📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!

    ಮಂಗಳೂರು: ಕಳೆದ 11 ವರ್ಷಗಳಿಂದ ತಲೆಮರೆಸಿಕೊಂಡು ನ್ಯಾಯಾಲಯದ ವಾರಂಟ್‌ಗಳಿಂದ ತಪ್ಪಿಸಿಕೊಳ್ಳುತ್ತಿದ್ದ, ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಾಹುಲ್ ಹಮೀದ್‌ನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವಿರುದ್ಧ ದಿನೇಶ್ ರಾಜ್ ಕೊಲೆ ಪ್ರಕರಣ ಸೇರಿದಂತೆ ಒಟ್ಟು ಆರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಮೂರು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈಗಾಗಲೇ ವಾರಂಟ್ ಹೊರಡಿಸಿತ್ತು. ಹಲವು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆರೋಪಿಯನ್ನು ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

    ಶಾಹುಲ್ ಹಮೀದ್ ವಿರುದ್ಧ ಕಿಡ್ನಾಪ್, ಸುಲಿಗೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ, ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು, ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ.

    Also Read  ರಾಮಮಂದಿರ ಟ್ರಸ್ಟ್‌ನ ಮಹತ್ವದ ಹೇಳಿಕೆ!ಎಲ್ಲಾ ಕಾಣಿಕೆಗಳು ,ದೇಣಿಗೆ,ಚಿನ್ನ-ಬೆಳ್ಳಿ ಸೇರಿ 2,800 ಅಮೂಲ್ಯ ವಸ್ತುಗಳುಸುರಕ್ಷಿತ

    ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಐಪಿಸಿ 307 (ಕೊಲೆ ಯತ್ನ) ಪ್ರಕರಣದಲ್ಲಿ, ಜೈಲಿನಲ್ಲಿದ್ದ ಸಂದರ್ಭದಲ್ಲೇ ಶಶಿಕಿರಣ್ ಎಂಬಾತನನ್ನು ಕೊಲೆ ಮಾಡಲು ಯತ್ನಿಸಿದ ಆರೋಪವೂ ಈತನ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ನರಸಿಂಹ ಶೆಟ್ಟಿಗಾರ್ ಹಾಗೂ ಪೊಳಲಿ ಅನಂತಮೂರ್ತಿ ಕೊಲೆ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದರೂ, ಬಳಿಕ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾನೆ ಎಂಬ ಮಾಹಿತಿಯನ್ನೂ ಪೊಲೀಸರು ನೀಡಿದ್ದಾರೆ.

    ಕಳೆದ 11 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಉದ್ದೇಶಪೂರ್ವಕವಾಗಿ ಗೈರಾಗಿದ್ದ ಹಿನ್ನೆಲೆಯಲ್ಲಿ, ಕೋರ್ಟ್ ಹಲವು ಬಾರಿ ವಾರಂಟ್ ಹಾಗೂ ಪ್ರಖ್ಯಾಪನೆಗಳನ್ನು ಹೊರಡಿಸಿತ್ತು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಶಾಹುಲ್ ಹಮೀದ್ ವಿರುದ್ಧ ಮತ್ತೊಂದು ಹೊಸ ಪ್ರಕರಣ ದಾಖಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

    ##MangaloreCrime #CCB #DineshRajMurderCase #DakshinaKannada #CrimeNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
    ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
    ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
    ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ FIR ..!ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ರಾಜಕೀಯ ಕಾವು ಏರಿಕೆ!
    ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
    ಶೋಕಿ ಜೀವನಕ್ಕೆ ಸ್ಕೀಮ್ ಸ್ಕ್ಯಾಮ್:ಗಿಫ್ಟ್ ಆಸೆ-ದೊಡ್ಡ ಕನಸು ತೋರಿಸಿ, ಹಣದೊಂದಿಗೆ ಪರಾರಿ—ಇದುವೇ ನಕಲಿ ಸ್ಕೀಮ್‌ಗಳ ಅಸಲಿ ಕಥೆ!
    ಅಮ್ಮಾ ಎದ್ದು ಬಾ… ಕಣ್ಣೀರಾಕಿ ಕರೆದರೂ, ಬರಲಾರದೇ ಒದ್ದಾಡಿದ ಅಮ್ಮ …ದುಬಾರೆ ಶಿಬಿರದಲ್ಲಿ ಮನಕಲುಕುವ ಘಟನೆ-ಆನೆಗಳ ಕಾದಾಟ… ಜೀವ ಕಳೆದುಕೊಂಡ ಮಹಿಳೆ
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಶಾಲೆಗಳ ಸುತ್ತ ಜಂಕ್ ಫುಡ್‌ಗೆ ಬ್ರೇಕ್: ಮಕ್ಕಳ ಆರೋಗ್ಯ ರಕ್ಷಣೆಗೆ FDA ಅಲರ್ಟ್!
    ಉಡುಪಿ ವಿಧಾನಸಭಾ ಚುನಾವಣೆಗೆ ರೆಡಿಯಾದ ಕಾಂಚನ್..!
    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
    ಗೃಹಿಣಿ ಅಲ್ಲ, ರಾಷ್ಟ್ರ ನಿರ್ಮಾಣಕಾರಿ”ಮನೆಯ ಕೆಲಸ ಕೆಲಸವೇ ಅಲ್ಲ ಎನ್ನುವವರೇ… ಈ ಸುದ್ದಿ ಒಮ್ಮೆ ಓದಿ!ಆಕೆಯ ಶ್ರಮಕ್ಕೆ-₹30,000 ಮೌಲ್ಯ!– ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ
    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ₹5ಕ್ಕೆ ಇಡ್ಲಿ… 56 ವರ್ಷಗಳಿಂದ ಅದೇ ರುಚಿ! 70ರ ಹರೆಯದಲ್ಲೂ ಪ್ರತಿದಿನ 1,500 ಇಡ್ಲಿ ಮಾಡಿ ಜನರ ಮನ ಗೆದ್ದ ಕರ್ನಾಟಕದ ಅನ್ನದಾತ…
    50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
    ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!