📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಒಂದು ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ 7 ಕೇಸ್! ಪೋಸ್ಟ್‌ಗೆ ದೂರು ಬಂದ್ರೆ ತಕ್ಷಣ ಅರೆಸ್ಟ್ ಮಾಡೋ ಹಾಗಿಲ್ಲ!ಟೀಕೆ ಮಾಡಿದರೆ ಕೋಮು ದ್ವೇಷದ ಕೇಸ್ ಹಾಕುವಂತಿಲ್ಲ: ಹೈಕೋರ್ಟ್..!

    ಒಂದೇ ಘಟನೆಗೆ ಏಳು ಎಫ್‌ಐಆರ್ ದಾಖಲಿಸಿದ್ದಕ್ಕೆ ಹೈಕೋರ್ಟ್ ಆಕ್ಷೇಪ

    ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟ್ ವಿರುದ್ಧ ದೂರು ಬಂದ ತಕ್ಷಣ ಬಂಧನ ಮಾಡುವುದು ಸರಿಯಲ್ಲ. ಪೋಸ್ಟ್‌ನಲ್ಲಿ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಪೊಲೀಸರು ಮೊದಲು ಪರಿಶೀಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದೇ ವೇಳೆ, ಇಂತಹ ಪ್ರಕರಣಗಳ ತನಿಖೆ ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಆರು ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದೆ.

    ಏನಿದು ಪ್ರಕರಣ?

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆಯಲ್ಲಿ 2026ರ ಜುಲೈ 8ರಂದು ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯನ್ನು ಯುವಕರ ಗುಂಪೊಂದು ಚಾಕು ತೋರಿಸಿ ಬೆದರಿಸಿತ್ತು ಎಂಬ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿಯನ್ನು ‘ಕರ್ನಾಟಕ ಪೋರ್ಟ್‌ಫೋಲಿಯೊ’ ಎಕ್ಸ್ ಖಾತೆಯ ನಿರ್ವಾಹಕ ಸಂದೀಪ್ ಕುಮಾರ್ ಮರುಹಂಚಿಕೊಂಡು, ಕಾನೂನು-ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

    Also Read  ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ

    ಈ ಪೋಸ್ಟ್‌ನಿಂದ ತಮ್ಮನ್ನು ಮತ್ತು ಸ್ನೇಹಿತರನ್ನು ಗುರಿಯಾಗಿಸಿ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿ ಮೊಹಮ್ಮದ್ ಶಹನವಾಜ್ ದೂರು ನೀಡಿದ್ದರು. ಇದರ ಆಧಾರದಲ್ಲಿ ದಾಖಲಾದ ಎಫ್‌ಐಆರ್ ಪ್ರಶ್ನಿಸಿ ಸಂದೀಪ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಒಂದೇ ಘಟನೆಗೆ ಏಳು ಪ್ರಕರಣ!

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಸಂದೀಪ್ ಕುಮಾರ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಿತು. ಸುದ್ದಿಯನ್ನು ಮರುಹಂಚಿಕೊಂಡಿದ್ದಷ್ಟರಿಂದಲೇ ಕೋಮು ದ್ವೇಷ ಸೃಷ್ಟಿಸುವ ಉದ್ದೇಶವಿದೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿತು. ಒಂದೇ ಘಟನೆಗೆ ಸಂಬಂಧಿಸಿ ಏಳು ಎಫ್‌ಐಆರ್ ದಾಖಲಿಸಿರುವ ಬಗ್ಗೆಯೂ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

    ಪೊಲೀಸರಿಗೆ ಹೈಕೋರ್ಟ್ ನೀಡಿದ ಸೂಚನೆಗಳೇನು?

    1. ಮೊದಲು ಅಪರಾಧದ ಅಂಶ ಪರಿಶೀಲಿಸಿ: ಪೋಸ್ಟ್‌ನಲ್ಲಿ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
    2. ಒಂದೇ ಘಟನೆಗೆ ಮತ್ತೆ ಮತ್ತೆ ಪ್ರಕರಣ ಬೇಡ: ದೂರುದಾರರು ಬೇರೆ ಎಂಬ ಕಾರಣಕ್ಕೆ ಹೊಸ ಎಫ್‌ಐಆರ್ ದಾಖಲಿಸಬಾರದು.
    3. ಪ್ರಾಥಮಿಕ ವಿಚಾರಣೆ ನಡೆಸಿ: ಕಾನೂನಿನಲ್ಲಿ ಅವಕಾಶವಿರುವ ಪ್ರಕರಣಗಳಲ್ಲಿ ನಿಯಮಾನುಸಾರ ಪ್ರಾಥಮಿಕ ವಿಚಾರಣೆ ನಡೆಸಬೇಕು.
    4. ಕಲಂ ಅನ್ವಯಿಸುವ ಮೊದಲು ಪರಿಶೀಲಿಸಿ: ಹೇಳಿಕೆ ಅಥವಾ ವರದಿಯಲ್ಲಿ ಕೋಮು ದ್ವೇಷಕ್ಕೆ ಸಂಬಂಧಿಸಿದ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಗಮನಿಸಬೇಕು.
    5. ಎಫ್‌ಐಆರ್ ಎಂದರೆ ಬಂಧನವಲ್ಲ: ಬಂಧನಕ್ಕೆ ಕಾನೂನಿನ ಷರತ್ತುಗಳು ಈಡೇರಿರಬೇಕು. ಬಂಧನ ಅಗತ್ಯವಿಲ್ಲದಿದ್ದರೆ ನೋಟಿಸ್ ನೀಡುವ ಪ್ರಕ್ರಿಯೆ ಅನುಸರಿಸಬೇಕು.
    6. ಎಲ್ಲ ಪೊಲೀಸರಿಗೆ ಮಾರ್ಗಸೂಚಿ ತಲುಪಿಸಿ: ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಮತ್ತು ಅನಗತ್ಯ ಬಂಧನ ತಡೆಯುವ ನಿಯಮಗಳನ್ನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು.
    Also Read  “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!

