📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…

    ಪಶ್ಚಿಮ ಬಂಗಾಳ ಚುನಾವಣೆ ಮುಗಿದು, ಬಿಜೆಪಿಯು ದಿಗ್ವಿಜಯ ಸಾಧಿಸಿದ್ದು ಮುಗಿದು ಹೋದ ಅಧ್ಯಾಯ. ಇನ್ನೇನು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಆದರಿಲ್ಲಿ ಆಗ್ತಿರೋದೇನು? ಬಿಜೆಪಿ ಜಯಗಳಿಸುತ್ತಿದ್ದಂತೆಯೇ ಆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ನೇತೃತ್ವದಲ್ಲಿ ಯಥೇಚ್ಛವಾಗಿ ಗುಂಡಾಗಿರಿ ಪ್ರಾರಂಭಿಸಿದ್ದಾರೆ. ಬಿಹಾರದ ಜಂಗಲ್ ರಾಜ್, ಟಿ ಎಂ ಸಿಯ  ಗುಂಡಾಗಿರಿ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದ ಬಿಜೆಪಿಯು ಮಾಡುತ್ತಿರುವುದೇನು? ತ್ರುಣಮೂಲ ಮೂಲ ಕಾಂಗ್ರೆಸ್ ನ ಕಚೇರಿಯನ್ನೇ ದ್ವಂಸ ಗೊಳಿಸಿರುವ ಬಿಜೆಪಿಯ ನಡೆ, ಆ ಪಕ್ಷಕ್ಕೆ ಶೋಭೆ ತರುವಂತದ್ದೆ. ವ್ಯತ್ಯಾಸ ಏನು ಉಳಿಯಿತು ಎಂಬ ಪ್ರಶ್ನೆಯು ಈಗ ಗೆಲ್ಲಿಸಿದ ಮತದಾರರಲ್ಲಿ ಏಳಲು ಪ್ರಾರಂಭಿಸಿದೆ. ಸಂಸ್ಕಾರ, ರಾಷ್ಟ್ರಪ್ರೇಮ, ಧರ್ಮದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಾ ಬಂದಿದ್ದ ಬಿಜೆಪಿಯು ತನ್ನ ಗೆಲುವಿನ ಸಂಭ್ರಮವನ್ನು ಈ ರೀತಿಯಲ್ಲಿ ಹಿಂಸಾಚಾರಕ್ಕೆ ಬದಲಾಯಿಸಿದ್ದು ಅಕ್ಷಮ್ಯವಲ್ಲದೆ ಬೇರೇನೂ ಅಲ್ಲ.

    ಕೇಂದ್ರ ಸಚಿವ ಮಜೂಮ್ದಾರ್

    ಈ ವಿಚಾರಕ್ಕೆ ತತಕ್ಷಣವೇ ಬಿಜೆಪಿಯ ಕೇಂದ್ರ ನಾಯಕರು ಎಚ್ಚರಿಕೆಯ ಸಂದೇಶವನ್ನು ನೀಡುತ್ತಾರೆ ಎಂದು ಭಾವಿಸಿದ್ದರೆ, ಯಾರೊಬ್ಬರೂ ಮಾತನಾಡಲಿಲ್ಲ. ಆದರೆ ಕೇಂದ್ರ ಸಚಿವ ಮಜುನ್ದಾರ್, ಬಿಜೆಪಿ ಕಾರ್ಯಕರ್ತರಿಗೆ ಮನವಿಯ ರೂಪದ ಸಂದೇಶ ನೀಡಿದ್ದು ಉತ್ತಮ ಬೆಳವಣಿಗೆಯಾಗಿದೆ. ನಾವು ರಾವಣನ ಅನುಯಾಯಿ ಅಲ್ಲ, ರಾಮಭಕ್ತರು ನಾವು. ನಮ್ಮಿಂದ ಈ ರೀತಿಯ ಹಿಂಸಾಚಾರ ಸಲ್ಲದು. ಟಿಎಂಸಿಯವರು ಮಾಡಿದ ಕೆಲಸವನ್ನು ನಾವು ಮಾಡಿದರೆ ನಮಗೂ ಅವರಿಗೂ ವ್ಯತ್ಯಾಸವೇನು? ರಾಜ್ಯಕ್ಕೆ ಉತ್ತಮ ಆಡಳಿತ ಕೊಡುವ ಹಾಗೂ ರಾಜ್ಯದ ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡುವ ಕೆಲಸ ಮಾಡೋಣ ಎಂಬ ಸಂದೇಶವನ್ನು ನೀಡಿರುವಂತದ್ದನ್ನು ಶ್ಲಾಘಿಸಲೇಬೇಕು.

    ಇನ್ನು ಮಮತಾ ಬ್ಯಾನರ್ಜಿ, ಈ ಸೋಲನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಆದರೆ ಬೇರೆ ದಾರಿಯೂ ಅವರಿಗಿಲ್ಲ. ಆದ್ರೂ ಸಹ, ಇಡೀ ದೇಶಕ್ಕೆ ದೊಡ್ಡ ಮೆಸೇಜ್ ಪಾಸ್ ಮಾಡುವ ಉದ್ದೇಶದಿಂದಲೇ ಮಮತಾ ಬ್ಯಾನರ್ಜಿ ಹೊಸ ವರಸೆಯನ್ನು ಶುರುವಿಟ್ಟು ಕೊಂಡಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಈ ಚುನಾವಣೆಯು ಪಾರದರ್ಶಕವಾಗಿ ನಡೆದಿಲ್ಲ. ಬಿಜೆಪಿ ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರು ಸೇರಿಕೊಂಡು ಅವರಿಗೆ ಬೇಕಾದ ಹಾಗೆ ಮಾಡಿದಂತಹ ಚುನಾವಣೆ ಇದು ಅಷ್ಟೇ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಾನು ರಾಜೀನಾಮೆ ಕೊಡುವುದಿಲ್ಲ ಅಂತ ಹೊಸವರ ಸೆ ಶುರು ಮಾಡಿದ್ದಾರೆ.

    Also Read  ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.

    ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೂ ಸಹ, ಅವರನ್ನು ರಾಜ್ಯಪಾಲರ ಮೂಲಕ ವಜಾ ಗೊಳಿಸಿ ಹೊಸ ಸರ್ಕಾರದ ಆಡಳಿತಕ್ಕೆ ಅವಕಾಶ ಮಾಡಿಕೊಡುವುದು ಖಚಿತ. ಇದು ಸ್ವತಹ ಮಮತಾ ಬ್ಯಾನರ್ಜಿ ಅವರಿಗೂ ಗೊತ್ತು. ಆದ್ರವರು, ಚುನಾವಣಾ ಆಯೋಗ ನಡೆದುಕೊಂಡ ರೀತಿ, ಬಿಜೆಪಿಯು ಆಯೋಗವನ್ನು ಬಳಸಿಕೊಂಡ ರೀತಿ ಎರಡನ್ನೂ ದೇಶದ ಜನರ ಬಳಿಗೆ ತಲುಪಿಸುವ ಕಾರಣಕ್ಕಾಗಿಯೇ ಈ ವರಸೆ ಶುರು ಹಚ್ಚಿಕೊಂಡಿದ್ದಾರೆ. ಇದು ತಪ್ಪಾ ಅಂದರೆ ತಪ್ಪಲ್ಲ. ಇದು ಸರಿಯಾ ಅಂದರೆ ಸರಿಯೂ ಅಲ್ಲ. ಹಾಗಿದ್ರೆ ಮುಂದೇನು?

    ಹಿರಿಯ ವಕೀಲರಾದ ಜಟ್ಮಲಾನಿಯವರು ಇದ್ದಕ್ಕಿದ್ದಂತೆಯೇ ಮಾತು ಶುರು ಮಾಡಿದ್ದಾರೆ. ಆ ಮಾತಿನ ಹಿಂದೆ, ಮುಂದೆನಾಗುತ್ತೆ ಅನ್ನೋದರ ಮುನ್ಸೂಚನೆ ಇದೆ. ಜೆಟ್ಮಲಾನಿ ಅವರು, ಮಮತಾ ಬ್ಯಾನರ್ಜಿ ರಾಜಿನಾಮೆಯನ್ನು ಕೊಡದಿದ್ದರೆ ಅವಳನ್ನು ಒದ್ದೋಡಿಸಬೇಕು ಅಂತ ಕರೆ ನೀಡಿದ್ದಾರೆ. ಇಷ್ಟು ದಿನ ಈ ವಕೀಲರು ಎಲ್ಲಿದ್ದರೋ ಗೊತ್ತಿಲ್ಲ, ಆದರೆ ಈಗವರ ಈ ಒಂದು ಸ್ಟೇಟ್ಮೆಂಟ್ ಇಡೀ ದೇಶಕ್ಕೆ ಅವರ ಪರಿಚಯವನ್ನು ಮಾಡುತ್ತಿದೆ. ಏನೇ ಇರಲಿ, ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಿ ಚುನಾವಣಾ ಆಯೋಗ ಹಾಗೂ ಬಿಜೆಪಿಯ ವಿರುದ್ಧ ಹೋರಾಟ ಮಾಡಿಕೊಳ್ಳಬಹುದು. ಅದು ಬಿಟ್ಟು ರಾಜೀನಾಮೆ ಕೊಡುವುದಿಲ್ಲ ಎಂದು ಪಟ್ಟು ಹಿಡಿಯುವಂತದ್ದು, ಬಲವಂತವಾಗಿ ಅವರನ್ನು ವಜಾಗೊಳಿಸುವಂಥದ್ದು ಇತಿಹಾಸದ ಕಪ್ಪುಪುಟದಲ್ಲಿ ಅವರನ್ನು ಉಳಿಯುವಂತೆ ಮಾಡುತ್ತದೆ. ಇದು ಮರ್ಯಾದೆಯ ರಾಜಕಾರಣವೂ ಆಗುವುದಿಲ್ಲ. ನಿಜ, ಇವತ್ತಿನ ರಾಜಕಾರಣದಲ್ಲಿ ಮರ್ಯಾದೆ ಹಾಗೂ ನೈತಿಕತೆಗೆ ಬೆಲೆಯೇ ಇಲ್ಲ. ಆದ್ರೂ ಅಲ್ಪ ಸ್ವಲ್ಪವಾದರೂ ಉಳಿಸಿಕೊಳ್ಳಬೇಕು ಎಂದರೆ, ಮಮತಾ ಬ್ಯಾನರ್ಜಿ ಮೊದಲಿಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕು. ಆನಂತರ ಹೋರಾಟ ಮಾಡಿಕೊಳ್ಳಬಹುದು.

    Also Read  ಮುಂಬೈ ಮಳೆ ಅವಾಂತರ: ಒಂದು ನಗರವೇ ಜಲಾವೃತ... ದುರಂತ, ಮಾನವೀಯತೆ ಮತ್ತು ಹೋರಾಟದ ಹಲವು ಮುಖಗಳು

    ಹೋಗ್ಲಿ, ಭಾರತೀಯ ಜನತಾ ಪಕ್ಷವು ತನ್ನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಹೇಗೆ ವ್ಯವಸ್ಥಿತವಾಗಿ ಮಾಡುತ್ತದೆಯೋ, ಆ ರೀತಿಯಲ್ಲಿ ಮಮತಾ ಬ್ಯಾನರ್ಜಿಗಾಗಲಿ ಅಥವಾ ಪ್ರತಿಪಕ್ಷದ ಯಾವುದೇ ನಾಯಕರಿಗೆ ಸಾಧ್ಯವೇ? ಈ ಕ್ಷಣಕ್ಕೆ ಅದು ಸಾಧ್ಯವಿಲ್ಲ, ಬಿಜೆಪಿಯ ಮಾಧ್ಯಮ ಪ್ರಪಂಚ ಬಹಳ ಬಲಿಷ್ಠವಾಗಿದೆ ಹಾಗೂ ಅದನ್ನು ತನ್ನ ಹಿಡಿತದಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದೆ. ಮಮತಾ ಬ್ಯಾನರ್ಜಿಯ ನ್ಯಾಯಯುತ ಹೋರಾಟವನ್ನೂ ಬಿಜೆಪಿಯ ಮಾಧ್ಯಮ ಘಟಕಗಳು, ಜನಸಾಮಾನ್ಯರಿಗೆ ಕೆಟ್ಟ ರೂಪದಲ್ಲಿ ತಲುಪಿಸುವಂತೆ ಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ಸಹ ಮಮತಾ ಬ್ಯಾನರ್ಜಿಗೆನೇ ಬಿಜೆಪಿ ವಿರೋಧಿಯ ಹೋರಾಟಗಾರರು ನೀಡಿದ್ದಾರೆ. ಯಾವುದೇ ಹೋರಾಟ ಮಾಡುವುದಿದ್ದರೂ, ಪಕ್ಷಗಳಲ್ಲಿ ಏಕತೆ ಇರಬೇಕು, ಹಾಗೆಯೇ ತಮ್ಮದೇ ಆದ ಮಾಧ್ಯಮ ಪ್ರಪಂಚವನ್ನು ಸೃಷ್ಟಿಸಿಕೊಳ್ಳಬೇಕು. ಅದು ಬಿಜೆಪಿ ಮಾಧ್ಯಮವನ್ನು ಸಹ ಹಿಂದಿಕ್ಕಿ ಹೋಗುವ ದಾರ್ಶ್ಯತೆ ಹೊಂದಿರಬೇಕು. ಅದೆಲ್ಲವನ್ನು ಮಾಡಿಕೊಂಡು ಮಮತಾ ಬ್ಯಾನರ್ಜಿ ಹೋರಾಟಕ್ಕಿಳಿಯಬೇಕು. ಅದಿಲ್ಲದಿದ್ದರೆ ಹೋರಾಟ ನಿಷ್ಪ್ರಯೋಜಕವಾಗುತ್ತದೆ. ಸ್ವತಹ ಮಮತಾ ಬ್ಯಾನರ್ಜಿಯವರೆ ವಿಲನ್ ಆಗುತ್ತಾಳೆ. ಸೇಮ್ ಟು ಸೇಮ್ ಕೇಜ್ರಿವಾಲ್. ಕೇಜ್ರಿವಾಲ್ ಉತ್ತಮ ಸರ್ಕಾರ ನೀಡಿಯೂ ಸಹ, ಇವತ್ತು ಅದಪತನದತ್ತ ಹೋಗುತ್ತಿದ್ದಾರೆ. ಅದಕ್ಕೆ ಕಾರಣ, ಅವರ ವಿರುದ್ಧ ಸೃಷ್ಟಿಯಾದಂತಹ ಭಯಾನಕವಾದಂತಹ ಮಾಧ್ಯಮ ಜಗತ್ತು ಅಂತ, ಅದೇ ಹೋರಾಟಗಾರರು ಹೇಳಿ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

    Also Read  ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!

    ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂಬ ಹೇಳಿಕೆ ಪ್ರಸ್ತುತ ಹೋರಾಟದ ಕಾರಣಕ್ಕೆ ಅತ್ಯವಶ್ಯಕ. ಆದರೆ ಆ ಹೋರಾಟ, ಮಮತಾ ಬ್ಯಾನರ್ಜಿ ಯನ್ನು ನುಂಗಿ ಹಾಕುವ ಸಾಧ್ಯತೆ ಹೆಚ್ಚಿದೆ. ಹೋರಾಟಕ್ಕೂ ಮೊದಲು, ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹಲವು ವಿಂಗಗಳ ಮೂಲಕ ಆ ತಯಾರಿ ಇರಬೇಕಾಗುತ್ತದೆ. ಅದ್ಯಾವುದೂ ಇಲ್ಲದೆ ಏಕಾಏಕಿಯಾಗಿ ಶುರು ಮಾಡಿರುವ ಈ ಹೋರಾಟ ವಾಪಸ್ ಅವರ ಮುಖಕ್ಕೆ ಮಸಿಯಾಗಿ ಬಳಿಯುತ್ತದಯೇ ಹೊರತು ಬೇರೆ ಯಾವುದೇ ಪ್ರಯೋಜನಕ್ಕೆ ಬರುವ ಕೆಲಸ ಮಾಡುವುದಿಲ್ಲ. ಆದರೆ, ಕಾಂಗ್ರೆಸ್ನ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿಯ ಸೋಲನ್ನು ಪಕ್ಷದ ಯಾವುದೇ ಕಾರ್ಯಕರ್ತರು ಸಂಭ್ರಮಿಸಬಾರದು ಅಂತ ಸಂದೇಶ ನೀಡಿರುವಂತದ್ದು ಒಳ್ಳೆಯ ಬೆಳವಣಿಗೆ. ಆದರೆ, ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಮೈತ್ರಿ ಗೆ ಮುಳ್ಳಾಗುವಂತೆ ವರ್ತಿಸುತ್ತಿರುವುದು ಪಕ್ಷದ ವಿಶ್ವಾಸಾರ್ಹತೆಗೆ ಚ್ಯುತಿಯನ್ನುಂಟು ಮಾಡುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಕೂಡ ಈ ವಿಚಾರದಲ್ಲಿ ಒಂದೇ ಮಾದರಿಯಂತೆ ಕಾಣುತ್ತಿದೆ ಎಂಬ ಮಾತುಗಳು ತಮಿಳುನಾಡಿನಾದ್ಯಂತ ಕೇಳಿ ಬರಲು ಪ್ರಾರಂಭಿಸಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ನೂತನ ಪಕ್ಷ ಟೀವಿಕೆ ಅಧಿಕಾರದ ಹತ್ತಿರಕ್ಕೆ ಬಂದು ನಿಂತಿದೆ. ಆದರೆ ಅಧಿಕಾರ ಪಡೆಯಲು 10 ಶಾಸಕರ ಅಗತ್ಯತೆ ಇದೆ. ಕಾಂಗ್ರೆಸ್ ಇದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿ ನೂತನ ಸರ್ಕಾರದ ಸಹಭಾಗಿಯಾಗಲು ಯೋಚನೆ ಮಾಡಿದೆ. ಆದರೆ ಚುನಾವಣೆಯಲ್ಲಿ , DMK ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ಮರೆಯಲಿಕ್ಕೆ ಸಾಧ್ಯವಾ? ಆ ಪಕ್ಷದ ಸಹಾಯದಿಂದಲೇ ಐದು ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ ಎಂಬುದನ್ನು ಮರೆಯಬಾರದು. ಕಾಂಗ್ರೆಸ್ ಇಂತಹ ಸಮಯದಲ್ಲಿ ಮನೆಯ ಯಜಮಾನನ ಪಾತ್ರವನ್ನು ನಿರ್ವಹಿಸಬೇಕಿತ್ತು.

       –ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
    ‘ಮೈ ಭಾರತ್’-ದಕ್ಷಿಣ ಕನ್ನಡದ ಯುವ(ಕ/ತಿ)ಯರೇ, ರಾಷ್ಟ್ರಮಟ್ಟದ ವೇದಿಕೆಗೆ ಇದು ನಿಮ್ಮ ಅವಕಾಶ!
    ದೆಹಲಿ ಭಾರೀ ದುರಂತದಿಂದ ಪಾರು!: ಏರ್ ಇಂಡಿಯಾ ವಿಮಾನಗಳು ಜಖಂಗೊಂಡರೂ ತಪ್ಪಿದ ಪ್ರಾಣಾಪಾಯ!
    “ಮಾಜಿ RSS ಕಾರ್ಯಕರ್ತನಿಗೆ ಮುಸ್ಲಿಂ ಮಹಿಳೆ ಅಗ್ನಿಸ್ಪರ್ಶ”ವಾಸ್ತವ ಏನು?ಮಾನವೀಯತೆಗೆ ಧರ್ಮದ ಗಡಿ ಇಲ್ಲ!
    ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
    🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
    ಸ್ಪೀಕರ್ ಯುಟಿ ಖಾದರ್‌ಗೆ ಮುತ್ತಿಗೆ: 11 ಜನರ ವಿರುದ್ಧ FIR
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    ಕಾರು ಸ್ಟೀರಿಂಗ್ ಹಿಡಿದ ಬಾಲಕಿ… ಪಕ್ಕದಲ್ಲೇ ಕುಳಿತಿದ್ದ ಪೊಲೀಸ್ ಅಧಿಕಾರಿ! ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಪ್ರಶ್ನೆ
    ಹಾಸನದಲ್ಲಿ ಮೀಸಲಾತಿ ವಿಚಾರಕ್ಕೆ ವಾಕ್ಸಮರ: ರೇವಣ್ಣ–ಶಿವಲಿಂಗೇಗೌಡ ತಿರುಗೇಟು
    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ನಾಹೀದಾ( ‘ರಾಮಕ್ಕ’)ಗೆ ಧರ್ಮ ಮೀರಿದ ಸೀಮಂತ! ಹಾರೈಸಿದ ಮುಸ್ಲಿಂ ಸಮುದಾಯ!ಜನರ ಪ್ರೀತಿಯ ಉಡುಗೊರೆ…
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    21 ದಿನ ಹಸಿದ ಹೋರಾಟಗಾರ ಆಸ್ಪತ್ರೆಗೆ..ಸರ್ಕಾರ ಏಕೆ ಇನ್ನೂ ಮೌನ!?????ಯುವಜನರ ಆಕ್ರೋಶದ ಕಟ್ಟೆ ಒಡೆಯುವ ಮೊದಲೇ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ….!!??
    ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
    ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    ದಿಲ್ಲಿಯಲ್ಲಿ ವಾಗ್ದಾಳಿ.. ಗಲ್ಲಿಯಲ್ಲಿ ಒಪ್ಪಂದ?! ದೇಶದ ಅತ್ಯಂತ ಕಾಂಟ್ರವರ್ಸಿಯಲ್ ಬಿಡ್ ತೆರೆಮರೆಯಲ್ಲಿ ನಡೆದ ಆ ಒಂದು ನಡೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾಕೆ?!
    ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ತಿರುಪತಿಯಲ್ಲಿ ಒಂದಿಡೀ ಕುಟುಂಬವೇ ನಾಶ!
    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!