📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಫೋನ್‌ನಲ್ಲೇ ಉಚಿತ ಟಿವಿ ಆಸೆಗೆ ₹1.78 ಲಕ್ಷ ಖಾಲಿ! ಒಂದು ಕ್ಲಿಕ್‌ನಿಂದಲೇ ಖಾತೆಗೆ ಕನ್ನ!

    ಮಂಗಳೂರು: ಉಚಿತವಾಗಿ ಎಲ್ಲ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು ಎಂಬ ಫೇಸ್‌ಬುಕ್ ಜಾಹೀರಾತನ್ನು ನಂಬಿ ಆ್ಯಪ್ ಡೌನ್‌ಲೋಡ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹1,78,191 ಕಳೆದುಕೊಂಡಿದ್ದಾರೆ. ಈ ಸಂಬಂಧ ಮಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಚಿತ ಮನರಂಜನೆಯ ಆಮಿಷ!

    ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮರ್‌ಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಜಾಹೀರಾತುಗಳಲ್ಲಿ ಅಥವಾ ವಾಟ್ಸಾಪ್ ಲಿಂಕ್‌ಗಳ ಮೂಲಕ “ಎಲ್ಲಾ ಟಿವಿ ಚಾನೆಲ್‌ಗಳು ಮತ್ತು ಒಟಿಟಿಗಳು ಕೇವಲ ₹1 ಕ್ಕೆ ಅಥವಾ ಸಂಪೂರ್ಣ ಉಚಿತ” ಎಂದು ಆಮಿಷ ಒಡ್ಡುತ್ತಿದ್ದಾರೆ.

    ಅಕ್ಟೋಬರ್ 15ರಂದು ದೂರುದಾರರು ಮನೆಯಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ, ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಎಲ್ಲ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ನೋಡಬಹುದು ಎಂಬ ಜಾಹೀರಾತು ಕಾಣಿಸಿಕೊಂಡಿತ್ತು. ಈ ಆಮಿಷವನ್ನು ನಂಬಿದ ಅವರು ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು.

    Also Read  “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 

    ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ಮಾಯ!

    ಅಕ್ಟೋಬರ್ 16ರಂದು ಅವರ ಎರಡು ಬ್ಯಾಂಕ್ ಖಾತೆಗಳಿಂದ ಕ್ರಮವಾಗಿ ₹98,000 ಮತ್ತು ₹30,191 ವರ್ಗಾವಣೆಯಾಗಿತ್ತು. ಮರುದಿನ ಅಕ್ಟೋಬರ್ 17ರಂದು ಮತ್ತೊಂದು ₹50,000 ಹಣವೂ ಅಪರಿಚಿತರಿಗೆ ವರ್ಗಾವಣೆಯಾಗಿತ್ತು. ಈ ವಹಿವಾಟುಗಳು ತಮ್ಮ ಗಮನಕ್ಕೆ ಬಾರದೆ ನಡೆದಿದ್ದವು.

    ಅಕ್ಟೋಬರ್ 18ರಂದು ಖಾತೆಯಲ್ಲಿನ ಹಣದ ವಿವರ ಪರಿಶೀಲಿಸಿದಾಗ ಹಣ ಖಾಲಿಯಾಗಿರುವುದು ತಿಳಿದುಬಂದಿದೆ. ತಕ್ಷಣ ಸೈಬರ್ ಕ್ರೈಂ ಠಾಣೆಗೆ ತೆರಳಿ ಪರಿಶೀಲಿಸಿದಾಗ, ಮೊಬೈಲ್‌ನಲ್ಲಿ ಎಪಿಕೆ (APK) ಫೈಲ್ ಡೌನ್‌ಲೋಡ್ ಆಗಿರುವುದು ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಗಳು ಅನಧಿಕೃತವಾಗಿ ಒಟ್ಟು ₹1,78,191 ವರ್ಗಾಯಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

    ಉಚಿತದ ಆಮಿಷಕ್ಕೆ ಬೀಳುವ ಮುನ್ನ ಎಚ್ಚರ!

