📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರು :ಅಕ್ರಮ ಪಟಾಕಿ ದಾಸ್ತಾನು ಆರೋಪ!

    ದೇವಸ್ಥಾನದ ಪಕ್ಕದಲ್ಲೇ, ಅಪಾರ್ಟ್‌ಮೆಂಟ್‌ನ ಕೆಳಭಾಗದಲ್ಲೇ ಪಟಾಕಿಗಳ ಸಂಗ್ರಹವೇ?  ಪರಿಶೀಲನೆಗೆ ಸಾರ್ವಜನಿಕರ ಒತ್ತಾಯ…. ಪಟಾಕಿ ಮಾರಾಟ ಮಾಡುವುದಕ್ಕೆ ನೀಡಲಾಗುವ ಲೈಸೆನ್ಸ್ ನಲ್ಲೂ ಸಾಕಷ್ಟು ನಿಯಮಗಳನ್ನು ಮುರಿಯಲಾಗಿದೆ ಎಂಬ ಆರೋಪಗಳು ಇವೆ.

    ಮಂಗಳೂರು: ಕರಾವಳಿ ಭಾಗದಲ್ಲಿ ಪಟಾಕಿಗಳ ಸಂಗ್ರಹ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿದ್ದು, ಜನನಿಬಿಡ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಮಂಗಳೂರಿನ ಕಾಳಿಕಾಂಬ ರಸ್ತೆ, ಮುಖ್ಯಪ್ರಾಣ ದೇವಸ್ಥಾನದ ಸಮೀಪ ಹಾಗೂ ಎಂ.ಪಿ.ಟಿ. ರಸ್ತೆಯಲ್ಲಿರುವ ಕೆಲವು ವಾಣಿಜ್ಯ ಸ್ಥಳಗಳಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ. ಹಾಗೆಯೇ ಪಟಾಕಿ ಮಾರಾಟಗಾರರು ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ, ಲೈಸನ್ಸ್ ಗಳನ್ನು ನಿಯಮಾನುಸಾರ ಪಡೆದಿದ್ದಾರೆಯೇ ಅನ್ನೋದು ಕನ್ಫರ್ಮ್ ಆಗಬೇಕಿದೆ ಎಂಬ ಆಗ್ರಹ ವ್ಯಕ್ತವಾಗುತ್ತಿದೆ ಸಾರ್ವಜನಿಕವಲಯದಿಂದ.

    ದೇವಸ್ಥಾನದ ಪಕ್ಕದಲ್ಲೇ ಪಟಾಕಿ ದಾಸ್ತಾನು?

    ಮಂಗಳೂರಿನ ಕಾಳಿಕಾಂಬ ರಸ್ತೆಯಲ್ಲಿರುವ ಮುಖ್ಯಪ್ರಾಣ ದೇವಸ್ಥಾನದ ಪಕ್ಕದಲ್ಲೇ ಪಟಾಕಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಧಾರ್ಮಿಕ ಸ್ಥಳಗಳು, ವಾಣಿಜ್ಯ ಮಳಿಗೆಗಳು ಹಾಗೂ ಜನರು ನಿರಂತರವಾಗಿ ಸಂಚರಿಸುವ ಪ್ರದೇಶಗಳ ಸಮೀಪ ಪಟಾಕಿ ಬಂಡಲ್ಗಳು ಬಂದು ಬೀಳುತ್ತಿವೆ, ಟ್ರಾನ್ಸ್ಪೋರ್ಟ್ ಮೂಲಕ ಬರುವ ಸ್ಫೋಟಕ ಸ್ವರೂಪದ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ನಿಜವೇ ಆಗಿದ್ದರೆ, ಇದು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಗಂಭೀರವಾಗಿ ಪರಿಶೀಲಿಸಬೇಕಾದ ವಿಚಾರವಾಗಿದೆ.

    Also Read  Must read…ನಾಗಪ್ರಸನ್ನರ ನ್ಯಾಯಾಲಯದಲ್ಲಿ 'ಸುಳ್ಳು ಜಾತಿ-ಆದಾಯ ಪ್ರಮಾಣಪತ್ರ ಮುಂದಿಟ್ಟ ಸಾಹುಕಾರ್ ಪುತ್ರಿಗೆ ಕ್ಲಾಸ್! ಅರುಣ್ ಶ್ಯಾಮ್ ವಾದಕ್ಕೆ ನಾಗಪ್ರಸನ್ನರ ಒಂದೊಂದು ಪ್ರಶ್ನೆಯೂ ವ್ಯವಸ್ಥೆಗೆ ಕನ್ನಡಿಯಾಯಿತು!"

    ಅಪಾರ್ಟ್‌ಮೆಂಟ್‌ನ ಕೆಳಭಾಗದ ಅಂಗಡಿ ಕೋಣೆಯಲ್ಲಿ ಪಟಾಕಿ ಸಂಗ್ರಹ?

    ಇಲ್ಲಿನ ಅಪಾರ್ಟ್‌ಮೆಂಟ್‌ನ ಕೆಳಭಾಗದಲ್ಲಿರುವ ಅಂಗಡಿ ಕೋಣೆಯಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಜನವಸತಿ ಕಟ್ಟಡದ ಸಮೀಪ ಇಂತಹ ಸಂಗ್ರಹವಿದ್ದಲ್ಲಿ, ಅದರ ಪ್ರಮಾಣ, ಸಂಗ್ರಹಣೆಗೆ ಪಡೆದಿರುವ ಅನುಮತಿ, ಅಗ್ನಿ ಸುರಕ್ಷತಾ ವ್ಯವಸ್ಥೆಗಳು ಹಾಗೂ ಸ್ಥಳದ ಕಾನೂನುಬದ್ಧತೆಯನ್ನು ಅಧಿಕಾರಿಗಳು ಪರಿಶೀಲಿಸುವುದು ಅಗತ್ಯವಾಗಿದೆ.

    ಮಿಸ್ಸ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯಲ್ಲಿ ಪಟಾಕಿಗಳ ಬಾಕ್ಸ್‌ಗಳು?

    ಮಂಗಳೂರಿನ ಎಂ.ಪಿ.ಟಿ. ರಸ್ತೆಯಲ್ಲಿರುವ ಎಂ.ಎಸ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಕಚೇರಿಯಲ್ಲಿ ಪಟಾಕಿಗಳದ್ದು ಎನ್ನಲಾದ ಹಲವಾರು ಬಾಕ್ಸ್‌ಗಳು ಕಂಡು ಬರುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಟ್ರಾನ್ಸ್‌ಪೋರ್ಟ್ ಏಜೆನ್ಸಿಯನ್ನು ಪಟಾಕಿಗಳ ಸಂಗ್ರಹ ಮತ್ತು ವಿತರಣೆಗೆ ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಟ್ರಾನ್ಸ್ಪೋರ್ಟ್ ಕಂಪನಿಗಳು ಪಟಾಕಿಗಳ ಬಾಕ್ಸಿಗೆ ಐದರಿಂದ ಹತ್ತು ಪಟ್ಟು ಹೆಚ್ಚು ಬಿಲ್ ಮಾಡುತ್ತಿದ್ದಾರೆ ಎನ್ನುವ ವರ್ತಮಾನವು ಅದೇ ವಲಯದಿಂದ ಕೇಳಿ ಬರುತ್ತದೆ.

    ತಮಿಳುನಾಡಿನಿಂದ ಕೊರಿಯರ್ ಅಥವಾ ಸಾರಿಗೆ ಸೇವೆಯ ಮೂಲಕ ಪಟಾಕಿಗಳನ್ನು ತರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ಪಟಾಕಿಗಳ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳು, ಪರವಾನಗಿಗಳು ಮತ್ತು ಸಂಗ್ರಹದ ನೈಜ ಸ್ಥಿತಿಯನ್ನು ಪರಿಶೀಲಿಸಿದ ಬಳಿಕವಷ್ಟೇ ಈ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ.

    ಪರವಾನಗಿ ಇದೆಯೇ? ನಿಯಮಗಳ ಪಾಲನೆಯಾಗುತ್ತಿದೆಯೇ?

    ಪಟಾಕಿಗಳ ಸಂಗ್ರಹ, ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ಸ್ಫೋಟಕ ನಿಯಮಗಳು ಹಾಗೂ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಮಂಗಳೂರಿನಲ್ಲಿ ಕೇವಲ ಎರಡು ಸಂಸ್ಥೆಗಳಿಗಷ್ಟೇ ಎಕ್ಸ್ಪೋಸಿವ್ ಪರ್ಮಿಷನ್ ಇದೆ ಎನ್ನಲಾಗುತ್ತದೆ. ಆದರೆ ಉಳಿದವುಗಳ ಪರಿಸ್ಥಿತಿ ಏನು? ಅವುಗಳು ನಿಯಮಾನುಸಾರ ವ್ಯವಹಾರ ನಡೆಸುತ್ತಿದ್ದಾರಾ? ನಗರ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಇದರ ಸಂಬಂಧ ಪಡೆದಿದ್ದಾರಾ? ಫೈರ್ ಇಲಾಖೆಯಿಂದ ಸರ್ಟಿಫಿಕೇಟ್ ಪಡೆದಿದ್ದಾರಾ? ಮೆಸ್ಕಾಂ ಪರಿಶೀಲಿಸಿದೆಯಾ ಬಿಲ್ಡಿಂಗ್ ಗಳನ್ನು.  ಸಂಬಂಧಪಟ್ಟ ಸ್ಥಳಗಳಲ್ಲಿ ಅಗತ್ಯ ಪರವಾನಗಿ ಇದೆಯೇ, ಅನುಮತಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಪಟಾಕಿಗಳನ್ನು ಸಂಗ್ರಹಿಸಲಾಗಿದೆಯೇ ಮತ್ತು ಸಂಗ್ರಹಣೆಗೆ ನಿಗದಿಪಡಿಸಿದ ಸುರಕ್ಷತಾ ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂಬುದನನ್ನೆಲ್ಲ ಪರಿಶೀಲಿಸಬೇಕಾಗಿದೆ.

