📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿ ವಿಧಾನಸಭಾ ಚುನಾವಣೆಗೆ ರೆಡಿಯಾದ ಕಾಂಚನ್..!

    ಅಭ್ಯರ್ಥಿತ್ವದ ಚರ್ಚೆ ನಡುವೆ ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಲೆಕ್ಕಾಚಾರ

    ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿತ್ವದ ಕುರಿತು ರಾಜಕೀಯ ಚರ್ಚೆ ಈಗಾಗಲೇ ಗರಿಗೆದರತೊಡಗಿದೆ. ಪ್ರಸಾದ್ ರಾಜ್ ಕಂಚನ್ ಅವರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿರುವ ಬೆನ್ನಲ್ಲೇ, ಮಾಜಿ ಶಾಸಕ ಕೆ. ರಘುಪತಿ ಭಟ್ ಕಾಂಗ್ರೆಸ್ ಸೇರ್ಪಡೆ ಹಾಗೂ ಭವಿಷ್ಯದ ಅಭ್ಯರ್ಥಿತ್ವದ ಕುರಿತಾದ ಊಹಾಪೋಹಗಳು ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

    2023ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಸಾದ್ ರಾಜ್ ಕಂಚನ್ ಸ್ಪರ್ಧಿಸಿದ್ದರು. ಇದೀಗ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಸಂಘಟನಾ ಚಟುವಟಿಕೆಗಳನ್ನು ಚುರುಕುಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ರಾಜಕೀಯ ವಲಯದ ಗಮನ ಸೆಳೆದಿದೆ.

    ಕಂಚನ್ ಪರವಾಗಿ ಸಂಘಟನಾ ಸಿದ್ಧತೆ?

    ಪಕ್ಷದ ರಾಜ್ಯಮಟ್ಟದ ಮುಖಂಡರಿಂದ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಕೆಲಸ ಮುಂದುವರಿಸುವಂತೆ ಸೂಚನೆ ದೊರೆತಿದೆ ಎಂಬುದು ಕಂಚನ್ ಬೆಂಬಲಿಗರ ವಾದ. ಅದರ ಆಧಾರದ ಮೇಲೆ ಈಗಿನಿಂದಲೇ ವಿಧಾನಸಭೆ ಮಾತ್ರವಲ್ಲದೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನೂ ಗಮನದಲ್ಲಿಟ್ಟುಕೊಂಡು ಸಂಘಟನೆಯನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ ಎಂದು ಅವರ ಆಪ್ತ ವಲಯ ಹೇಳುತ್ತಿದೆ.

    ಆದರೆ, ಅಭ್ಯರ್ಥಿತ್ವದ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ನಾಯಕತ್ವವೇ ಕೈಗೊಳ್ಳಬೇಕಾಗುತ್ತದೆ ಅನ್ನುವುದು ನಿಜವೇ ಆದರೂ ರಾಜ್ಯ ನಾಯಕತ್ವ ಈಗಾಗಲೇ ಪ್ರಸಾದ್ ಕಾಂಚನಿಗೆ ಕೆಲಸ ಮಾಡಲು ಚುನಾವಣೆಗೆ ತಯಾರಾಗಲು ಸೂಚಿಸಿದೆ ಅನ್ನುವುದು ಕೂಡ ಅಷ್ಟೇ ನಿಜ. ಆದರೂ ಚುನಾವಣೆಗೆ ಮುನ್ನ ಪಕ್ಷದ ಆಂತರಿಕ ಸಮಾಲೋಚನೆ, ಕ್ಷೇತ್ರದ ರಾಜಕೀಯ ಪರಿಸ್ಥಿತಿ ಮತ್ತು ಅಭ್ಯರ್ಥಿಗಳ ಅರ್ಹತೆ ಸೇರಿದಂತೆ ಹಲವು ಅಂಶಗಳು ನಿರ್ಧಾರದಲ್ಲಿ  ಮಹತ್ತರ ಪಾತ್ರವಹಿಸುವ ಸಾಧ್ಯತೆ ಇದೆ.

    Also Read  '₹1ಕ್ಕೆ ಫ್ಯಾಷನ್' ಜಾಹೀರಾತು ವೈರಲ್... ಮಾಲಾಡ್ ಮಾಲ್‌ನಲ್ಲಿ ನಿಯಂತ್ರಣ ತಪ್ಪಿದ ಜನಸಾಗರ-ಸ್ಟ್ಯಾಂಪೀಡ್ ಭೀತಿ ಮೂಡಿಸಿದ ಜನಸಂದಣಿ!

    ರಘುಪತಿ ಭಟ್ ಹೆಸರು ಏಕೆ ಚರ್ಚೆಗೆ ಬಂದಿದೆ?

    ಇದರ ಮಧ್ಯೆ ಮಾಜಿ ಶಾಸಕ ಕೆ. ರಘುಪತಿ ಭಟ್ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಮತ್ತು ಮುಂದಿನ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು ಎಂಬ ರೀತಿಯ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಭಟ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಅಥವಾ ಅವರನ್ನು ಉಡುಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಬಹುದು ಎನ್ನುವುದು ಕೇವಲ ಒಂದು ಊಹಾಪೋಹದ ಸೃಷ್ಟಿ ಅಷ್ಟೇ. ಅಂತಹ ಯಾವುದೇ ರಾಜಕೀಯ ದೊಡ್ಡ ಬದಲಾವಣೆಯು ಇಲ್ಲ ಎಂಬುದು ಉಡುಪಿ ಜಿಲ್ಲಾ ಕಾಂಗ್ರೆಸ್ನ ಹಿರಿಯ ಕಾರ್ಯಕರ್ತರುಗಳ ವಲಯದಿಂದ ಕೇಳಿ ಬರುವ ಮಾತು. ಈ ಊಹಾಪೋಹಗಳನ್ನೇ ಸತ್ಯವೆಂಬಂತೆ ಬಿಂಬಿಸುತ್ತಿದ್ದಾರೆ ಎನ್ನುವುದು ಅವರ ಆರೋಪವು ಹೌದು.

    ರಘುಪತಿ ಭಟ್ ಅವರು 2024ರಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದರು ಅದರಿಂದ ಬಿಜೆಪಿಯು ಅವರನ್ನು ಪಕ್ಷದಿಂದ ಆರು ವರ್ಷಗಳವರೆಗೆ ಹೊರಗೆ ಹಾಕಿದೆ ಎಂಬುದು ಆಗಿನ ವರದಿಗಳಲ್ಲಿ ದಾಖಲಾಗಿದೆ.

    ಹೀಗಾಗಿ ಅವರ ಮುಂದಿನ ರಾಜಕೀಯ ಹೆಜ್ಜೆ ಕುರಿತು ನಡೆಯುತ್ತಿರುವ ಚರ್ಚೆಯನ್ನು ಸದ್ಯಕ್ಕೆ ರಾಜಕೀಯ ಊಹಾಪೋಹದ ಹಂತದಲ್ಲೇ ನೋಡುವುದು ಸೂಕ್ತ.

    Also Read  ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು... ಪ್ರಕರಣದ ಸುತ್ತ ಸಂಶಯದ ಹುತ್ತ

    ಕಾಂಗ್ರೆಸ್‌ನ ಮುಂದಿರುವ ಸಂಘಟನಾ ಸವಾಲು

    2026ರ ಸೆಪ್ಟೆಂಬರ್‌ನಲ್ಲಿ ಕಿಶನ್ ಕುಮಾರ್ ಹೆಗ್ಡೆ ಕೊಳ್ಕೆಬೈಲ್ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ರಾಜಕೀಯ ಬದಲಾವಣೆಗೆ ಕಾರಣವಾಗುತ್ತದೆ ಎಂದು ನಂಬಿದವರಿಗೆ ಬ್ರಮನಿರತನವಾಗಿದೆ ಎನ್ನಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಕೂಡ ಮುಂದಿನ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ಕುರಿತು ಒತ್ತು ನೀಡಿದೆ.

