📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ…ನಾಳೆ ನನ್ನ ಹೆಣವನ್ನೂ ನೋಡುತ್ತೀರಿ” ಎಂದ ಚೇತನ್!ಲಾವಣ್ಯಳ ತಂದೆಗೆ ಕರೆ ಮಾಡಿ ಶಾಕ್ ನೀಡಿದ ಆರೋಪಿ ಚೇತನ್ ಪೊಲೀಸ್ ವಶಕ್ಕೆ..!

    ಬಂಟ್ವಾಳ, ಜು.17: ಬಂಟ್ವಾಳದ ಬಿಸಿ ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಲಾವಣ್ಯ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕಕ್ಯಪದವು ನಿವಾಸಿ ಹಾಗೂ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿದ್ದ ಲಾವಣ್ಯ ಅವರನ್ನು ಜನಸಂದಣಿಯ ನಡುವೆಯೇ ಬೆನ್ನಟ್ಟಿ ಹರಿತವಾದ ಆಯುಧದಿಂದ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಂಬಂಧಿ ಎನ್ನಲಾದ ಚೇತನ್ ಪ್ರಮುಖ ಆರೋಪಿಯಾಗಿದ್ದಾನೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ, ಹತ್ಯೆ ಎಸಗಿದ ಬಳಿಕ ಚೇತನ್ ಈ ಯಾವುದೇ ವಿಚಾರಗಳ ಅರಿವಿಲ್ಲದ ತನ್ನ ಸ್ನೇಹಿತನಿಗೆ 10 ನಿಮಿಷ ದಲ್ಲಿ ಬರುವೆನೆಂದು ಹೇಳಿ ದುಷ್ಕೃತ್ಯ ನಡೆದ ನಂತರ ಏನೂ ಗೊತ್ತಿರದ ಸ್ನೇಹಿತನ ಸಹಾಯದಿಂದ ಆತನ ಆಲ್ಟೋ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಯ ಬಳಿಕ ಆತ ಲಾವಣ್ಯ ಅವರ ತಂದೆಗೆ ಕರೆ ಮಾಡಿ, “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ… ನಾಳೆ ನನ್ನ ಹೆಣವನ್ನೂ ನೀವು ನೋಡುತ್ತೀರಿ” ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    Also Read  ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ

    ಆರೋಪಿಯ ಈ ಹೇಳಿಕೆಯ ನಂತರ ಆತ ಆತ್ಮಹತ್ಯೆಗೆ ಯತ್ನಿಸಿರಬಹುದೆಂಬ ಊಹಾಪೋಹಗಳು ಕೂಡ ಹರಡಿದ್ದವು. ಆದರೆ ಮುಂಜಾನೆ ಸುಮಾರು 2.30 ರಿಂದ 3 ಗಂಟೆಯ ನಡುವೆ ಆರೋಪಿಯ ಮೊಬೈಲ್ ಮತ್ತೆ ಸ್ವಿಚ್ ಆನ್ ಆಗಿದ್ದು, ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಪೊಲೀಸರು ಆತನ ಚಲನವಲನವನ್ನು ಪತ್ತೆಹಚ್ಚಿದ್ದಾರೆ.

    ಮೊಬೈಲ್ ಲೊಕೇಷನ್ ಟ್ರೇಸ್ ಮಾಡಿದ ಪೊಲೀಸ್ ತಂಡವು ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಪಚ್ಚನಾಡಿ ಪ್ರದೇಶದಲ್ಲಿ ಆರೋಪಿಯನ್ನು ಆಲ್ಟೋ ಕಾರಿನ ಸಮೇತ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ಅಧಿಕೃತವಾಗಿ ಬಂಧಿಸಿರುವ ಕುರಿತು ಪೊಲೀಸರು ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

    ಪ್ರಕರಣದ ನಿಖರ ಕಾರಣ, ಆರೋಪಿಯ ಉದ್ದೇಶ, ಸ್ನೇಹಿತನ ಪಾತ್ರ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಪೊಲೀಸರು ಸುದೀರ್ಘ ವಿಚಾರಣೆ ನಡೆಸುವ ಸಾಧ್ಯತೆಯಿದೆ.

    ##BantwalMurder #Lavanya #DakshinaKannada #CrimeNews #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಡಿಕೆ ಶಿವಕುಮಾರ್ ಪ್ರತಿಷ್ಠೆ ಪಣಕ್ಕಿಟ್ಟ ಪರಿಷತ್ ಚುನಾವಣೆ!
    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ 47 ಜೀವಂತ ಅಪರೂಪದ ಪ್ರಾಣಿಗಳು ಪತ್ತೆ! 
    ಅಜಿತ್ ಅಗರ್ಕರ್ ಗೆ ಜಾಕ್ಪಾಟ್
    ಮುಂಬಯಿಯಲ್ಲಿ ಪಹಲ್ಗಾಮ್ ಮಾದರಿ ದಾಳಿ ಯತ್ನ: ಉಗ್ರ ಚಟುವಟಿಕೆ ಯತ್ನ ವಿಫಲ…!
    ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
    FSSAI ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ…!ಕಾರ್ಪೊರೇಟ್ ಒತ್ತಡಕ್ಕೆ ಮಣಿದಿರಾ?ಪ್ಯಾಕ್ ಆಹಾರಕ್ಕೆ ಎಚ್ಚರಿಕೆ ಲೇಬಲ್ ಕಡ್ಡಾಯ ಯಾಕಿಲ್ಲ? 
    Train Travel ಇಷ್ಟನಾ? ಹಾಗಾದ್ರೆ ಈ ಸುದ್ದಿ ತಿಳ್ಕೊಳ್ಳಿ!ಬೆಂಗಳೂರು–ಮಂಗಳೂರು ಗೋವಾ ವಂದೇ ಭಾರತ್….!?
    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
    ಕೊಡಗು ಬ್ರೇಕಿಂಗ್: ಮಾಜಿ ಸೈನಿಕನ ಮನೆಗೆ ನುಗ್ಗಿದ ಕಳ್ಳರು – ಚಿನ್ನ, ನಗದು ಸೇರಿ ಅಮೂಲ್ಯ ವಸ್ತುಗಳ ದೋಚಾಟ
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
    ಕ್ಯಾಷ್‌ಲೆಸ್ ಭಾರತ… ಮತ್ತೆ ಕ್ಯಾಶ್‌ಗೇ ಮರಳುತ್ತಾರಾ?
    UPIಗೆ ಶುಲ್ಕ ಬರಲಿದೆಯೇ? – ಲೋಕಸಭೆಯಲ್ಲಿ ಅಂಗೀಕಾರವಾದ bill ಮಸೂದೆ ಏನು ಹೇಳುತ್ತದೆ?
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    90 ನಿಮಿಷದ ರೋಚಕ ರಕ್ಷಣಾ ಕಾರ್ಯಾಚರಣೆ – 6 ಮೀನುಗಾರರ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾಹಸ!ಪ್ರಕ್ಷುಬ್ಧ ಸಮುದ್ರಕ್ಕೂ ಸವಾಲು
    ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
    ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!
    Old Monk, Royal Challengeಗೆ ಭಾರೀ ಶಾಕ್..! FSSAI ಲ್ಯಾಬ್ ವರದಿಯಲ್ಲಿ ಬಯಲಾಯ್ತಾ ದೊಡ್ಡ ರಹಸ್ಯ?
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ವೈರಲ್ ಆದ ಒಂದೇ ಒಂದು ಪಂಚ್ … ಐಸಿಯು ಕೋಮಾವರೆಗೆ ! ಬೆಚ್ಚಿಬೀಳಿಸಿದ ಜಿಮ್ ಪಂಚ್ ವೀಡಿಯೋ.ದೇಹ ಗಟ್ಟಿಯಾಗಿತ್ತು… ಮನಸ್ಸು ದುರ್ಬಲವಾಗಿತ್ತು!
    ಸೆಪ್ಟೆಂಬರ್‌ನಲ್ಲಿ ಚಿನ್ನ-ಬೆಳ್ಳಿ ಭಾರಿ ಕುಸಿತ: ಮುಂದಿನ ದಿನಗಳಲ್ಲೂ ಏರಿಳಿತ ಸಾಧ್ಯತೆ
    ಮನುಷ್ಯನಿಗಿಂತ AI ನಿಯಂತ್ರಣ ತಪ್ಪಿ ಶಕ್ತಿಶಾಲಿಯಾದ್ರೆ…ಚೀನಾದ ಎಚ್ಚರಿಕೆ ಬೆಚ್ಚಿಬೀಳಿಸುವಂತಿದೆ!ರಾಷ್ಟ್ರೀಯ ಭದ್ರತೆ ಬಗ್ಗೆ ಶುರುವಾಯ್ತು ಭಾರೀ ಆತಂಕ!