📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಡಾನ್ -3 ಸಿನಿಮಾ ಕಥೆ ಗೋವಿಂದ….!

    ಬಹು ನಿರೀಕ್ಷಿತ ಚಿತ್ರ ಡಾನ್ 3 ಇನ್ನು ಸದ್ಯಕ್ಕಂತೂ ಇಲ್ಲ. ಪ್ರಾರಂಭದಲ್ಲಿ ಶಾರುಖ್ ಖಾನ್ ಹಾಗೂ ಅಮಿತಾ ಬಚ್ಚನ್ ಇಬ್ಬರನ್ನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವುದು ನಿರ್ದೇಶಕರ ಲೆಕ್ಕಾಚಾರವು ಹುಸಿಯಾಗಿತ್ತು. 

    ಡಾನ್ -3 ಚಿತ್ರಕ್ಕೆ ರಣವೀರ್ ಸಿಂಗ್ ಆಯ್ಕೆಯಾಗಿದ್ದರು. ಡಾನ್ -2ರಲ್ಲಿ ಶಾರುಖ್ ಖಾನ್ ನಟಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಚಿತ್ರ ಸಕ್ಸಸ್ ಕೂಡ ಕಂಡಿತ್ತು. ಡಾನ್ 3 ಸಂಭಾಷಣೆ ಹಾಗೂ ಕಥೆಯ ವಿಚಾರದಲ್ಲಿ ಶಾರುಖ್ ಖಾನ್ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತದೆ. ಹಾಗಾಗಿ ಶಾರುಖ್ ಖಾನ್ ಬದಲು, ರಣವೀರ್ ಸಿಂಗ್ ಅವರನ್ನು ಪರ್ಹಾನ್ ಅಕ್ತರ್ ಆಯ್ಕೆ ಮಾಡಿಕೊಂಡಿದ್ದರು. ಅದರ ಬಗ್ಗೆಯೇ ಶಾರುಖ್ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಶಾರುಖ್ ಅಭಿಮಾನಿಗಳ ಹೆಸರಿನಲ್ಲಿ ಬೆದರಿಕೆಗಳೂ ಬಂದಿದ್ದವು ಏನ್ನಲಾಗುತ್ತದೆ.

    Also Read  ಮನುಷ್ಯನಿಗಿಂತ AI ನಿಯಂತ್ರಣ ತಪ್ಪಿ ಶಕ್ತಿಶಾಲಿಯಾದ್ರೆ…ಚೀನಾದ ಎಚ್ಚರಿಕೆ ಬೆಚ್ಚಿಬೀಳಿಸುವಂತಿದೆ!ರಾಷ್ಟ್ರೀಯ ಭದ್ರತೆ ಬಗ್ಗೆ ಶುರುವಾಯ್ತು ಭಾರೀ ಆತಂಕ!

    ಇದ್ಯಾವುದಕ್ಕೂ ಬಗ್ಗದ ಜಗ್ಗದ ನಿರ್ದೇಶಕ ಫರ್ಹಾನ್ ಅಕ್ತರ್, ಯಾವ ಬೆದರಿಕೆಗೂ ಜಗ್ಗುವುದಿಲ್ಲ ಅಂತ ಅಷ್ಟೇ ಖಡಕ್ಕಾಗಿ ಮೆಸೇಜ್ ಪಾಸ್ ಮಾಡಿದ್ದ. ಡಾನ್ -3 ರಣವೀರ್ ಸಿಂಗ್ ನಟನೆಯಲ್ಲಿಯೇ ತೆರೆ ಕಾಣಲಿದೆ ಎಂದು ಹೇಳಿಕೊಂಡಿದ್ದರು ಸಹ. ಆದರೆ, ಇಷ್ಟೆಲ್ಲಾ ನಡೆದ ನಂತರ ಈಗ ಡಾನ್- 3 ಚಿತ್ರವೇ ನೆನೆಗುದಿಗೆ ಬೀಳುತ್ತಿದೆ.

    ನಿರ್ದೇಶಕ ಅಕ್ತರ್ ಹಾಗೂ ರಣವೀರ್ ನಡುವೆ ಕಿರಿಕ್ ಆಗಿದೆ. ಆಗಲೇ 10 ಕೋಟಿ ಅಡ್ವಾನ್ಸ್ ಪಡೆದಿದ್ದ ರಣವಿರ್, ನಾನು ಡಾನ್ -3 ಯಲ್ಲಿ ಮುಂದುವರೆಯಲಾರೆ ಎಂದು ಓಪನ್ನಾಗಿ ಹೇಳುವ ಮೂಲಕ  ಡಾನ್ -3ಗೆ   ಸಂಕಟವನ್ನು ತಂದಿದ್ದರು. ಆರಂಭದಲ್ಲಿ ಚಿಕ್ಕದಾದ ಜಗಳವು ವಿಕೋಪಕ್ಕೆ ಹೋಗಿರುವುದಕ್ಕೆ ಸ್ವತಹ ರಣವೀರ ಹಾಗೂ ಅಕ್ತರ್ ಇವರಿಬ್ಬರೇ ನೇರ ಕಾರಣ. ಇಬ್ಬರಲ್ಲಿರುವ ಇಗೋ, ಇಬ್ಬರನ್ನೂ ಗೂಳಿ ತರಹ ವಿವಾದದಲ್ಲೇ ಮುನ್ನುಗ್ಗುವಂತೆ ಮಾಡಿದೆ. ಪರಿಣಾಮ,  ಪರಹಾನ್ ಅಕ್ತಾರ್ 40 ಕೋಟಿ ಹಣವನ್ನು ರಣವೀರ್ ಸಿಂಗ್ ಪರಿಹಾರವಾಗಿ ಸಂದಾಯ  ಮಾಡಬೇಕು ಅಂತ ಪಟ್ಟು ಹಿಡಿದು ಕೂತರು. ನಾನು ಒಂದೇ ಒಂದು ರೂಪಾಯಿ ಹಣ ನೀಡುವುದಿಲ್ಲ ಅಂತ ರಣವೀರ್ ಪಟ್ಟು ಹಿಡಿಯುತ್ತಾರೆ. ಇವರಿಬ್ಬರ ನಡುವಿನ ಗಲಾಟೆಯ ಬಗ್ಗೆ ಶಾರುಖ್ ಖಾನ್ ಅಭಿಮಾನಿಗಳು ಹಿರಿಹಿರಿ ಹೀಗಿದ್ದರು. 

    Also Read  ಮಂಗಳೂರಿನಲ್ಲಿ ಬೃಹತ್ ನಕಲಿ ನೋಟು ಜಾಲ ಭೇದಿಸಿದ ಉಪ್ಪಿನಂಗಡಿ ಪೊಲೀಸರು..!ಅಡೆಂಜದಲ್ಲಿ ನಕಲಿ ನೋಟಿನ ಕಾರ್ಖಾನೆ ಬಯಲು! ಏಳು ಮಂದಿ ಅರೆಸ್ಟ್‌, ಕೋಟಿ ಕೋಟಿ ವಂಚನೆಗೆ ಬ್ರೇಕ್

    ವಿಪರೀತ ಅನ್ನುವಷ್ಟು ಡಾನ್-3 ಯ ವಿವಾದವು ಪ್ರಚಾರ ಪಡೆದುಕೊಳ್ಳುತ್ತಿದ್ದಂತೆಯೇ ಹಿರಿಯ ನಟ ಅಮೀರ್ ಖಾನ್ ಮಧ್ಯಪ್ರವೇಶ ಮಾಡುತ್ತಾರೆ. ಅವರ ಎದುರಿನಲ್ಲಿ ಅಕ್ತರ್  ರಣವೀರ್ ನಡುವೆ ಮಾತುಕತೆ ನಡೆಯುತ್ತದೆ. ಡಾನ್ 3 ಚಿತ್ರದಲ್ಲಿ ನಟಿಸಲು ರಣವೀರ್ ಒಪ್ಪುವುದಿಲ್ಲ, ಹಾಗಾಗಿ ಅಡ್ವಾನ್ಸ್ ಆಗಿ ಪಡೆದ 10 ಕೋಟಿಯನ್ನು ವಾಪಾಸ್ ನೀಡಲು ರಣವೀರ್ ಒಪ್ಪಿಕೊಳ್ಳುತ್ತಾರೆ. ನಾನು ಈಗಾಗಲೇ, ಈ ಚಿತ್ರಕ್ಕಾಗಿ ವಿಪರೀತ ಖರ್ಚು ಮಾಡಿದ್ದೇನೆ. ನನಗೆ ನಷ್ಟವಾಗುತ್ತದೆ. 40 ಕೋಟಿ ಪರಿಹಾರ ಬೇಕು ಅಂತ ಕೂತಿದ್ದ ಪರ್ಹಾನ್ ಅಕ್ತರ್, ಅಮೀರ್ ಖಾನ್ ಎದುರು ನಡೆದ ಮಾತುಕತೆಗೆ ಒಪ್ಪಿಕೊಳ್ಳುತ್ತಾರೆ. 

    ಇವರಿಬ್ಬರ ನಡುವೆಯೇ ಈ ಮಾತುಕತೆ ನಡೆದಿದ್ದರೆ ಯಾವತ್ತೂ ಸುಖಾಂತ್ಯ ವಾಗುತ್ತಿತ್ತು. ಇಬ್ಬರೂ ರಚ್ಚಗೆ ಬಿದ್ದು, ಯುದ್ಧಕ್ಕೆ ನಿಂತಿದ್ದ ಕಾರಣ ವಿವಾದವು ಇಲ್ಲಿಯವರೆಗೆ ಎಳೆದುಕೊಂಡು ಬಂದಿತ್ತು. ಈಗ ಇಬ್ಬರ ನಡುವಿನ ವಿವಾದಕ್ಕೆ ಫುಲ್ ಸ್ಟಾಪ್ ಬಿದ್ದಿದೆ ಆದರೆ ಡಾನ್- 3 ಸಿನಿಮಾಕ್ಕೆ ಮಾತ್ರ ಪರ್ಮನೆಂಟ್ ಬೀಗ ಬಿದ್ದಿದೆ. ಇದರಿಂದ ಖುಷಿಪಡುತ್ತಿರುವವರು ಮಾತ್ರ ಶಾರುಖ್ ಬೆಂಬಲಿಗರು. ನಮ್ಮ ಶಾರುಖ್ ಬಿಟ್ಟು ಚಿತ್ರ ನಿರ್ಮಿಸಲು ಹೋದ ಕಾರಣವೇ ಹೀಗಾಗಿದೆ ಅಂತ ಎಲ್ಲೆಡೆ ಪಸರಿಸುತ್ತಿದ್ದಾರೆ ಅವರ ಅಭಿಮಾನಿಗಳು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…
    ಸ್ಪೇನ್‌ಗೆ 2ನೇ FIFA ವಿಶ್ವಕಪ್ ಕಿರೀಟ!ನ್ಯೂಯಾರ್ಕ್‌ನಲ್ಲಿ ಮೆಸ್ಸಿಯ ಅರ್ಜೆಂಟೀನಾವನ್ನು ಮಣಿಸಿದ ಸ್ಪೇನ್ ನ ಲಾ ರೋಜಾ ಗೆ ಐತಿಹಾಸಿಕ ಜಯ! 
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
    ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
    ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
    ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
    ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೆ ಅಂತಿಮ ತೀರ್ಪು – ಶಾರೀಕ್ ಗೆ 10 ವರ್ಷ ಜೈಲು..
    ದುರಂತ ಸಂಭವಿಸುವ ಮುನ್ನ ಮೆಸ್ಕಾಂ ಎಚ್ಚೆತ್ತುಕೊಳ್ಳುವುದೇ? ಮಂಗಳೂರಿನ PVS ರಸ್ತೆಯಲ್ಲೇ ಮೆಸ್ಕಾಂ ಟ್ರಾನ್ಸ್‌ಫಾರ್ಮರ್ ಅಡಿಯಲ್ಲೇ ಸುತ್ತಲೂ ಒಣ ಕಸದ ಪ್ಲಾಸ್ಟಿಕ್ ಟಾರ್ಪಾಲಿನ್ ಮತ್ತು ಬಾಕ್ಸ್ ರಾಶಿ!
    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?
    ಗೃಹ ಜ್ಯೋತಿ ….ಯೋಜನೆ ಪರಿಶೀಲನೆಗೆ ಜುಲೈ 31 ಅಂತಿಮ ಗಡುವಲ್ಲ; ಮೆಸ್ಕಾಂ ವ್ಯಾಪ್ತಿಯಲ್ಲೂ ಆಗಸ್ಟ್ ಅಂತ್ಯದವರೆಗೆ ಸರ್ವೇ ಮುಂದುವರಿಕೆ
    ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
    ಇಬ್ಬರು ಮಕ್ಕಳ ಕಣ್ಣೆದುರೇ ಪತ್ನಿಯನ್ನು ಸುಮಾರು 20 ಬಾರಿ ಚಾಕುವಿನಿಂದ ಇರಿದು ಕೊಂದ ಪತಿ – ಕಾರಣ ಮೊಬೈಲ್‌ನಲ್ಲಿ ಆಟ
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    ಫಾರ್ಮ್-7 ವಿವಾದ ಸ್ಫೋಟ: 52 ಮಂದಿಯ ವಿರುದ್ಧ FIR-ಮತದಾರರ ಹೆಸರು ಅಳಿಸುವ ಆರೋಪಕ್ಕೆ ತನಿಖೆ ಆಗ್ರಹ
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    “ಮಾಜಿ RSS ಕಾರ್ಯಕರ್ತನಿಗೆ ಮುಸ್ಲಿಂ ಮಹಿಳೆ ಅಗ್ನಿಸ್ಪರ್ಶ”ವಾಸ್ತವ ಏನು?ಮಾನವೀಯತೆಗೆ ಧರ್ಮದ ಗಡಿ ಇಲ್ಲ!
    ಒಂದೆಡೆ ‘ನಶಾ ಮುಕ್ತ ಯುವ ಭಾರತ’ ಅಭಿಯಾನ; ಮತ್ತೊಂದೆಡೆ ಪಬ್ ಸಂಸ್ಕೃತಿಯ ಸೆಳೆತ..! ಮಣಿಪಾಲದಲ್ಲಿ ಅಪ್ರಾಪ್ತರ ಮದ್ಯಪಾನ ಬಯಲು
    ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    ಗ್ರಾಮೀಣ ಕೋಟಾಕ್ಕೆ ಒಳಮೀಸಲು: ಅವಕಾಶವೇ? ರಾಜಕೀಯದ ಮತ್ತೊಂದು ಲೆಕ್ಕಾಚಾರವೇ?“ಗ್ರಾಮೀಣ ಮಕ್ಕಳಿಗೆ 7.5% ಕೋಟಾ; ಆದರೆ ಗುಣಮಟ್ಟದ ಶಿಕ್ಷಣಕ್ಕೆ ಎಷ್ಟು %?”
    ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಇ.ಡಿ. ಶಾಕ್: 21 ಕಡೆ ಏಕಕಾಲದ ದಾಳಿ
    ಸೋಶಿಯಲ್ ಮೀಡಿಯಾದ ವೈರಲ್ ವಿಡಿಯೋದಿಂದ ಕೋರ್ಟ್ ತನಕ..!ರಸ್ತೆ ರೇಜ್ ಪ್ರಕರಣದಲ್ಲಿ ಹೊಸ ತಿರುವು