📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ….

    ಭಾರತದ ಚುನಾವಣಾ ಪ್ರಕ್ರಿಯೆ ಜಗತ್ತಿನಲ್ಲಿಯೇ ಮಾದರಿಯ ಪ್ರಕ್ರಿಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯತನಕ ಅದು ಮಾದರಿಯಾಗಿ ಕಾಣಿಸಿಕೊಳ್ಳುತ್ತಿತ್ತು. ಜಗತ್ತಿನ ಹಲವು ದೇಶಗಳು ಭಾರತದ ಚುನಾವಣಾ ನೀತಿಯನ್ನು ಅಭ್ಯಸಿಸಲು ಇಲ್ಲಿಗೆ ಬಂದದ್ದು ಇದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಭಾರತದಲ್ಲಿ ಇತ್ತೀಚಿಗಿನ ದಿನದಲ್ಲಿ, ಹಲವು ಅನುಮಾನಕ್ಕೆ ಕಾರಣ ವಾಗುವಂತಹ ಘಟನೆಗಳು ನಡೆದರೂ ಸಹ, ಆಯೋಗವು ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವ ಗಂಭೀರ ಆರೋಪಕ್ಕೆ ತುತ್ತಾಗುತ್ತಿದ್ದರೂ, ಎಲ್ಲೋ ಒಂದು ಕಡೆ ಆಯೋಗವು ನಿರಂಕುಶತ್ವದ ಕಡೆ ಸಾಗುತ್ತಿರುವುದರ ಮುನ್ಸೂಚನೆಯ ನಡುವೆಯೂ ದೇಶದ ಚುನಾವಣಾ ವ್ಯವಸ್ಥೆ ವಾಪಸ್ ಟ್ರ್ಯಾಕಿಗೆ ಬರುತ್ತದೆ ಎಂದು ವಿಶ್ಲೇಷಣೆಗೆ ಒಳಪಡುತ್ತಿದೆ.

    ಇಷ್ಟಕ್ಕೂ ಯಾಕೆ ಈ ಅನುಮಾನ? ಹಾಗೆಯೇ ಯಾಕೆ ಆರೋಪ? ಹಾಗೆಯೇ ಯಾಕೆ ಈ ಪ್ರಕ್ರಿಯೆ ಮೇಲೆ ನಂಬಿಕೆ? ಹಳೆಯ ವಿಚಾರಗಳೆಲ್ಲವನ್ನು ಬಿಟ್ಟುಬಿಡುವ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆಯು ಮುಗಿದಿದೆ ನಾಳೆಯ ಮಧ್ಯಾಹ್ನದ ಹೊತ್ತಿಗೆ ರಿಸಲ್ಟ್ ಬಹುತೇಕವಾಗಿ ಅನೌನ್ಸ್ ಆಗಲಿದೆ. ರಾಜ್ಯದ 293 ವಿಧಾನಸಭಾ ಕ್ಷೇತ್ರದ ಪೈಕಿ ದಕ್ಷಿಣ ಪರಗಣ ಜಿಲ್ಲೆಯ ಫಲ್ತಾ ವಿಧಾನಸಭಾ ಕ್ಷೇತ್ರ ಒಂದನ್ನು ಹೊರತುಪಡಿಸಿ 292 ವಿಧಾನಸಭಾ ಕ್ಷೇತ್ರದ ರಿಸಲ್ಟ್ ನಾಳೆ ಬರಲಿದೆ. ಫಲ್ತಾ ವಿಧಾನಸಭಾ ಕ್ಷೇತ್ರಕ್ಕೆ ಮೇ 21ರಂದು ಮರು ಮತದಾನವಾಗುತ್ತಿದೆ. ಅದರ ರಿಸಲ್ಟ್ 24 ರಂದು ಬರಲಿದೆ. ಬಹುತೇಕವಾಗಿ ಯಾವ ಸರ್ಕಾರ ಬಂಗಾಳದಲ್ಲಿ ಅಸ್ತಿತ್ವಕ್ಕೆ ಬರುತ್ತದೆಯೋ, ಅದೇ ಸರ್ಕಾರದ ನೇತೃತ್ವ ವಹಿಸಿದ ಪಕ್ಷದ ಅಭ್ಯರ್ಥಿಯು ಫಲ್ತಾ ವಿಧಾನಸಭಾ ಕ್ಷೇತ್ರವನ್ನು ಗೆದ್ದುಕೊಳ್ಳುತ್ತಾರೆ ಅಂದುಕೊಳ್ಳಬಹುದು.

