📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ

    ಉಡುಪಿ: ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರ ಕುರಿತು ನಿಂದನಾತ್ಮಕ ಪ್ರವಚನವಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಉಂಟಾದ ತೀವ್ರ ವಿರೋಧದ ಬಳಿಕ ಉಡುಪಿ ಶಿರೂರು ಮಠವು ವಿಷಾದ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

    “ಅದ್ವೈತ ಜಾಗರಣ ವೇದಿಕೆ” ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಹಂಚಿಕೆಯಾಗಿದ್ದ ವಿಡಿಯೋದಲ್ಲಿ ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳಿದ್ದವು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಂಕರಾಚಾರ್ಯರ ಭಕ್ತರು ಮತ್ತು ಅದ್ವೈತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

    ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಶಿರೂರು ಮಠದ ದಿವಾನರು ಈ ಘಟನೆಯನ್ನು “ಅನಪೇಕ್ಷಿತ” ಎಂದು ಉಲ್ಲೇಖಿಸಿ ತೀವ್ರ ವಿಷಾದ ವ್ಯಕ್ತಪಡಿಸಿ ಪತ್ರ ಬಿಡುಗಡೆ ಮಾಡಿದ್ದಾರೆ.

    Also Read  ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…

    ಅಲ್ಲದೇ, ವಿಡಿಯೋದಲ್ಲಿ ನಿಂದನಾತ್ಮಕ ಪ್ರವಚನ ನೀಡಿದ್ದ ಬಾಲಕಿಯಿಂದಲೂ ಕ್ಷಮಾಪಣಾ ವಿಡಿಯೋ ಮಾಡಿಸಲಾಗಿದೆ.

    ಅದ್ವೈತ ಸಮುದಾಯದ ಆಕ್ಷೇಪ

    ಆದರೆ ಕೇವಲ ವಿಷಾದ ವ್ಯಕ್ತಪಡಿಸುವುದರಿಂದ ಮಾಧ್ವ ಮಠ ಅಥವಾ ಮಾಧ್ವ ಸಮುದಾಯವು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅದ್ವೈತ ಸಮುದಾಯದ ಮುಖಂಡರು ಆಕ್ಷೇಪಿಸಿದ್ದಾರೆ.

    “ಇದು ಗೊತ್ತಿಲ್ಲದೆ ನಡೆದ ಘಟನೆಯಲ್ಲ. ಪುಟ್ಟ ಮಕ್ಕಳು ದೊಡ್ಡವರ ಮಾರ್ಗದರ್ಶನವಿಲ್ಲದೆ ಬಾಯಿತಪ್ಪಿ ಹೇಳಿದ ಮಾತುಗಳೂ ಅಲ್ಲ. ಮಾಧ್ವ ಮಠದವರ ಗ್ರಂಥಗಳಲ್ಲೇ ಶಂಕರಾಚಾರ್ಯರ ನಿಂದನೆ ತುಂಬಿ ತುಳುಕುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

    ಜಾಗೃತಗೊಂಡ ಅದ್ವೈತಿಗಳು

    “ಒಂದು ಸಂತೋಷದ ವಿಷಯವೆಂದರೆ ಅದ್ವೈತಿಗಳು ಈಗ ಜಾಗೃತರಾಗಿದ್ದಾರೆ. ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರ ನಿಂದಾ ನಿರ್ಮೂಲನೆಗಾಗಿ ನಾವು ಹೋರಾಟ ಆರಂಭಿಸಿದಾಗ ಅದ್ವೈತಿಗಳು ಸುಮ್ಮನಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿಂದನೆ ಕಂಡಲ್ಲಿ ತೀವ್ರವಾಗಿ ವಿರೋಧಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

    Also Read  ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ

    ಎಲ್ಲಾ ಅದ್ವೈತಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲೇ ಇಂದು ಮಾಧ್ವ ಮಠವು ವಿಷಾದ ವ್ಯಕ್ತಪಡಿಸಲು ಮುಂದಾಗಿದೆ. “ಶಂಕರಾಚಾರ್ಯರ ನಿಂದನೆ ಆಕ್ಷೇಪಾರ್ಹ ಎಂಬುದು ಮಾಧ್ವ ಮಠಕ್ಕೆ ಅರಿವಾಗಿದೆ. ಕ್ಷಮಾಪಣೆ ಕೇಳಬೇಕು ಎಂಬ ಮನಸ್ಥಿತಿ ಮೂಡಿದೆ. ನಿಂದನೆಯನ್ನು ಸತ್ಯವೆಂದು ಮೊಂಡುವಾದ ಮಾಡಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ದಿವಾ ಉತ್ಕರ್ಷ ಬೆಂಗಳೂರಿನ ಕೇವಲ 17 ವರ್ಷದ ಹೆಣ್ಣುಮಗಳಕಾರ್ಯಕ್ಕೆ ಪ್ರಪಂಚವೇ ಫಿದಾ…ಫೋರ್ಬ್ಸ್ ಟಾಪ್ ಪಟ್ಟಿಯಲ್ಲಿ ಯುವಸ್ಪೂರ್ತಿ ಹೆಸರು ಯಾಕೆ ಬಂತು ..!?
    ಷೇರು ವ್ಯವಹಾರದ ಲಾಭವೂ ಆದಾಯವೇ: ಜೀವನಾಂಶ ₹50 ಸಾವಿರದಿಂದ ₹1.20 ಲಕ್ಷಕ್ಕೆ ಏರಿಸಿದ ಹೈಕೋರ್ಟ್
    ಕುಂದಾಪುರದಲ್ಲಿ ಶಾಕಿಂಗ್ ಘಟನೆ..ಪತ್ನಿಗೆ ವಿಷ ನೀಡಿ ಬಳಿಕ ಪ್ರೇಮಿಯೊಂದಿಗೆ ಆತ್ಮಹತ್ಯೆ..!
    ಉಡುಪಿ ಮಹಿಳೆಗೆ ಮುಂಬೈನಲ್ಲಿ ಕಂಬಿ! ₹3.10 ಕೋಟಿ ವಂಚನೆ ಉಡುಪಿ ಮೂಲದ ಮಹಿಳೆ ಅರೆಸ್ಟ್!
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಮಂಗಳೂರು: ಖಚಿತ ಮಾಹಿತಿಗೆ ಖಾಕಿ ಆಕ್ಷನ್! ಮುಕ್ಕದ ಕಟ್ಟಡದಲ್ಲಿ 8 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಬಂಧನ
    ಸಾರ್ವಜನಿಕವಲ್ಲದ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದರೆ SC/ST ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
    ಕರಾವಳಿಯಲ್ಲಿ ಅಕ್ರಮ 109 ಹೋಂಸ್ಟೇಗಳು, 21ರೆಸಾರ್ಟ್‌ಗಳಿಗೆ ಶಾಕ್ ಲೋಕಾಯುಕ್ತ ಬೀಗ!ರೆಸಾರ್ಟ್‌ಗಳು ಬಂದ್!
    ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….
    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
    ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ₹6,695 ಕೋಟಿಯ ಮೆಗಾ ಪ್ರಾಜೆಕ್ಟ್‌ಗೆ ಮಳೆಯ ಅಗ್ನಿಪರೀಕ್ಷೆ-ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ
    ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
    ಸಹಕಾರ ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಡಿಕೆಶಿ ಜೊತೆ ಸಮಾಲೋಚನೆ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
    ವಿಧಾನಸೌಧದಲ್ಲಿ ಡಿಕೆಶಿ–ಕಟೀಲ್ ಭೇಟಿ -ರಾಜಕೀಯದಲ್ಲಿ ಬಿಸಿ ಚರ್ಚೆ
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    “ಟೀಕೆ ಮಾಡಿ, ತೇಜೋವಧೆ ಬೇಡ” – ಹೈಕೋರ್ಟ್‌ನಿಂದ ಗಿರೀಶ್ ಮಟ್ಟೆಣ್ಣನವರ್‌ಗೆ ಖಡಕ್ ಎಚ್ಚರಿಕೆ
    ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
    ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ಕಾರ್ಕಳದಲ್ಲಿ  ಜಾಗ ಕಿತ್ತುಕೊಳ್ಳಲು ಮಾಡಿದ ಪ್ಲಾನ್, ರಿವರ್ಸಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ
    ಮಂಗಳೂರು ದಸರಾ ರಜೆ ಇಲ್ಲ : ಕಾಲೇಜು ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು! ಪೊಲೀಸ್ ಕ್ರಮಕ್ಕೆ ವಿಎಚ್‌ಪಿ ಖಂಡನೆ!
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    ಕ್ಯಾಷ್‌ಲೆಸ್ ಭಾರತ… ಮತ್ತೆ ಕ್ಯಾಶ್‌ಗೇ ಮರಳುತ್ತಾರಾ?