📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?

    ನೇರ ಮಾತು, ತೀಕ್ಷ್ಣ ಟೀಕೆ ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದರು. ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವ ವೇಳೆ ಅವರು ಕೆಲ ಮಾಧ್ಯಮಗಳನ್ನು ಉದ್ದೇಶಿಸಿ  “ಮಾರಿಕೊಂಡ ಮಾಧ್ಯಮ ” (ಮಾರಾಟವಾದ ಮಾಧ್ಯಮ) ಎಂದು ಹೇಳಿದ್ದ ಮಾತು ಭಾರೀ ಸಂಚಲನ ಸೃಷ್ಟಿಸಿತ್ತು.

    ಬೆಂಗಳೂರು, ಬುಧವಾರ: ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿ, ವಿವಾದಕ್ಕೆ ಕಾರಣವಾಯಿತು. ಬೆಳಗ್ಗೆ 10.30ಕ್ಕೆ ಆರಂಭವಾದ ಕಾರ್ಯಕ್ರಮ, ಪತ್ರಕರ್ತರ ಜೊತೆಗಿನ ಜಟಾಪಟಿಯಿಂದಾಗಿ ಮಧ್ಯಾಹ್ನ 12 ಗಂಟೆಯವರೆಗೆ ಗೊಂದಲದಲ್ಲಿ ಕಳೆಯಿತು.

    ಜಟಾಪಟಿ ಹೇಗಾಯ್ತು?
    ಪ್ರಕಾಶ್ ರಾಜ್ ಅವರು ತಮ್ಮ ಭಾಷಣದಲ್ಲಿ “ಮಾರಿಕೊಂಡ ಮಾಧ್ಯಮದವರು ಇದಾರೆ” ಎಂದು ಪರೋಕ್ಷವಾಗಿ ಟೀಕೆ ಮಾಡಿದರು. ಇದಕ್ಕೆ ಪತ್ರಕರ್ತರು ತಕ್ಷಣ ಪ್ರತಿಕ್ರಿಯಿಸಿ, “ಸರ್, ಮಾರಿಕೊಂಡ ಮಾಧ್ಯಮದವರು ಯಾರು? ಹೆಸರು ಹೇಳಿ” ಎಂದು ಪ್ರಶ್ನಿಸಿದರು.

    Also Read  ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ - ಗಂಭೀರ ಆರೋಪ

    ಪತ್ರಕರ್ತರ ಪ್ರಶ್ನೆಗೆ ಪ್ರಕಾಶ್ ರಾಜ್, ಉತ್ತರ ಹೇಳಲು ತಡಬಡಾಯಿಸಿದರು”ನಾನು ನಿಮಗೆ ಹೇಳಿದ್ದಲ್ಲ” ಎಂದು ತೇಪೆ ಹಾಕಲು ಪ್ರಯತ್ನಿಸಿದರು. ಪತ್ರಕರ್ತರು ಮತ್ತೆ ಅದೇ ಉತ್ತರಕ್ಕಾಗಿ ಆಗ್ರಹಿಸಿದಾಗ, “ಇನ್ಯಾರಿಗೆ ಹೇಳಿದ್ದು? ಹೆಸರು ಹೇಳಿ” ಎಂದು ಒತ್ತಾಯಿಸಿದರು. ಇದಕ್ಕೆ ಪ್ರಕಾಶ್ ರಾಜ್, “ಅದು ನಿಮಗೇ ಗೊತ್ತಿದೆ” ಎಂದು ಹೇಳಿದರು. “ಹೆಸರು ಹೇಳಿ” ಎಂಬ ಪತ್ರಕರ್ತರ ಪಟ್ಟಿಗೆ ಕೊನೆಗೆ “ನೀವಲ್ಲ..” ಎಂದು ಮಾತ್ರ ಉತ್ತರಿಸಿದರು.

    12 ಗಂಟೆ ಬಳಿಕ ಏನಾಯ್ತು?
    1.5 ಗಂಟೆ ಜಟಾಪಟಿ ಬಳಿಕ ಪ್ರಕಾಶ್ ರಾಜ್ ಅವರು ಧರ್ಮಸ್ಥಳ ಬುರುಡೆ ಪ್ರಕರಣ ಹಾಗೂ ಚಿನ್ನಪ್ಪ ವಿಚಾರದ ಬಗ್ಗೆ ಮಾತನಾಡಿದರು. ಆದರೆ ಪತ್ರಕರ್ತರು ನಿರೀಕ್ಷಿಸಿದಂತೆ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ.

    ಸಭೆ ಮುಗಿದ ಬಳಿಕ ಹಾಜರಿದ್ದ ಪತ್ರಕರ್ತರೊಬ್ಬರು, “ಬೆಟ್ಟ ಅಗೆದು ಇಲಿಯೂ ಹಿಡಿಯಲಿಲ್ಲ” ಎಂದು ವ್ಯಂಗ್ಯವಾಡಿದರು.

    ಪ್ರಕಾಶ್ ರಾಜ್ ಅವರು ಈ ಹಿಂದೆಯೂ “ಹಾಫ್ ಆಫ್ ಬಾಲಿವುಡ್ ಸೋಲ್ಡ್” ಮತ್ತು “ಮೀಡಿಯಾ ಆರ್ಗನೈಸ್ಡ್ ಆಗಿ ಖರೀದಿಯಾಗ್ತಿದೆ” ಎಂದು ಆರೋಪ ಮಾಡಿದ್ದರು. ಆದರೆ ಯಾವತ್ತೂ ನಿರ್ದಿಷ್ಟ ಹೆಸರು ಬಹಿರಂಗಪಡಿಸಿಲ್ಲ. ಒಂದು ತರ ಹಿಟ್ ಅಂಡ್ ರನ್ ಮಾಡಿದರು.

    Also Read  ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ

    ಪ್ರಕಾಶ್ ರಾಜ್ ಅವರ ಆರೋಪ ಏನಂದರೆ, ಕೆಲವು ಮಾಧ್ಯಮ ಸಂಸ್ಥೆಗಳು ಅಧಿಕಾರದಲ್ಲಿರುವವರ ಪರವಾಗಿ ಮಾತ್ರ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಸರ್ಕಾರದ ವಿರುದ್ಧದ ಪ್ರಶ್ನೆಗಳು, ಭಿನ್ನಾಭಿಪ್ರಾಯಗಳು ಅಥವಾ ವಿರೋಧದ ಧ್ವನಿಗಳಿಗೆ ಬೇಕಾದಷ್ಟು ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬುದು ಅವರ ವಾದವಾಗಿತ್ತು. “ನಾನು ಪತ್ರಿಕಾಗೋಷ್ಠಿ ನಡೆಸಿದರೂ ಕೆಲವು ಚಾನೆಲ್‌ಗಳು ಅದನ್ನು ತೋರಿಸುವುದೇ ಇಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

    ಈ ಹೇಳಿಕೆ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಬಣಗಳು ನಿರ್ಮಾಣವಾದವು. ಒಂದು ಕಡೆ ಪ್ರಕಾಶ್ ರಾಜ್ ಮಾತನ್ನು ಬೆಂಬಲಿಸಿದವರು, “ಮಾಧ್ಯಮ ಸ್ವಾತಂತ್ರ್ಯ ಅಪಾಯದಲ್ಲಿದೆ” ಎಂದು ವಾದಿಸಿದರು. ಮತ್ತೊಂದು ಕಡೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವರು, “ಎಲ್ಲ ಮಾಧ್ಯಮಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ” ಎಂದು ಟೀಕಿಸಿದರು.

    Also Read  ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ

    ರಾಜಕೀಯ ವಿಚಾರಗಳಲ್ಲಿ ಮುಕ್ತವಾಗಿ ಮಾತನಾಡುವ ಪ್ರಕಾಶ್ ರಾಜ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಕೆಲವು ನೀತಿಗಳ ವಿರುದ್ಧ ಹಲವಾರು ಬಾರಿ ಧ್ವನಿ ಎತ್ತಿದ್ದಾರೆ. ಇದರಿಂದ ಅವರ ಪ್ರತಿಯೊಂದು ಹೇಳಿಕೆಯೂ ರಾಜಕೀಯ ಚರ್ಚೆಗೆ ಕಾರಣವಾಗುತ್ತದೆ  “ಮಾರಿಕೊಂಡ ಮಾಧ್ಯಮ ”  ಹೇಳಿಕೆಯೂ ಅದಕ್ಕೆ ಹೊರತಾಗಿರಲಿಲ್ಲ.