    ವಿಷಯ ಇಷ್ಟೇ, ದೇಶದ ಹಲವು ಕಡೆ ವಿರೋಧ ಪಕ್ಷಗಳು ಸಾಕಷ್ಟು ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದರು. ಆಗೆಲ್ಲಾ ಚುನಾವಣಾ ಆಯೋಗವು, ಆ ದೂರುಗಳನ್ನು ಪಕ್ಕಕ್ಕೆ ತಳ್ಳುತ್ತಲೇ ಬಂದಿತ್ತು. ಆದರೆ ಫಲ್ತಾ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ  ದೂರು ಕೊಟ್ಟಿದ್ದೆ ಬಿಜೆಪಿಯ ಅಭ್ಯರ್ಥಿ. ದೇಬಾಂಶು ಪಾಂಡೆ. ಅವರ ದೂರಿನ ಆಧಾರದಲ್ಲಿಯೇ, ಅಲ್ಲಿನ ಎಲೆಕ್ಷನ್ ಕಮಿಷನರ್ ಮನೋಜ್ ಅಗರ್ವಾಲ್ ಇಡೀ ಕ್ಷೇತ್ರಕ್ಕೆ ಮರು ಮತದಾನಕ್ಕೆ ಆದೇಶಿಸಿದ್ದಾರೆ. ವ್ಯತ್ಯಾಸ ಇಷ್ಟೇ, ಚುನಾವಣಾ ಆಯೋಗವು ದೂರು ಕೊಡುವವರು ಯಾರು ಅನ್ನುವುದರ ಮೇಲೆ ತನಿಖೆ ಅಥವಾ ಕ್ರಮ ಕೈಗೊಳ್ಳಬೇಕೋ ಬೇಡವೋ ಎಂದು ತೀರ್ಮಾನಿಸುತ್ತದೆ ಅಂತಂದುಕೊಳ್ಳಬೇಕೆ?

    Also Read  ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ

    ಭಾರತವು ಸ್ವಾತಂತ್ರ್ಯ ನಂತರದಿಂದ ಸಾಕಷ್ಟು ಚುನಾವಣೆಯನ್ನು ನೋಡಿದೆ. ಆ ಚುನಾವಣೆಗಳನ್ನು ತಕ್ಕಮಟ್ಟಿಗೆ ನ್ಯಾಯೋಚಿತವಾಗಿಯೇ ನಡೆಸಿಕೊಂಡು ಬಂದಿರುವುದರಿಂದಲೇ, ಜಗತ್ತು ಭಾರತದ ಚುನಾವಣೆಯ ವ್ಯವಸ್ಥೆಯ ಬಗ್ಗೆ ಗೌರವ ಮತ್ತು ಕಾಳಜಿಯನ್ನು ಹೊಂದಿದೆ. ಗೌರವವನ್ನು ಹೆಚ್ಚಿಸಿಕೊಳ್ಳುವುದ ನಿಟ್ಟಿನಲ್ಲಿ ಮುಂದುವರೆಯಬೇಕಿರುವ ಆಯೋಗವು, ಜನರ ಮನದಲ್ಲಿ ಎದ್ದಿರುವ ಸಂಶಯಕ್ಕೆ ತೆರೆ ಎಳೆಯುವ ಕೆಲಸವನ್ನೇ ಮಾಡುತ್ತಿಲ್ಲ. ರಾಜಕಾರಣ ಬಿಟ್ಟುಬಿಡಿ, ಜನರಲ್ಲೆದ್ದಿರುವ ಸಂಶಯದ ನಿವಾರಣೆಯು ಮುಖ್ಯವಾಗುತ್ತದೆ. ಜನ ಸಾಮಾನ್ಯರು ಈ ವಿಚಾರದಲ್ಲಿ ಎದುರಿಗೆ ಬರುವುದಿಲ್ಲ ನಿಜ. ಆದರೆ ಜನರ ಮನದಲ್ಲಿ ಈ ಎಲ್ಲಾ ವಿಚಾರವೂ ಇದ್ದೇ ಇರುತ್ತದೆ. ಅವರು ಚರ್ಚಿಸಿಕೊಳ್ಳುತ್ತಾರನ್ನುವುದು ಗೊತ್ತಿರಲಿ. ಇದು