📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?

ನೋ ಡೌಟ್, ನಕಲಿ ಮತದಾರರನ್ನು, ಚುನಾವಣೆಯ ಯಾದಿಯ ಪಟ್ಟಿಯಿಂದ ಕೈಬಿಡಬೇಕು ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಹಾಗೆಯೇ ವೃತ ವ್ಯಕ್ತಿಗಳ ಹೆಸರನ್ನು ಕೈ ಬಿಡಬೇಕು ಅನ್ನುವುದೂ ಸರಿಯೇ. ಆದರೆ ನಕಲಿ ಮತದಾರರು ಹೇಗೆ ಬಂದ್ರು? ಅವರನ್ನು ಮತದಾರರ ಪಟ್ಟಿಗೆ ಸೇರಿಸಿದ್ದು ಯಾರು? ಮತದಾರರ ಪಟ್ಟಿಗೆ ಸೇರಿಸಿದ ಅಧಿಕಾರಿಗಳಿರಲಿ, ಸಿಬ್ಬಂದಿಗಳೆರಲಿ ಅವರ ಮೇಲೆ ಯಾವ ಕ್ರಮ? ಹಾಗೆಯೇ ಈಗ ಕೈ ಬಿಡಲಾದ ಮತದಾರರ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ? ಅವರು ದೇಶದವರ ಅಲ್ಲ ಅನ್ನುವ ಕಾರಣಕ್ಕೆ ತಾನೇ, ಮತದಾರರ ಪಟ್ಟಿಯಿಂದ ತೆಗೆದದ್ದು? ಹಾಗಿದ್ದ ಮೇಲೆ, ಅವರನ್ನು  ದೇಶದಿಂದ ಹೊರಗೆ ಹಾಕುವ ಪ್ರಕ್ರಿಯೆ ಶುರುವಾಗಲು ಇನ್ನೆಷ್ಟು ಸಮಯ ಬೇಕು?

ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಛತ್ತಿಸ್ಘಢ, ಮಧ್ಯ ಪ್ರದೇಶ್, ರಾಜಸ್ಥಾನ್, ಗುಜರಾತ್, ತಮಿಳುನಾಡು, ಕೇರಳ, ಪುದುಚೇರಿ, ಗೋವಾ, ಅಂಡಮಾನ್ ನಿಕೋಬಾರ್ ಹಾಗೂ ಲಕ್ಷ ದ್ವೀಪ ಇವಿಷ್ಟು ರಾಜ್ಯಗಳಿಂದ ಒಟ್ಟು 8.18 ಕೋಟಿ ಮತದಾರರನ್ನು ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ. ಇದು ಇಡೀ ದೇಶದ ಯಾದಿಯಲ್ಲ, ಕೇವಲ 9 ರಾಜ್ಯದ ಯಾದಿ. ಇನ್ನುಳಿದ ರಾಜ್ಯಗಳಲ್ಲೂ ಈ ಪ್ರಕ್ರಿಯೆಗಳು ಅಲ್ಲಿನ ಚುನಾವಣೆಗೂ ಮೊದಲು ನಡೆಯುತ್ತದೆ ಅನ್ನುವುದು ಈ ಒಂಬತ್ತು ರಾಜ್ಯದ ಪ್ರಕ್ರಿಯೆಗಳಿಂದ ತಿಳಿದು ಬರುತ್ತದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಎರಡು ಕೋಟಿ ಐದು ಲಕ್ಷ ಜನರನ್ನು ಮತದಾರರ ಯಾದಿಯಿಂದ ಕೈ ಬಿಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ 83.86 ಲಕ್ಷ ಜನರನ್ನು ಕೈ ಬಿಡಲಾಗಿದ್ದರೆ ಬಿಹಾರದಲ್ಲಿ 68 ಲಕ್ಷ ಜನರನ್ನು ಕೈ ಬಿಡಲಾಗಿದೆ.

ಮಧ್ಯಪ್ರದೇಶದಲ್ಲಿ ಸುಮಾರು 34 ಲಕ್ಷ, ಛತ್ತಿಸ್ ಗಡದಲ್ಲಿ 25 ಲಕ್ಷ, ರಾಜಸ್ಥಾನದಲ್ಲಿ 31 ಲಕ್ಷ, ತಮಿಳುನಾಡಿನಲ್ಲಿ ಬರೋಬ್ಬರಿ 74 ಲಕ್ಷ, ಕೇರಳದಲ್ಲಿ ಒಂಬತ್ತು ಲಕ್ಷ, ಗೋವಾ 1.28 ಲಕ್ಷ, ಪುದುಚೆರಿ 77ಸಾವಿರ, ಅಂಡಮಾನ್ ನಿಕೋಬಾರ್ ಐವತ್ತೆರಡು ಸಾವಿರ ಹಾಗೂ ಲಕ್ಷದ್ವೀಪದಲ್ಲಿ 206 ಮತದಾರರನ್ನು ಕೈ ಬಿಡಲಾಗಿದೆ. ಇದೇನು ಸಣ್ಣ ಸಂಖ್ಯೆಯಲ್ಲ.

ಹೌದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ವಿಳಾಸ ಬದಲಾವಣೆ ಯಾದವರದ್ದು, ಮೃತಪಟ್ಟವರದ್ದು ಬೆರಳೆಣಿಕೆಯ ಲೆಕ್ಕದಲ್ಲಿ ಹೆಚ್ಚುವರಿಯಾಗಿ ಸಿಕ್ಕಿರಬಹುದು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನುಸುಳುಕೋರ ಮತದಾರರು ಲಿಸ್ಟಿನಲ್ಲಿ ಸೇರಿಕೊಳ್ಳಲು ಹೇಗೆ ಸಾಧ್ಯ? ಒಂದೊಮ್ಮೆ ಸೇರಿ ಕೊಂಡಿದ್ದಾರೆ ಅಂತಲೇ ಇಟ್ಟುಕೊಂಡರೂ, ಅಧಿಕಾರಿಗಳ ಸಹಾಯವಿಲ್ಲದೆ ಈ ಕೆಲಸ ಆಗಲು ಸಾಧ್ಯವೇ ಇಲ್ಲ. ಅಧಿಕಾರಿಗಳೇ ಆ ಕೆಲಸ ಮಾಡಿದ್ದರು ಅಂತಾದರೆ ಅದು ನಕಲಿ ಮತದಾರರು ಅಂತ ಹೇಳುವುದು ತಪ್ಪಾಗುತ್ತದೆ. ನಕಲಿ ಅಧಿಕಾರಿಗಳು ಅಂತ ನುಸುಳು ಕೋರರನ್ನು ಮತದಾರರ ಲಿಸ್ಟಿಗೆ ಸೇರಿಸಿದವರ ಮೇಲೆ ಆರೋಪಹರಿಸಬಹುದು. ಅದು ಬಿಟ್ಟು ಸಾಮಾನ್ಯ ಜನರ ಮೇಲೆ ಅನವಶ್ಯಕವಾಗಿ ಆರೋಪ ಹೊರಿಸುವುದು ತಪ್ಪು.

ಸರಿ, ಈ ಹಿಂದಿನಿಂದ ತಪ್ಪಾಗಿ ಹೋಗಿದೆ ಅಂತಲೇ ಇಟ್ಟುಕೊಳ್ಳುವ. ಹಾಗಂತ ಅಧಿಕಾರಿಗಳು ಇಲ್ಲಿ ನೊಣಿಚಿಕೊಳ್ಳುವ ಹಾಗಿಲ್ಲ. ಈ ಒಂದು ನಕಲಿ ಮತದಾರರ ಸೇರ್ಪಡೆಯಲ್ಲಿ ಅಧಿಕಾರಿಗಳ ಪಾತ್ರವೇ ಅತಿ ಮುಖ್ಯವಾಗಿರುತ್ತದೆ. ಅವರು ಲಂಚ ಪಡೆದೆ ಆ ಕೆಲಸ ಮಾಡಿದ್ದಾರೆ ಅಂತ ಅಂದುಕೊಳ್ಳಬೇಕಾಗುತ್ತದೆ. ಹಾಗಿರುವಾಗ ಆ ಅಧಿಕಾರಿಗಳ ಮೇಲೆ ಮೊದಲು ಕ್ರಮವಾಗಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈಗ ಕೈ ಬಿಡಲಾದ ಮತದಾರರಲ್ಲಿ ಎಷ್ಟು ಜನ ಬದುಕಿದ್ದಾರೆ? ಎಷ್ಟು ಜನ ತಮ್ಮ ವಿಳಾಸವನ್ನು ಬದಲಾಯಿಸಿಕೊಂಡಿದ್ದಾರೆ? ಎಷ್ಟು ಜನ ದೇಶದ ನಾಗರಿಕರಲ್ಲ ಎಂಬ ನಿರ್ಣಯಕ್ಕೆ ಚುನಾವಣಾ ಆಯೋಗ  ಬಂದಿದೆಯೇ?

9 ರಾಜ್ಯದ 8.18 ಕೋಟಿ ತೆಗೆದು ಹಾಕಲಾದ ಮತದಾರರ ಪೈಕಿ,  ಎಷ್ಟು ಕೋಟಿ ಜನರು ಈ ದೇಶದವರಲ್ಲ ಎಂದು ತೀರ್ಮಾನಿಸಿದೆ ಚುನಾವಣಾ ಆಯೋಗ? ಎನ್ನುವುದು ತತಕ್ಷಣವೇ ಗೊತ್ತಾಗಬೇಕು. ಹಾಗೆಯೇ ಆ ಮತದಾರರನ್ನು ತಕ್ಷಣವೇ ನಮ್ಮ ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದು, ದೇಶದಿಂದ ಹೊರ ಹಾಕುವ ಪ್ರಕ್ರಿಯೆ ಶುರು ಮಾಡಬೇಕು. ಅದಕ್ಕೆ ಸಮಯ ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲ, ಈಗಾಗಲೇ ಮತದಾರರ ಪಟ್ಟಿಯಿಂದ ಅವರನ್ನು ಕೈ ಬಿಡುವ ಮುನ್ನ ಎಲ್ಲಾ ರೀತಿಯಲ್ಲೂ ಚುನಾವಣಾ ಆಯೋಗ ತನಿಖೆ ನಡೆಸಿ ಅವರನ್ನು ಪಟ್ಟಿಯಿಂದ ಕೈಬಿಟ್ಟಿದೆ ತಾನೇ? ಹಾಗಿರುವಾಗ ಅವರನ್ನು ದೇಶದಿಂದ ಹೊರಹಾಕಲು ಮತ್ತೆ ಯಾಕೆ ಮೀನ ಮೇಷ? ಅದಕ್ಕೆ ಯಾಕೆ ಸಮಯ ತೆಗೆದುಕೊಳ್ಳಬೇಕು? ಇನ್ನೊಂದು ಚುನಾವಣೆಯವರೆಗೆ ಕಾಯುವ ಅವಶ್ಯಕತೆ ಏನಿದೆ? 9 ರಾಜ್ಯದ,  ದೇಶದ ನಾಗರಿಕರಲ್ಲದ ಆ ಎಲ್ಲಾ ಮತದಾರರನ್ನು ತಕ್ಷಣವೇ ದೇಶದಿಂದ ಹೊರ ಹಾಕುವ ಕೆಲಸ ಪ್ರಾರಂಭಿಸಬೇಕು.

ಒಂದೊಮ್ಮೆ ಆ ಕೆಲಸ ಮಾಡದಿದ್ದರೆ, ಅದಕ್ಕೆ ಕಾನೂನಿನ ತೊಡಕು ಅಂತ ರಾಗ ಎಳೆಯುವುದಿದ್ದರೆ, ಖಂಡಿತವಾಗಿಯೂ ಅವರನ್ನು ಮತದಾನದ ಹಕ್ಕಿನಿಂದ ವಂಚಿಸಿದ್ದನ್ನು ಮಹಾಪರಾಧ ಅಂತಲೇ ಹೇಳಬೇಕಾಗುತ್ತದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವೂ ಆಗಬೇಕಾಗುತ್ತದೆ. ಈಗ ಚುನಾವಣಾ ಆಯೋಗವು ತತಕ್ಷಣವೇ, ದೇಶದ ನಾಗರಿಕರಲ್ಲದವರ ಲಿಸ್ಟ್ ನ್ನು ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ನೀಡಿ ಅವರನ್ನು ದೇಶದಿಂದ ಹೊರಹಾಕಲು ಸಲಹೆ ನೀಡುವುದು ಚುನಾವಣಾ ಆಯೋಗದ ಅಧಿಕಾರಿಗಳ ಹಿತದೃಷ್ಟಿಯಿಂದ ಒಳ್ಳೆಯದು. ಸರ್ಕಾರವು, ಮತದಾರರ ಪಟ್ಟಿಯಿಂದ ಅವರನ್ನು ತೆಗೆಯಲು ತೋರಿಸಿದಷ್ಟು ಆಸಕ್ತಿಯನ್ನು, ಅವರ ಮೇಲೆ ಕ್ರಮ ಕೈಗೊಳ್ಳಲು ಆಸಕ್ತಿ ತೋರಿಸದೆ ಇರುವುದು ಹಲವು ಅನುಮಾನಗಳಿಗೂ ಕಾರಣವಾಗಿ ಬಿಡುತ್ತದೆ. ಈಗಾಗಲೇ ವಿಪಕ್ಷಗಳು, ಗುರುತರವಾದಂತಹ ಆರೋಪಗಳನ್ನು ಮಾಡುತ್ತಿವೆ. ಹಾಗೆಯೇ ಚುನಾವಣಾ ಆಯೋಗದ ಮೇಲೆ ಯಾವತ್ತೂ ಇಲ್ಲದಷ್ಟು ಆರೋಪಗಳನ್ನು ಹೊರಿಸುತ್ತಿವೆ. ಆ ಎಲ್ಲಾ ಆರೋಪಗಳಿಗೆ ಆಯೋಗದಿಂದ ಆಗಲಿ, ಸರ್ಕಾರದಿಂದಾಗಲಿ ನ್ಯಾಯೋಚಿತ ಹಾಗೂ ಸಾಕ್ಷಿ ಸಹಿತವಾದಂತಹ ಉತ್ತರಗಳು ದೊರಕುತ್ತಿಲ್ಲ. ವಿರೋಧ ಪಕ್ಷದ ನಾಯಕ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಕಾರವು ಚುನಾವಣಾ ಆಯೋಗದ ಮೂಲಕ ವಿಪಕ್ಷಗಳಿಗೆ ಮತ ಹಾಕುವವರನ್ನು ಸ್ಥಳೀಯರ ಮೂಲಕ ಗುರುತಿಸಿ ಗುರುತಿಸಿ ಚುನಾವಣಾ ಆಯೋಗದ ಮೂಲಕ ತೆಗೆದುಹಾಕುವಂತೆ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ . ಹಾಗೆಯೇ ನಕಲಿ ಐಡಿ ಕಾರ್ಡ್ ಸೃಷ್ಟಿಸಲಾಗಿದೆ, ಒಬ್ಬರದೇ ಫೋಟೋ ಇರುವಂತಹ ಚುನಾವಣಾ ಐಡಿ ಕಾರ್ಡ್ ಹಲವು ರಾಜ್ಯಗಳಲ್ಲಿ  ಕಾಣಸಿಗುತ್ತದೆ.  ಇಲ್ಲಿ ಚುನಾವಣಾ ಆಯೋಗವು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಅನ್ನುವುದನ್ನು ಇದು ತೋರಿಸುತ್ತದೆ ಅಂತ, ಅದೇ ಚುನಾವಣಾ ಆಯೋಗದ ಮತದಾರರ ಯಾದಿಯನ್ನೇ ಸಾಕ್ಷಿಯನ್ನಾಗಿರಿಸಿ ಆರೋಪ ಮಾಡಿದ್ದರು ಕಾಂಗ್ರೆಸ್ನ ರಾಹುಲ್ ಗಾಂಧಿ.  ಅದ್ಯಾವುದರ ಕಡೆಯೂ ಆಯೋಗ ಮತ್ತು ಸರಕಾರ ಹೆಚ್ಚು  ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಾನು ನಡೆದದ್ದೇ ಸರಿ ಎಂಬಂತೆ ನಡೆಯುತ್ತಿದೆ ಸರ್ಕಾರ ಮತ್ತು ಆಯೋಗ. ಇಲ್ಲಿ ಆಯೋಗದ ನಡೆಯು ಪ್ರಾಮಾಣಿಕವಾಗಿದ್ದಾದರೆ ಚುನಾವಣಾ ಆಯೋಗದ ಈ ಒಂದು ಕಾರ್ಯಾಚರಣೆ ಮುನ್ನಡೆಯಲೇಬೇಕು.  ನಡೆಯಲಿ ಕೂಡ. ಆದರೆ ಅದಕ್ಕೆ ಪೂರಕವಾದ ಅಂತಹ ಸಾಕ್ಷಿಗಳು ಮತ್ತು ವನ್ ಸೈಡ್ ಅಲ್ಲದ ಚರ್ಚೆಗಳ ನಡುವೆ ಚುನಾವಣಾ ಆಯೋಗ ತನ್ನ ನಡೆಯನ್ನು ಸಾಬೀತುಪಡಿಸಿಕೊಳ್ಳಬೇಕು.

ಎಸ್,  ಹಲವು ಬಾರಿ ಸರ್ಕಾರ ಕಠಿಣವಾಗಿ ವರ್ತಿಸಬೇಕಾಗುತ್ತದೆ. ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ ಎನ್ನುವುದು ಸರಿನೇ. ಹಾಗಾಗಿ ಈ ವಿಚಾರದಲ್ಲಿ ಸರ್ಕಾರ ಗಟ್ಟಿಯಾಗಿ ನಿಂತಿರುವುದು ಸರಿ ಇದೆ ಅಂತಲೇ ಅಂದುಕೊಳ್ಳುವ. ಅನವಶ್ಯಕವಾಗಿ ಹಾಗೂ ಅರ್ಹರಲ್ಲದವರನ್ನು ಅಂದರೆ, ನುಸುಳುಕೋರರನ್ನು ದೇಶದ ಪ್ರಜೆ ಅಂತ ಗುರುತಿಸಲಾಗುವ ಮತದಾರರ ಪಟ್ಟಿಯ ಯಾದಿಯಲ್ಲಿ ಸೇರಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಆ ಕಾರಣಕ್ಕೆ ಸರ್ಕಾರ ಕಠಿಣವಾಗಿ ವರ್ತಿಸುವುದು ಸರಿಯಾಗಿಯೇ ಇದೆ. ಆದರೆ ಈಗ, ಚುನಾವಣಾ ಆಯೋಗದಿಂದ ಕೈ ಬಿಡಲಾದ ಮತದಾರರನ್ನು ಏನು ಮಾಡುತ್ತೀರಿ ಅನ್ನುವುದರ ಬಗ್ಗೆ ಸರ್ಕಾರವು ಮೌನವಾಗಿ ಕೂರಲು ಸಾಧ್ಯವಿಲ್ಲ. ಮೌನವಾಗಿ ಕೂತರೆ, ವಿರೋಧ ಪಕ್ಷಗಳನ್ನು ಚುನಾವಣೆಯಲ್ಲಿ ಸೋಲಿಸಲು, ಬೇಕಂತಲೇ ದೇಶದ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸಲಾಗಿದೆ ಎಂಬ ಆರೋಪಕ್ಕೆ ಸರ್ಕಾರ ಗುರಿಯಾಗಬೇಕಾಗುತ್ತದೆ. ಅದಾಗಬಾರದು ಎಂದರೆ, ಸರ್ಕಾರವು ಕೈ ಬಿಡಲಾದ ಮತದಾರರನ್ನು ದೇಶದಿಂದ ಹೊರ ಹಾಕುವ ಕೆಲಸವನ್ನು ಪ್ರಾರಂಭಿಸಬೇಕು. ಮತದಾರರ ಯಾದೀಯಿಂದ ಅವರನ್ನು ಕೈಬಿಡುವುದಕ್ಕಷ್ಟೇ ಸೀಮಿತವಾದಂತಹ ಕಾರ್ಯಾಚರಣೆ ಆಗಬಾರದು. ಆ ಕೆಲಸವನ್ನು ಈ ಕ್ಷಣದಿಂದ ಪ್ರಾರಂಭಿಸುತ್ತಾರೆ ಎಂಬ ನಂಬಿಕೆ ದೇಶದ ಸಾಮಾನ್ಯ ಜನರದ್ದಾಗಿದೆ. ಅದು ಯಾವಾಗನಿಂದ ಶುರುವಾಗುತ್ತದೆ?

ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ಡೊನಾಲ್ಡ್ ಟ್ರoಪ್ ಮುಂದೆ ಮಂಡಿಯೂರಿ ಕೂತ ಜಗತ್ತು!
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ಸಚಿವ ಜಮೀರ್ ಕಥೆ ಗೋವಿಂದ!!!?