📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಿಜೆಪಿಯನ್ನು ಹಿಂದಿಕ್ಕಿದ   ಜಿರಳೆ ಪಕ್ಷ..”ಕಾಕ್ರೋಚ್ ಜನತಾ ಪಾರ್ಟಿ”

    ಕೇವಲ ನಾಲ್ಕು ದಿನದ ಹಿಂದೆ ಪ್ರಾರಂಭವಾದ ಕಾಕ್ಕ್ರೋಚ್ ಜನತಾ ಪಾರ್ಟಿ ಎಂಬ ನೂತನ ಪಕ್ಷವು, ಕೇಂದ್ರದಲ್ಲಿ ಕಳೆದ 13 ವರ್ಷದಿಂದ ಅಧಿಕಾರ ನಡೆಸುತ್ತಿರುವ, ದೇಶದ ಅನೇಕ ರಾಜ್ಯಗಳನ್ನು ಗೆದ್ದುಕೊಂಡಿರುವ ಭಾರತೀಯ ಜನತಾ ಪಕ್ಷವನ್ನು ಮೀರಿ ಬೆಳೆದು ನಿಂತಿದೆ ಅಂದರೆ ನಂಬುತ್ತೀರಾ? ನೀವು ನಂಬಲೇಬೇಕು. 

    ಅಷ್ಟಕ್ಕೂ ಈ ಕಾಕ್ರೋಚ್ ಜನತಾ ಪಾರ್ಟಿ ಯಾರದ್ದು? ಇದು ಹುಟ್ಟಿದ್ದು ಏಕೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರ ಒಂದು ಹೇಳಿಕೆ ವಿರುದ್ಧ ಶುರುವಾದ ಅಭಿಯಾನ, ಯಾವ ಮಟ್ಟಕ್ಕೆ ಬಂದು ನಿಂತಿದೆ ನೋಡಿ. ಇದು ಈಗ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ ಎಂಬ ಬಿಗುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದೆ. ಆ ಮಟ್ಟಕ್ಕೆ ಟ್ರೆಂಡ್ ಕ್ರಿಯೇಟ್ ಆಗಿದೆ. ಯುವ ಜನಾಂಗ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯಾವ ಮಟ್ಟದಲ್ಲಿ ಹೋರಾಟ ಮಾಡಬಹುದು ಅನ್ನುವುದಕ್ಕೆ ಇದೂ ಒಂದು ಸಾಕ್ಷಿ ನೋಡಿ

    Also Read  ಕೋರ್ಟ್‌ ಮೆಟ್ಟಿಲು ಹತ್ತಿ ಸುಸ್ತಾದವರಿಗೆ ಆಸರೆಯಾದ ‘ಅದಾಲತ್‌’: ಮತ್ತೆ ಒಂದಾದ ನೂರಾರು ದಂಪತಿಗಳು,₹3,000 ಕೋಟಿ ಪರಿಹಾರ,ದಾಖಲೆಯ 78.79 ಲಕ್ಷ ಕೇಸ್‌ಗಳಿಗೆ ಶಾಶ್ವತ ಮುಕ್ತಿ!

    ವಕೀಲರೊಬ್ಬರು, ಹಿರಿಯ ವಕೀಲರಾಗಲು ಅರ್ಜಿ ಸಲ್ಲಿಸುತ್ತಾರೆ. ಆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಅರ್ಜಿಯ ಬಗ್ಗೆ ಕಮೆಂಟ್ ಮಾಡುತ್ತಾರೆ. ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಿಲ್ಲ ಅಂತ ಪಕ್ಕಕ್ಕೆ ಅರ್ಜಿಯನ್ನು ಇಡುವ ಬದಲು, ಈ ಸಂದರ್ಭದಲ್ಲಿ ಅವರು ಮಾಡಿದ ಕಮೆಂಟ್ ವಿಚಾರ ಇವತ್ತು ಇಡೀ ದೇಶದಲ್ಲಿ ದೊಡ್ಡ ಸಂಚಲವನವನ್ನೇ ನಿರ್ಮಿಸುತ್ತಿದೆ.

    ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ರವರು, ಇವತ್ತಿನ ಕೆಲವು ಯುವಕರು ಸರಿಯಾದ ಉದ್ಯೋಗವನ್ನು ಸಂಪಾದಿಸಲಾಗದೆ, ತಾವೇ ಮಾಧ್ಯಮಗಳಾಗಿ ಬಿಡುತ್ತಾರೆ, ಸಾಮಾಜಿಕ ಮಾಧ್ಯಮದ ಹೀರೋಗಳಾಗಿ ಬಿಡುತ್ತಾರೆ. ಆರ್‌ಟಿಐ ಕಾರ್ಯಕರ್ತರಾಗಿಬಿಡುತ್ತಾರೆ. ಕಾಕ್ರೋಜತರ ಎಲ್ಲೆಂದರಲ್ಲಿ ಹರಿದಾಡುತ್ತಾರೆ ಅಂತ ಕಮೆಂಟ್ ಮಾಡಿದ್ದನ್ನು ವಕೀಲರೊಬ್ಬರು ತೀವ್ರವಾಗಿ ಆಕ್ಷೇಪಿಸಿದ್ದಾರೆ.  ಇದನ್ನು ನೋಡಿದ, ಮಹಾರಾಷ್ಟ್ರದ ನಾಗಪುರ ಪ್ರದೇಶದ 30 ವರ್ಷದ ಅಭಿಜಿತ್ ದೀಪ್ಕೆ ಎಂಬ ಯುವಕ, ತನ್ನ ಟ್ಯಾಲೆಂಟ್ ತೋರಿಸಿದ್ದಾನೆ ನೋಡಿ.