ಗಟ್ಟಿಯಾಗಿ ಅವರ ಮನದಲ್ಲಿ ತಳ ಊರುತ್ತಾ ಹೋಗುತ್ತದೆ. ಅದರ ಪರಿಣಾಮ ಮುಂದಿನ ದಿನದಲ್ಲಿ ಈ ವ್ಯವಸ್ಥೆ ಹಾಗೂ ಆಯೋಗದ ಬಗ್ಗೆ ಜಿಗುಪ್ಸೆ ಹುಟ್ಟಬಹುದು. ಹಾಗಾಗಬಾರದು ಎಂದರೆ, ಆಯೋಗವು ಸರ್ವಾಧಿಕಾರಿಯಂತೆ ಆದೇಶ ಅಥವಾ ಸ್ಟೇಟ್ ಮೆಂಟ್ ನೀಡುವುದು ಬಿಟ್ಟು, ಪ್ರಶ್ನೆಗಳಿಗೆ ಸಾಕ್ಷಿ ಸಹಿತ ಜನರ ಸಂಶಯಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ಉತ್ತರ ನೀಡುವ ಕೆಲಸ ಆಗಬೇಕು. ಬದಲಿಗೆ ಅಧಿಕಾರದ ಮದದಲ್ಲಿ ಪ್ರಶ್ನಿಸುವವರನ್ನು ಬಲಹೀನರನ್ನಾಗಿಸುವ ಕೆಲಸ ಮಾಡಬಾರದು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ, ಪ್ರಶ್ನಿಸುವ ಧ್ವನಿಗೆ ಬಲ ತುಂಬುವ ಕೆಲಸವನ್ನು ಮಾಡಬೇಕು. ಆ ಧ್ವನಿಯನ್ನು ರಕ್ಷಿಸುವ ಕೆಲಸ, ಈ ವ್ಯವಸ್ಥೆಯೇ ಮಾಡಬೇಕಾಗುತ್ತದೆ. ದುರ್ದೈವ ಅಂದ್ರೆ ಅದಾಗುತ್ತಿಲ್ಲ, ಬದಲಿಗೆ ಆ ಧ್ವನಿಯನ್ನು ಅಲ್ಲಿಯೇ ಅಡಗಿಸುವ ಪ್ರಯತ್ನ ನಡೆಯುತ್ತಿದೆ.

    ಇದು ಒಂದಾದರೆ, ಅದೇ ಪಶ್ಚಿಮ ಬಂಗಾಳದಲ್ಲಿನ ರಾಜಧಾನಿ ದಕ್ಷಿಣ ಕಲ್ಕತ್ತಾದ ಸಖಾವನ್ ಮೆಮೋರಿಯಲ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿರುವ ಸ್ಟ್ರಾಂಗ್ ರೂಮ್ ಬಗ್ಗೆ ಅನುಮಾನ ವ್ಯಕ್ತವಾಗಿದೆ, ತಕ್ಷಣವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖುದ್ದಾಗಿ ಘನ ಘೋರ ಮಳೆಯ ನಡುವೆ ಆ ಸ್ಥಳಕ್ಕೆ ಹಾಜರಾಗುತ್ತಾರೆ. ನಾಲ್ಕು ಗಂಟೆಗಳ ಕಾಲ  ಅಲ್ಲಿಯೇ ಝಂಡಾ ಹೂಡುತ್ತಾರೆ. ಸಿ ಸಿ ಕ್ಯಾಮೆರಾದಲ್ಲಿ ಸ್ಟ್ರಾಂಗ್ ರೂಮಿನ ಒಂದಿಷ್ಟು ಅಸಹಜ ನಡೆ  ಕಂಡು ಬರುತ್ತಿದ್ದುದು ಸ್ಪಷ್ಟವಾಗಿತ್ತು. ಅದರಿಂದ ರೊಚ್ಚಿಗೆದ್ದು ಸ್ಟ್ರಾಂಗ್ ರೂಮ್ ಮುಂದೆ ಮುಖ್ಯಮಂತ್ರಿ ಸಹಿತ ಅವರ ಹಿಂಬಾಲಕರು ನೆರೆದಿದ್ದರು.

    Also Read  ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 

    ಚುನಾವಣೆ ಪ್ರಕ್ರಿಯೆ ಮುಗಿದು, ಜನರ ಮತಗಳು ಭದ್ರವಾಗಿರುವ ಮಷೀನ್ಗಳನ್ನು ಸ್ಟ್ರಾಂಗ್ ರೂಮಿನಲ್ಲಿ ಇಡಲಾಗುತ್ತದೆ. ಅಲ್ಲಿ ಯಾರಿಗೂ ಪ್ರವೇಶ ಇರಬಾರದು, ಸ್ವತಹ ಚುನಾವಣಾ ಆಯೋಗದ ಅಧಿಕಾರಿಗಳಿಗೂ ಕೂಡ. ಅದು ಪಾರದರ್ಶಕತೆ ಅಂದರೆ. ಯಾವುದೇ ಅಧಿಕಾರಿಯು, ಅನಿವಾರ್ಯವಾಗಿ ಅಲ್ಲಿಗೆ ಹೋಗಬೇಕು ಅಂದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿರುವಂತಹ ಎಲ್ಲಾ ರಾಜಕೀಯ ಪಕ್ಷಗಳಿಗೆ ಮೆಸೇಜು ನೀಡಿ, ಅವರ ಪ್ರತಿನಿಧಿಯ ಎದುರು ಸ್ಟ್ರಾಂಗ್ ರೂಮನ್ನು ಅಧಿಕಾರಿಗಳು ಪ್ರವೇಶಿಸಬಹುದು. ಸುತ್ತಮುತ್ತಲು ಕೆಲಸ ನಡೆಸಬಹುದು. ಆದರೆ ಅದು ಯಾವುದು ನಡೆದಿಲ್ಲ ಕೇವಲ ಅಸಹಜ ಚಟುವಟಿಕೆಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು.

    ಯಾವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖುದ್ದಾಗಿ ಮಳೆಯ ನಡುವೆಯೂ ಬಂದು ನಿಲ್ಲುತ್ತಾರೋ, ಆಗ ಚುನಾವಣಾ ಆಯೋಗವು ಎಚ್ಚೆತ್ತುಕೊಳ್ಳುತ್ತದೆ, ಅಷ್ಟೇ ಅಲ್ಲ, ಯಾವಾಗಲೂ ಹೇಳುವಂತೆ, ಯಾವುದೇ ಅಸಹಜ ಕ್ರಿಯೆ ನಡೆದಿಲ್ಲ. ಅಲ್ಲಿ ಮತಪೆಟ್ಟಿಗೆಗಳು ಸುರಕ್ಷಿತವಾಗಿದೆ. ಸಶಸ್ತ್ರ ಪಡೆಗಳು ಮತ ಪೆಟ್ಟಿಗೆಗಳನ್ನು ಹದ್ದಿನ ಕಣ್ಣಿನಲ್ಲಿ ಕಾಯುತ್ತಿದ್ದಾರೆ. ಅದರ ಬಗ್ಗೆ ಸಂಶಯ ಬೇಡ ಎಂಬ ನಾಲ್ಕು ಲೈನಿನ ಸ್ಪಷ್ಟನೆ ಅಷ್ಟೇ. ಅಸಹಜ ಕ್ರಿಯೆಯ ವಿಡಿಯೋ ಬಗ್ಗೆ ಅದು ಪೋಸ್ಟಲ್ ಪ್ರಕ್ರಿಯಗೆ ಸಂಬಂಧಿಸಿದ್ದು ಎನ್ನುವ ತೇಪೆ. ಅದಕ್ಕೂ ಅವಕಾಶ ಎಲ್ಲಿದೆ? ನಿಯಮವನ್ನು ಮೀರಿ ಚುನಾವಣಾ ಅಧಿಕಾರಿಗಳು ಆ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ ಆಯೋಗದ ಈ ಹೇಳಿಕೆ.

    ಸಿ ಸಿ ಕ್ಯಾಮೆರಾದಲ್ಲಿ ದಾಖಲಾದ ಅಸಹಜ ಚಟುವಟಿಕೆಯ ವಿಡಿಯೋ ಬಗ್ಗೆ ಬೇರೆಯದೇ ಉತ್ತರ ಬರುತ್ತದೆ ಅದು ಜನಸಾಮಾನ್ಯರಲ್ಲಿ ಆಯೋಗದ ಬಗ್ಗೆ ಸಂಶಯವನ್ನು ಹುಟ್ಟುವಂತೆ ಮಾಡುತ್ತದೆ. ಈ ಕ್ಷಣಕ್ಕೆ ಆಯೋಗವು ಸುಪ್ರೀಂನಂತೆ ನಡೆದುಕೊಳ್ಳುತ್ತಿದ್ದರು ಸಹ, ಇದರ ಪರಿಣಾಮ ನಾಳೆ ಅದರ ಘನತೆಯನ್ನು ಕಳೆದುಕೊಂಡಾಗ ಏನಾಗಬಹುದು? ಇವತ್ತಿರುವ ಅಧಿಕಾರಿ ನಾಳೆ ಇರದೇ ಇರಬಹುದು ಆದರೆ ಆಯೋಗ ಇದ್ದೇ ಇರುತ್ತದೆ. ಆಯೋಗದ ನಡೆ ಅತ್ಯಂತ ಪಾರದರ್ಶಕವಾಗಿರಬೇಕು ಮತ್ತು ಯಾವುದೇ ಪಕ್ಷಕ್ಕೆ ಲಾಭ ಮಾಡಿಕೊಡುವ ರೀತಿಯಲ್ಲಿ ನಡೆದಂತೆ ಕಾಣಬಾರದು.  ಅದೆಲ್ಲವನ್ನು ಮೀರಿ ಚುನಾವಣಾ ಆಯೋಗವು ನಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ದೇಶದ ಎಲ್ಲಾ ಅಂಗಗಳು ತಮ್ಮ ಪರವಾಗಿ ನಿಲ್ಲುತ್ತವೆ ಎಂಬ ಧೈರ್ಯವನ್ನು  ಆಯೋಗ ಬಲವಾಗಿ ಹೊಂದಿದಂತಿದೆ.

    Also Read  50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..

    ಜನರ ಆದೇಶವನ್ನು ಸೂಚಿಸುವ ಪ್ರಕ್ರಿಯೆ ಚುನಾವಣೆಯಾಗಿದೆ. ಇದರಲ್ಲಿ ಪಾರದರ್ಶಕತೆ ಮತ್ತು ಜನರ ಹಕ್ಕುಗಳಿಗೆ ಹೆಚ್ಚಿನ ಆದ್ಯತೆ ಇರಬೇಕು. ಜನರ ಹಕ್ಕುಗಳನ್ನು ಕಸಿದುಕೊಳ್ಳುವುದು ದೇಶದ್ರೋಹಕ್ಕಿಂತಲೂ ದೊಡ್ಡ ಅಪರಾಧ. ಹಾಗೆಯೇ ಜನರ ಹಕ್ಕುಗಳನ್ನು ತಿರುಗಿಸುವುದು ಕೂಡ ಅಷ್ಟೇ ದೊಡ್ಡ ಅಪರಾಧ. ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗವು ತನ್ನದೇ ವಿರುದ್ಧ ಎದ್ದಿರುವ ಸಂಶಯಗಳಿಗೆ, ಅನುಮಾನಗಳಿಗೆ ತೆರೆ ಎಳೆಯುವ ಪ್ರಾಮಾಣಿಕ ಕೆಲಸ ಮಾಡದೆ, ನಿರಂಕುಶತ್ವದಲ್ಲೇ ನಡೆಯುವುದರಿಂದ, ಯಾವುದೋ ಧೈರ್ಯದಲ್ಲಿ ಹಠಮಾರಿತನ ತೋರಿಸುವುದರಿಂದ ಭವಿಷ್ಯದಲ್ಲಿ ದೇಶವನ್ನು ಅಪಾಯಕ್ಕೆ ತಳ್ಳಬಹುದು ಎಂದು ಬರಹಗಾರರು ಅಭಿಪ್ರಾಯ ಮಂಡಿಸುತ್ತಿದ್ದಾರೆ. ಅದರಿಂದ ಆಯೋಗದ ಹಕ್ಕನ್ನು ಜನರೇ ಕಿತ್ತುಕೊಳ್ಳುವ  ನಿಟ್ಟಿನಲ್ಲಿ ಸಾಗಿದರೂ ಅಚ್ಚರಿ ಇಲ್ಲ ಎಂಬಂತಹ ವಿಶ್ಲೇಷಣೆಗಳು ಇದೀಗ ರಾಜಾರೋಷವಾಗಿ ಬರುತ್ತಿದೆ. ಶತಮಾನಗಳ ಕಾಲ ಭಾರತವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹಿರಿಯರ ಮಾರ್ಗದರ್ಶನ ಕಣ್ಣೆದುರು ಇರುವಾಗ, ಭಾರತದ ಜನರಿಗೆ ಹೋರಾಟವು ಕಷ್ಟವಲ್ಲ ಎಂಬುದನ್ನು  ಅಧಿಕಾರಶಾಹಿಗಳು ಮರೆತಂತೆ ಕಾಣುತ್ತದೆ. ಜನರನ್ನು ಅವರ ಹಕ್ಕಿಗಾಗಿ ಬೀದಿಗೆ ಬರುವಂತೆ ಮಾಡದಿರುವುದೇ ನಮ್ಮ ಸರ್ಕಾರ ಹಾಗೂ ವ್ಯವಸ್ಥೆಯ ಮೊದಲ ನಡೆಯಾಗಬೇಕು.  ಆದಷ್ಟು ಬೇಗ ಸರಿದಾರಿಗೆ ಸರ್ಕಾರ ಹಾಗೂ ವ್ಯವಸ್ಥೆ ಬರಲಿ, ಜನರ ನಂಬಿಕೆಯನ್ನು ವಾಪಸ್ ಗಳಿಸಿಕೊಳ್ಳಲಿ, ಎಲ್ಲಕ್ಕೂ ಹೆಚ್ಚಾಗಿ ನ್ಯಾಯಾಂಗದಲ್ಲಿ ಪಾರದರ್ಶಕತೆಯ ಅವಶ್ಯಕತೆ ಇದೆ. ಜನಸಾಮಾನ್ಯರಲ್ಲಿ ನ್ಯಾಯದ ಬಗೆಗಿರುವ ಈಗಿನ ಅಭಿಪ್ರಾಯ ತೊಡೆದು ಹಾಕುವ ಕೆಲಸ ಈ ಕ್ಷಣವೇ ಪ್ರಾರಂಭವಾಗಬೇಕು.  ಆಳುವವರು ಮತ್ತು ವ್ಯವಸ್ಥೆ ರಾಷ್ಟ್ರವನ್ನು ನ್ಯಾಯಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬ ವಿಚಾರ ವ್ಯಕ್ತವಾಗುತ್ತಿದೆ. ಯಾವುದೇ ಪಕ್ಷದ ಆಡಳಿತ ನಡೆಯಲಿ, ಯಾವುದೇ ವ್ಯಕ್ತಿಯು ಆಡಳಿತ ನಡೆಸಲಿ, ಅದು ಇಲ್ಲಿ ಅನವಶ್ಯಕ. ಸರ್ಕಾರ ಬದಲಾದರೂ ಆಡಳಿತ ವ್ಯವಸ್ಥೆಯು ಜನರ ಪರವಾಗಿ ಜನರ ಶ್ರೇಯಕ್ಕಾಗಿಯೇ ನಡೆಯಬೇಕು.  ಇದಾದರೆ, ಚುನಾವಣಾ ಆಯೋಗದ ಮೇಲಿರುವ ಕಳಂಕ ಮುಕ್ತವಾಗಬಹುದು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
    ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ
    ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಚರ್ಚೆ-ಕಾನೂನು ಬರೋ ಮುನ್ನವೇ ಮತ್ತೊಂದು ಲೀಕ್!
