📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಅನಾಥ ಪುಟ್ಟ ಬಾಲಕಿಯರ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ:ರಾಕ್ಷಸ ಮನಸ್ಸುಗಳಿಗೆ ಅಂತ್ಯ ಯಾವಾಗ?

    ಬೆಂಗಳೂರಿನ ಮನ ಕಲುಕುವ ದುರಂತ ಅನಾಥ ಬಾಲಕಿಯರ ಬದುಕನ್ನು ನರಕ ಮಾಡಿದ ಮನುಷ್ಯರ ಮುಖವಾಡ..ಕಾನೂನಿಗೆ ಸವಾಲಾದ ಕ್ರೌರ್ಯ…ಘಟನೆ ಕೇವಲ ಒಂದು ಅಪರಾಧ ಕಥೆಯಲ್ಲ — ಇದು ಸಮಾಜವನ್ನೇ ಮನಸ್ಸನ್ನೇ ನಡುಗಿಸುವ ಮನುಷ್ಯತ್ವದ ಸೋಲು.


    ತಾಯಿ ಇಲ್ಲ… ತಂದೆ ಮದ್ಯದ ವ್ಯಸನದಿಂದ ಮೃತಪಟ್ಟವರು… ಬದುಕಿನಲ್ಲಿ ಆಧಾರವೇ ಇಲ್ಲದ 11 ಮತ್ತು 12 ವರ್ಷದ ಎರಡು ಪುಟ್ಟ ಅನಾಥ ಬಾಲಕಿಯರು.ನಂತರ್ರದ ದಿನಗಳಲ್ಲಿ ತಮ್ಮ ಚಿಕ್ಕಪ್ಪನ ಜೊತೆ ವಾಸಿಸುತ್ತಿದ್ದರು.ಆದರೆ ಚಿಕ್ಕಪ್ಪನೇ ಹಣದ ಲಾಲಸೆಯಿಂದ ಈ ದುಷ್ಕೃತ್ಯಕ್ಕೆ ಸಹಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರಿಗೆ ರಕ್ಷಣೆ ನೀಡಬೇಕಿದ್ದ ದೊಡ್ಡವರೇ, ಅವರ ನಿರ್ಗತಿಕತೆಯನ್ನು ದುರುಪಯೋಗಪಡಿಸಿಕೊಂಡು, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅಮಾನವೀಯ ಹಿಂಸೆ ನಡೆಸಿದ್ದಾರೆ ಎನ್ನುವುದು ಕೇಳಿದ ಕ್ಷಣವೇ ಹೃದಯ ಒಡೆಯುತ್ತದೆ.

    ಆರೋಪಿಗಳು:

    • 29 ವರ್ಷದ ಕಿರಣ್ ಕುಮಾರ್ ನಾಯಕ್, ಕಾಗ್ಗಲಿಪುರ ಸಮೀಪದ ಕೈದಾಳಿಪಾಳ್ಯದ ಪಶುಸಂಗೋಪಕ
    • 20 ವರ್ಷದ ಅದಿತ್ಯ ಎಂ.ಕೆ, ಚನ್ನಪಟ್ಟಣದ ಸ್ವಿಮ್ಮಿಂಗ್ ಪೂಲ್ ನಿರ್ವಹಣಾ ಸಿಬ್ಬಂದಿ
    Also Read  ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ....

    ಈ ಇಬ್ಬರು ಆರೋಪಿಗಳು ಬಾಲಕಿಯರ ಮೇಲೆ ಸುಮಾರು ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿ ಕೃತ್ಯಗಳನ್ನು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದೂ ಬೆಳಕಿಗೆ ಬಂದಿದೆ.ಪೊಲೀಸರು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು , ಅವುಗಳಲ್ಲಿ ಅಮಾನುಷ ಕೃತ್ಯಗಳ ದಾಖಲೆಗಳಿವೆ ಎಂದು ತಿಳಿಸಲಾಗಿದೆ.

    ಮಕ್ಕಳ ಅಳುವಿನ ಹಿಂದೆ ಹಣ ಕಂಡವರು, ಅವರ ಭಯದ ಹಿಂದೆ ಕಾಮ ಕಂಡವರು ಇವರು “ಮಾನವರು” ಎನ್ನಿಸಿಕೊಳ್ಳಲು ಅರ್ಹರೇ?
    ಪ್ರಾಣಿಗಳು ಹಸಿವಿಗಾಗಿ ಬೇಟೆಯಾಡುತ್ತವೆ. ಆದರೆ ಇಂತಹವರು ನಿರಪರಾಧ ಮಕ್ಕಳ ಬದುಕನ್ನೇ ತುಳಿದು ತಮ್ಮ ವಿಕೃತ ಮನಸ್ಸಿಗೆ ಆಹಾರ ಮಾಡಿದ್ದಾರೆ.

    “ಪ್ರಾಣಿಗಳು ಮನುಷ್ಯರಿಗಿಂತ ಮೇಲು; ಅವುಗಳಿಗೆ ಕನಿಷ್ಠ ಕ್ರೌರ್ಯದ ನಾಟಕವಿಲ್ಲ.”