    ಈ ಹಿನ್ನೆಲೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಅಭ್ಯರ್ಥಿತ್ವದ ಪ್ರಶ್ನೆ ಕೇವಲ ಒಬ್ಬ ವ್ಯಕ್ತಿಯ ಆಯ್ಕೆಯಾಗಿ ಉಳಿಯದೆ, ಪಕ್ಷದ ಸಂಘಟನಾ ಬಲ, ಸ್ಥಳೀಯ ನಾಯಕತ್ವ, ಕಾರ್ಯಕರ್ತರ ಸ್ವೀಕಾರ ಮತ್ತು ಚುನಾವಣಾ ತಂತ್ರದ ಭಾಗವಾಗುವ ಸಾಧ್ಯತೆ ಇದೆ.

    ಕಾರ್ಯಕರ್ತರ ನಿರೀಕ್ಷೆ ಏನು?

    ಪ್ರಸಾದ್ ಕಂಚನ್ ಅವರನ್ನು ಬೆಂಬಲಿಸುವ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ, ಈಗಾಗಲೇ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ನಾಯಕರಿಗೆ ಚುನಾವಣಾ ಸಂದರ್ಭದಲ್ಲಿ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವಿದೆ ಎನ್ನಲಾಗಿದೆ.

    ಹೊಸ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ವಿರೋಧವಿಲ್ಲ; ಆದರೆ ಪಕ್ಷಕ್ಕೆ ಸೇರ್ಪಡೆಯಾದ ತಕ್ಷಣವೇ ಪ್ರಮುಖ ಚುನಾವಣಾ ಜವಾಬ್ದಾರಿ ನೀಡುವ ಬದಲು, ಅವರ ಸಂಘಟನಾ ಸಾಮರ್ಥ್ಯ ಮತ್ತು ಪಕ್ಷದೊಳಗಿನ ಕೊಡುಗೆಯನ್ನು ಪರಿಗಣಿಸಿ ಹಂತ ಹಂತವಾಗಿ ಜವಾಬ್ದಾರಿ ನೀಡಬೇಕು ಎಂಬ ಚರ್ಚೆಯೂ ಇದೆ.

    ಇದು ಒಂದು ಕಡೆ ಹಳೆಯ ಕಾರ್ಯಕರ್ತರ ಅಸಮಾಧಾನವನ್ನು ತಪ್ಪಿಸುವ ಪ್ರಶ್ನೆಯಾದರೆ, ಮತ್ತೊಂದು ಕಡೆ ಚುನಾವಣಾ ಸಮಯದಲ್ಲಿ ಹೊಸ ಸಾಮಾಜಿಕ ಮತ್ತು ರಾಜಕೀಯ ಸಮೀಕರಣಗಳನ್ನು ರೂಪಿಸಿಕೊಳ್ಳುವ ಪಕ್ಷದ ತಂತ್ರದ ಪ್ರಶ್ನೆಯೂ ಆಗಿದೆ.