    ಹೈಕೋರ್ಟ್‌ನ ಸಂದೇಶವೇನು?

    ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುವುದು ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ಯಾಂತ್ರಿಕವಾಗಿ ಕೋಮು ದ್ವೇಷದ ಅಪರಾಧವೆಂದು ಪರಿಗಣಿಸಬಾರದು. ದೂರು ಬಂದ ಮಾತ್ರಕ್ಕೆ ಬಂಧನ ಮಾಡದೆ, ಕಾನೂನಿನ ಮಾನದಂಡಗಳನ್ನು ಪಾಲಿಸಬೇಕು ಎಂಬುದು ಹೈಕೋರ್ಟ್‌ನ ಪ್ರಮುಖ ಸಂದೇಶ.

    ##KarnatakaHighCourt #SocialMediaFreedom #FreedomOfSpeech #PoliceGuidelines #FIR #ArrestRules #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಕರಾವಳಿಯಲ್ಲಿಲೋಕಾಯುಕ್ತ ಕಣ್ಣು ಪಂಚಾಯಿತಿಗಳ ಮೇಲೆ; ಸರ್ಕಾರದ ಕಣ್ಣು ಕರಾವಳಿ ಕೃಷಿಯತ್ತ?ಕರಾವಳಿ ಕೃಷಿಗೆ ಪ್ರತ್ಯೇಕ ನೀತಿಗೆ ಡಿಮ್ಯಾಂಡ್!
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    “ಜೈ ಶ್ರೀರಾಮ್” ಘೋಷಣೆಯಿಂದ ನಡುಗಿದ ಢಾಕಾ! 
    ಫೋನ್‌ನಲ್ಲೇ ಉಚಿತ ಟಿವಿ ಆಸೆಗೆ ₹1.78 ಲಕ್ಷ ಖಾಲಿ! ಒಂದು ಕ್ಲಿಕ್‌ನಿಂದಲೇ ಖಾತೆಗೆ ಕನ್ನ!
    ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!
    ಮಂಗಳೂರಿಗೆ ಮತ್ತೊಂದು ದೊಡ್ಡ ಯೋಜನೆ: 17.5 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹಾಗಾರಕ್ಕೆ ಅನುಮೋದನೆ – ಕರಾವಳಿಗೆ ಅಭಿವೃದ್ಧಿಯ ಹೊಸ ಅಧ್ಯಾಯ
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
    ನಕಲಿ ಔಷಧ ದಂಧೆ: ಜೀವ ಉಳಿಸಬೇಕಾದ ಔಷಧವೇ ಹಣ ಮಾಡುವ ದಂಧೆಯಾಯಿತೇ?
    ಕರ್ನಾಟಕದ ನಂದನ್ ನಿಲೇಕಣಿ ನೇತೃತ್ವದಲ್ಲಿ ಭಾರತದ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಮೋದಿ ಸರ್ಕಾರದ ಬಿಗ್ ಪ್ಲಾನ್!ಈಗ ರಾಷ್ಟ್ರೀಯ ಪರೀಕ್ಷೆಗಳಿಗೆ ಹೊಸ ರೂಪ ನಿಲೇಕಣಿ ಕೈಯಲ್ಲಿ!
    ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
    ಕಾಂಗ್ರೆಸ್ ನಿಂದ ”MLC ಮಾಡಿಸುತ್ತೇನೆ” ಎಂದು 1.5 ಕೋಟಿ ವಂಚನೆ ಆರೋಪ
    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
    ಬೋಳಿಯಾರಿನಲ್ಲಿ ಸಣ್ಣ ಗಲಾಟೆಗೆ ಇಬ್ಬರ ಬಲಿ ಪ್ರಕರಣಕ್ಕೆ ಟ್ವಿಸ್ಟ್..! ಪಿಕಪ್ ಚಾಲಕನೇ ಕೊಲೆಗಾರ…?!
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    Old Monk, Royal Challengeಗೆ ಭಾರೀ ಶಾಕ್..! FSSAI ಲ್ಯಾಬ್ ವರದಿಯಲ್ಲಿ ಬಯಲಾಯ್ತಾ ದೊಡ್ಡ ರಹಸ್ಯ?
    ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    ಕಾಂಗೋದಲ್ಲಿ ಎಬೋಲಾ ಅಟ್ಟಹಾಸ:ಜಗತ್ತಿಗೆ ಮತ್ತೆ ಸಾಂಕ್ರಾಮಿಕ ಭೀತಿಯ ಗಂಟೆ..!
    “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …