📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!

    ದುಡಿದು ತಿನ್ನಲಾಗದ ಸೋಮಾರಿಗಳ ನೂರೆಂಟ್ ತಂತ್ರ: ಎಚ್ಚರವೇ ಏಕೈಕ ಮದ್ದು

    ಸ್ವಂತ ಶ್ರಮದಿಂದ ದುಡಿದು ಬದುಕಲು ಯೋಗ್ಯತೆ ಇಲ್ಲದ ಹಾಗೂ ಕಷ್ಟಪಟ್ಟು ಕೆಲಸ ಮಾಡಲು ಇಷ್ಟಪಡದ ಇಂತಹ ವಂಚಕರು, ಇತರರ ಹಣವನ್ನು ದೋಚಲು ದಿನಕ್ಕೊಂದು ನೂರು ಸುಳ್ಳು ಉಪಾಯಗಳನ್ನು (Ideas) ಹೂಡುತ್ತಿರುತ್ತಾರೆ. ಇಂತಹ ಘಟನೆಗಳ ಬಗ್ಗೆ ಮಾಧ್ಯಮಗಳು ಜನರನ್ನು ಜಾಗೃತಗೊಳಿಸಲು ನಿರಂತರವಾಗಿ ವರದಿಗಳನ್ನು ಪ್ರಸಾರ ಮಾಡುತ್ತಲೇ ಇರುತ್ತವೆ. ಆದರೂ ಸಾರ್ವಜನಿಕರ ಸಣ್ಣ ನಿರ್ಲಕ್ಷ್ಯ ದೊಡ್ಡ ಆಪತ್ತನ್ನು ತಂದೊಡ್ಡುತ್ತಿದೆ. ಯಾವುದೇ ಅಪರಿಚಿತ ವ್ಯಕ್ತಿ ಫೋನ್ ಕಾಲ್ ಅಥವಾ ಮೆಸೇಜ್ ಮೂಲಕ ಬ್ಯಾಂಕ್ ಅಥವಾ ಸಿಮ್ ನವೀಕರಣದ ಬಗ್ಗೆ ಮಾತನಾಡಿದರೆ ಆತುರದ ನಿರ್ಧಾರ ಕೈಗೊಳ್ಳಬೇಡಿ. ನಿಮಗೆ ಯಾವುದೇ ಸಣ್ಣ ಅನುಮಾನ ಬಂದರೂ ಫೋನ್‌ನಲ್ಲೇ ಪ್ರಕ್ರಿಯೆ ಮುಂದುವರಿಸುವ ಬದಲು, ತಕ್ಷಣವೇ ಸಂಬಂಧಪಟ್ಟ ಮೊಬೈಲ್ ನೆಟ್‌ವರ್ಕ್ ಸ್ಟೋರ್, ಬ್ಯಾಂಕ್ ಶಾಖೆ ಅಥವಾ ಕಚೇರಿಗೆ ನೇರವಾಗಿ ಭೇಟಿ ನೀಡಿ ಖಚಿತಪಡಿಸಿಕೊಳ್ಳಿ.ಯಾವುದೇ ಅನಗತ್ಯ link ಗಳನ್ನ open ಮಾಡುವುದರಿಂದಲೂ ph ನಲ್ಲಿರುವ ಎಲ್ಲಾ ಡೇಟಾ ಕಳ್ಳರ ಕೈಸೇರಿ ಅನಾಹುತಗಳಾಗುತ್ತವೆ ಎಚ್ಚರವಹಿಸಿ..!

    Also Read  ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”

    ಕಸ್ಟಮರ್ ಕೇರ್ ಹೆಸರಲ್ಲಿ ಗಾಳ: 23.98 ಲಕ್ಷ ರೂ. ಲೂಟಿ ಮಾಡಿದ ವಂಚಕರು

    ಮಂಗಳೂರಿನ ದೂರುದಾರರಿಗೆ ಜುಲೈ 8ರಂದು ಮೊಬೈಲ್ ಸಿಮ್ ಕಂಪನಿಯೊಂದರ ಕಸ್ಟಮರ್ ಕೇರ್ ಅಧಿಕಾರಿ ಎಂದು ಹೇಳಿ ಕರೆ ಮಾಡಿದ ವ್ಯಕ್ತಿಯೊಬ್ಬ, “ನಿಮ್ಮ ಸಿಮ್ ಕಾರ್ಡ್ ಪ್ರಸ್ತುತ 4ಜಿ ಸೇವೆಯಲ್ಲಿದ್ದು, ಅದನ್ನು 5ಜಿ ಗೆ ನವೀಕರಿಸಬೇಕು (SIM Upgrade)” ಎಂದು ನಂಬಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ದೂರುದಾರರು ಅದಕ್ಕೆ ಒಪ್ಪಿಗೆ ಸೂಚಿಸಿದಾಗ, ವಂಚಕನು “ನವೀಕರಣ ಪ್ರಕ್ರಿಯೆಗಾಗಿ ನಿಮ್ಮ ನೆಟ್‌ವರ್ಕ್ ಕೆಲವು ಗಂಟೆಗಳ ಕಾಲ ನಿಷ್ಕ್ರಿಯಗೊಳ್ಳಲಿದೆ” ಎಂದು ತಿಳಿಸಿದ್ದಾನೆ. ನಂತರ ದೂರುದಾರರ ಇಮೇಲ್‌ಗೆ ಬಂದ ಒಂದು ಸಂದೇಶಕ್ಕೆ ವಂಚಕನ ಸೂಚನೆಯಂತೆ ಅವರು ಒಪ್ಪಿಗೆ (Yes) ನೀಡಿದ್ದಾರೆ. ತದನಂತರ ನೆಟ್‌ವರ್ಕ್ ಬಾರದಿದ್ದಾಗ ಬೇರೆ ನಂಬರ್‌ನಿಂದ ಕರೆ ಮಾಡಿ ವಿಚಾರಿಸಿದರೆ, “ಸರ್ವರ್ ಸಮಸ್ಯೆಯಿದ್ದು ಸದ್ಯದಲ್ಲೇ ಸರಿಹೋಗುತ್ತದೆ” ಎಂದು ವಂಚಕನು ಜುಲೈ 9ರ ಸಂಜೆಯವರೆಗೂ ಕಾಲಹರಣ ಮಾಡಿದ್ದಾನೆ.

    Also Read  7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!

    ಸಿಮ್ ನಿಷ್ಕ್ರಿಯತೆಯ ರಹಸ್ಯ ಮತ್ತು ಬ್ಯಾಂಕ್ ಖಾತೆಯಿಂದ ಲೋನ್ ಪಡೆದು ವಂಚನೆ

    ಕೊನೆಗೆ ಅನುಮಾನ ಬಂದು ದೂರುದಾರರು ಮೊಬೈಲ್ ಸಂಸ್ಥೆಯ ಸ್ಥಳೀಯ ಕಚೇರಿಗೆ ಹೋಗಿ ವಿಚಾರಿಸಿದಾಗ, ಅಂತಹ ಯಾವುದೇ ಕರೆ ಮಾಡುವ ಪದ್ಧತಿ ಕಂಪನಿಯಲ್ಲಿ ಇಲ್ಲ ಎಂಬ ಕಹಿ ಸತ್ಯ ತಿಳಿದುಬಂದಿದೆ. ಅವರು ತಕ್ಷಣವೇ ಮೊಬೈಲ್‌ನಲ್ಲಿದ್ದ ನಿಷ್ಕ್ರಿಯ ಸಿಮ್ ಹೊರಗೆ ತೆಗೆದಿದ್ದಾರೆ. ಆದರೆ ಜುಲೈ 10ರಂದು ಬೆಳಗ್ಗೆ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ಸೈಬರ್ ಖದೀಮರು ದೊಡ್ಡ ಆಘಾತ ನೀಡಿದ್ದರು. ವಂಚಕರು ದೂರುದಾರರ ಬ್ಯಾಂಕ್ ಖಾತೆಗಳಿಂದ 2,89,000 ರೂ. ನಗದು ಹಾಗೂ ಅವರ ಕ್ರೆಡಿಟ್ ಕಾರ್ಡ್ ಬಳಸಿ ಬರೋಬ್ಬರಿ 9,00,000 ರೂ. ಸಾಲವನ್ನು (Loan) ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಮತ್ತೊಂದು ಕ್ರೆಡಿಟ್ ಕಾರ್ಡ್‌ನಿಂದ 4,06,138 ರೂ. ಹಾಗೂ ಇತರೆ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ಗಳಿಂದ 3,03,000 ರೂ. ಮತ್ತು 5,00,000 ರೂ. ಸೇರಿದಂತೆ ಒಟ್ಟು 23,98,138 ರೂ. ಗಳನ್ನು ವಿವಿಧ ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸದ್ಯ ಮಂಗಳೂರಿನ ಸೆನ್ (SEN) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ##CyberCrimeMangalore #SIMSwapScam #OnlineBankingFraud #CyberAwareness #FinancialFraudAlert

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಐಫೋನ್ ಅಲ್ಲ… ಕಾರು ಅಲ್ಲ… 9 ವರ್ಷ ಉಳಿಸಿ ಜಮೀನು ಖರೀದಿಸಿದ ದೀಕ್ಷಾ!
    ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    ಮಸೀದಿ ಹುಂಡಿಗೂ ಲಗ್ಗೆ ಇಟ್ಟ ಕಳ್ಳರು….!
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
    ಉರ್ವಸ್ಟೋರ್ ಮೈದಾನದಲ್ಲಿ ಕತ್ತಿಯಿಂದ ಕಡಿದು ಹತ್ಯೆಗೆ ಯತ್ನ : ಆರೋಪಿ ಬಂಧನ
    ಸಾಲಗಾರರಿಗೆ ಶಾಕ್ ….RBI ಬಡ್ಡಿ ಹೆಚ್ಚಳ-EMI ಮತ್ತೆ ಏರಿಕೆ..!?
    ಸಿಜೆಪಿಯ ಪ್ರತಿಭಟನೆ ಬಗ್ಗೆ ತನಿಖೆ ನಡೆಸಲು ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ
    ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…
    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
    ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..