📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು

    ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಗುಜರಾತ್ ರಾಜಧಾನಿಯಲ್ಲೇ ನಡೆದಂತಹ ಘಟನೆ ಇದು. ಘನ ಘೋರ ಕ್ರೈಂ ನಡೆದಿತ್ತು. ಆ ಕ್ರೈಮ್ಗೆ ಪ್ರತೀಕಾರವಾಗಿ ಜೀವ ಒಂದನ್ನೂ ತಿಂದು ಹಾಕಲಾಗಿತ್ತು. ಹೀಗೆ ಎರಡು ಕ್ರೈಂ ನಡೆದರೂ, ಯಾರಿಗೂ ಗೊತ್ತೇ ಇರಲಿಲ್ಲ. ಗುಜರಾತ್ ಪೊಲೀಸರಿಗೆ ಇದರ ಬಗ್ಗೆ ವಾಸನೆಯೂ ಬಂದಿರಲಿಲ್ಲ. ಅಂತಹ ಪ್ರಕರಣ ಒಂದನ್ನು ಮಂತ್ರವಾದಿಯೊಬ್ಬರು ಸಾಕ್ಷಿ ಸಹಿತ ಹಿಡಿದು ಹಾಕಿದ್ದಾರೆ. ಈಗ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವರ ಕಲೆ ಹಾಕುತ್ತಿದ್ದಾರೆ.

    ಗುಜರಾತ್ ರಾಜಧಾನಿ ಅಹಮದಾಬಾದ್ ಹೊರವಲಯದ ಕುತಬ್ ನಗರದಲ್ಲಿ ಇಂಥಹುದೊಂದು ಘಟನೆ ನಡೆದಿದೆ. ಬರೋಬ್ಬರಿ 35 ವರ್ಷದ ಹಿಂದೆ, ಒಂದು ಯುವತಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಪ್ರಕರಣ ಯಾರಿಗೂ ಗೊತ್ತೇ ಇರಲಿಲ್ಲ. ಆ ಯುವತಿಯು ಪ್ರೇತವಾಗಿ ತನ್ನನ್ನು ಕೊಂದ ವ್ಯಕ್ತಿಯನ್ನು ಬೆಂಬಿಡದೆ ಕಾಡಿ ಸಾಯಿಸಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಎರಡು ಹೆಣಗಳು ಉರುಳಿದ್ದವು. ಇದ್ಯಾವುದು ಗುಜರಾತ್ ಪೊಲೀಸರಿಗೂ ಗೊತ್ತಿರಲಿಲ್ಲ. ಅಕ್ಕ-ಪಕ್ಕದವರಿಗೂ ಗೊತ್ತಿರಲಿಲ್ಲ. ಅದೇ ಮನೆಯ ಸದಸ್ಯರಿಗೂ ಗೊತ್ತಿರಲಿಲ್ಲ. ಅಷ್ಟಕ್ಕೂ ಗೊತ್ತಾಗಿದ್ದು ಹೇಗೆ?

    1992ಕ್ಕಿಂತಲೂ ಮುಂಚೆ ನಡೆದ ಘಟನೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ನಿವಾಸಿಯಾಗಿದ್ದ ಫರ್ಜಾನಾ ಅಲಿಯಾಸ್ ಶಬನಂ ಎಂಬ ಯುವತಿಯು, ಗುಜರಾತ್ ಅಹ್ಮದಾಬಾದ್ ನಿವಾಸಿ ಸಂಶುದ್ದೀನ್ ಎಂಬಾತನನ್ನು ಪ್ರೇಮಿಸುತ್ತಿದ್ದಳು. ಈ ಸಂಶುದ್ದೀನ್ ಪಕ್ಕಾ ಕತರ್ನಾಕ್ ವ್ಯಕ್ತಿ. ಆತ ಈ ಫರ್ಜಾನಾಳನ್ನು ಮನಸ್ಸಿನಿಂದ ಪ್ರೀತಿಸಿರಲಿಲ್ಲ, ಕೇವಲ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಅಷ್ಟೇ. ಅವನಿಗೆ ಅದಾಗಲೇ ಮದುವೆಯಾಗಿತ್ತು, ಇಬ್ಬರು ಮಕ್ಕಳು ಇದ್ದರು. ಆದರೆ ಫರ್ಜಾನಾ, ಸಂಶುದ್ದೀನ್  ಮನೆಯನ್ನು ಹುಡುಕಿಕೊಂಡು ಗುಜರಾತಿಗೆ ಬರುತ್ತಾಳೆ. ಹಾಗೆ ಮನೆಗೆ ಬಂದ