    Also Read  ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …

    ಅನಧಿಕೃತವಾಗಿ ಪಟಾಕಿಗಳನ್ನು ತಂದು ಗ್ರಾಹಕರಿಗೆ ವಿತರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸಬೇಕಿದೆ.

    ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ

    ಜನವಸತಿ ಪ್ರದೇಶಗಳಲ್ಲಿ ಪಟಾಕಿಗಳ ಬೃಹತ್ ಸಂಗ್ರಹವಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಸ್ಫೋಟಕ ಪರವಾನಗಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಸಮರ್ಥ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

    ಆರೋಪಗಳು ನಿಜವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು, ಸಂಗ್ರಹದ ಪ್ರಮಾಣವನ್ನು ಪರಿಶೀಲಿಸುವುದು, ಪರವಾನಗಿ ಮತ್ತು ಸಾಗಾಟದ ದಾಖಲೆಗಳನ್ನು ತಪಾಸಣೆ ಮಾಡುವುದು ಹಾಗೂ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

    ಸಾರ್ವಜನಿಕರ ಸುರಕ್ಷತೆ ಮುಖ್ಯ

    ಪಟಾಕಿಗಳ ಅಸುರಕ್ಷಿತ ಸಂಗ್ರಹದಿಂದ ಬೆಂಕಿ ಅವಘಡ ಅಥವಾ ಇತರ ಅನಾಹುತ ಸಂಭವಿಸಿದರೆ ಸುತ್ತಮುತ್ತಲಿನ ನಿವಾಸಿಗಳು, ವ್ಯಾಪಾರಿಗಳು, ಗ್ರಾಹಕರು ಹಾಗೂ ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಹೀಗಾಗಿ, ಯಾವುದೇ ಅನಾಹುತ ಸಂಭವಿಸುವ ಮೊದಲು ಆರೋಪಗಳ ಕುರಿತು ನಿಷ್ಪಕ್ಷಪಾತ ಪರಿಶೀಲನೆ ನಡೆಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕಿದೆ. ಕಳೆದ ವರ್ಷ ಕುಂದಾಪುರದಲ್ಲಿ ಪತ್ರಿಕೆಯು ನಿಯಮಬಾಹಿರವಾಗಿ ನಡೆಯುತ್ತಿರುವ ಪಟಾಕಿ ವ್ಯವಹಾರದ ಸ್ವತಂತ್ರ ವರದಿಯನ್ನು ಪ್ರಕಟಿಸಿತ್ತು . ಅವತ್ತು ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೆಲವೇ ತಿಂಗಳುಗಳಲ್ಲಿ ಅನಾಹುತ ವಾಗಿದ್ದು ಇನ್ನು ಮರೆತು ಹೋಗಿಲ್ಲ. ದುರ್ದೈವ ಏನಂದರೆ ನಿಯಮಬಾಹಿರವಾಗಿ ಜನ ಹೊಸತಿ ಪ್ರದೇಶದಲ್ಲಿ ಪಟಾಕಿ ವ್ಯವಹಾರ ಮಾಡಿದ್ದರು ಅವರ ಮೇಲೆ ಯಾವುದೇ ಕ್ರಮ ಆಗಿಲ್ಲ ಯಾಕೆ ಅಂದರೆ, ಅಧಿಕಾರಿಗಳು ಕೂಡ ಅದರಲ್ಲಿ ಶಾಮೀಲಾದ ಕಾರಣ ಎಂಬ ಆರೋಪ ಕುಂದಾಪುರದಿಂದ ಅವತ್ತು ಕೇಳಿದ್ದು ಸುಳ್ಳಲ್ಲ. ಅಂತಹ ಅವಘಡಗಳು ಮಂಗಳೂರಿನಲ್ಲಿ ಆಗಬಾರದು ಎನ್ನುವ ಕಾರಣಕ್ಕೆ ಅಧಿಕಾರಿಗಳು ತಪಾಸಣೆ ನಡೆಸಿ ನಿಯಮಬಾಹಿರ ಮಾರಾಟಗಾರರನ್ನು ಏಜೆನ್ಸಿಗಳನ್ನು ಕಂಡುಹಿಡಿದು ಕ್ರಮ ಕೈಗೊಳ್ಳಬೇಕು ಹಾಗೆಯೇ ನಿಯಮಬಾಹಿರವಾಗಿ ಸಕಲ ಕಾನೂನನ್ನು ಉಲ್ಲಂಘಿಸಿ ಲೈಸೆನ್ಸ್ ನೀಡಿದವರ ಮೇಲು ಕ್ರಮವಾಗಬೇಕು ಅನ್ನುವುದು ಈ ಭಾಗದ ಸಾರ್ವಜನಿಕರ ಹಿತ ಬಯಸುತ್ತಿರುವವರ ಆಗ್ರಹವಾಗಿದೆ

