📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರತೆಯ ಬಗ್ಗೆ ಆಸ್ತಿಕ ವರ್ಗದಲ್ಲಿ ಸಾಕಷ್ಟು  ಗೌರವವಿದೆ. ಪ್ರತಿದಿನ ನೂರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮದೇ ಆದ ಸೇವಾ ಕೈಂಕರ್ಯಗಳನ್ನು ಪೂರೈಸಿ ವಾಪಸ್ ಆಗುತ್ತಿದ್ದಾರೆ. ಅಂತಹ ಕ್ಷೇತ್ರದಲ್ಲಿ ಆಡಳಿತ ಮಂಡಳಿಯು ಭಕ್ತರಿಗೆ ಕೊಡುತ್ತಿರುವ ಮೆಸೇಜು ಇಂದು  ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಇದು ಹಲವು ರೀತಿಯಲ್ಲಿ ಭಕ್ತರು ಹಾಗೂ ಅರ್ಚಕರಲ್ಲಿ ಗೊಂದಲಕ್ಕು ಕಾರಣವಾಗಿದೆ. ಈ ಗೊಂದಲವನ್ನು ಸ್ವತಹ ಇಲ್ಲಿನ ಆಡಳಿತ ಮಂಡಳಿಯೇ ಸೃಷ್ಟಿಸಿದೆ ಅನ್ನುವುದಂತೂ ಸತ್ಯ

ಅಷ್ಟಕ್ಕೂ ಆಡಳಿತ ಮಂಡಳಿಯು ಸೃಷ್ಟಿಸಿದ ಗೊಂದಲವಾದರೂ ಎಂತಹುದು? ಸರ್ಪ ಸಂಸ್ಕಾರದ ಪೂಜೆಯನ್ನು ಭಕ್ತರು ಆನ್ಲೈನ್ನಲ್ಲಿ ಬುಕ್ ಮಾಡುತ್ತಾರೆ ಅಥವಾ ಬಂದ ತಕ್ಷಣವೇ ಚೀಟಿ ಬರೆಸುತ್ತಾರೆ. ಆಗಲೇ 4,200 ಹಣವನ್ನು ಪಾವತಿಸಿಕೊಳ್ಳುತ್ತಾರೆ. ಈ ಹಣದಲ್ಲಿ ಈ ಒಂದು ಪೂಜೆಯ ಎಲ್ಲಾ ವೆಚ್ಚಗಳು ಒಳಗೊಂಡಿರುತ್ತವೆ ಅನ್ನುವುದು ಆಡಳಿತ ಮಂಡಳಿಯ ಪ್ರಕಟಣೆಯಾಗಿದೆ. ಹಾಗಾಗಿ ಯಾವುದೇ ಭಕ್ತರು ಪೂಜೆಯ ಸಮಯದಲ್ಲಿ ಅಥವಾ ನಂತರ ಯಾವುದೇ ಸಂಭಾವನೆಯನ್ನು ಯಾರಿಗೂ ನೀಡಬೇಕಾಗಿಲ್ಲ. ಯಾವುದಾದರೂ ಪುರೋಹಿತರು ಡಿಮ್ಯಾಂಡ್ ಮಾಡಿದರೆ ತಕ್ಷಣವೇ ದೇವಸ್ಥಾನದ ಆಡಳಿತ ಕಚೇರಿಗೆ ಬಂದು ದೂರು ನೀಡಿ ಎನ್ನುವ ಸಂದೇಶವನ್ನು ಬಹಿರಂಗವಾಗಿ ವಿವಿಧ ಭಾಷೆಗಳಲ್ಲಿ ಬಿತ್ತರಿಸಲಾಗುತ್ತಿದೆ.

ಅದರಿಂದ ಈಗ, ಭಕ್ತರು ಹಾಗೂ ಪುರೋಹಿತ ವರ್ಗ ಎರಡರಲ್ಲೂ ಗೊಂದಲ ವೇರ್ಪಟ್ಟಿದೆ. ಪ್ರತಿ ಸರ್ಪಸಂಸ್ಕಾರಕ್ಕೂ, ಅದನ್ನು ನಿರ್ವಹಿಸಿದ ಪುರೋಹಿತರಿಗೆ ಆಡಳಿತ ಮಂಡಳಿಯಿಂದಲೇ ಅವರ ಸಂಭಾವನೆ ಹೋಗುತ್ತದೆ. ಹಾಗೆಯೇ ಬ್ರಹ್ಮಚಾರಿಗೂ ಆಡಳಿತ ಮಂಡಳಿಯಿಂದಲೇ ಸಂಭಾವನೆ ಹೋಗುತ್ತದೆ. ಹಾಗಾಗಿ ಪುರೋಹಿತರಾಗಲಿ ಬ್ರಹ್ಮಚಾರಿಯಾಗಲಿ ಪೂಜಾ ಕರ್ತರಿಂದ ಹಣ ಕೇಳುವ ಹಾಗಿಲ್ಲ ಎನ್ನುವುದು ಆಡಳಿತ ಮಂಡಳಿಯ ಕಟ್ಟಪ್ಪಣೆ. ಇದು ಸರಿಯೂ ಹೌದು.