    ಈ ಘಟನೆ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಪ್ರತಿಯೊಂದು ಜಾಹೀರಾತೂ ಸುರಕ್ಷಿತವಲ್ಲ. ಉಚಿತ ಸೇವೆಯ ಹೆಸರಿನಲ್ಲಿ ವಂಚಕರು ಅಪಾಯಕಾರಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಸುವ ಮೂಲಕ ಮೊಬೈಲ್ ಮತ್ತು ಹಣಕಾಸಿನ ಮಾಹಿತಿಗೆ ಅಪಾಯ ಉಂಟುಮಾಡಬಹುದು.

    Also Read  ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …

    ಈ ನಕಲಿ ಆಪ್‌ಗಳು ನಿಮ್ಮ ಫೋನ್‌ಗೆ ಬರುವ OTP, ಎಸ್‌ಎಮ್‌ಎಸ್ ಮತ್ತು ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಕದ್ದು ವಂಚಕರಿಗೆ ರವಾನಿಸುತ್ತವೆ.ನೀವು ಆ ಲಿಂಕ್ ಕ್ಲಿಕ್ ಮಾಡಿ ಆಪ್ ಇನ್‌ಸ್ಟಾಲ್ ಮಾಡಿದಾಗ, ಅದು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡುತ್ತದೆ ,ಮಾಲ್‌ವೇರ್ ಇನ್‌ಸ್ಟಾಲ್ ಆಗುತ್ತದೆ.

    ಕೆಲವೊಮ್ಮೆ ₹1 ಟ್ರಯಲ್ ಆಫರ್ ನೀಡಿ ನಂತರ ಪ್ರತಿ ತಿಂಗಳು ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಯಿಂದ ಹಣ ಕಟ್‌ ಆಗುವಂತೆ ಮಾಡುತ್ತಾರೆ. Google Pay ಅಥವಾ PhonePe ಆಪ್‌ಗಳ “Auto-pay” ಸೆಕ್ಷನ್‌ಗೆ ಹೋಗಿ ಇಂತಹ ಸಬ್‌ಸ್ಕ್ರಿಪ್ಷನ್‌ಗಳನ್ನು ತಕ್ಷಣ ಕ್ಯಾನ್ಸಲ್ ಮಾಡಿ.

    ಸಾರ್ವಜನಿಕರು ನೆನಪಿಡಬೇಕಾದ ಸುರಕ್ಷತಾ ಕ್ರಮಗಳು:

    • ಅಪರಿಚಿತ ಜಾಹೀರಾತುಗಳಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಬೇಡಿ.
    • ಅಧಿಕೃತ ಆ್ಯಪ್ ಸ್ಟೋರ್‌ಗಳ ಮೂಲಕವೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ.
    • ಅಪರಿಚಿತ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ.
    • ಆ್ಯಪ್ ಕೇಳುವ ಅನುಮತಿಗಳನ್ನು ಪರಿಶೀಲಿಸದೆ ಒಪ್ಪಿಗೆ ನೀಡಬೇಡಿ.
    • ಬ್ಯಾಂಕ್ ಖಾತೆಯ ವಹಿವಾಟುಗಳ ಮೇಲೆ ನಿರಂತರ ನಿಗಾ ಇರಿಸಿ.
    Also Read  ನಕಲಿ ಲೇಡಿ PSI ಅರೆಸ್ಟ್

    ಹಣ ಕಳೆದುಕೊಂಡರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ, ಸೈಬರ್ ವಂಚನೆ ಸಹಾಯವಾಣಿ 1930ಕ್ಕೆ ಕರೆ ಮಾಡಿ ಅಥವಾ ಅಧಿಕೃತ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿ. ತ್ವರಿತವಾಗಿ ದೂರು ನೀಡುವುದರಿಂದ ಹಣವನ್ನು ತಡೆಹಿಡಿಯುವ ಸಾಧ್ಯತೆ ಹೆಚ್ಚಬಹುದು; ಆದರೆ ಹಣ ವಾಪಸ್ ಸಿಗುವ ಭರವಸೆ ಇರುವುದಿಲ್ಲ.

    ನೆನಪಿಡಿ: ಉಚಿತದ ಆಸೆಗೆ ಒಂದು ಕ್ಲಿಕ್ ಮಾಡುವ ಮುನ್ನ ಯೋಚಿಸಿ. ಆಕರ್ಷಕ ಜಾಹೀರಾತಿಗಿಂತ ನಿಮ್ಮ ಬ್ಯಾಂಕ್ ಖಾತೆಯ ಸುರಕ್ಷತೆ ಮುಖ್ಯ!

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
    ಯುದ್ಧ ನಿಂತಿತು,ಕಚ್ಚಾ ತೈಲ 78 ಡಾಲರ್‌ಗೆ ಕುಸಿತ!LPG, ಪೆಟ್ರೋಲ್, ಡೀಸೆಲ್ ದರ  ಇಳಿಯುತ್ತದೆಯೇ? 
    ಭಾರತದಲ್ಲಿ ಮೊದಲ ಬಾರಿಗೆ ಭಾರೀ ಕ್ಯಾಪ್ಟಾಗನ್ “ಜಿಹಾದಿ ಡ್ರಗ್”ಜಾಲ ಬಯಲಾಗಿದ್ದು, ಸುಮಾರು ₹182 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!ಅಪಾಯಕಾರಿ ಡ್ರಗ್ ದೇಶದೊಳಗೆ ಹೇಗೆ ಪ್ರವೇಶಿಸಿತು ಎಂಬುದರ ಬಗ್ಗೆ ತನಿಖೆ ತೀವ್ರವಾಗಿದೆ.
    *ಬೈಕಂಪಾಡಿ ಹೆದ್ದಾರಿ ಡಕಾಯಿತಿ, 23 ಲಕ್ಷ ಮೌಲ್ಯದ ಸೊತ್ತು ದರೋಡೆ ಪ್ರಕರಣ: 3 ಆರೋಪಿಗಳು ಸೆರೆ.
    ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
    HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ನಿರ್ಮಾಣ ಹಂತದ ಗಾಲ್ಫ್ ಕೋರ್ಸ್‌ನ ಕೆರೆಯಲ್ಲಿ ತೇಲಿದ ಮೂವರು ಬಾಲಕರ ಶವಗಳು..!
    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
    ವಿದ್ಯಾರ್ಥಿ ಪ್ರತಿಭಟನಾ ಪ್ರಕರಣಗಳು: ಎಫ್‌ಐಆರ್‌ ಹಿಂಪಡೆಯಲು ಸುಪ್ರೀಂ ಕೋರ್ಟ್‌ ಮಹತ್ವದ ಸ್ಪಷ್ಟನೆ
    ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
    2027ರಿಂದ YouTube ಹೊಸ ರೂಲ್ಸ್..ಕ್ರಿಯೇಟರ್‌ಗಳಿಗೆ ಶಾಕ್!YouTube Monetization ಕಠಿಣ!
    ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!
    🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..
    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
    ಜಾಗತಿಕ ಯುದ್ಧ ಭೀತಿ:ಟ್ರಂಪ್ ಎಫೆಕ್ಟ್‌ಗೆ ಭಾರೀ ಆರ್ಥಿಕ ಭೂಕಂಪ! — ಒಂದೇ ದಿನ ₹6 ಲಕ್ಷ ಕೋಟಿ ನಷ್ಟ!ಸೆನ್ಸೆಕ್ಸ್ ಧರೆಗುರುಳಿ, ರೂಪಾಯಿ ದಾಖಲೆ ಪತನ!
    ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
    ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
    ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
    🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
    ಬಂಗಾಳದ ಸಿಂಹಾಸನಕ್ಕೆ ಸುವೇಂದು ಏರಿಕೆ — 15 ವರ್ಷದ ಮಮತಾ ಯುಗಕ್ಕೆ ಬ್ರೇಕ್!ಟಿಎಂಸಿ ಕೋಟೆ ಕುಸಿತ…
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
    ತಾಯಿಯನ್ನೇ ಮದುವೆಗೆ ಆಹ್ವಾನಿಸದ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಯುವಕ…!
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು