📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ

    ಕುದುರೆಮುಖ ಕಬ್ಬಿಣದ ಅದಿರು ಕಂಪನಿ (KIOCL)ಯನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC) ಜೊತೆ ವಿಲೀನಗೊಳಿಸಿ ಕಾರ್ಮಿಕರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಬಂಡವಾಳ ಹೂಡಿಕೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಗೆ ಭೇಟಿ ನೀಡಿ ಕೇಂದ್ರದ ಅಧೀನದಲ್ಲಿರುವ ಕೈಗಾರಿಕೆಗಳ ಅಭಿವೃದ್ಧಿ ಕಾರ್ಯಗಳನ್ನು ಖುದ್ದು ಪರಿಶೀಲಿಸಿ ಸ್ಥಳೀಯ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ ನೀಡುವಂತೆ ಕೋರಿದರು.

    Also Read  ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.

    ರಾಜ್ಯ ಸರಕಾರವು KIOCLಗೆ ಗಣಿಗಾರಿಕೆಗೆ ಅನುಮತಿ ನೀಡದಿರುವುದರಿಂದ ಕಂಪನಿಯ ಕಾರ್ಯಾಚರಣೆಗೆ ತೀವ್ರ ತೊಡಕಾಗಿದೆ. ಇದರಿಂದ ಕಾರ್ಮಿಕರ ಭವಿಷ್ಯ ಅತಂತ್ರವಾಗಿದೆ. ಈ ಬಗ್ಗೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ರಾಜ್ಯ ಸರಕಾರದ ಮೇಲೆ ಕೇಂದ್ರವು ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದರು

    KIOCL ಅನ್ನು NMDC ಯೊಂದಿಗೆ ವಿಲೀನಗೊಳಿಸುವುದರಿಂದ ಕಂಪನಿಯ ಪುನಶ್ಚೇತನ ಸಾಧ್ಯವಾಗಲಿದೆ ಹಾಗೂ ಕರಾವಳಿ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ದೊರೆಯಲಿದೆ ಎಂದು ಡಾ. ಭರತ್ ಶೆಟ್ಟಿ ಪ್ರತಿಪಾದಿಸಿದರು.

    ಈ ಸಂದರ್ಭದಲ್ಲಿ ಮತ್ತಿತರ ಕೈಗಾರಿಕಾ ಸಮಸ್ಯೆಗಳ ಕುರಿತು ಸಚಿವರೊಂದಿಗೆ ಚರ್ಚಿಸಿ ವಿವರವಾದ ಮನವಿ ಪತ್ರ ಸಲ್ಲಿಸಲಾಯಿತು ಎಂದು ಶಾಸಕರ ಕಚೇರಿಯಿಂದ ಮಾಹಿತಿ ಬಂದಿದೆ.

      COMMENTS

      Login with Gmail to comment

      ಇನ್ನಷ್ಟು ಸುದ್ದಿ

      ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
      “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
      ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
      ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..
      ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
      Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
      ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್…!ಅಪ್ಲಿಕೇಶನ್ ಬ್ಯಾನ್ ಅಲ್ಲ, ವ್ಯವಸ್ಥೆ ಸರಿಪಡಿಸಿ! ಸರ್ಕಾರಕ್ಕೆ ನಿಸರ್ಗ ಅಧಿಕಾರಿಯ ಸಲಹೆ
      ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
      ರಿಲಯನ್ಸ್ ವಿರುದ್ಧ ಇ.ಡಿ ಬಿಗ್ ಹ್ಯಾಮರ್ – ₹1,021 ಕೋಟಿ ಮುಟ್ಟುಗೋಲು
      ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
      ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
      ನಿದ್ದೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದ ಕಟ್ಟಡ ಸಾವು ಆರಕ್ಕೆ..!ದಿಲ್ಲಿ ಪಿಜಿ ದುರಂತ ದೇಶದ ಹಳೆಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆ..!
      ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
      ಲೈಫ್‌ಗಾರ್ಡ್ ಇಲ್ಲದ ಕಡಲಿಗೆ 14ರ ಬಾಲಕ…ಶ್ರೇಯಸ್ ಬಲಿ!
      ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
      “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
      ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
      ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
      ₹5ಕ್ಕೆ ಇಡ್ಲಿ… 56 ವರ್ಷಗಳಿಂದ ಅದೇ ರುಚಿ! 70ರ ಹರೆಯದಲ್ಲೂ ಪ್ರತಿದಿನ 1,500 ಇಡ್ಲಿ ಮಾಡಿ ಜನರ ಮನ ಗೆದ್ದ ಕರ್ನಾಟಕದ ಅನ್ನದಾತ…
      ಶಾಲಾ ಶಿಕ್ಷಕಿಯರ ಹೆಸರಿನಲ್ಲಿ ಡ್ರಗ್ಸ್ ಜಾಲ ..! ತನಿಖೆಯಲ್ಲಿ ಬೆಚ್ಚಿಬೀಳಿಸುವ ಕೊಂಡಿಗಳು ಇನ್‌ಸ್ಟಾಗ್ರಾಮ್‌ನಿಂದ ಗ್ರಾಹಕರ ಸೆಳೆತ, ಗಲ್ಫ್ ನಂಬರ್ ಮೂಲಕ ಬುಕ್ಕಿಂಗ್
      ಭರ್ಜರಿ ಬಿಜೆಪಿ ವಿಜಯೋತ್ಸವ ಬೆಂಗಳೂರಲ್ಲಿ ..!ಪ್ರಧಾನಿ ಮೋದಿ ಬರ್ತಿದ್ದಾರೆ.
      ನಕಲಿ ನಾಣ್ಯಗಳ ‘ಮಹಾ ಜಾಲ’ ಪತ್ತೆ! 3.5 ಕೋಟಿ ಕಾಯಿನ್‌ಗಳ ಹಿಂದೆ ₹70 ಕೋಟಿ ಆಟ
      ಪರಿಸರ ಕಾಪಾಡುವವರೇ ನಿಜವಾದ ಹೀರೋಗಳು! ‘ಇಕೋಪ್ರಿನ್ಯೂರ್ ಅವಾರ್ಡ್ಸ್ 2026’ ಮೂಲಕ ಹಸಿರು ಸಾಧಕರಿಗೆ ಗೌರವ
      ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
      ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
      ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
      ನೈಸ್ ಟೋಲ್ ವಿವಾದ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಖೇಣಿ ತಿರುಗೇಟು.. ಇವರಿಬ್ಬರಲ್ಲಿ ಸತ್ಯವಂತರು ಯಾರು?
      ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
      ಫಾರ್ಮ್-7 ವಿವಾದ ಸ್ಫೋಟ: 52 ಮಂದಿಯ ವಿರುದ್ಧ FIR-ಮತದಾರರ ಹೆಸರು ಅಳಿಸುವ ಆರೋಪಕ್ಕೆ ತನಿಖೆ ಆಗ್ರಹ
      ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