ಆದರೆ ಇದು ಧಾರ್ಮಿಕ ಕಾರ್ಯಕ್ರಮ. ಇಲ್ಲಿ ಯಾವುದೇ ಭಕ್ತನು ತಾನು ಸಲ್ಲಿಸಿದ ಸೇವೆಯ ನಂತರ ಅರ್ಚಕರಿಗೆ ಸಂಭಾವನೆ ಕೊಟ್ಟು ಅವರಿಂದ ಮಂತ್ರಾಕ್ಷತೆಯನ್ನು ಪಡೆಯುವುದು ಧಾರ್ಮಿಕ ಪರಂಪರೆಯ ಭಾಗವಾಗಿದೆ. ಜೊತೆಗೆ ಹಸ್ತೋದಕದ ಮೂಲಕ ಊಟ ಬಡಿಸುವುದು ಕೂಡ ಅದರ ಭಾಗವಾಗಿರುತ್ತದೆ.

ಆದ್ರೆ ಇದ್ಯಾವುದನ್ನು ಮಾಡಲಾಗದಿದ್ರೆ, ಸೇವೆ ಮಾಡಿಸುವಾತನಿಗೆ ಫಲ ಇಲ್ಲ ಅನ್ನುವ ತಿಳುವಳಿಕೆ ಹೊಂದಿದವರು ಇದ್ದಾರೆ. ಇದರಿಂದ ಇರುಸು ಮುರುಸು ಆಗುತ್ತದೆ. ಇದು ಭಕ್ತರರ ವಲಯದಲ್ಲಿರೋ ಗೊಂದಲ.

ಒಟ್ಟಿನಲ್ಲಿ ಭಕ್ತರು ಮತ್ತು ಪುರೋಹಿತರು ಇಬ್ಬರವಲಯದಲ್ಲೂ ಈ ಗೊಂದಲ ಆಗಿದ್ದು ನಿಜ. ಆದ್ರಿಲ್ಲಿ ಪುರೋಹಿತರು ಒತ್ತಡ ಹೇರುವ ಹಾಗಿಲ್ಲ. ಡಿಮ್ಯಾಂಡ್ ಮಾಡುವ ಹಾಗಿಲ್ಲ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯೇ ಯೋಗ್ಯ ತೀರ್ಮಾನ ಕೈಗೊಳ್ಳಬೇಕು. ಭಕ್ತರ ಮನದಲ್ಲಿ ಯಾವುದೇ ಅಸoತೃಪ್ತಿಯ ಭಾವನೆ ಮೂಡದಂತೆ ನೋಡಿಕೊಳ್ಳಬೇಕು…..ಅದಕ್ಕಾಗಿ ಒಬ್ಬರನ್ನು ನೇಮಿಸಿಕೊಂಡು ಪೂಜಾ ಸ್ಥಳದಲ್ಲಿಯೇ ಪುರೋಹಿತರಿಗೆ ನೀಡುವ ದಕ್ಷಿಣೆ, ಬ್ರಾಹ್ಮಚಾರಿಗೆ ನೀಡುವ ದಕ್ಷಿಣೆಯನ್ನು ಭಕ್ತರ ಕೈನಿಂದಲೇ ನೀಡಿಸಿದರೆ ಒಳ್ಳೆಯದು ಅನ್ನುವುದು ಅನೇಕ ಹಿರಿಯರ ಅನಿಸಿಕೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
🚨 ದೇಶಾದ್ಯಂತ ಉಗ್ರ ಜಾಲದ ಮೇಲೆ ದೊಡ್ಡ ದಾಳಿ: ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಸೇರಿದಂತೆ 7 ರಾಜ್ಯಗಳಲ್ಲಿ 12 ಮಂದಿ ಬಂಧನ — ಯುವಕರಿಗೆ ಎಚ್ಚರಿಕೆ!
ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?