    Also Read  ಸಂಸದ ಸಂಜಯ್ ಅರೋರ ಬಂಧನ.... ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.

    ಮೊನ್ನೆ ಮೇ 16ರಂದು ಅಭಿಜಿತ್ ದೀಪ್ಗೆ, ಕಾಕ್ಕ್ರೋಜ್ ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್ ತೆರೆಯುತ್ತಾರೆ. ಅದು ಯಾವ ಮಟ್ಟಿಗೆ ದೇಶದಾದ್ಯಂತ  ವೈರಲಾಗುತ್ತಿದೆ ಎಂದರೆ, ಸ್ವತಹ ಆಡಳಿತ ಪಕ್ಷ ಬಿಜೆಪಿಯ ತತ್ತರಿಸಿ ಹೋಗುವಂತಿದೆ ಆ ಒಂದು ಪೇಜಿನಿಂದಾಗಿ.

    ಭಾರತೀಯ ಜನತಾ ಪಕ್ಷದ ಹಿಂಬಾಲಕರ ಸಂಖ್ಯೆ 8.8 ಮಿಲಿಯನ್ ಆಗಿದ್ದರೆ, ಕಾಕ್ರೋಚ್ ಜನತಾ ಪಾರ್ಟಿಯ ಹಿಂಬಾಲಕರ ಸಂಖ್ಯೆ 9.6 ಮಿಲಿಯನ್ ದಾಟಿದೆ. ಕೇವಲ ಆರು ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಹೊಂದಿ, ವ್ಯವಸ್ಥೆಯನ್ನು ಅಣಕ ಮಾಡಲು ಪ್ರಾರಂಭ ಮಾಡಿದ್ದಾರೆ ಎಂದರೆ, ದೇಶದ ಯುವ ಜನಾಂಗ ಎಷ್ಟರಮಟ್ಟಿಗೆ ಈ ವ್ಯವಸ್ಥೆಯ ವಿರುದ್ಧ ಅಸಮಾಧಾನಿತರಾಗಿದ್ದಾರೆ ಎನ್ನುವುದನ್ನು ಅರಿಯಬಹುದು.

    ಆಡಳಿತ ಪಕ್ಷಗಳಿಗೆ ಹಾಗೂ ವ್ಯವಸ್ಥೆಯ ಭಾಗವಾಗಿರುವ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆಯ ಕರೆಗಂಟೆ ಅಂತ ಭಾವಿಸದಿದ್ದರೆ ಮುಂದಿನ ದಿನದಲ್ಲಿ ಇದರ ಪರಿಣಾಮ ಶ್ರೀಲಂಕಾ ನೇಪಾಳದಂತೆ ಹೋರಾಟವಾಗಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಈ ಒಂದು ಪ್ರಕರಣದಲ್ಲಿ ರಾಜಕೀಯ ಪಕ್ಷವಾಗಿರುವ ಬಿಜೆಪಿಯಷ್ಟೇ ಮುಖಭಂಗ ನ್ಯಾಯಮೂರ್ತಿಗಳಿಗೂ ಆಗುತ್ತಿರುವುದು ದುರ್ದೈವದ ವಿಚಾರ.

    Also Read  ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ
    ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
    ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್
    ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
    ವಂದೇ ಮಾತರಂ ವಿವಾದ ದೇಶಭಕ್ತಿಯ ಸಂಕೇತವೇ, ರಾಜಕೀಯ ಅಸ್ತ್ರವೇ?
    ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!
    ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
    ಮೋದಿ ಸಂಪುಟದ ಒಂದು ವಿಕೆಟ್ ಪತನವಾಗುತ್ತಾ?
    MRPL ಭೀಕರ ಸ್ಫೋಟ: ಮನೀಶ್ ಕರ್ಕೇರ ಬಲಿ; ರಾಜೇಶ್‌ಗೆ 35% ಸುಟ್ಟ ಗಾಯ, 8 ಮಂದಿಗೆ ಗಾಯ
    ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಹರಿಹರದಲ್ಲಿ ಪ್ಲಾನ್! ಬಂಧಿತ ಸುಹೇಲ್ ಬೆನ್ನತ್ತಿದ ಇಂಟೆಲಿಜೆನ್ಸ್; 10 ಜನರ ಟೀಮ್‌ಗಾಗಿ ತೀವ್ರ ಶೋಧ!
    ದಿಶಾ ಸಾಲಿಯನ್ ಕೇಸ್‌ ರೀಓಪನ್‌…ಸುಶಾಂತ್ ಸಿಂಗ್ ಸಾವಿನ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ?
    ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್‌ಗೆ ನಕಲಿ ಸಹಿ! ನಕಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದ ಮಾಜಿ ಸಿಬ್ಬಂದಿ…
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
    ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
    ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
    ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು
    ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
    ಪೊಲೀಸ್ ಇಲಾಖೆಯ ಜಯಶ್ರೀ ನೀಡಿದ ದೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು: ವಿಡಿಯೋ ಕಾಲ್ ಪ್ರಕರಣಕ್ಕೆ ಹೊಸ ತಿರುವು
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