📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬ್ರಹ್ಮಾವರ ಆಹಾರ ಮೇಳ: ಲಕ್ಷಾಂತರ ರೂ. ತೆರಿಗೆ ಬಾಕಿ ಆರೋಪ;  ಗೇಟ್‌ಗೆ ಬೀಗ ಹಾಕುವ ಎಚ್ಚರಿಕೆ!

    ಬ್ರಹ್ಮಾವರ: ಬ್ರಹ್ಮಾವರದಲ್ಲಿ ನಡೆಯಲಿರುವ ಆಹಾರ ಹಾಗೂ ಆರೋಗ್ಯ ಮೇಳ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಮೇಳ ಆಯೋಜನೆಗೆ ಮುಂದಾಗಿರುವ ಸಂಘಟಕರು ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಅಗತ್ಯ ಪರವಾನಿಗೆಯನ್ನೇ ಪಡೆದಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

    ಕ್ರೀಡಾ ಇಲಾಖೆಗೆ ಸೇರಿದ ಕ್ರೀಡಾಂಗಣದಲ್ಲಿ ವಾಣಿಜ್ಯ ಉದ್ದೇಶದ ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವ ಸಂಘಟಕರು, ಗ್ರಾಮ ಪಂಚಾಯತ್‌ನ ಅನುಮತಿ ಪಡೆಯದೇ ಇರುವುದಲ್ಲದೆ, ಲಕ್ಷಾಂತರ ರೂಪಾಯಿ ತೆರಿಗೆ ಹಣವನ್ನೂ ಪಾವತಿಸಿಲ್ಲ ಎನ್ನಲಾಗಿದೆ.

    ಈ ಕುರಿತು ಮಾಹಿತಿ ಹಕ್ಕು ಹೋರಾಟಗಾರರು ಗ್ರಾಮ ಪಂಚಾಯತ್ ಹಾಗೂ ಜಿಲ್ಲಾಡಳಿತಕ್ಕೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಮೇಳ ಆಯೋಜನೆಗೆ ಅಗತ್ಯವಿರುವ ತೆರಿಗೆ ಪಾವತಿ ಹಾಗೂ ಆರೋಗ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಸೇರಿದಂತೆ ಕಡ್ಡಾಯ ದಾಖಲೆಗಳನ್ನು ಪಡೆದುಕೊಳ್ಳದೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

    Also Read  ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು

    ದೂರಿನ ಹಿನ್ನೆಲೆಯಲ್ಲಿ ತೆರಿಗೆ ಹಣವನ್ನು ವಸೂಲಿ ಮಾಡಿದ ಬಳಿಕವಷ್ಟೇ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಜಿಲ್ಲಾಡಳಿತವು ಗ್ರಾಮ ಪಂಚಾಯತ್‌ಗೆ ಸೂಚನೆ ನೀಡಿದೆ ಎನ್ನಲಾಗಿದೆ.

    ಆದರೆ, ಸಂಘಟಕರು ಯಾವುದೇ ಶುಲ್ಕ ಅಥವಾ ತೆರಿಗೆ ಪಾವತಿಸದೆ ಕಾರ್ಯಕ್ರಮ ನಡೆಸಲು ಪಟ್ಟು ಹಿಡಿದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಪ್ರಭಾವಿ ಗಣ್ಯರಿಂದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಸಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

    ಇತ್ತ ಸಾರ್ವಜನಿಕರ ಒತ್ತಡ ಹಾಗೂ ನಿಯಮಗಳ ಪಾಲನೆಯ ವಿಚಾರದಲ್ಲಿ ಗ್ರಾಮ ಪಂಚಾಯತ್ ಕೂಡ ಕಟ್ಟುನಿಟ್ಟಿನ ನಿಲುವು ತಳೆದಿದೆ ಎನ್ನಲಾಗಿದೆ. ತೆರಿಗೆ ಹಣ ಪಾವತಿಸಿಯೇ ಮೇಳ ನಡೆಸಬೇಕು. ಇಲ್ಲವಾದಲ್ಲಿ ಕ್ರೀಡಾಂಗಣದ ಗೇಟ್‌ಗೆ ಬೀಗ ಹಾಕಿ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಘಟಕರಿಗೆ ಖಡಕ್ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

    Also Read  ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ

    ತೆರಿಗೆ ಪಾವತಿ ಮತ್ತು ಅಗತ್ಯ ಇಲಾಖೆಗಳ ಅನುಮತಿ ಇಲ್ಲದೆ ವಾಣಿಜ್ಯ ಕಾರ್ಯಕ್ರಮ ನಡೆಸಲು ಅವಕಾಶವಿದೆಯೇ? ಸಾರ್ವಜನಿಕ ಆಸ್ತಿಯಲ್ಲಿ ಕಾರ್ಯಕ್ರಮ ಆಯೋಜಿಸುವವರು ನಿಯಮಗಳಿಗೆ ಒಳಪಟ್ಟಿರಬೇಕಲ್ಲವೇ? ಎಂಬ ಪ್ರಶ್ನೆಗಳು ಇದೀಗ ಬ್ರಹ್ಮಾವರದಲ್ಲಿ ಚರ್ಚೆಗೆ ಗ್ರಾಸವಾಗಿವೆ.

    ಮೇಳ ಆಯೋಜಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಆರೋಪಗಳ ಕುರಿತು ಸ್ಪಷ್ಟನೆ ನೀಡಬೇಕಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದ.ಕ. ಮತದಾರರ ಪಟ್ಟಿಯಲ್ಲಿ ಬಿಗ್ ಅಪ್‌ಡೇಟ್‌! 16.78 ಲಕ್ಷ ಮತದಾರರು ಫೈನಲ್, 9,064 ಹೆಸರುಗಳಿಗೆ ಕೊಕ್‌!
    ಉತ್ತರ ಕನ್ನಡಕ್ಕೆ ₹6,925 ಕೋಟಿ ಬಂದರು ಯೋಜನೆ: 15 MTPA ಸಾಮರ್ಥ್ಯದ ಮಂಕಿ ಬಂದರಿಗೆ ಸಚಿವ ಸಂಪುಟ ಒಪ್ಪಿಗೆ
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!
    ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
    ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
    ಕರ್ನಾಟಕದ 177 ತಾಲೂಕು ಬರಪೀಡಿತ… ಪರಿಹಾರ ಕೇಳಲು ಹೊರಟ ಸರ್ಕಾರಕ್ಕೆ BJP–JDS ಸಾಥ್ ಇಲ್ಲ!ಸರ್ವಪಕ್ಷ ನಿಯೋಗಕ್ಕೆ ಗೈರು!
    🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
    ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
    ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
    108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
    ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಮಂಗಳೂರಿಗೆ ಮತ್ತೊಂದು ದೊಡ್ಡ ಯೋಜನೆ: 17.5 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹಾಗಾರಕ್ಕೆ ಅನುಮೋದನೆ – ಕರಾವಳಿಗೆ ಅಭಿವೃದ್ಧಿಯ ಹೊಸ ಅಧ್ಯಾಯ
    ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
    ₹2.68 ಕೋಟಿ ದರೋಡೆಗೆ ಜಾರಕಿಹೊಳಿ ಗನ್‌ಮ್ಯಾನ್‌ನಿಂದಲೇ ಸ್ಕೆಚ್?
    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ
    ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
    ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
    ಪ್ರತಿಭಟನೆಯ ಹಕ್ಕು ಸಂವಿಧಾನ ನೀಡಿದೆ… ಆದರೆ ಅದರ ಹೆಸರಿನಲ್ಲಿ ನಡೆದ ಎಲ್ಲವನ್ನೂ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ!
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಟ್ಯಾಕ್ಸಿ ಸಮರ: ₹180 ಶುಲ್ಕಕ್ಕೆ ಚಾಲಕರ ಆಕ್ರೋಶ, ಅನಿರ್ದಿಷ್ಟಾವಧಿ ಧರಣಿ!
    ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
    ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
    ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಲು ಮಹಾರಾಷ್ಟ್ರದ ಮಾಸ್ಟರ್ ಪ್ಲಾನ್: ಇನ್ವಿಟೇಶನ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಕಡ್ಡಾಯ!
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!