    ಆಸಕ್ತಿಕರ ಸಂಗತಿಯೆಂದರೆ, ಈ ಒಂದು ಪದವೇ ದೇಶದಾದ್ಯಂತ ಮಾಧ್ಯಮಗಳ ಪಾತ್ರ, ಪತ್ರಿಕೋದ್ಯಮದ ಸ್ವಾತಂತ್ರ್ಯ ಮತ್ತು ಸುದ್ದಿಗಳ ನಿಷ್ಪಕ್ಷಪಾತತೆ ಬಗ್ಗೆ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಕೆಲವರಿಗೆ ಅದು ಕಠಿಣ ಸತ್ಯವಾಗಿ ಕಂಡರೆ, ಇನ್ನೂ ಕೆಲವರಿಗೆ ಅದು ಅತಿರೇಕದ ಆರೋಪವಾಗಿ ಕಾಣಿಸಿತು.

    . ಒಂದು ಹೇಳಿಕೆ ಹೇಗೆ ರಾಷ್ಟ್ರಮಟ್ಟದ ವಿವಾದವಾಗಿ ಬದಲಾಗಬಹುದು ಎಂಬುದಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಂತಕರ ಹಿಂದೆ ಯಾರಿದ್ದಾರೆ? ಉಡುಪಿ ಪೊಲೀಸರ ನೆಕ್ಸ್ಟ್ ಟಾರ್ಗೆಟ್…?
    ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ಕರಾವಳಿಯ ಭವಿಷ್ಯ ರೂಪಿಸಲು ಸಿಎಂನ ಮಾಸ್ಟರ್ ಪ್ಲಾನ್! ಹೆಲಿ ಟೂರಿಸಂನಿಂದ ಹಿಡಿದು ಸಾವಿರಾರು ಉದ್ಯೋಗಗಳವರೆಗೆ…ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಕಣ್ಣು.
    ಶಾಲೆಗಳ ದುಸ್ಥಿತಿ ತೋರಿಸಲು CJP ಸಜ್ಜು; ‘ಹೊರಗಿನವರಿಗೆ ನೋ ಎಂಟ್ರಿ’ ಎಂದ ರಾಜಸ್ಥಾನ ಸರ್ಕಾರ!
    ನಿದ್ದೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದ ಕಟ್ಟಡ ಸಾವು ಆರಕ್ಕೆ..!ದಿಲ್ಲಿ ಪಿಜಿ ದುರಂತ ದೇಶದ ಹಳೆಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆ..!
    ಸುಮಂತ್ ನಿಗೂಢ ಸಾವು ಪ್ರಕರಣ: ತನಿಖೆಗೆ ಹೊಸ ತಿರುವು—ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್, ಮಂಪರು ಪರೀಕ್ಷೆ!
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    30 ದಿನ, 13 ನಗರಗಳು, ₹10 ಲಕ್ಷ ಖರ್ಚು! ಅಮೆರಿಕದ ದಂಪತಿಯ ಭಾರತ ಯಾತ್ರೆ ವೈರಲ್….ವೈರಲ್ ವಿಡಿಯೋದಲ್ಲಿ ಹೊರಬಿದ್ದ ಅಚ್ಚರಿಯ ಲೆಕ್ಕ!
    🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
    ವಾಲ್ಮೀಕಿ ಹಗರಣಕ್ಕೆ ನಾಗೇಂದ್ರ ತಲೆದಂಡ? ರಾಜೀನಾಮೆ ಚರ್ಚೆ ನಡುವೆ ಕಾಂಗ್ರೆಸ್‌ಗೆ ಹೊಸ ಸಂಕಷ್ಟ!
    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ಸನ್ಯಾಸಿಗೆ ಕಾಡಿದ ಸುಂದರಿಯ  ಬಂಧನ
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
    ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
    ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!
    ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
    ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
    ಕಾಂಗ್ರೆಸ್ ಹೈಕಮಾಂಡ್ ಖಡಕ್ ವಾರ್ನಿಂಗ್: ಸ್ವಾಮೀಜಿ, ಧಾರ್ಮಿಕ ಮುಖಂಡರ ಶಿಫಾರಸುಗಳಿಗೆ ಸಿಗಲ್ಲ ಮನ್ನಣೆ!
    ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
    ಗಂಡನಿಗೆ ಚಿನ್ನ ಕಳ್ಳತನದ ಪಿಎಚ್‌ಡಿ, ಹೆಂಡತಿಗೆ ಮಾರ್ಕೆಟಿಂಗ್ ಜಾಣ್ಮೆ…ಆಹಾ ಒಮ್ಮೆ ಓದಿ ಎಂಥಾ ಜೋಡಿ..
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು