📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….

    ಉಡುಪಿ ನಗರದಲ್ಲಿ ಆನ್‌ಲೈನ್ ಹೂಡಿಕೆ ವಂಚನೆ ಪ್ರಕರಣ – ಜನರಿಗೆ ಎಚ್ಚರಿಕೆ ಸಂದೇಶ
    ಉಡುಪಿ ನಗರದಲ್ಲಿ ಶಿವಶಂಕರ ಎಂಬವುವರು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಆಕರ್ಷಕ ಹೂಡಿಕೆ ಜಾಹೀರಾತಿಗೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ ತಿಂಗಳಲ್ಲಿ ಅವರು ಫೇಸ್‌ಬುಕ್‌ನಲ್ಲಿ ಸ್ಕ್ರೋಲ್ ಮಾಡುತ್ತಿದ್ದಾಗ “IIFL Capital Services and Investments” ಎಂಬ ಹೆಸರಿನಲ್ಲಿ ಬಂದ ಜಾಹೀರಾತು ಗಮನ ಸೆಳೆದಿದೆ. ಹೆಚ್ಚಿನ ಲಾಭದ ಭರವಸೆ ನೀಡಿದ ಕಾರಣ, ಅವರು ಆ ಜಾಹೀರಾತಿನ “Join” ಲಿಂಕ್ ಕ್ಲಿಕ್ ಮಾಡಿದ್ದಾರೆ.


    ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಅವರು “HO2 – IIFL Capital Services Ltd Service Manager” ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಲ್ಪಟ್ಟಿದ್ದಾರೆ. ಅಲ್ಲಿ ಟ್ರೇಡಿಂಗ್ ಮತ್ತು ಹೂಡಿಕೆ ಕುರಿತು ನಂಬಿಕೆ ಹುಟ್ಟಿಸುವ ರೀತಿಯಲ್ಲಿ ಮಾಹಿತಿ ನೀಡಲಾಗಿದ್ದು, ಅಧಿಕ ಲಾಭದ ಭರವಸೆ ಮೂಲಕ ಪಿರ್ಯಾದಿದಾರರನ್ನು ಹೂಡಿಕೆಗೆ ಪ್ರೇರೇಪಿಸಲಾಗಿದೆ.

    Also Read  ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!


    ನಂತರ, ಅಪರಿಚಿತ ವ್ಯಕ್ತಿಗಳು “DMAPLUS” ಎಂಬ ತೃತೀಯ ಪಾರ್ಟಿ ಮೊಬೈಲ್ ಅಪ್ಲಿಕೇಶನ್ ಅನ್ನು ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ಲಾಭ ಪಡೆಯುವ ಆಸೆಯಿಂದ ಪಿರ್ಯಾದಿದಾರರು ಆ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿ ಟ್ರೇಡಿಂಗ್ ಆರಂಭಿಸಿದ್ದಾರೆ. ದಿನಾಂಕ 03/04/2026 ರಿಂದ 30/04/2026 ರ ನಡುವಿನ ಅವಧಿಯಲ್ಲಿ ಅವರು ತಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ಒಟ್ಟು ₹1,85,000 ಹಣವನ್ನು ಹೂಡಿಕೆ ಮಾಡಿದ್ದಾರೆ.


    ಆದರೆ ನಿರೀಕ್ಷಿಸಿದಂತೆ ಯಾವುದೇ ಲಾಭವೂ ದೊರೆಯಲಿಲ್ಲ. ಅಷ್ಟೇ ಅಲ್ಲದೆ, ಹೂಡಿಕೆ ಮಾಡಿದ ಮೂಲ ಮೊತ್ತವನ್ನೂ ಹಿಂತಿರುಗಿಸಲಾಗಿಲ್ಲ. ನಿಧಾನವಾಗಿ ಇದು ವಂಚನೆಯ ಜಾಲವೆಂಬುದು ಶಿವಶಂಕರಗೆ ತಿಳಿದುಬಂದಿದ್ದು, ತಕ್ಷಣವೇ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪರಾಧ ಕ್ರಮಾಂಕ 65/2026, ಕಲಂ 318(4) BNS ಹಾಗೂ 66(D) ಐಟಿ ಕಾಯ್ದೆಯಡಿ ತನಿಖೆ ನಡೆಯುತ್ತಿದೆ.
    ಈ ಘಟನೆ ಸಾರ್ವಜನಿಕರಿಗೆ ಒಂದು ಗಂಭೀರ ಎಚ್ಚರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ “ಹೆಚ್ಚು ಲಾಭ, ಕಡಿಮೆ ಹೂಡಿಕೆ” ಎಂಬ ಜಾಹೀರಾತುಗಳು ಬಹುಪಾಲು ವಂಚನೆಗಳಾಗಿರಬಹುದು. ಅಪರಿಚಿತ ಲಿಂಕ್‌ಗಳು, ಅಜ್ಞಾತ ವಾಟ್ಸಪ್ ಗ್ರೂಪ್‌ಗಳು ಮತ್ತು ತೃತೀಯ ಪಾರ್ಟಿ ಆಪ್‌ಗಳನ್ನು ನಂಬಿ ಹಣ ಹೂಡಿಕೆ ಮಾಡುವುದು ಅಪಾಯಕಾರಿಯಾಗಿದೆ. ಯಾವುದೇ ಹೂಡಿಕೆ ಮಾಡುವ ಮುನ್ನ ಅದರ ಅಧಿಕೃತತೆ ಪರಿಶೀಲಿಸುವುದು ಮತ್ತು ಬ್ಯಾಂಕ್ ಅಥವಾ ಮಾನ್ಯ ಹಣಕಾಸು ಸಂಸ್ಥೆಗಳ ಮೂಲಕ ಮಾತ್ರ ವ್ಯವಹರಿಸುವುದು ಅತ್ಯಂತ ಅಗತ್ಯ.

    ##ಆನ್ಲೈನ್‌ವಂಚನೆ #ಸೈಬರ್‌ಕ್ರೈಮ್ #ಉಡುಪಿ #ಹೂಡಿಕೆಎಚ್ಚರಿಕೆ #ಫೇಸ್‌ಬುಕ್‌ವಂಚನೆ #ವಾಟ್ಸಪ್‌ಸ್ಕ್ಯಾಮ್ #ಸೈಬರ್‌ಸುರಕ್ಷತೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್…!ಅಪ್ಲಿಕೇಶನ್ ಬ್ಯಾನ್ ಅಲ್ಲ, ವ್ಯವಸ್ಥೆ ಸರಿಪಡಿಸಿ! ಸರ್ಕಾರಕ್ಕೆ ನಿಸರ್ಗ ಅಧಿಕಾರಿಯ ಸಲಹೆ
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
    ಕೊನೆಗೂ ಸೋತ ಖಾಕಿ….!!!
    ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
    ಕೇವಲ ₹7ರ ದುರಾಸೆ… ₹7 ಲಕ್ಷದ ಹೊರೆ!ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಅಂಗಡಿಗೆ ಭಾರೀ ದಂಡ; ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
    “ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
    ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    ಡಾನ್ -3 ಸಿನಿಮಾ ಕಥೆ ಗೋವಿಂದ….!
    ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
    ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…
    ಷೇರು ವ್ಯವಹಾರದ ಲಾಭವೂ ಆದಾಯವೇ: ಜೀವನಾಂಶ ₹50 ಸಾವಿರದಿಂದ ₹1.20 ಲಕ್ಷಕ್ಕೆ ಏರಿಸಿದ ಹೈಕೋರ್ಟ್
    ವಾಲ್ಮೀಕಿ ಹಗರಣಕ್ಕೆ ನಾಗೇಂದ್ರ ತಲೆದಂಡ? ರಾಜೀನಾಮೆ ಚರ್ಚೆ ನಡುವೆ ಕಾಂಗ್ರೆಸ್‌ಗೆ ಹೊಸ ಸಂಕಷ್ಟ!
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?
    ಕೌಶಾಂಬಿಯಲ್ಲಿ ಭೀಕರ LPG ಟ್ಯಾಂಕರ್ ದುರಂತ: ಸಿಸಿಟಿವಿಯಲ್ಲಿ ಸೆರೆಯಾದ ಜೀವಭಯದ ಕ್ಷಣಗಳು – ಮೃತರ ಸಂಖ್ಯೆ 4ಕ್ಕೆ ಏರಿಕೆ
    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    ಕೋರ್ಟ್‌ ಮೆಟ್ಟಿಲು ಹತ್ತಿ ಸುಸ್ತಾದವರಿಗೆ ಆಸರೆಯಾದ ‘ಅದಾಲತ್‌’: ಮತ್ತೆ ಒಂದಾದ ನೂರಾರು ದಂಪತಿಗಳು,₹3,000 ಕೋಟಿ ಪರಿಹಾರ,ದಾಖಲೆಯ 78.79 ಲಕ್ಷ ಕೇಸ್‌ಗಳಿಗೆ ಶಾಶ್ವತ ಮುಕ್ತಿ!
    ಹಂತಕರ ಹಿಂದೆ ಯಾರಿದ್ದಾರೆ? ಉಡುಪಿ ಪೊಲೀಸರ ನೆಕ್ಸ್ಟ್ ಟಾರ್ಗೆಟ್…?
    ಮತದಾರರೇ…ಕರ್ನಾಟಕ SIR ನಲ್ಲಿ 47 ಲಕ್ಷ ಹೆಸರುಗಳು ಡಿಲೀಟ್…..‌! 2002ರ ಪಟ್ಟಿ ವಿವರ ಇಲ್ಲದಿದ್ದರೆ ನೋಟಿಸ್? ಮುಂದೆ ಏನು ಮಾಡಬೇಕು?
    ಮಂಗಳೂರಿನ ಆಡಳಿತ ವೈಫಲ್ಯ ಸರ್ಕಾರಿ ಕಚೇರಿಗಳಲ್ಲಿ ಸಾಲು…ಪಾಲಿಕೆ ಸೇವೆಗಳ ವಿಳಂಬ, ಭೂಪರಿವರ್ತನೆ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ..
    ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
    ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
    ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
    ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!