📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಿಜೈ ಪಿಜಿ ಅಗ್ನಿ ಅವಘಡ: ನಗರದ ಎಲ್ಲಾ ಪಿಜಿಗಳ ಸುರಕ್ಷತಾ ಪರಿಶೀಲನೆಗೆ ತುಳುನಾಡ ರಕ್ಷಣಾ ವೇದಿಕೆ ಆಗ್ರಹ

    ವಿದ್ಯಾರ್ಥಿನಿಯರ ಜೀವದ ಜೊತೆ ಚೆಲ್ಲಾಟ ಬೇಡ; ಸುರಕ್ಷತಾ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಿ – ಯೋಗೀಶ್ ಶೆಟ್ಟಿ ಜಪ್ಪು

    ಮಂಗಳೂರು: ನಗರದ ಬಿಜೈ ಫಸ್ಟ್ ಕ್ರಾಸ್‌ನ ಡಾ. ಮಥಾಯಿ ರಸ್ತೆಯಲ್ಲಿರುವ ವಿದ್ಯಾರ್ಥಿನಿಯರ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಎಲ್ಲಾ ಪಿಜಿಗಳ ಸುರಕ್ಷತಾ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸುವಂತೆ ತುಳುನಾಡ ರಕ್ಷಣಾ ವೇದಿಕೆ (ರಿ.) ಆಗ್ರಹಿಸಿದೆ.

    ಬುಧವಾರ ರಾತ್ರಿ ಮೂರು ಅಂತಸ್ತಿನ ಪಿಜಿ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ ಪರಿಣಾಮ, ಕಟ್ಟಡದಲ್ಲಿದ್ದ 50ಕ್ಕೂ ಅಧಿಕ ವಿದ್ಯಾರ್ಥಿನಿಯರು ಆತಂಕದಿಂದ ಹೊರಬಂದು ಪಕ್ಕದ ಕಟ್ಟಡದ ಆಶ್ರಯ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಕಟ್ಟಡದ ವಿದ್ಯುತ್ ಮೀಟರ್ ಹಾಗೂ ಜಂಕ್ಷನ್ ಸುಟ್ಟುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಈ ಘಟನೆ ಪಿಜಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಪಿಜಿ ನಿರ್ವಹಣೆಯ ಹೊಣೆಗಾರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ಸುರಕ್ಷತಾ ಲೋಪಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಒತ್ತಾಯಿಸಿದ್ದಾರೆ.

    Also Read  ‼️ ಮುಂಗಾರು ಅಬ್ಬರ ಶುರು: ಕರ್ನಾಟಕ-ಕೇರಳಕ್ಕೆ IMD ರೆಡ್ ಸಿಗ್ನಲ್! ಮುಂದಿನ 7 ದಿನ ಭಾರೀ ಮಳೆ, ಬಿರುಗಾಳಿ ಸಾಧ್ಯತೆ!

    ಪಿಜಿ ಮಾಲೀಕರಿಗೆ ಜವಾಬ್ದಾರಿ ಬೇಡವೇ?

    ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೊರ ಜಿಲ್ಲೆಗಳಿಂದ ಮಂಗಳೂರಿಗೆ ಆಗಮಿಸುವ ನೂರಾರು ವಿದ್ಯಾರ್ಥಿನಿಯರು ಪಿಜಿಗಳನ್ನು ಅವಲಂಬಿಸಿದ್ದಾರೆ. ತಮ್ಮ ಮಕ್ಕಳನ್ನು ದೂರದ ಊರುಗಳಿಗೆ ಕಳುಹಿಸುವ ಪೋಷಕರು ಸುರಕ್ಷಿತ ವಸತಿ ಸೌಲಭ್ಯ ದೊರೆಯುತ್ತದೆ ಎಂಬ ನಂಬಿಕೆಯಿಂದ ಪಿಜಿಗಳಿಗೆ ದಾಖಲಿಸುತ್ತಾರೆ. ಆದರೆ ಇಂತಹ ಘಟನೆಗಳು ಪೋಷಕರಲ್ಲಿ ಆತಂಕ ಮೂಡಿಸುವುದರ ಜೊತೆಗೆ ಪಿಜಿಗಳ ಸುರಕ್ಷತಾ ವ್ಯವಸ್ಥೆಯ ಬಗ್ಗೆಯೂ ಅನುಮಾನ ಮೂಡಿಸುತ್ತವೆ.

    50ಕ್ಕೂ ಅಧಿಕ ವಿದ್ಯಾರ್ಥಿನಿಯರು ವಾಸಿಸುವ ಕಟ್ಟಡದಲ್ಲಿ ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಸ್ಪಂದಿಸಲು ಜವಾಬ್ದಾರಿಯುತ ನಿರ್ವಾಹಕರು ಲಭ್ಯವಿರಬೇಕು. ಅಗ್ನಿ ಅವಘಡದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಹೊರಬರಲು ಅಗತ್ಯ ಮಾರ್ಗದರ್ಶನ, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ಅಗ್ನಿ ನಿಯಂತ್ರಣ ಉಪಕರಣಗಳು ಕಡ್ಡಾಯವಾಗಿ ಇರಬೇಕು ಎಂಬುದು ವೇದಿಕೆಯ ಅಭಿಪ್ರಾಯವಾಗಿದೆ.

    ನಗರದ ಎಲ್ಲಾ ಪಿಜಿಗಳ ಸುರಕ್ಷತಾ ಆಡಿಟ್‌ಗೆ ಆಗ್ರಹ

    ಬಿಜೈ ಪಿಜಿ ಅಗ್ನಿ ಅವಘಡವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳು ಕಟ್ಟಡದ ವಿದ್ಯುತ್ ವೈರಿಂಗ್, ಮೀಟರ್ ಬೋರ್ಡ್, ಜಂಕ್ಷನ್ ಸೇರಿದಂತೆ ಸಂಪೂರ್ಣ ವಿದ್ಯುತ್ ವ್ಯವಸ್ಥೆಯ ತಾಂತ್ರಿಕ ಪರಿಶೀಲನೆ ನಡೆಸಬೇಕು. ಕಟ್ಟಡ ಪರವಾನಗಿ, ಅಗ್ನಿಶಾಮಕ ಸುರಕ್ಷತಾ ಅನುಮತಿ ಹಾಗೂ ಇತರ ಕಡ್ಡಾಯ ದಾಖಲೆಗಳನ್ನೂ ಪರಿಶೀಲಿಸಬೇಕು.

    Also Read  ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಇಳಿದ ಚಿನ್ನದ ಬೆಲೆ….!ಖರೀದಿದಾರರಿಗೆ ಬಂಪರ್ ರಿಲೀಫ್.

    ಅಲ್ಲದೆ, ಮಂಗಳೂರು ನಗರದ ಎಲ್ಲಾ ವಿದ್ಯಾರ್ಥಿನಿಯರ ಮತ್ತು ವಿದ್ಯಾರ್ಥಿಗಳ ಪಿಜಿಗಳಲ್ಲಿ ವಿಶೇಷ ಸುರಕ್ಷತಾ ತಪಾಸಣೆ ನಡೆಸಿ, ಅಗ್ನಿಶಾಮಕ ಉಪಕರಣಗಳು, ಹೊಗೆ ಪತ್ತೆಹಚ್ಚುವ ಅಲಾರಂ, ತುರ್ತು ನಿರ್ಗಮನ ದಾರಿ ಹಾಗೂ ತುರ್ತು ಬೆಳಕಿನ ವ್ಯವಸ್ಥೆ ಇರುವುದನ್ನು ಖಾತರಿಪಡಿಸಬೇಕು. ನಿಯಮ ಉಲ್ಲಂಘಿಸಿರುವ ಪಿಜಿ ಮಾಲೀಕರು ಮತ್ತು ನಿರ್ವಾಹಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿದೆ.

    ವಿದ್ಯಾರ್ಥಿಗಳ ಸುರಕ್ಷತೆ ವ್ಯಾಪಾರದ ವಿಷಯವಲ್ಲ

    ಈ ಕುರಿತು ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, “ವಿದ್ಯಾರ್ಥಿನಿಯರು ತಮ್ಮ ಮನೆ, ಕುಟುಂಬವನ್ನು ಬಿಟ್ಟು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮಂಗಳೂರಿಗೆ ಬರುತ್ತಾರೆ. ಅವರಿಗೆ ಸುರಕ್ಷಿತ ವಸತಿ ಒದಗಿಸುವುದು ಪಿಜಿ ಮಾಲೀಕರ ಮೊದಲ ಆದ್ಯತೆಯಾಗಬೇಕು. ಕೇವಲ ಹಣ ಗಳಿಸುವ ಉದ್ದೇಶದಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡೆಗಣಿಸುವುದು ಖಂಡನೀಯ.

    Also Read  ಪುಟಿನ್‌ ಭದ್ರತೆಯ ಈ ರಹಸ್ಯ ಕೇಳಿದ್ರೆ ಶಾಕ್ ಆಗ್ತೀರಾ!ಪುಟಿನ್‌ಗೆ ಇಷ್ಟೊಂದು ಭದ್ರತೆನಾ? ‘ಸುಸು–ಕಕ್ಕಾ’ ಕೂಡ ರಷ್ಯಾಕ್ಕೆ ವಾಪಸ್!

    ಬಿಜೈನಲ್ಲಿ ಸಂಭವಿಸಿದ ಅಗ್ನಿ ಅವಘಡ ದೊಡ್ಡ ಅನಾಹುತ ಸಂಭವಿಸುವ ಮುನ್ನ ನೀಡಿರುವ ಎಚ್ಚರಿಕೆಯ ಗಂಟೆಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಕಾರಣಕ್ಕೆ ಈ ಘಟನೆಯನ್ನು ನಿರ್ಲಕ್ಷಿಸಬಾರದು. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಅಗ್ನಿಶಾಮಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣ ಸಮನ್ವಯದಿಂದ ಕಾರ್ಯನಿರ್ವಹಿಸಿ ನಗರದ ಎಲ್ಲಾ ಪಿಜಿಗಳ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ವಿದ್ಯಾರ್ಥಿನಿಯರ ಜೀವದ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

    ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪಿಜಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮತ್ತು ತರಬೇತಿ ನೀಡಬೇಕು. ರಾತ್ರಿ ವೇಳೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜವಾಬ್ದಾರಿಯುತ ನಿರ್ವಾಹಕರು ಲಭ್ಯವಿರುವುದನ್ನೂ ಕಡ್ಡಾಯವಾಗಿ ಖಾತರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
    ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿ…
    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    “ಜಾಗತಿಕ ಸವಾಲುಗಳ ನಡುವೆಯೂ ಭಾರತದ GDP ರಾಕೆಟ್ ವೇಗ! 7.8% ಬೆಳವಣಿಗೆಗೆ ವಿಶ್ವವೇ ಬೆರಗು!”
    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    ಕಾಲ್ತುಳಿತಕ್ಕೆ19 ಜೀವಗಳನ್ನು ಬಲಿ ಪಡೆದ ಕೋಲ್ಕತ್ತಾದ ದುರ್ಗಾ ಪೂಜಾ ಸಂಭ್ರಮ..!ಅಂದು ರಾತ್ರಿ ಅಲ್ಲಿ ನಡೆದಿದ್ದೇನು?
    ಬಿಹಾರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು
    ಭಾರತೀಯರ ಟ್ರಾವೆಲ್ ಲಿಸ್ಟ್‌ನಿಂದ ಯುರೋಪ್ ಔಟ್.. ಲಂಡನ್, ಪ್ಯಾರಿಸ್ ಬಿಟ್ಟು ಥೈಲ್ಯಾಂಡ್, ಮಲೇಷ್ಯಾ ಜಪಾನ್‌ನತ್ತ ಪ್ರವಾಸಿಗರ ದಂಡು ..
    ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯ: ಮೊದಲ ಮಹಿಳಾ ಏರ್ ವೈಸ್ ಮಾರ್ಷಲ್ ಆದ ಶಕ್ತಿ ಶರ್ಮಾ
    “ಅಪ್ಪಾ” ಎಂದು ಕರೆದವನ ಕೈಯಿಂದಲೇ 18 ತಿಂಗಳ ಕಂದಮ್ಮನ ದೇಹದ ಮೇಲೆ 91 ಗಾಯದ ಗುರುತು – ಅಮಾನುಷ ಹತ್ಯೆ!..
    ಬಿಲ್‌ಗಾಗಿ ಶವ ತಡೆದರೆ ಹುಷಾರ್! ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಕ್ರಮ?
    ಬೈಂದೂರಿನಲ್ಲಿ ಹಳೆ ವೈಷಮ್ಯದಿಂದ ಮನೆಗೆ ನುಗ್ಗಿ ಹಲ್ಲೆಗೆ ಯತ್ನ
    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    ಅಂದೊಮ್ಮೆ ಬಾಲಿವುಡ್‌ನಲ್ಲಿ ಕಡೆಗಣಿಸಿದ  ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದ ಪ್ರತಿಷ್ಠಿತ ಬ್ರಾಂಡ್ ರೋಲೆಕ್ಸ್‌ನ ಅಂಬಾಸಿಡರ್! 
    ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು
    ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಈ ಸುದ್ದಿ ಸಿನಿಮಾ ಇತಿಹಾಸದಲ್ಲೇ ದೊಡ್ಡ ಬಾಕ್ಸ್ ಆಫೀಸ್ ಸ್ಫೋಟಗಳಲ್ಲಿ ಒಂದಾಗಿದೆ. ‘Spider-Man: Brand New Day’ 
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    ಡೈಪರ್‌ನಲ್ಲಿ ಚಿನ್ನ! ಚಿನ್ನ ಕಳ್ಳಸಾಗಣೆಗೆ ಏನೆಲ್ಲಾ‘ಐಡಿಯಾ’? 8 ತಿಂಗಳ ಮಗುವನ್ನೂ ಬಿಟ್ಟಿಲ್ಲ!
    ಲಂಚದ ವಿರುದ್ಧ ದೂರು ನೀಡಿದ್ದಕ್ಕೆ ರೈತನ ಮಗನ ವೃಷಣಗಳನ್ನೇ ಒಡೆದ ಪೊಲೀಸ್ ಕ್ರೌರ್ಯ!
    ಬ್ರೇಕಿಂಗ್ ನ್ಯೂಸ್
    ಅಜಿತ್ ಅಗರ್ಕರ್ ಗೆ ಜಾಕ್ಪಾಟ್
    ವಿಜಯ್ vs ಡಿಕೆಶಿ ಅಲ್ಲ… ಅಮಿತ್ ಶಾ ಮುಂದೆ ಸೌತ್ ಪವರ್!ದಕ್ಷಿಣದ ಹಕ್ಕಿಗಾಗಿ ಒಂದೇ ಧ್ವನಿ!