📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!

    ಮಂಗಳೂರು ದಕ್ಷಿಣ ಕನ್ನಡದ ಕರಾವಳಿ ಜನತೆಗೆ ತ್ವರಿತ ಮತ್ತು ಸುಲಭ ನ್ಯಾಯದಾನ ದೊರಕಿಸುವ ದೃಷ್ಟಿಯಿಂದ ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರಿನಲ್ಲಿ ಸ್ಪಷ್ಟವಾಗಿ ಆಗ್ರಹಿಸಿದ್ದಾರೆ.

    ಮುಖ್ಯಮಂತ್ರಿ ಅವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತಾರ್ಹವಾಗಿದ್ದು, ಇದು ದೀರ್ಘಕಾಲದ ಜನಹಿತದ ಹೋರಾಟಕ್ಕೆ ದೊರೆತ ಮಹತ್ವದ ಮಾನ್ಯತೆ ಆಗಿದೆ. ಆದರೆ ಇಂತಹ ಸಂದರ್ಭದಲ್ಲಿ ಮಂಗಳೂರಿನ ಬದಲು ಬೇರೆ ಜಿಲ್ಲೆಯಲ್ಲಿ ಸಂಚಾರಿ ಪೀಠ ಆರಂಭಿಸಬೇಕು ಎಂಬ ಆಗ್ರಹಗಳು ನ್ಯಾಯಸಮ್ಮತವಲ್ಲ ಹಾಗೂ ಕರಾವಳಿ ಜನರ ನ್ಯಾಯದ ಹಕ್ಕಿಗೆ ವಿರುದ್ಧವಾಗಿವೆ ಎಂದು ಅವರು ಹೇಳಿದರು.

    ಮಂಗಳೂರು ವಕೀಲರ ಸಂಘವು ಹಲವು ವರ್ಷಗಳಿಂದ ಈ ಬೇಡಿಕೆಯನ್ನು ನಿರಂತರವಾಗಿ ಮುಂದಿಟ್ಟು ಹೋರಾಟ ನಡೆಸುತ್ತಿದ್ದು, ಇದು ಸಂಪೂರ್ಣವಾಗಿ ರಾಜಕೀಯ ರಹಿತ ಮತ್ತು ಜನಪರ ಹೋರಾಟವಾಗಿದೆ. ಈ ಹೋರಾಟದ ಪ್ರತಿಯೊಂದು ಹಂತದಲ್ಲೂ ವಕೀಲರ ಸಂಘದ ಜೊತೆ ನಿಂತು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಗಿದೆ. ಜೊತೆಗೆ ವೈಯಕ್ತಿಕವಾಗಿ ಹಾಗೂ ವಿಧಾನಸಭಾ ಅಧಿವೇಶನದಲ್ಲೂ ಸರ್ಕಾರವನ್ನು ಹಲವು ಬಾರಿ ಈ ಕುರಿತು ಒತ್ತಾಯಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

    Also Read  ಶಿಕ್ಷಕರು ಹೊಡೆಯುತ್ತಾರೆಂಬ ಭಯಕ್ಕೆ ಮನೆ ಬಿಟ್ಟ 9ನೇ–10ನೇ ತರಗತಿ ವಿದ್ಯಾರ್ಥಿನಿಯರು..!ಎಲ್ಲಿದ್ದರು ಗೊತ್ತಾ..!

    ಕರಾವಳಿ ಭಾಗದ ಜನರಿಗೆ ವೇಗವಾದ ನ್ಯಾಯದಾನ ವ್ಯವಸ್ಥೆ ಒದಗಿಸಲು ಮಂಗಳೂರಿನಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠವನ್ನು ತಕ್ಷಣ ಸ್ಥಾಪಿಸಬೇಕೆಂಬುದು ತಮ್ಮ ಸ್ಪಷ್ಟ ಮತ್ತು ಅಚಲವಾದ ಆಗ್ರಹವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

    #: #Mangalore #DakshinaKannada #HighCourtBench #JusticeForCoast #LawAndJustice #KaravaliVoice

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
    ಕರ್ನಾಟಕ ಬಂದ್ LIVE: ಪ್ರತಿಭಟನಾಕಾರರು ವಶಕ್ಕೆ, ರಾಜ್ಯಾದ್ಯಂತ ಬಿಗಿ ಭದ್ರತೆ; ಶಾಲೆ, ಬ್ಯಾಂಕ್, ಬಸ್ ಸೇವೆ ಎಂದಿನಂತೆ….!
    ಒಬ್ಬನೇ ಯುವಕ… ಕೈಯಲ್ಲಿ ಗ್ಲೌಸ್, ಮನದಲ್ಲಿ ಸಂಕಲ್ಪ! ‘ಬಿಟ್ಟು ತಬಾಹಿ’ಗೆ ದೇಶದ ಸಲಾಂ
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
    ಬಿಹಾರದಲ್ಲಿ ಭೀಕರ ನೆರೆ: 12 ಜಿಲ್ಲೆಗಳ 22 ಲಕ್ಷ ಜನ ಸಂಕಷ್ಟದಲ್ಲಿ; ಗಂಗಾ ಅಪಾಯದ ಮಟ್ಟ ಮೀರಿ ಹರಿವು
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಚಕ್ರಬಡ್ಡಿ ಹೆಸರಿನಲ್ಲಿ ಮಹಿಳೆಗೆ ಕಿರುಕುಳ: ₹9.37 ಲಕ್ಷ ಬಾಕಿ ಎಂದು ಬೆದರಿಕೆ ಆರೋಪ
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಉಮ್ಮತ್ತಿ ಹಣ್ಣು ಆನ್‌ಲೈನ್‌ನಲ್ಲೂ ಸಿಗುತ್ತಾ? ಗ್ರಾಹಕರೇ ಎಚ್ಚರ!
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
    ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ
    ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
    ‘ಮೈ ಭಾರತ್’-ದಕ್ಷಿಣ ಕನ್ನಡದ ಯುವ(ಕ/ತಿ)ಯರೇ, ರಾಷ್ಟ್ರಮಟ್ಟದ ವೇದಿಕೆಗೆ ಇದು ನಿಮ್ಮ ಅವಕಾಶ!
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ
    ಆರ್‌ಸಿಬಿ ಎದುರಿಸಲು ರಾಯಲ್ಸ್ ರೆಡಿ??: ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಬಿಹಾರದ ಬಾಲಕ-ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚಿದ ಆ 29 ಎಸೆತಗಳ ರುದ್ರತಾಂಡವ!
    ಮೀನು ಮಾರುವ ಮಹಿಳೆಯರ ಮೇಲೆ ಹಲ್ಲೆ :ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಭರ್ಜರಿ ಒದೆ
    ಕಾಕ್ರೋಜ್ ಎಫೆಕ್ಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಮುಖ  ಬದಲಾವಣೆ.
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