    Also Read  ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..

    ಈ ಪ್ರಕರಣದಲ್ಲಿ ಸಂಬಂಧಪಟ್ಟ ಸಂಸ್ಥೆಗಳ ಪರವಾನಗಿ, ಸಂಗ್ರಹಣೆಯ ನೈಜ ಸ್ಥಿತಿ ಮತ್ತು ಸುರಕ್ಷತಾ ಕ್ರಮಗಳ ಕುರಿತು ಅಧಿಕೃತ ಸ್ಪಷ್ಟನೆ ದೊರೆಯಬೇಕಿದೆ. ಆರೋಪಗಳು ದೃಢಪಟ್ಟಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
    ದಕ್ಷಿಣ ಕನ್ನಡದಲ್ಲಿ ಮಳೆ ದುರಂತ: ಎರಡು ಮೃತದೇಹಗಳು ನೀರಲ್ಲಿ ಪತ್ತೆ
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
    ಮಳೆ ಅಲರ್ಟ್ ನಡುವೆ ಕರ್ನಾಟಕಕ್ಕೆ ಬರದ ಬಿಸಿ: ಕೇಂದ್ರದ ನೆರವಿಗಾಗಿ ಸರ್ಕಾರದ ಮೊರೆ…!
    ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
    ಪಟಾಕಿ ಸಿಡಿಸದೆ ದೀಪಾವಳಿ ಆಚರಿಸಿ: ವಿರಾಟ್ ಕೊಹ್ಲಿ ಮೂಲಕ ಜಾಗೃತಿ ಮೂಡಿಸಲು ಸುಪ್ರೀಂ ಕೋರ್ಟ್ ಸಲಹೆ!
    ಮಕ್ಕಳ ಬದುಕಿನಲ್ಲಿ ಕಾಮುಕ ನೆರಳು…ಮಂಗಳೂರಿನಲ್ಲಿ ಪಾದ್ರಿ ಬಂಧನ!
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    ಇಡುಕ್ಕಿಯಲ್ಲಿ Landslide ಆರ್ಭಟ!ಇಬ್ಬರು ಸಾವು, ಮಹಿಳೆಗೆ ಗಂಭೀರ ಗಾಯ
    ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
    ಒಂದೇ ಫ್ಲಾಟ್ ಇಬ್ಬಿಬ್ಬಿರ ಹೆಸರಲ್ಲಿ ..!ಡಬಲ್ ಡಾಕ್ಯುಮೆಂಟ್ ದಂಧೆ ಬಯಲು –ಕೋಟಿ ಕೋಟಿ ವಂಚನೆ ಮಾಡಿ ಆರೋಪಿ ಪರಾರಿ! ರಿಯಲ್ ಎಸ್ಟೇಟ್ ಶಾಕ್….
    ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಖಾದರ್‌ರ “ಉರ್ದು ಹಬ್ಬ “ಪ್ರಸ್ತಾಪಕ್ಕೆ ಬ್ರೇಕ್ ,ವಿಧಾನಸೌಧದ ಮೆಟ್ಟಿಲಲ್ಲಿ ಖಾಸಗಿ ಕಾರ್ಯಕ್ರಮ…!?
    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
    ಮಾಜಿ ಮುಖ್ಯಮಂತ್ರಿಗೆ ಉಂಡೇನಾಮ ತಿಕ್ಕಿದ ಸಚಿವ ಯಾರು?
    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
    ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…