    Also Read  Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..

    ಫರ್ಜಾನಾಳನ್ನು, ಈ ಸಂಶುದ್ದೀನ್ ಅದೇ ಅಹಮದಾಬಾದ್ನ ಕುತಬ್ ನಗರದಲ್ಲಿರುವ ತನ್ನದೇ ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಫರ್ಜಾನಾಳ ಮೇಲೆ ಹಲ್ಲೆ ನಡೆಸಿ ಅವಳನ್ನು ಅದೇ ಮನೆಯ ಎದುರುಗಡೆ ಇರುವ ಗುಂಡಿಯಲ್ಲಿ ಹಾಕಿ ಮುಚ್ಚಿ ಬಿಡುತ್ತಾನೆ. ಫಾರ್ಜಾನ ಆ ಗುಂಡಿಯಲ್ಲಿ ಜೀವಂತ ಸಮಾಧಿ  ಆಗುತ್ತಾಳೆ. ಅವಳು ತನ್ನ ಜೀವ ಇರುವವರೆಗೂ ಈ ಕಪಟಿ ಸಂಶುದ್ದೀನನ್ನು ಪ್ರೀತಿಸಿದ್ದಳು. ಯಾವಾಗ ತನ್ನ ಪ್ರಿಯಕರನೇ ಜೀವ ತೆಗೆದನು ಆಗ ಫರ್ಜಾನಾ ಆತ್ಮ ದ್ವೇಷಕ್ಕೆ ಬೀಳುತ್ತದೆ.

    ಈ ಘಟನೆಯ ನಂತರ ಸಂಶುದ್ದಿನ್ ತನಗೇನು ಗೊತ್ತಿಲ್ಲದವರಂತೆ, ಸಾಚಾತರ ಇದ್ದುಬಿಡುತ್ತಾನೆ. ಈ ಕಾರಣದಿಂದ ಈ ವಿಚಾರ ಹೊರಗೆ ಬರುವುದೇ ಇಲ್ಲ. ಆದರೆ, ಕೊಲೆಯಾದ ಫರ್ಝಾನ್ ಆತ್ಮವೂ ಸುಮ್ಮನೆ ಕೂರಲಿಲ್ಲ. ಸಂಶುದ್ದೀನನ್ನು ಹಿಡಿದು ಬಿಡದೆ ಕಾಡಲು ಪ್ರಾರಂಭಿಸಿದೆ. ಆತ್ಮದ ಕಾಟಕ್ಕೆ ಸಂಶುದ್ದೀನ್ ಜೀವ ಕಳೆದುಕೊಳ್ಳುತ್ತಾನೆ. ಇದು ಸಹ ಯಾರಿಗೂ ಗೊತ್ತಾಗುವುದಿಲ್ಲ. ಸಂಶುದ್ದೀನ್ ಸಾವು ಅನುಮಾನಾಸ್ಪದವಾಗಿ ಕಂಡರೂ ಯಾವುದೇ ದಾಖಲೆಗಳಿಲ್ಲದ ಕಾರಣ, ಮನೆಯವರು ಹಾಗೂ ಊರಿನವರು ಆತನ ಕಾರ್ಯವನ್ನು ಪ್ರಶ್ನೆ ಎದುರಿಗಿದ್ದರೂ ಮಾಡಿರುತ್ತಾರೆ.

