📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ವಿಟ್ಲ ಕನ್ಯಾನದಲ್ಲಿ ಕತ್ತಿ ದಾಳಿಗೆ 55 ವರ್ಷದ ವ್ಯಕ್ತಿ ಸಾವು; ಅಣ್ಣನ ಮಗಳ ವಿರುದ್ಧ ಪ್ರಕರಣ!

    ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯ?

    ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಎರುನಗರ ಶಿರಂಕಲ್ಲು ನಂದರಬೆಟ್ಟುವಿನಲ್ಲಿ ಕತ್ತಿಯಿಂದ ಹಲ್ಲೆ ನಡೆಸಿ 55 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ನಂದರಬೆಟ್ಟು ನಿವಾಸಿ ಚೆನ್ನಯ ಪೂಜಾರಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಮೃತರ ಅಣ್ಣನ ಮಗಳು ಹೃತಿಕಾ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಚೆನ್ನಯ ಪೂಜಾರಿ ಅವರು ತಮ್ಮ ಪುತ್ರರೊಂದಿಗೆ ವಾಸವಾಗಿದ್ದು, ಪ್ರತಿದಿನದಂತೆ ಮಂಗಳವಾರ ಸಂಜೆ ಅಣ್ಣನ ಮನೆಗೆ ತೆರಳಿದ್ದರು. ರಾತ್ರಿ ಸುಮಾರು 7.30ರ ವೇಳೆಗೆ ಚೆನ್ನಯ ಪೂಜಾರಿ ಮತ್ತು ಹೃತಿಕಾ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    Also Read  ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!

    ಸ್ವಲ್ಪ ಹೊತ್ತಿನಲ್ಲೇ ಚೆನ್ನಯ ಪೂಜಾರಿ ಅವರ ಕೂಗಾಟ ಕೇಳಿ ಪುತ್ರರು ಹೊರಗೆ ಬಂದಾಗ ಅವರು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

    ತಂದೆಯ ಮೇಲೆ ಹೃತಿಕಾ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪುತ್ರ ಸುಮಂತ್ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೊಡಗಿನಲ್ಲಿ ಪ್ರವಾಸಿ ಬಸ್ ಪಲ್ಟಿ20 ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರು; ಜೆಸಿಬಿಯಿಂದ ಬಸ್‌ ರಕ್ಷಣೆ!
    ಜಪ್ಪಿನಮೊಗರಿನಲ್ಲಿ  ಖಾಸಗಿ ಬಸ್, ಹಿಟ್ ಅಂಡ್ ರನ್ : ತಮಿಳುನಾಡು ಮೂಲದ ಅಪರಿಚಿತ ವ್ಯಕ್ತಿ ಸಾವು!
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಜಾರಕಿಹೊಳಿ ಮನೆಗೆ ED ದಾಳಿ; ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಕಾವು!
    ನೂರರ ಸಂಭ್ರಮದಲ್ಲಿ “ಜೈ” ತುಳು ಸಿನಿಮಾ
    ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
    ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ಶೋಕಿ ಜೀವನಕ್ಕೆ ಸ್ಕೀಮ್ ಸ್ಕ್ಯಾಮ್:ಗಿಫ್ಟ್ ಆಸೆ-ದೊಡ್ಡ ಕನಸು ತೋರಿಸಿ, ಹಣದೊಂದಿಗೆ ಪರಾರಿ—ಇದುವೇ ನಕಲಿ ಸ್ಕೀಮ್‌ಗಳ ಅಸಲಿ ಕಥೆ!
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ಭೀಕರ ಅಪಘಾತ ಮಹಿಳೆ ಬಲಿ
    ಬಾಳೆಕುದ್ರು ಮಠದ ಸ್ವಾಮೀಜಿ ವಿರುದ್ಧ ಭಕ್ತರ ಆಕ್ರೋಶ; ಶಿರ್ವ, ಜಾಗೆಲೆ ಬೃಹತ್ ಪ್ರತಿಭಟನೆ
    108 ಆಂಬ್ಯುಲೆನ್ಸ್ ಸೇವೆಗೆ ಬ್ರೇಕ್ ಬೀಳುತ್ತಾ? ನೌಕರರ ಸಾಮೂಹಿಕ ರಾಜೀನಾಮೆ ಎಚ್ಚರಿಕೆ…
    ದಿಲ್ಲಿಯಲ್ಲಿ ವಾಗ್ದಾಳಿ.. ಗಲ್ಲಿಯಲ್ಲಿ ಒಪ್ಪಂದ?! ದೇಶದ ಅತ್ಯಂತ ಕಾಂಟ್ರವರ್ಸಿಯಲ್ ಬಿಡ್ ತೆರೆಮರೆಯಲ್ಲಿ ನಡೆದ ಆ ಒಂದು ನಡೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾಕೆ?!
    ಹಸಿರು ಪಟಾಕಿಗೆ ಮಾತ್ರ ಅನುಮತಿ, ಆದ್ರೆ ಮಾರುಕಟ್ಟೆಯ ಹವಾ ನೋಡಿದ್ರೇ…!ಮೂಲಕ್ಕೇ ಕಡಿವಾಣ ಹಾಕದಿದ್ದರೆ ನಿಷೇಧಕ್ಕೆ ಅರ್ಥವೇನು?
    ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
    ದ.ಕ. ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ?
    ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
    ಡಾನ್ -3 ಸಿನಿಮಾ ಕಥೆ ಗೋವಿಂದ….!
    ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
    MRPL ಸ್ಫೋಟ FIR… ದಾಖಲು…MRPL ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ…!
    ಆಹಾರ ಬೆಲೆ ಏರಿಕೆ: ಸಾಮಾನ್ಯರ ಅಡಿಗೆ ಮನೆಗೆ ಮತ್ತೆ ಹೊರೆ?
    ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಮಂಗಳೂರು :ಅಕ್ರಮ ಪಟಾಕಿ ದಾಸ್ತಾನು ಆರೋಪ!