    Also Read  ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ

    ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿ

    ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಸಾಮಾನ್ಯವಾಗಿ ಸ್ಥಳೀಯ ಮಟ್ಟದ ಅಭಿಪ್ರಾಯ, ಜಿಲ್ಲಾ ಮತ್ತು ರಾಜ್ಯ ಸಂಘಟನೆ, ಪಕ್ಷದ ಆಂತರಿಕ ಸಮಾಲೋಚನೆ ಹಾಗೂ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. 2026ರಲ್ಲಿ ಕರ್ನಾಟಕ ಕಾಂಗ್ರೆಸ್ ಸಂಘಟನಾತ್ಮಕ ಪುನರ್‌ವ್ಯವಸ್ಥೆ ನಡೆಸುತ್ತಿರುವುದರ ನಡುವೆಯೇ ಜಿಲ್ಲಾಧ್ಯಕ್ಷರ ನೇಮಕಾತಿಗಳಲ್ಲೂ  ಉಡುಪಿಯ ಮಟ್ಟಿಗೆ ಒಂದಿಷ್ಟು ಗೊಂದಲವಾಗಿದೆ ಎಂಬ ಆರೋಪವು ಇದೆ ಇದರ ಮಧ್ಯ ಪಕ್ಷವೂ ಅಭ್ಯರ್ಥಿ ವಿಚಾರದಲ್ಲಿ ಕಾರ್ಯಕರ್ತರ ಮನದ ಮಾತನ್ನು ಕೇಳುತ್ತದೆ ಎಂದು ಭಾವಿಸಿದ್ದಾರೆ.

    ಒಟ್ಟಿನಲ್ಲಿ, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುಂದಿನ ಅಭ್ಯರ್ಥಿತ್ವದ ಸುತ್ತ ಚರ್ಚೆ ಆರಂಭವಾಗಿರುವುದು ಮಾತ್ರ ಸ್ಪಷ್ಟ. ಒಂದು ಕಡೆ ಈಗಾಗಲೇ ಕ್ಷೇತ್ರದಲ್ಲಿ ರಾಜಕೀಯ ನೆಲೆ ಹೊಂದಿರುವ ನಾಯಕರನ್ನು ಮುಂದುವರಿಸುವ ಒತ್ತಾಯ, ಮತ್ತೊಂದು ಕಡೆ ಹೊಸ ರಾಜಕೀಯ ಸೇರ್ಪಡೆಗಳಿಂದ ಹೊಸ ಸಮೀಕರಣ ರೂಪಿಸುವ ಸಾಧ್ಯತೆ—ಈ ಎರಡರ ನಡುವಿನ ಸಮತೋಲನವೇ ಕಾಂಗ್ರೆಸ್‌ಗೆ ಪ್ರಮುಖ ಸಂಘಟನಾ ಪ್ರಶ್ನೆಯಾಗಲಿದೆ.

    ಉಡುಪಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿತ್ವದ ಅಂತಿಮ ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ; ಆದರೆ ಚುನಾವಣಾ ತಯಾರಿ ಮಾತ್ರ  ಪ್ರಸಾದ್ ಕಾಂಚನ್ ಅವರಿಂದ ಈಗಿನಿಂದಲೇ ಆರಂಭಗೊಂಡಿರುವುದು ಕ್ಷೇತ್ರದ ರಾಜಕೀಯ ಚರ್ಚೆಗೆ ಹೊಸ ವೇಗ ನೀಡಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಖಾದರ್‌ ಖಡಕ್ ವಾರ್ನಿಂಗ್ ವೈರಲ್ : ಆದರೆ ಖಡಕ್ ಆಕ್ಷನ್ ಯಾವಾಗ?”ಪ್ರತಿ ಮಳೆಯಲ್ಲೂ ಅದೇ ಕಥೆ: ರಸ್ತೆ ಗುಂಡಿ, ಅಪಘಾತ, ಎಚ್ಚರಿಕೆ, ಜವಾಬ್ದಾರಿ ಹೊತ್ತವರ ಜಾಣ ಮರೆವು!
    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ 47 ಜೀವಂತ ಅಪರೂಪದ ಪ್ರಾಣಿಗಳು ಪತ್ತೆ! 
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!
    ಮತದಾರರೇ…ಕರ್ನಾಟಕ SIR ನಲ್ಲಿ 47 ಲಕ್ಷ ಹೆಸರುಗಳು ಡಿಲೀಟ್…..‌! 2002ರ ಪಟ್ಟಿ ವಿವರ ಇಲ್ಲದಿದ್ದರೆ ನೋಟಿಸ್? ಮುಂದೆ ಏನು ಮಾಡಬೇಕು?
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    717 ಮದ್ಯದಂಗಡಿಗಳಿಗೆ ವಿಜಯ್ ಬ್ರೇಕ್‌! ತಮಿಳುನಾಡು ಖಜಾನೆಗೆ ಸಾವಿರಾರು ಕೋಟಿ ಶಾಕ್!
    ತುಮಕೂರಿನಲ್ಲಿ ಬೆಚ್ಚಿಬೀಳಿಸುವ ತಂದೆ-ಮಗಳು ದುರಂತ
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    ಲೈಫ್‌ಗಾರ್ಡ್ ಇಲ್ಲದ ಕಡಲಿಗೆ 14ರ ಬಾಲಕ…ಶ್ರೇಯಸ್ ಬಲಿ!
    ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    420 ವಂಚನೆ ಪ್ರಕರಣದಲ್ಲಿ ಮಹಿಳೆಯ ಬಂಧನ – ಪೊಲೀಸ್ ತನಿಖೆ
    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
    ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
    ಜಪಾನ್ ಟೆಕ್ನಾಲಜಿ ಬಳ್ಳಾರಿಗೆ ಎಂಟ್ರಿ!ನಿರ್ಮಲಾ ಸೀತಾರಾಮನ್ ಹಸಿರು ಕ್ರಾಂತಿಗೆ ಚಾಲನೆ… ಇದು ಸಾಮಾನ್ಯ ಯೋಜನೆ ಅಲ್ಲ.1 ಲಕ್ಷ ಸಸಿಗಳು, 300 ಎಕರೆ ಭೂಮಿ ..
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
     ಡಿಗ್ರಿಗೂ ಮುನ್ನ ಹ್ಯಾಕರ್ ಗೆ IIT ಉದ್ಯೋಗ! ಪ್ರತಿಭೆ ಇದ್ದರೆ ಅವಕಾಶವೇ ನಿಮ್ಮ ಮನೆ ಬಾಗಿಲು ತಟ್ಟುತ್ತದೆ!” ಅನ್ನೋದಕ್ಕೆ ಸ್ಫೂರ್ತಿ ಈ ನಿಸರ್ಗ ಅಧಿಕಾರಿ..
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ಪುಟಿನ್‌ ಭದ್ರತೆಯ ಈ ರಹಸ್ಯ ಕೇಳಿದ್ರೆ ಶಾಕ್ ಆಗ್ತೀರಾ!ಪುಟಿನ್‌ಗೆ ಇಷ್ಟೊಂದು ಭದ್ರತೆನಾ? ‘ಸುಸು–ಕಕ್ಕಾ’ ಕೂಡ ರಷ್ಯಾಕ್ಕೆ ವಾಪಸ್!
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
    Train Travel ಇಷ್ಟನಾ? ಹಾಗಾದ್ರೆ ಈ ಸುದ್ದಿ ತಿಳ್ಕೊಳ್ಳಿ!ಬೆಂಗಳೂರು–ಮಂಗಳೂರು ಗೋವಾ ವಂದೇ ಭಾರತ್….!?
    ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
    ಗೃಹಲಕ್ಷ್ಮಿ ಹಣ ಪಡೆಯೋರೇ ಗಮನಿಸಿ! ಪತಿ ಆಧಾರ್‌ನಿಂದ ಬ್ಯಾಂಕ್ ಖಾತೆವರೆಗೆ ಹೊಸ ರೂಲ್ಸ್
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಹರಿಹರದಲ್ಲಿ ಪ್ಲಾನ್! ಬಂಧಿತ ಸುಹೇಲ್ ಬೆನ್ನತ್ತಿದ ಇಂಟೆಲಿಜೆನ್ಸ್; 10 ಜನರ ಟೀಮ್‌ಗಾಗಿ ತೀವ್ರ ಶೋಧ!