ಮತ್ತೆ ಒಂದಾದ ನೂರಾರು ದಂಪತಿಗಳು,₹3,000 ಕೋಟಿ ಪರಿಹಾರ,ದಾಖಲೆಯ 78.79 ಲಕ್ಷ ಕೇಸ್‌ಗಳಿಗೆ ಶಾಶ್ವತ ಮುಕ್ತಿ!
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರಬಂತು ಆಲ್ಬರ್ಟ್ ರೇಗೋ …ಕೊಲೆ ರಹಸ್ಯ ಬಯಲಾಗುತ್ತಾ ?
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.