    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ
    ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ
    ಬಂಗಾಳದ ಸಿಂಹಾಸನಕ್ಕೆ ಸುವೇಂದು ಏರಿಕೆ — 15 ವರ್ಷದ ಮಮತಾ ಯುಗಕ್ಕೆ ಬ್ರೇಕ್!ಟಿಎಂಸಿ ಕೋಟೆ ಕುಸಿತ…
    ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ… ಕಾರಣ ನಿಗೂಢ
    2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    ಪೊಲೀಸರಿಂದ ಕ್ರೂರವಾಗಿ ತಳಿಸಲ್ಪಟ್ಟ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಿದ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ
    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ರಷ್ಯಾ–ಉಕ್ರೇನ್ ಯುದ್ಧ ಡ್ರೋನ್ ದಾಳಿಗೆ ರಾಜೀವ್ ಗುಪ್ತಾರ “ಕುಸುಮ್ ಗ್ರೂಪ್‌-ಔಷಧ ಘಟಕ “ಧ್ವಂಸ….!
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!
    ಡಿಸ್ಟಿಂಕ್ಷನ್ ಪಡೆದರೆ ಸಂಭ್ರಮಿಸುತ್ತಿದ್ದ ಕಾಲ ಹೋಗಿ, ಇಂದು 99% ಬಂದರೂ ಬೀದಿಯಲ್ಲಿ ನಿಂತು ಅಳಬೇಕಾದ ದುಸ್ಥಿತಿ ..ಇದು ನಮ್ಮಇಂದಿನ ಶಿಕ್ಷಣ ವ್ಯವಸ್ಥೆ!
    ಮಂಗಳೂರು- ಕೊಲ್ಲೂರಿನವರೆಗೆ ಹೈ ಅಲರ್ಟ್!ಕ.ರ.ವೇ ಕಪ್ಪು ಬಾವುಟ .!!ತಮಿಳುನಾಡು ಸಿಎಂ ವಿಜಯ್ ಭೇಟಿ-ಕೊಲ್ಲೂರಿನಲ್ಲಿ ಹೈವೋಲ್ಟೇಜ್ ದಿನ! 
    40 ವರ್ಷದ ಹಳೆಯ ಕೊಲೆಕೇಸ್‌ಗೆ ಅಂತಿಮ ಕೀ ಆಗಿ ಸಾಕ್ಷಿ ಆಗಿದ್ದು ತಿಂದು ಉಗುಳಿದ ಚೂಯಿಂಗ್ ಗಮ್ …!ಏನಿದು realstory..
    ಕರ್ನಾಟಕದಲ್ಲಿ ಹೈ ಅಲರ್ಟ್: ಕರಾವಳಿಯಲ್ಲಿ ಸತತ 4 ದಿನ ಭಾರೀ ಮಳೆ – ಮಕ್ಕಳು, ಮೀನುಗಾರರು ಮತ್ತು ನದಿ ಪಾತ್ರದ ಜನರು ವಿಶೇಷ ಎಚ್ಚರಿಕೆ ವಹಿಸಿ
    ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
    ಸಚಿವ ಜಮೀರ್ ಕಥೆ ಗೋವಿಂದ!!!?
    ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ಗ್ಯಾಸ್ ಸೋರಿಕೆ ಎಷ್ಟು ಅಪಾಯಕಾರಿ? ಕ್ಷಣದ ನಿರ್ಲಕ್ಷ್ಯ ಮನೆ ಸುಟ್ಟು, ಶೇ.60 ಸುಟ್ಟ ಗಾಯಾಳುವಿಗೆ ಶಾಸಕ ಭರತ್ ಶೆಟ್ಟಿ ನೆರವಿನ ಭರವಸೆ..
    ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
    ‘₹1ಕ್ಕೆ ಫ್ಯಾಷನ್’ ಜಾಹೀರಾತು ವೈರಲ್… ಮಾಲಾಡ್ ಮಾಲ್‌ನಲ್ಲಿ ನಿಯಂತ್ರಣ ತಪ್ಪಿದ ಜನಸಾಗರ-ಸ್ಟ್ಯಾಂಪೀಡ್ ಭೀತಿ ಮೂಡಿಸಿದ ಜನಸಂದಣಿ!
    ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
    ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಮುಂಬಯಿಯಲ್ಲಿ ಪಹಲ್ಗಾಮ್ ಮಾದರಿ ದಾಳಿ ಯತ್ನ: ಉಗ್ರ ಚಟುವಟಿಕೆ ಯತ್ನ ವಿಫಲ…!
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