    ಈ ಪುಟ್ಟ ಬಾಲಕಿಯರು ಕೇವಲ ದೇಹದ ನೋವು ಅನುಭವಿಸಿಲ್ಲ.
    ಅವರ ಬಾಲ್ಯ ಕದಿಯಲ್ಪಟ್ಟಿದೆ.
    ಅವರ ನಂಬಿಕೆ ಒಡೆದಿದೆ.
    ಅವರ ನಗುವೇ ಮೌನವಾಗಿದೆ.

    Also Read  ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..

    ಅವರನ್ನು ರಕ್ಷಿಸಬೇಕಿದ್ದ ಸಮಾಜವೇ ತಡವಾಗಿ ಎಚ್ಚರಗೊಂಡಿದೆ ಎಂಬ ನೋವು ಇನ್ನೂ ದೊಡ್ಡದು.
    ಒಬ್ಬ ಸಂಬಂಧಿ ಹಣಕ್ಕಾಗಿ ಮಕ್ಕಳನ್ನು ಬಿಟ್ಟುಕೊಟ್ಟಿದ್ದಾನೆ ಎನ್ನುವ ಆರೋಪ ಸಮಾಜದ ನೈತಿಕ ಪತನಕ್ಕೆ ಭಯಾನಕ ಉದಾಹರಣೆ.

    ಇಂತಹ ಅಪರಾಧಿಗಳಿಗೆ ಸಾಮಾನ್ಯ ಶಿಕ್ಷೆ ಸಾಕಾಗುವುದಿಲ್ಲ,ಮಕ್ಕಳ ಮೇಲೆ ದೌರ್ಜನ್ಯ ನಡೆಸಿ, ಅದನ್ನು ಚಿತ್ರೀಕರಿಸಿ ಹರಡಿಸುವವರ ವಿರುದ್ಧ:

    • ಜೀವಾವಧಿ ಶಿಕ್ಷೆ,
    • ಕಠಿಣ ಮಾನಸಿಕ ಮತ್ತು ಕಾನೂನು ಕ್ರಮ,
    • ಸಮಾಜದಿಂದ ಸಂಪೂರ್ಣ ಬಹಿಷ್ಕಾರ,ಅತ್ಯಗತ್ಯ
    • ಮಕ್ಕಳ ಸುರಕ್ಷತೆ ಕುರಿತ ವಿಶೇಷ ವೇಗದ ನ್ಯಾಯಾಲಯಗಳು ಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.

    ಶಿಕ್ಷೆ ಆದರೆ ಮಾತ್ರ ಸಾಕಾಗುವುದಿಲ್ಲ.
    ಈ ಇಬ್ಬರು ಬಾಲಕಿಯರ ಬದುಕು ಮತ್ತೆ ಬೆಳಕು ಕಾಣಬೇಕು.ಅವರಿಗೆ ಸುರಕ್ಷಿತ ಆಶ್ರಯ, ಶಿಕ್ಷಣ, ಮನೋವೈದ್ಯಕೀಯ ಸಹಾಯ, ಪ್ರೀತಿ ಮತ್ತು ಗೌರವ ನೀಡುವುದು ಸಮಾಜದ ಕರ್ತವ್ಯ.

    ಪ್ರತಿ ಬಾರಿ ಇಂತಹ ಸುದ್ದಿ ಬರುತ್ತಿದ್ದಂತೆ ನಾವು ಕೋಪಗೊಳ್ಳುತ್ತೇವೆ.ಕೆಲ ದಿನಗಳ ನಂತರ ಮರೆತುಬಿಡುತ್ತೇವೆ.ಆದರೆ ಆ ಮಕ್ಕಳ ಗಾಯಗಳು ಜೀವನಪೂರ್ತಿ ಉಳಿಯುತ್ತವೆ.

    Also Read  ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ

    ಈ ಘಟನೆ ನಮ್ಮೆಲ್ಲರಿಗೂ ಒಂದು ಕಠಿಣ ಪ್ರಶ್ನೆ ಕೇಳುತ್ತಿದೆ:

    “ಮಕ್ಕಳನ್ನು ರಕ್ಷಿಸಲು ವಿಫಲವಾದ ಸಮಾಜ ನಿಜವಾಗಿಯೂ ಅಭಿವೃದ್ಧಿಯ ಸಮಾಜವೇ?”

    ನಿರಪರಾಧ ಮಕ್ಕಳ ಕಣ್ಣೀರಿನ ಮೇಲೆ ಬದುಕು ಕಟ್ಟಿಕೊಳ್ಳುವ ಮನಸ್ಸುಗಳಿಗೆ ಅಂತ್ಯ ಯಾವಾಗ?
    ಮಾನವೀಯತೆ ಮತ್ತೆ ಗೆಲ್ಲುವ ದಿನ ಯಾವಾಗ?

    ಈ ಪ್ರಶ್ನೆಗೆ ಉತ್ತರ ಕೊಡುವ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ.

    ಸೈಬರ್ ಕಮಾಂಡ್ ಸೆಂಟರ್ (CCC) ಅಧಿಕಾರಿಗಳ ತನಿಖೆಯಿಂದ, ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP) ನೀಡಿದ ಎಚ್ಚರಿಕೆಯ ನಂತರ ಬೆಳಕಿಗೆ ಬಂದಿದೆ. ಕಾಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಪೊಲೀಸರು ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ ಮತ್ತು ತನಿಖೆ ಮುಂದುವರಿದಿದೆ ಎಂದು ಸೈಬರ್ ಕಮಾಂಡ್ ಸೆಂಟರ್ ಡಿಜಿಪಿ ಪ್ರಣಬ್ ಮೋಹಂತಿ ತಿಳಿಸಿದ್ದಾರೆ.

    ##BengaluruCrime #ChildProtection #JusticeForChildren #CyberCrime #HumanRights #StopChildAbuse #JusticeNeeded

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಗೋವಾ ಕ್ಯಾಲಂಗಟ್ ರೆಸಾರ್ಟ್‌ನಲ್ಲಿ ಕರಾವಳಿಯ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ನಾಪತ್ತೆಯಾದ ಆ ಮಹಿಳೆಗಾಗಿ ತೀವ್ರ ಶೋಧ…
    ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    UAEಯಲ್ಲಿ ಉಡುಪಿ ವ್ಯಕ್ತಿಯ ನಿಗೂಢ ಸಾವು – ಪತ್ನಿ, ಮಗ ಎಲ್ಲಿದ್ದಾರೆ?UAE ,ಭಾರತದಲ್ಲಿ?
    Must read…ನಾಗಪ್ರಸನ್ನರ ನ್ಯಾಯಾಲಯದಲ್ಲಿ ‘ಸುಳ್ಳು ಜಾತಿ-ಆದಾಯ ಪ್ರಮಾಣಪತ್ರ ಮುಂದಿಟ್ಟ ಸಾಹುಕಾರ್ ಪುತ್ರಿಗೆ ಕ್ಲಾಸ್! ಅರುಣ್ ಶ್ಯಾಮ್ ವಾದಕ್ಕೆ ನಾಗಪ್ರಸನ್ನರ ಒಂದೊಂದು ಪ್ರಶ್ನೆಯೂ ವ್ಯವಸ್ಥೆಗೆ ಕನ್ನಡಿಯಾಯಿತು!”
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಮಂಗಳೂರು ನಗರದಲ್ಲಿ ಭಾರೀ ಪ್ರಮಾಣದ MDMA ವಶ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ…
    ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
    ಅಮ್ಮಾ ಎದ್ದು ಬಾ… ಕಣ್ಣೀರಾಕಿ ಕರೆದರೂ, ಬರಲಾರದೇ ಒದ್ದಾಡಿದ ಅಮ್ಮ …ದುಬಾರೆ ಶಿಬಿರದಲ್ಲಿ ಮನಕಲುಕುವ ಘಟನೆ-ಆನೆಗಳ ಕಾದಾಟ… ಜೀವ ಕಳೆದುಕೊಂಡ ಮಹಿಳೆ
    ಜುಲೈ 1ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿ…ಪಾಸ್‌ಪೋರ್ಟ್, ರೈಲ್ವೆ, ಕ್ರೆಡಿಟ್ ಕಾರ್ಡ್, ಬ್ಯಾಂಕ್… ಒಂದೇ ದಿನದಲ್ಲಿ ಹಲವು ದೊಡ್ಡ ಬದಲಾವಣೆಗಳು
    ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ
    ಕೊಡಗಿನಲ್ಲಿ ಪ್ರವಾಸಿ ಬಸ್ ಪಲ್ಟಿ20 ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರು; ಜೆಸಿಬಿಯಿಂದ ಬಸ್‌ ರಕ್ಷಣೆ!
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
    ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
    ಆಹಾರ ಬೆಲೆ ಏರಿಕೆ: ಸಾಮಾನ್ಯರ ಅಡಿಗೆ ಮನೆಗೆ ಮತ್ತೆ ಹೊರೆ?
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
    ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
    ತಮಿಳು ರಾಜಕೀಯ ರಣರಂಗದಲ್ಲಿ “ವಿಜಯ”ಗಾಥೆ 118 ದಾಟಿದ TVK  ವಿಜಯ್ ಕೈ ಹಿಡಿದ ಮೈತ್ರಿ ಪಕ್ಷಗಳು!
    UPIಗೆ ಶುಲ್ಕ ಬರಲಿದೆಯೇ? – ಲೋಕಸಭೆಯಲ್ಲಿ ಅಂಗೀಕಾರವಾದ bill ಮಸೂದೆ ಏನು ಹೇಳುತ್ತದೆ?
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
    ಸ್ಮಾರ್ಟ್‌ಫೋನ್ ಅಗ್ಗವಾಗುತ್ತಾ? ಮೊಬೈಲ್ ಖರೀದಿಗೆ ಇದು ‘Wait & Watch’ ಟೈಮ್!