📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕುಂದಾಪುರದಲ್ಲಿ ಗುಂಡಿನ ದಾಳಿ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆ

    ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸರಿ ಚರ್ಚ್ ಎದುರು ಶುಕ್ರವಾರ ಮುಂಜಾನೆ ಸುಮಾರು 3.30ರ ವೇಳೆಗೆ ನಡೆದ ಗುಂಡಿನ ದಾಳಿಯಲ್ಲಿ ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಮೃತಪಟ್ಟಿದ್ದಾರೆ.

    ಹಣಕಾಸಿನ ವೈಷಮ್ಯಕ್ಕೆ ಬಲಿಯಾದ ಐವನ್ ಯಾನೆ ಮುನ್ನಾ.!?

    ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಜುಲೈ 30ರ ರಾತ್ರಿ ಹಣಕಾಸಿನ ವ್ಯವಹಾರದ ವಿಚಾರವಾಗಿ ಡೆರಿಕ್ ಮತ್ತು ಐವನ್ ನಡುವೆ ಗಲಾಟೆ ನಡೆದಿತ್ತು. ಬಳಿಕ ಡೆರಿಕ್ ಲೊಕೇಶನ್ ಕಳುಹಿಸಿ ಸ್ಥಳಕ್ಕೆ ಬರಲು ಸೂಚಿಸಿದ್ದು, ಮುಂಜಾನೆ ಥಾರ್ ಕಾರಿನಲ್ಲಿ ಬಂದ ಐವನ್ ಕಾರಿನಿಂದ ಇಳಿಯುತ್ತಿದ್ದಂತೆ ಡೆರಿಕ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 103 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 3 ಮತ್ತು 25ನೇ ಕಲಂಗಳಡಿ ಪ್ರಕರಣ ದಾಖಲಾಗಿದೆ. ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

    Also Read  ಕಳುವಾದ ವಾಹನ ಸಮೇತ ಕಳ್ಳರ ಬಂಧನ…!

    ಪೊಲೀಸರ ಮಾಹಿತಿ ಪ್ರಕಾರ, ಐವನ್ ಯಾನೆ ಮುನ್ನಾ ಈ ಹಿಂದೆ ಕುಕ್ಕಿಕಟ್ಟೆಯ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟ್ ಹೊಂದಿದ್ದನು. ಹಣಕಾಸು ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದ ಮನಸ್ತಾಪವೇ ಈ ಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

    ಕಾರಿನಲ್ಲಿದ್ದಾಗ ನಡೆದ ದಾಳಿ

    ಐವನ್ ರಿಚರ್ಡ್ ಮಸ್ಕರೇನಸ್ ಅವರು ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಬಂದಿದ್ದ ವೇಳೆ, ದುಷ್ಕರ್ಮಿಯೊಬ್ಬ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವಗೊಂಡ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ ಏನು ಗೊತ್ತಾಗಿದೆ?

    ಪೊಲೀಸರ ಮಾಹಿತಿ ಪ್ರಕಾರ, ಐವನ್ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ವೈಯಕ್ತಿಕ ಅಥವಾ ಹಣಕಾಸು ಸಂಬಂಧಿತ ವಿಚಾರವೇ ಈ ಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಮಹಿಳೆ ಆರೋಪಿಯನ್ನು ಗುರುತಿಸಿದ್ದು, ಪರಾರಿಯಾಗಿರುವ ಶಂಕಿತನ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.

    Also Read  ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ

    ಪೊಲೀಸರ ತನಿಖೆ ಮುಂದುವರಿದಿದೆ

    ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಎಸ್‌ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆಯ ಇನ್ಸ್‌ಪೆಕ್ಟರ್ ಜಯರಾಮ ಗೌಡ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಕೋ ತಂಡವೂ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

    ##Kundapura #Udupi #KarnatakaCrime #MurderCase #GunAttack #IvanRichardMascarenhas #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
    ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
    ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..
    79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!
    ಡೆಲಿವರಿ ಬಾಯ್ ಗೆ “₹500 ಟಿಪ್… !” video viral ಅಸಲಿ ಕಥೆ ಏನು..!?
    ಕರ್ನಾಟಕ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: 123 ಕೇಂದ್ರಗಳ ಪಾಸ್ ವಿತರಣ –ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ, ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತದೆಯೇ?
    ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
    ದೇಶಾದ್ಯಂತ ಇಂದು ಮೊಬೈಲ್‌ನಲ್ಲಿ ತುರ್ತು ಎಚ್ಚರಿಕೆ ಡ್ರಿಲ್ – ಗಾಬರಿ ಬೇಡ
    AI ಬಳಸಿ ನಕಲಿ ಹಾಲ್‌ಟಿಕೆಟ್: ಪೊಲೀಸ್ ಆಗಬೇಕಿದ್ದ ಕಡಬ ಯಜೇಶ್ ಬಿ.ಜೆ. ರೈ ಅರೆಸ್ಟ್!
    ಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿಗೆ ಬ್ರೇಕ್?…ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧತೆ
    MRPL ಗೇಟ್‌ ಮುಂದೆ ಭಾರೀ ಪ್ರತಿಭಟನೆ- ಬೆಳ್ಳಂಬೆಳಗ್ಗೆ ಸೇರಿದ ಜನಸಮೂಹ
    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
    ಲಖನೌ ಅಗ್ನಿ ದುರಂತದ ಕೊನೆ ಕ್ಷಣದ ಫೋನ್ ಕರೆಗಳು …”ಅಪ್ಪಾ,ಪ್ಲೀಸ್ ನನ್ನನ್ನು ಉಳಿಸು…” – “ನನ್ನ ಮಗನ ಬಳಿ ಹೋಗಲು ಬಿಡಿ…”
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
    ಗ್ಯಾಸ್ ಸೋರಿಕೆ ಎಷ್ಟು ಅಪಾಯಕಾರಿ? ಕ್ಷಣದ ನಿರ್ಲಕ್ಷ್ಯ ಮನೆ ಸುಟ್ಟು, ಶೇ.60 ಸುಟ್ಟ ಗಾಯಾಳುವಿಗೆ ಶಾಸಕ ಭರತ್ ಶೆಟ್ಟಿ ನೆರವಿನ ಭರವಸೆ..
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    ಹಾರ್ಮುಜ್ ಬಳಿ ಹಡಗುಗಳ ಹಿಂತಿರುಗುವ ಸರಣಿ!ಜಾಗತಿಕ ತೈಲ ಸರಬರಾಜಿಗೆ ಶಾಕ್ ⚠️
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
    ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 
    ಮೊಬೈಲ್ ನೋಡುತ್ತಿದ್ದ ಉಡುಪಿ ಡಿಸಿ ವಿರುದ್ಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ
    ಖಾದರ್‌ರ “ಉರ್ದು ಹಬ್ಬ “ಪ್ರಸ್ತಾಪಕ್ಕೆ ಬ್ರೇಕ್ ,ವಿಧಾನಸೌಧದ ಮೆಟ್ಟಿಲಲ್ಲಿ ಖಾಸಗಿ ಕಾರ್ಯಕ್ರಮ…!?
    ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
    ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