📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶೋಕಿ ಜೀವನಕ್ಕೆ ಬೈಕ್ ಕಳವು! ಮೂವರು ಅಪ್ರಾಪ್ತರು ಸೇರಿ 7 ಮಂದಿ ಸೆರೆ

    ಮಂಗಳೂರು: ಶೋಕಿ ಜೀವನ ನಡೆಸಲು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೆಲೆಬಾಳುವ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಬಂಧಿಸಿದ್ದು, ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಆರು ಕಳವು ಮಾಡಿದ ಬೈಕ್‌ಗಳು ಸೇರಿದಂತೆ ಒಟ್ಟು ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ₹4.50 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ, ಹೋಟೆಲ್, ಪ್ರವಾಸಕ್ಕೆ ಕಳ್ಳತನದ ಹಣ!

    ಬಂಧಿತರನ್ನು ಮೊಹಮ್ಮದ್ ಸಿಯಾಮ್ (19), ಮೊಹಮ್ಮದ್ ನಾಸೀಫ್ (19), ಮೊಹಮ್ಮದ್ ರಾಹೀಲ್ (18) ಮತ್ತು ನಿಖಿಲ್ (18) ಎಂದು ಗುರುತಿಸಲಾಗಿದೆ. ಬಂಧಿತರು ಗೆಳೆಯರಾಗಿದ್ದು, ಬೈಕ್‌ಗಳನ್ನು ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬಂದ ಹಣವನ್ನು ಸಿನಿಮಾ ವೀಕ್ಷಣೆ, ಹೋಟೆಲ್‌ಗಳಲ್ಲಿ ಊಟ ಹಾಗೂ ಪ್ರವಾಸಕ್ಕೆ ಬಳಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

    Also Read  ಬಿಡದಿಯ ಭೂಮಿ ಯಾರಿಗೆ? ಹೋರಾಟಕ್ಕೆ ಹೊಸ ತಿರುವು.! ಭೂಸಮರದ ಒಳನೋಟ…!

    ವೆಲೆನ್ಸಿಯಾದಿಂದ ಹೊಯಿಗೆಬಜಾರ್‌ವರೆಗೆ ಬೈಕ್ ಕಳವು

    ಅಕ್ಟೋಬರ್ 12ರಿಂದ 22ರ ನಡುವೆ ವೆಲೆನ್ಸಿಯಾದ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ, ಜಪ್ಪು ಮಾರ್ಕೆಟ್, ಅತ್ತಾವರದ ಕೆಎಂಸಿ ಆಸ್ಪತ್ರೆ ಸಮೀಪ ಹಾಗೂ ಹೊಯಿಗೆಬಜಾರ್‌ನಲ್ಲಿ ಬೈಕ್‌ಗಳು ಕಳವಾಗಿದ್ದವು. ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಸಮೀಪ ಮತ್ತು ಕುತ್ತಾರ್‌ನಲ್ಲೂ ಬೈಕ್ ಕಳವು ಪ್ರಕರಣಗಳು ವರದಿಯಾಗಿದ್ದವು. ಮಂಗಳೂರು ದಕ್ಷಿಣ ಠಾಣೆಯಲ್ಲಿ ನಾಲ್ಕು ಹಾಗೂ ಉಳ್ಳಾಲ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.

    ವಿಶೇಷ ತಂಡದಿಂದ ಕಾರ್ಯಾಚರಣೆ

    ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ನಿರ್ದೇಶನದಂತೆ ಮಂಗಳೂರು ದಕ್ಷಿಣ ಠಾಣೆಯ ವಿಶೇಷ ತಂಡ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದೆ. ಕಾರ್ಯಾಚರಣೆಗೆ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ಪಿಎಸ್‌ಐ ಮಾರುತಿ ಹಾಗೂ ಅಪರಾಧ ಪತ್ತೆ ಸಿಬ್ಬಂದಿ ಸಹಕರಿಸಿದ್ದಾರೆ.

    Also Read  📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.

    ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪ್ರಾಪ್ತರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

    ##MangaluruPolice #BikeTheft #JuvenileCrime #MangaluruNews #KarnatakaPolice #DakshinaKannada #CrimeNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
    ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
    ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
    ಕೂತ್ಕೊಳಪ್ಪ ಡಿಕೆಶಿ ನಿಂದೆ ಖುರ್ಚಿ … ಅಂತ CM ಸಿದ್ದು ಯಾವಾಗ ಹೇಳ್ಬೇಕಿತ್ತು??ಅಹಿಂದ ಮಾಸ್ ಲೀಡರ್ ವರ್ಸಸ್ ಮನಿ ಮ್ಯಾನ್..ಕರ್ನಾಟಕ ರಾಜಕಾರಣದ ಅತಿ ದೊಡ್ಡ ಟ್ವಿಸ್ಟ್!
    50 ವರ್ಷಗಳ ನಂತರ NCERT 9ನೇ ತರಗತಿಗೆ ‘ತುರ್ತು ಪರಿಸ್ಥಿತಿ’ಯ ವಾಸ್ತವ ಪಾಠ!
    79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!
    ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
    ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
    ಸರ್ಕಾರಕ್ಕೆ CJP ಸವಾಲು…ದೆಹಲಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು..ಲಾಠಿಚಾರ್ಜ್, ಅಶ್ರುವಾಯು, ಇಂಟರ್ನೆಟ್ ಶಟ್‌ಡೌನ್..
    ಅಕ್ರಮ ಮರಳುಗಾರಿಕೆ, ಕ್ರಮ ಕೈಗೊಂಡ ವೇಣೂರು ಪೊಲೀಸರು
    ಇನ್‌ಸ್ಟಾಗ್ರಾಮ್ ಬ್ಲಾಕ್ ಆದ ಕ್ಷಣದಿಂದ ಹೊರಬಂತು ರಹಸ್ಯ!
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ಆಹಾರ ಬೆಲೆ ಏರಿಕೆ: ಸಾಮಾನ್ಯರ ಅಡಿಗೆ ಮನೆಗೆ ಮತ್ತೆ ಹೊರೆ?
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಬಾಲ್ಯದಲ್ಲೇ ಕಲಿಯಲಿ ಹಣದ ಲೆಕ್ಕ!ಮಕ್ಕಳಿಗಿನ್ನು ಪುಸ್ತಕದ ಜೊತೆ ‘ಹಣದ ಜ್ಞಾನ’! 956 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಪಾಠ