📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ

    ಕಳೆದ ಜನವರಿಯ ಮಧ್ಯದ ಅವಧಿಯಲ್ಲಿ, ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರವು ಅಮಾನತ್ತುಗೊಳಿಸಿತ್ತು. ಇದೀಗ ಆ ಅಮಾನತ್ತನ್ನು ಏಕಾಏಕಿಯಾಗಿ, ತನಿಖಾ ವರದಿ ಬರುವ ಮೊದಲೇ ಹಿಂಪಡೆದಿದೆ. ಸರ್ಕಾರದ ಈ ನಡೆಯು ಸಾಮಾನ್ಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    1993ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ರಾಮಚಂದ್ರರಾವ್ ರಾಜ್ಯದ ಹಲವೆಡೆ ಕರ್ತವ್ಯವನ್ನು ನಿಭಾಯಿಸಿದ್ದರು. ರಾಮಚಂದ್ರ ರಾವ್ ರವರು ಇಲ್ಲಿಯವರೆಗೆ ಸಾಕಷ್ಟು ಬಾರಿ ವಿವಾದಿತ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಅದರಲ್ಲೂ ಮೈಸೂರಿನಲ್ಲಿ ಐಜಿ ಆಗಿರುವಾಗ ಹವಾಲ ಹಣದ ವಿಚಾರವಾಗಿ ನಡೆದಂತಹ ಘಟನೆಯ ವಿಚಾರದಲ್ಲೂ ಇವರ ಹೆಸರು ತಳಕು ಹಾಕಿಕೊಂಡಿತ್ತು. ತಿರಾ ಇತ್ತೀಚೆಗೆ ರಾಮಚಂದ್ರರಾವ್ ರವರ ಎರಡನೆಯ ಪತ್ನಿಯ ಮಗಳು ಹಾಗೂ ಚಿತ್ರ ನಟಿ, ರೆಡ್ ಹ್ಯಾಂಡಾಗಿ ಚಿನ್ನ ಕಳ್ಳ ಸಾಗಾಣಿಕೆಯ ವಿಚಾರದಲ್ಲಿ ಸಿಕ್ಕಾಕಿಕೊಳ್ಳುತ್ತಾಳೆ. ಅದರಲ್ಲಿಯು ರಾಮಚಂದ್ರರಾವ್ರವರ ಪಾತ್ರವಿತ್ತು ಅನ್ನುವ ಆರೋಪವು ಕೇಳಿ ಬಂದಿತ್ತು. ಆದರೆ, ಬೆಳಗಾವಿ ಪರಿಸರದಲ್ಲಿ ಪೊಲೀಸ್ ಇಲಾಖೆಯ ಕಚೇರಿಯಲ್ಲಿ ಮಹಿಳೆ ಒಬ್ಬಳ ಜೊತೆ ರಾಸಲೀಲೆಯಲ್ಲಿ ತೊಡಗಿಕೊಂಡಿದ್ದರ ವಿಡಿಯೋ ಬಹಿರಂಗಗೊಂಡಾಗ, ಆ ಬಗ್ಗೆ ನೇರವಾದ ಅಂತಹ ಆರೋಪ ಬಂದಾಗ ಸರ್ಕಾರಕ್ಕೆ ಕ್ರಮ ಕೈಗೊಳ್ಳದೆ ಇರಲು ಆಗಲಿಲ್ಲ. ಪೊಲೀಸ್ ಇಲಾಖೆಯ ಶಿಸ್ತು ಹಾಗೂ ನಿಯಮ ಉಲ್ಲಂಘನೆ ವಿಚಾರದಲ್ಲಿ ಕಠಿಣಕ್ರಮಮ ಕೈಗೊಳ್ಳಲೇಬೇಕಾದಂತಹ ಪರಿಸ್ಥಿತಿಗೆ ಸರ್ಕಾರ ಸಿಲುಕಿತ್ತು. ಹಾಗಾಗಿ ಇದೇ ವರ್ಷದ ಜನವರಿ 19ರಂದು ಹಿರಿಯ ಐಪಿಎಸ್ ಅಧಿಕಾರಿ ಡಾ. ರಾಮಚಂದ್ರರಾವ್ ಅವರನ್ನು ಸರ್ಕಾರವು ಅಮಾನತುಗೊಳಿಸಿ ಆದೇಶ ನೀಡಿತ್ತು.

    Also Read  ಬೆಂಗಳೂರಿಗರಿಗೆ BIG TRAFFIC ALERT! ಸೆ.4ರಿಂದ ಫ್ಲೈಓವರ್‌ಗಳಲ್ಲಿ ಹೊಸ ರೂಲ್ಸ್… ಬೈಕ್, ಆಟೋ ಸವಾರರು ಈ ಮಾಹಿತಿ ತಪ್ಪದೇ ಓದಿ!

    ಈಗ ಅದೇ ರಾಮಚಂದ್ರರಾವ್ ಅವರನ್ನು ಸರ್ಕಾರವು ಡಿಜೆಪಿಯಾಗಿ ನೇಮಕ ಮಾಡಿದೆ. ಅವರ ಅಮಾನತ್ತು ಮಾಡಿದ ಆದೇಶವನ್ನು ಸರ್ಕಾರವು ಹಿಂಪಡೆದಿದೆ.

    ಸರ್ಕಾರವು ಯಾವುದೇ ಅಧಿಕಾರಿಯನ್ನು ಅಮಾನತ್ತು ಮಾಡಿದರೆ, ಅಧಿಕಾರಿಯ ವಿಚಾರವಾಗಿ ಇಲಾಖಾ ತನಿಖೆಯನ್ನು ಮಾಡಿಸುತ್ತದೆ. ಆದರೆ ಇಲ್ಲಿ  ಆಂತರಿಕ ತನಿಖೆಯು ಆಗಿಯೇ ಇಲ್ಲ ಎಂಬಂತೆ ತೋರುತ್ತದೆ. ಒಂದೊಮ್ಮೆ ತನಿಖೆ ಆಗಿದ್ದರೆ, ಆ ವರದಿಯು ಏನು ಅನ್ನುವುದನ್ನು ಬಹಿರಂಗಪಡಿಸಬೇಕಿತ್ತು. ತನಿಖಾ ವರದಿಯಲ್ಲಿ, ರಾಮಚಂದ್ರ ರಾವ್ ತಪ್ಪಿತಸ್ಥರಲ್ಲ ಎಂಬ ಕಾರಣಕ್ಕೆ ಅವರ ಅಮಾನತ್ತು ಆದೇಶವನ್ನು ಹಿಂಪಡೆಯಲಾಗಿದೆ ಅಂತ ಸರ್ಕಾರ ಹೇಳಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಸರ್ಕಾರವು, ಅಮಾನತ್ತಾದ ಅಧಿಕಾರಿಯನ್ನು, ಯಾವುದೇ ಸಕಾರಣ ನೀಡದೆ ಅಮಾನತ್ತು ಆದೇಶ ಹಿಂಪಡೆದು, ವಾಪಸ್ ಇಲಾಖೆಯ ಹಿರಿಯ ಅಧಿಕಾರಿಯ ಸ್ಥಾನದಲ್ಲಿ ಕೂರಿಸಿದ್ದರ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಅಪಸ್ವರಗಳು ಕೇಳಲಾರಂಬಿಸಿದೆ.

    Also Read  ಸೆಪ್ಟೆಂಬರ್‌ನಲ್ಲಿ ಚಿನ್ನ-ಬೆಳ್ಳಿ ಭಾರಿ ಕುಸಿತ: ಮುಂದಿನ ದಿನಗಳಲ್ಲೂ ಏರಿಳಿತ ಸಾಧ್ಯತೆ

    ಸರ್ಕಾರದ ಇಂತಹ ನಿರ್ಧಾರಗಳು, ಪೊಲೀಸ್ ಇಲಾಖೆಯಂತಹ ಶಿಸ್ತಿನ ಇಲಾಖೆಯಲ್ಲಿ, ಮುಂದಿನ ದಿನದಲ್ಲಿ ಅಶಿಸ್ತು ತಾಂಡವವಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಆರೋಪವು ಇಲಾಖೆಯ ಆಂತರಿಕ ವಲಯದಿಂದ ಕೇಳಿ ಬರುತ್ತದೆ. ರಾಜ್ಯ ಸರ್ಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ರಾಜಕೀಯವಾಗಿ ಸಾಕಷ್ಟು ಹಿನ್ನಡೆಯು ರಾಷ್ಟ್ರಮಟ್ಟದಲ್ಲಿ ಆಗುತ್ತಿದೆ. ಜನರ ನಾಡಿಮಿಡಿತಕ್ಕೆ ವಿರುದ್ಧವಾಗಿ ಹೋಗುತ್ತಿರುವುದರ ಕಾರಣದಿಂದಾಗಿ, ಪದೇಪದೇ ಹಿನ್ನಡೆಯನ್ನು ಕಾಣುತ್ತಿದೆ ಆ ಪಕ್ಷ. ಇಷ್ಟಾದರೂ ಜನಸಾಮಾನ್ಯರ ಮನಸ್ಸಿಗೆ ಯೋಚನೆಗೆ ವಿರುದ್ಧವಾಗಿ ಇಂತಹ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದಿಷ್ಟು ಹಿನ್ನೆಡೆ ಒದಗಿಸಬಹುದು ಎಂಬ ಲೆಕ್ಕಾಚಾರವು ಆ ಪಕ್ಷದ ಕಾರ್ಯಕರ್ತರ ಕಡೆಯಿಂದಲೇ ಆಗುತ್ತಿದೆ. ವಿರೋಧ ಪಕ್ಷಗಳು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತವೆ ಎನ್ನುವುದು ಅವರ ವಿಶ್ವಾಸದ ಮಾತಾಗಿದೆ. ಆದಷ್ಟು ಬೇಗ ಕಾಂಗ್ರೆಸ್, ಜನರ ಜೊತೆಗೆ ಹೆಜ್ಜೆ ಹಾಕುವುದನ್ನು ರೂಡಿಸಿಕೊಂಡಲ್ಲಿ ಮಾತ್ರವೇ  ಭವಿಶ್ಯ ಇದೆ ಎಂಬ ಬೇಸರದ ಮಾತುಗಳು ಸಾಮಾನ್ಯ ಕಾರ್ಯಕರ್ತರ ಬಾಯಿಂದ ಕೇಳಿ ಬರುತ್ತದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಖಾದರ್‌ ಖಡಕ್ ವಾರ್ನಿಂಗ್ ವೈರಲ್ : ಆದರೆ ಖಡಕ್ ಆಕ್ಷನ್ ಯಾವಾಗ?”ಪ್ರತಿ ಮಳೆಯಲ್ಲೂ ಅದೇ ಕಥೆ: ರಸ್ತೆ ಗುಂಡಿ, ಅಪಘಾತ, ಎಚ್ಚರಿಕೆ, ಜವಾಬ್ದಾರಿ ಹೊತ್ತವರ ಜಾಣ ಮರೆವು!
    ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
    ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
    ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!
    ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
    ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರದ ನಿಯಂತ್ರಣವೇ ಇಲ್ಲ! ಆರ್‌ಟಿಐಗೂ ಬಾಧ್ಯತೆ ಇಲ್ಲ ಎಂದ ಸಿಐಸಿ
    ₹5.85 ಕೋಟಿ ಯೋಜನೆಯ ಜಪ್ಪು ಮಂಗಳಾದೇವಿ ಬಸ್ ಟರ್ಮಿನಲ್ ಉದ್ಘಾಟನೆಗೆ ಎರಡು ಬಾರಿ ಗೌಜಿ ಸಮಾರಂಭ; ಬಸ್ ಸಂಚಾರಕ್ಕೆ ಮಾತ್ರ ಇನ್ನೂ ಮೀನ ಮೇಷ !
    MRPL ಸ್ಫೋಟ FIR… ದಾಖಲು…MRPL ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ…!
    ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
    ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
    ವಯನಾಡಿನ ಮೇಪ್ಪಾಡಿ ವಲಯದಲ್ಲಿ ಮರುಕಳಿಸಿದ 2024ರ ಭೂಕುಸಿತದ ಕರಾಳತೆ
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
    ಒಂದು ವಾಟ್ಸ್ಯಾಪ್ ಮೆಸೇಜ್… ಕೋರ್ಟ್ ವರೆಗೂ ಎಳೆದ ಶಾಕ್ ಘಟನೆಯ ಸುತ್ತ..
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಡಿಸ್ಟಿಂಕ್ಷನ್ ಪಡೆದರೆ ಸಂಭ್ರಮಿಸುತ್ತಿದ್ದ ಕಾಲ ಹೋಗಿ, ಇಂದು 99% ಬಂದರೂ ಬೀದಿಯಲ್ಲಿ ನಿಂತು ಅಳಬೇಕಾದ ದುಸ್ಥಿತಿ ..ಇದು ನಮ್ಮಇಂದಿನ ಶಿಕ್ಷಣ ವ್ಯವಸ್ಥೆ!
    🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
    AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ನಾಟೆಕಲ್ ತಿರುವಿನಲ್ಲಿ ಪಿ.ಎ. ಕಾಲೇಜು ಬಸ್ ಅಪಘಾತ: ಬಸ್‌ನಡಿ ಸಿಲುಕಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವು
    ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
    ಶಿರ್ತಾಡಿ ಭಾಗದಲ್ಲಿ ಮರಗಳ್ಳತನ ಆರೋಪ:  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹ
    ಸರಸಕ್ಕೆ ಅಡ್ಡಿಪಡಿಸಿದ ಯುವಕನ ಮೇಲೆ  ಭೀಕರ ದಾಳಿ: ಗುಜರಾತ್‌ನಲ್ಲಿ 21 ವರ್ಷದ ಯುವಕ ಬಲಿ
    ದಿವಾ ಉತ್ಕರ್ಷ ಬೆಂಗಳೂರಿನ ಕೇವಲ 17 ವರ್ಷದ ಹೆಣ್ಣುಮಗಳಕಾರ್ಯಕ್ಕೆ ಪ್ರಪಂಚವೇ ಫಿದಾ…ಫೋರ್ಬ್ಸ್ ಟಾಪ್ ಪಟ್ಟಿಯಲ್ಲಿ ಯುವಸ್ಪೂರ್ತಿ ಹೆಸರು ಯಾಕೆ ಬಂತು ..!?