📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಸ್ಥಳೀಯ ರೈತರಿಂದಲೇ ಆಗ್ರಹ

    ಬೈರಮಂಗಲ, ಕಂಚುಗಾರನಹಳ್ಳಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ರೈತರ ಒತ್ತಾಯ

    ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಶೀಘ್ರ ಜಾರಿಗೊಳಿಸುವುದು ಹಾಗೂ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಆಯಾ ಗ್ರಾಮಗಳ ರೈತರ ನಿಯೋಗವು  ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ಕಳೆದ ಎರಡು ದಶಕಗಳಿಂದ ರೆಡ್‌ಜೋನ್‌ನಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ವೃಷಭಾವತಿ ಕೊಳಚೆ ನೀರಿನಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು, ತೆಂಗಿನ ತೋಟಗಳು ಮೇಲ್ನೋಟಕ್ಕೆ ಹಸಿರಾಗಿ ಕಂಡರೂ ನಿರೀಕ್ಷಿತ ಇಳುವರಿ ದೊರೆಯುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ.

    ಕಲುಷಿತ ನೀರು ಹಾಗೂ ಪರಿಸರದ ಪರಿಣಾಮವಾಗಿ ಹಾಲಿನ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ರೆಡ್‌ಜೋನ್ ನಿರ್ಬಂಧಗಳಿಂದಾಗಿ ಆಸ್ಪತ್ರೆ, ಕಲ್ಯಾಣಮಂಟಪ ಸೇರಿದಂತೆ ಅಗತ್ಯ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

    Also Read  21 ದಿನ ಹಸಿದ ಹೋರಾಟಗಾರ ಆಸ್ಪತ್ರೆಗೆ..ಸರ್ಕಾರ ಏಕೆ ಇನ್ನೂ ಮೌನ!?????ಯುವಜನರ ಆಕ್ರೋಶದ ಕಟ್ಟೆ ಒಡೆಯುವ ಮೊದಲೇ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ….!!??

    ಪಕ್ಕದ ಗ್ರಾಮಗಳಲ್ಲಿನ ಜಮೀನುಗಳಿಗೆ ಬ್ಯಾಂಕ್‌ಗಳು ದೊಡ್ಡ ಮೊತ್ತದ ಸಾಲ ನೀಡುತ್ತಿದ್ದರೆ, ರೆಡ್‌ಜೋನ್ ವ್ಯಾಪ್ತಿಯಲ್ಲಿರುವ ತಮ್ಮ ಜಮೀನುಗಳಿಗೆ ಕನಿಷ್ಠ ಸಾಲವೂ ದೊರೆಯುತ್ತಿಲ್ಲ. ಇದರಿಂದ ಮದುವೆ, ವೈದ್ಯಕೀಯ ತುರ್ತು ಪರಿಸ್ಥಿತಿ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿಯೂ ಜಮೀನುಗಳನ್ನು ಬಳಸಿಕೊಂಡು ಆರ್ಥಿಕ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ.

    “ಕಳೆದ 20 ವರ್ಷಗಳಿಂದ ರೆಡ್‌ಜೋನ್ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಜಮೀನುಗಳ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಬಿಡದಿ ಟೌನ್‌ಶಿಪ್ ಯೋಜನೆಯನ್ನು ಜಾರಿಗೊಳಿಸಬೇಕು” ಎಂದು ರೈತರು ಮನವಿ ಮಾಡಿದ್ದಾರೆ.

    ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ನಿಯೋಗ ಒತ್ತಾಯಿಸಿದೆ.

    Also Read  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ದರ್ಶನ್ ಆಪ್ತರ ‘ಮಾಫಿ ಸಾಕ್ಷಿ’ ಅರ್ಜಿ ಏಕೆ ಮಹತ್ವದ್ದು?

    ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಮಸ್ಯೆಯನ್ನು  ಶೀಘ್ರವಾಗಿ ಬಗೆಹರಿಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಆ ರೈತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
    ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?
    ನದಿಯಲ್ಲ ರಸ್ತೆ..!ಕೈಕಂಬದ ಕಂದಾವರದ ಈ ರಸ್ತೆ ಕೆರೆಯಾಗಿ ನೀರಿನಲ್ಲಿ ಮುಳುಗಿದೆ!ಶಾಲಾ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಜೀವಭಯ!
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ಮಂಗಳೂರಿಗೆ ಮತ್ತೊಂದು ದೊಡ್ಡ ಯೋಜನೆ: 17.5 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹಾಗಾರಕ್ಕೆ ಅನುಮೋದನೆ – ಕರಾವಳಿಗೆ ಅಭಿವೃದ್ಧಿಯ ಹೊಸ ಅಧ್ಯಾಯ
    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಕಲ್ಲಂಗಡಿ ಹಣ್ಣು ತಪ್ಪು ಮಾಡಲಿಲ್ಲ… ಆದರೆ ಅಪರಾಧಿ ಸುದ್ದಿ ದೊಡ್ಡದಾಗಿದೆ!
    ಸಕ್ಕರೆ ದುಬಾರಿ… ಬೆಲ್ಲವೂ ದುಬಾರಿ! ಸಿಹಿ ತಿನ್ನೋದು ಈಗ ‘ಲಕ್ಸುರಿ’ನಾ? ಕಬ್ಬು ಸಕ್ಕರೆ ಕಾರ್ಖಾನೆಗೆ ಅಲ್ಲ… ಇಥೆನಾಲ್ ಘಟಕಗಳಿಗೆ? ಗ್ರಾಹಕರ ಜೇಬಿಗೆ ಹೊಡೆತ!
    ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
    ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
    ಮೊಬೈಲ್‌ಗಾಗಿ ಅಣ್ಣ-ತಮ್ಮನ ಜಗಳ; ಚಾಕುವಿನಿಂದ ಇರಿದು ಅಣ್ಣನನ್ನೇ ಕೊಂದ ತಮ್ಮ!
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
    ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
    ಬೆಳ್ತಂಗಡಿ: 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಆಟೋ ಚಾಲಕ ಅಂದರ್!
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ಸಿಜೆಪಿಯ ಪ್ರತಿಭಟನೆ ಬಗ್ಗೆ ತನಿಖೆ ನಡೆಸಲು ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    🚨 ದೇಶಾದ್ಯಂತ ಉಗ್ರ ಜಾಲದ ಮೇಲೆ ದೊಡ್ಡ ದಾಳಿ: ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಸೇರಿದಂತೆ 7 ರಾಜ್ಯಗಳಲ್ಲಿ 12 ಮಂದಿ ಬಂಧನ — ಯುವಕರಿಗೆ ಎಚ್ಚರಿಕೆ!
    ಲೈಫ್‌ಗಾರ್ಡ್ ಇಲ್ಲದ ಕಡಲಿಗೆ 14ರ ಬಾಲಕ…ಶ್ರೇಯಸ್ ಬಲಿ!
    ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
    🔥 “Get out of here! — ಸೂಪರ್ women ವಿರುದ್ಧವೇ ಕೇಸ್?!!