📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ

    ಬಾಗಲಕೋಟೆ-ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಾನೂನು ಇದ್ದರೂ, ಹಣದ ಆಸೆಗೆ ಕೆಲವೆಡೆ ಭ್ರೂಣ ಲಿಂಗ ಪತ್ತೆ ಮತ್ತು ಅಕ್ರಮ ಗರ್ಭಪಾತದ ದಂಧೆ ನಡೆಯುತ್ತಿರುವ ಆರೋಪಗಳು ಆತಂಕಕಾರಿ. ಇಂತಹ ಅಕ್ರಮಗಳನ್ನು ತಡೆಯಲು ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಗಳ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆ ಈಗ ಗಮನ ಸೆಳೆದಿದೆ.

    ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ್‌ ಗರ್ಭಿಣಿ ವೇಷದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶೋಭಾ ನಾದಿನಿಯಂತೆ ಹಾಗೂ ಡಿಎಚ್‌ಒ ಡಾ.ಸುವರ್ಣ ಕುಲಕರ್ಣಿ ಗರ್ಭಿಣಿಯ ತಾಯಿಯಾಗಿ ವೇಷ ಮರೆಸಿಕೊಂಡು ಕಾರ್ಯಾಚರಣೆ ನಡೆಸಿದವರು.

    ಇದು ಭ್ರೂಣ ಲಿಂಗ ಪತ್ತೆ ಪ್ರಕರಣಕ್ಕೆ ಮಾತ್ರ ಸೀಮಿತವಾಗಬಾರದು . ಸಾರ್ವಜನಿಕರಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ಅಕ್ರಮದ ದೂರುಗಳು ಅಥವಾ ಅನುಮಾನಗಳಿದ್ದರೆ, ಪ್ರಾಮಾಣಿಕ ಅಧಿಕಾರಿಗಳ ವಿಶೇಷ ತಂಡಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಿದಾಗ ಮಾತ್ರ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಪರಿಣಾಮಕಾರಿ ಕಡಿವಾಣ ಹಾಕಲು ಸಾಧ್ಯ.

    Also Read  ಮಾರ್ಚ್ 17 :ಮಂಗಳೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ-ಗ್ರಾಹಕರ ಹಕ್ಕುಗಳ ಜಾಗೃತಿ ಕಾರ್ಯಕ್ರಮ

    ಅಕ್ಟೋಬರ್ 5ರ ರಾತ್ರಿ ಗರ್ಭಿಣಿಯರು ಮತ್ತು ಅವರ ಸಂಬಂಧಿಕರ ವೇಷದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಡರ ಬಬಲಾದ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ಮಧ್ಯವರ್ತಿಯೊಬ್ಬನ ಮೂಲಕ ಸ್ಕ್ಯಾನಿಂಗ್ ನಡೆಯುತ್ತಿದ್ದ ಸ್ಥಳವನ್ನು ಪತ್ತೆಹಚ್ಚಿದರು. ಸ್ಕ್ಯಾನಿಂಗ್ ಯಂತ್ರ ಸಿದ್ಧಪಡಿಸುತ್ತಿದ್ದ ವೇಳೆ ದಾಳಿ ನಡೆಸಿ ಇಬ್ಬರನ್ನು ಹಾಗೂ ಯಂತ್ರವನ್ನು ವಶಕ್ಕೆ ಪಡೆದು ಮಹಾರಾಷ್ಟ್ರ ಪೊಲೀಸರಿಗೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಎಂದು ಶಂಕಿಸಲಾಗಿರುವ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ.

    ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳಿಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯೆ ಲಿಂಕ್‌ಇದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜಾಡರ ಬಬಲಾದ ಗ್ರಾಮದಲ್ಲಿ ಭ್ರೂಣ ಲಿಂಗ ಪತ್ತೆ ನಡೆದರೆ ಬಳಿಕ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.

    ಈ ಕಾರ್ಯಾಚರಣೆ ಒಂದು ಪ್ರಮುಖ ಸಂದೇಶವನ್ನೂ ನೀಡುತ್ತದೆ. ಆರೋಗ್ಯ, ಕಂದಾಯ, ಪೊಲೀಸ್, ಆಹಾರ, ಕಾರ್ಮಿಕ, ಸ್ಥಳೀಯ ಆಡಳಿತ ಸೇರಿದಂತೆ ಅಕ್ರಮ ಚಟುವಟಿಕೆಗಳ ಸಾಧ್ಯತೆ ಇರುವ ವಿವಿಧ ಇಲಾಖೆಗಳು ಪ್ರಾಮಾಣಿಕ ಅಧಿಕಾರಿಗಳ ಜಂಟಿ ತಂಡಗಳನ್ನು ರಚಿಸಿ, ಪೂರ್ವ ಮಾಹಿತಿ ಸೋರಿಕೆಯಾಗದಂತೆ ಕಾನೂನುಬದ್ಧ ಅಚ್ಚರಿ ತಪಾಸಣೆಗಳನ್ನು ನಿಯಮಿತವಾಗಿ ನಡೆಸಬೇಕು.ತಪಾಸಣೆ ನಡೆಯಲಿದೆ ಎಂಬುದು ಮುಂಚಿತವಾಗಿಯೇ ಗೊತ್ತಿದ್ದರೆ ಅಕ್ರಮ ನಡೆಸುವವರು ಸಾಕ್ಷ್ಯಗಳನ್ನು ಮರೆಮಾಡುವ ಅಥವಾ ಸ್ಥಳಾಂತರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಯಮಿತ ಪರಿಶೀಲನೆ ಜೊತೆಗೆ ಅಗತ್ಯವಿರುವಲ್ಲಿ ಅನಿರೀಕ್ಷಿತ ತಪಾಸಣೆ, ದಾಖಲೆಗಳ ಪರಿಶೀಲನೆ ಮತ್ತು ಪರಸ್ಪರ ಇಲಾಖೆಗಳ ಸಮನ್ವಯ ಇರಬೇಕು.

    Also Read  ಮಾರ್ಚ್ 7 ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ

    “ಮಹಿಳಾ ಅಧಿಕಾರಿಗಳು ಜೀವಭಯದ ಮಧ್ಯೆ ರಹಸ್ಯ ಕಾರ್ಯಾಚರಣೆ ನಡೆಸಿ ಭ್ರೂಣ ಲಿಂಗ ಪತ್ತೆ ಜಾಲವನ್ನು ಹೊರಗೆಡವಿದ್ದಾರೆ. ಅಧಿಕಾರಿಗಳ ಭದ್ರತೆ ದೃಷ್ಟಿಯಿಂದ ವಿಜಯಪುರ, ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಧಿಕಾರಿಗಳ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗಿತ್ತು.” ಎಂದು ಬಾಗಲಕೋಟೆ ಜಿಲ್ಲಾಧಿಕಾರಿ, ಸಂಗಪ್ಪ ಎಂ.ಮಹಿಳಾ ಅಧಿಕಾರಿಗಳ ಸಾಹಸವನ್ನ ಶ್ಲಾಘಿಸಿದ್ದಾರೆ..

    ##FemaleFoeticide #GenderDetection #SecretOperation #KarnatakaNews #HealthDepartment #WomenSafety #AntiCorruption

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
    ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..
    ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
    ತೇಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅತ್ಯಾಚಾರ ಪ್ರಕರಣಕ್ಕೆ 13 ವರ್ಷಗಳ ಬಳಿಕ ಗೋವಾ ಹೈಕೋರ್ಟ್ ಮಹತ್ವದ ತೀರ್ಪು….!
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
    ಡಾನ್ ಹೇಮಂತ್ ಪೂಜಾರಿ ಸಹೋದರ ವಶಕ್ಕೆ?!?
    ಭರ್ಜರಿ ಬಿಜೆಪಿ ವಿಜಯೋತ್ಸವ ಬೆಂಗಳೂರಲ್ಲಿ ..!ಪ್ರಧಾನಿ ಮೋದಿ ಬರ್ತಿದ್ದಾರೆ.
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ಚಕ್ರಬಡ್ಡಿ ಹೆಸರಿನಲ್ಲಿ ಮಹಿಳೆಗೆ ಕಿರುಕುಳ: ₹9.37 ಲಕ್ಷ ಬಾಕಿ ಎಂದು ಬೆದರಿಕೆ ಆರೋಪ
    ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
    ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
    ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
    BRICS ಸಭೆಯಲ್ಲಿ UAE ಮೇಲೆ ಇರಾನ್ ಕಿಡಿ! ಇಸ್ರೇಲ್–ಇರಾನ್ ಯುದ್ಧ – ಇಸ್ರೇಲ್‌ಗೆ UAE ಗುಪ್ತ ಬೆಂಬಲವೇ?
    ಹಂತಕರ ಹಿಂದೆ ಯಾರಿದ್ದಾರೆ? ಉಡುಪಿ ಪೊಲೀಸರ ನೆಕ್ಸ್ಟ್ ಟಾರ್ಗೆಟ್…?
    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
    ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ,15 ವಿದ್ಯಾರ್ಥಿಗಳು ಸಜೀವ ದಹನ ಹೃದಯವಿದ್ರಾವಕ ದುರಂತ
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
    ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
    ಸಮಾಜಸೇವಕನ ಮುಖವಾಡದ ಹಿಂದೆ ಡ್ರಗ್ಸ್ ದಂಧೆ?ಅದು ಆ್ಯಂಬುಲೆನ್ಸ್ ನಲ್ಲಿ ..!ಚಾಲಕ ಜಲೀಲ್ ಬಾಬಾ ಪರಾರಿ!ಆತನಿಗೆ ಆಶ್ರಯ ಅಥವಾ ಪರಾರಿಯಾಗಲು ಸಹಾಯ ಮಾಡಿದವರ ಮೇಲೂ ಕಾನೂನು ಕ್ರಮ
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!
    ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
    ಕಾಂಗೋದಲ್ಲಿ ಭೀಕರ ವಿಮಾನ ಅಪಘಾತ: ಇಬ್ಬರು ಸೇನಾ ಲೆಫ್ಟಿನೆಂಟ್ ಜನರಲ್ ಸೇರಿ 14 ಮಂದಿ ಸಾವು