    ಇದರ ನಂತರವೂ ಫರ್ಜಾನಾ ಆತ್ಮ ಸುಮ್ಮನೆ ಕೂರಲಿಲ್ಲ, ಆ ಮನೆಯ ಸುತ್ತಲೂ ಓಡಾಡಲು ಪ್ರಾರಂಭಿಸಿತು. ಕಿಟಕಿಯಲ್ಲಿ ಏನೋ ಹೋದಂತೆ ಭಾಸವಾಗುವುದು, ಪಾತ್ರೆಯನ್ನು ಇದ್ದಕ್ಕಿದ್ದಂತೆ ಬೀಳಿಸುವುದು, ರಾತ್ರಿ ವೇಳೆ ಗೆಜ್ಜೆಯ ಸದ್ದು ಕೇಳಿಸುವುದು ಹೀಗೆ ಹಲವು ರೀತಿಯಲ್ಲಿ ತನ್ನ ಇರುವಿಕೆಯನ್ನು ಆ ಆತ್ಮವೂ ಪ್ರಚುರಪಡಿಸುತ್ತಿತ್ತು. ಇದರಿಂದ ಆ ಮನೆಯವರು ಭಯಭೀತರಾಗಿದ್ದರು. ಸ್ಥಳೀಯ ಮಸೀದಿಯ ಧರ್ಮಗುರು ಬಳಿಗೆ ಹೋಗಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅವರ ಮಂತ್ರ -ತೀರ್ಥ ಸಮಸ್ಯೆಯನ್ನು ಬಗೆ ಹರಿಸುವುದಿಲ್ಲ. ಇದರಿಂದ ಅನಿವಾರ್ಯವಾಗಿ ಆ ಮನೆಯವರು, ಮಂತ್ರವಾದಿ ಒಬ್ಬರ ಮೊರೆ ಹೋಗುತ್ತಾರೆ.

    Also Read  ಮಕ್ಕಳಿಗೆ ಪ್ರಕೃತಿ ಮತ್ತು ಸಕಲ ಜೀವಿಗಳನ್ನು ಪ್ರೀತಿಸುವುದನ್ನು ಕಲಿಸಿ

    ಹಾಗೆ ಆ ಮನೆಗೆ ಮಂತ್ರವಾದಿಯ ಪ್ರವೇಶವಾಗುತ್ತದೆ. ಆ ಮಂತ್ರವಾದಿಯು, ಆ ಮನೆಯಲ್ಲಿ ಕೂತು ಅದೇನು ಮಾಡಿದರೋ ಗೊತ್ತಿಲ್ಲ.  ಈ ಮನೆಯಲ್ಲಿ 35 ವರ್ಷದ ಹಿಂದೆ ಹೆಣ್ಣಿನ ಕೊಲೆಯಾಗಿದೆ ಎಂದು ಹೇಳುತ್ತಾರೆ. ಅದನ್ನು ಆ ಮನೆಯವರು ಒಪ್ಪಲು ತಯಾರಿರಲಿಲ್ಲ. ಅದಕ್ಕೆ ಕಾರಣ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಆ ಹೆಣ್ಣು, ಈಗಾಗಲೇ ತನ್ನ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಕೊಲೆ  ಮಾಡಿದೆ. ಆದರೂ, ಆ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ. ಈಗಲೇ ಆ ಒಂದು ಹೆಣ್ಣಿನ ದೇಹವನ್ನು ಹೊರಗೆ ತೆಗೆದು ಸರಿಯಾದ ರೀತಿಯಲ್ಲಿ ಸಂಸ್ಕಾರ ಮಾಡಿ ಎಲ್ಲವೂ ಸರಿಯಾಗುತ್ತದೆ ಅಂತ ಆ ಮಂತ್ರವಾದಿ ಹೇಳುತ್ತಾರೆ. ಅಷ್ಟೇ ಅಲ್ಲ, ಇದೇ ಸ್ಥಳದಲ್ಲಿ ಆ ಹೆಣ್ಣಿನ ಶವವನ್ನು ಹೂಳಲಾಗಿದೆ ಅಂತಲೂ ಮಂತ್ರವಾದಿ ಸ್ಪಷ್ಟವಾಗಿ ಹೇಳಿರುತ್ತಾರೆ.

    ತಕ್ಷಣವೇ ಆ ಮನೆಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ಕೊಡುತ್ತಾರೆ. ಪೊಲೀಸರು ಒಪ್ಪಲು ರೆಡಿ ಇಲ್ಲದಿದ್ದರೂ, ಅನಿವಾರ್ಯವಾಗಿ ಆ ದೂರನ್ನು ಪಡೆಯಬೇಕಾಗುತ್ತದೆ. ಆ ದೂರು ಪಡೆದ ಪೊಲೀಸರು ಜೆಸಿಬಿ ಮೂಲಕ ಆ ಮನೆಯಲ್ಲಿರುವ ಮಂತ್ರವಾದಿ ತೋರಿಸಿದ ಜಾಗದಲ್ಲಿ ಅಗೆದು ನೋಡಿದಾಗ ಹೆಣ್ಣಿನ ಅಸ್ತಿಪಂಜರ ದೊರಕುತ್ತದೆ. ತಕ್ಷಣವೇ ಆ ಅಸ್ತಿಪಂಜರವನ್ನು ಹೊರ ತೆಗೆದು ಸಂಬಂಧ ಪಟ್ಟ ಎವಡಿಯನ್ಸ್ ಕಲೆಕ್ಟ್ ಮಾಡಿಕೊಂಡು ಅದನ್ನು ವಿಧಿ ವಿಜ್ಞಾನ ಇಲಾಖೆ ಕಳುಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

    Also Read  ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ

    ಆ ಯುವತಿಯ ಕೊಲೆಯಾಗಿದ್ದು  ಹೌದು ಎನ್ನುವುದು ವಿಧಿ ವಿಜ್ಞಾನ ಇಲಾಖೆಯು ಸ್ಪಷ್ಟಪಡಿಸಿದೆ. ಹಾಗೆಯೇ ಕೊಲೆ ಮಾಡಿದ ವ್ಯಕ್ತಿಯನ್ನು ಆ ಯುವತಿಯ ಆತ್ಮವು ಪ್ರತಿಕಾರಾತ್ಮಕವಾಗಿ ಕೊಲೆ ಮಾಡಿದ್ದರೂ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಹೀಗಿರುವಾಗ ಪೊಲೀಸರಿಗೆ ಇಲ್ಲಿ ಹೆಚ್ಚಿನ ಕೆಲಸ ಇರುವುದಿಲ್ಲ. ಕೊಲೆ ಮಾಡಿದ ಕೊಲೆಗಾರ ಈಗಾಗಲೇ ಸತ್ತಾಗಿದೆ. ಕೇವಲ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಕೊಡಬೇಕು ಅಷ್ಟೇ.

    ಒಟ್ಟಿನಲ್ಲಿ ಈ ಪ್ರಕರಣವು ರೋಚಕ ಸ್ಟೋರಿಯಾಗಿ ಮಾರ್ಪಾಡಾಗುತ್ತಿದೆ. ಇವತ್ತಿನ ವೈಜ್ಞಾನಿಕ ಯುಗದಲ್ಲಿ ಮಂತ್ರವಾದದ ಬಗ್ಗೆ ನೆಗೆಟಿವ್ ಮಾತಿರುವಾಗ, ಮಂತ್ರವಾದದ ಪವರ್ ಎಂತಹುದು ಅನ್ನುವುದನ್ನು ಈ ಪ್ರಕರಣ ತೋರಿಸಿಕೊಡುತ್ತಿದೆ. ಇದೇನು ಚಂದಮಾಮನ ಕಥೆಯಲ್ಲ. ದೂರದ ಗುಜರಾತಿನಲ್ಲಿ 35 ವರ್ಷದ ಹಿಂದೆ ನಡೆದ ಘಟನೆಯು ಈಗ ಮಂತ್ರವಾದಿಯ ಮೂಲಕ ಸಮಾಜಕ್ಕೆ ಗೊತ್ತಾಗುವಂತೆ ಆಗಿದೆ. ಹಾಗೆಯೇ ಪ್ರಕರಣವು ಅಧಿಕೃತವಾಗಿ ದಾಖಲಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    NSAದುರ್ಬಳಕೆ ಆರೋಪ: ಜಿಲ್ಲಾಧಿಕಾರಿಗೆ ₹5 ಲಕ್ಷ ದಂಡ!
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಸಾರ್ವಜನಿಕರಲ್ಲಿ ವಿನಂತಿ …!
    ಮನುಷ್ಯನಿಗಿಂತ AI ನಿಯಂತ್ರಣ ತಪ್ಪಿ ಶಕ್ತಿಶಾಲಿಯಾದ್ರೆ…ಚೀನಾದ ಎಚ್ಚರಿಕೆ ಬೆಚ್ಚಿಬೀಳಿಸುವಂತಿದೆ!ರಾಷ್ಟ್ರೀಯ ಭದ್ರತೆ ಬಗ್ಗೆ ಶುರುವಾಯ್ತು ಭಾರೀ ಆತಂಕ!
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!
    ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ದಿವಾ ಉತ್ಕರ್ಷ ಬೆಂಗಳೂರಿನ ಕೇವಲ 17 ವರ್ಷದ ಹೆಣ್ಣುಮಗಳಕಾರ್ಯಕ್ಕೆ ಪ್ರಪಂಚವೇ ಫಿದಾ…ಫೋರ್ಬ್ಸ್ ಟಾಪ್ ಪಟ್ಟಿಯಲ್ಲಿ ಯುವಸ್ಪೂರ್ತಿ ಹೆಸರು ಯಾಕೆ ಬಂತು ..!?
    ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
    ಕರ್ನಾಟಕದಲ್ಲಿ ನೀರು–ವಿದ್ಯುತ್ ಬಿಕ್ಕಟ್ಟಿನ ಎಚ್ಚರಿಕೆ!
    ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
    ಬೆಳ್ತಂಗಡಿಯಲ್ಲಿ ಮಧುಮಗ ಜೈಲಿಗೆ-ಅಪ್ರಾಪ್ತೆಯ ಮೇಲೆ ದೌರ್ಜನ್ಯ – ಇಬ್ಬರು ಆರೋಪಿಗಳ ಬಂಧನ..!
    ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
    ಒಬ್ಬನೇ ಯುವಕ… ಕೈಯಲ್ಲಿ ಗ್ಲೌಸ್, ಮನದಲ್ಲಿ ಸಂಕಲ್ಪ! ‘ಬಿಟ್ಟು ತಬಾಹಿ’ಗೆ ದೇಶದ ಸಲಾಂ
    ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ಬ್ರೇಕಿಂಗ್ ನ್ಯೂಸ್..!final‘ಸಚಿವರ ಪಟ್ಟಿ’ ವೈರಲ್: ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ!
    ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಎಂಟ್ರಿ…“ಕೋಲ್ಡ್ ವಾರ್”. ದಿಗ್ಗಜರ ಟೆನ್ಷನ್!₹10ಕ್ಕೆ ಅಂಬಾನಿ ಐಸ್‌ಕ್ರೀಂ…‘ಬಾಂಬೆ ಕ್ರೀಮರಿ’ ಧಮಾಕಾ!
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