📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ‘ಕಾಕ್ರೋಚ್’ಗಳ ದಂಗೆಗೆ ದೆಹಲಿ ನಡುಗಿತೇ? ವಿದ್ಯಾರ್ಥಿಗಳ ‘ಸಂಸತ್ ಚಲೋ’ಗೆ ಲಾಠಿಚಾರ್ಜ್… ಸಂಸತ್ತಿನಲ್ಲೂ ಸದ್ದು!ಕಲಾಪ ಮುಂದೂಡಿಕೆ?!

    ಕಾಕ್ರೋಚ್’ಗಳ ಸಂಸತ್ ಚಲೋ… ದೆಹಲಿ ಹೈ ಅಲರ್ಟ್!

    ನವದೆಹಲಿ: ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆಗಳು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಹೊಣೆಗಾರಿಕೆಯ ಕೊರತೆಯನ್ನು ವಿರೋಧಿಸಿ ‘Cockroach Janta Party’ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದಾರೆ. ಅವರ ಪ್ರಮುಖ ಬೇಡಿಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ. 

    ಹೌದು. ಇದು ಸಾಮಾನ್ಯ ವಿದ್ಯಾರ್ಥಿ ಪ್ರತಿಭಟನೆ ಅಲ್ಲ — ‘Cockroach Janta Party (CJP)’ ಎಂಬ ಹೆಸರಿನಲ್ಲಿ ರೂಪುಗೊಂಡಿರುವ ಯುವಜನರ ಶಿಕ್ಷಣ-ವ್ಯವಸ್ಥೆಯಲ್ಲಿನ ಎಲ್ಲಾ ಲೋಪದೋಷಗಳ ವಿರೋಧಿ ಚಳವಳಿಯಾಗಿ ತನ್ನ ಭಾಹುವನ್ನ ಚಾಚಿದೆ..; “ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ?” ಎಂಬ ಪ್ರಶ್ನೆಯೊಂದಿಗೆ ಚಳವಳಿ ಮುಂದುವರಿದಿದೆ.

    Also Read  ಮತದಾನದ ಹಕ್ಕು ಉಳಿಸಿಕೊಳ್ಳಿ: ಎಸ್‌ಐಆರ್ ಗಡುವು ಆಗಸ್ಟ್.17ರವರೆಗೆ ವಿಸ್ತರಣೆ

    ಚಲೋ ಸಂಸತ್’… ಪೊಲೀಸರು ತಡೆದರು

    ಸಂಸತ್‌ ಅಧಿವೇಶನದ ಸಮಯದಲ್ಲಿ ಪ್ರತಿಭಟನಾಕಾರರು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ಮೆರವಣಿಗೆ ನಡೆಸಲು ಮುಂದಾದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದಿದ್ದು, ಘರ್ಷಣೆಯ ಪರಿಸ್ಥಿತಿ ನಿರ್ಮಾಣವಾಯಿತು. ವರದಿಗಳ ಪ್ರಕಾರ ಪೊಲೀಸರು ಲಾಠಿ ಬಳಸಿದ್ದು, ಕೆಲವು ವರದಿಗಳಲ್ಲಿ ಕಣ್ಣೀರಿನ ಅನಿಲ ಬಳಕೆಯೂ ಉಲ್ಲೇಖವಾಗಿದೆ. ಪ್ರತಿಭಟನಾಕಾರರು ಪೊಲೀಸ್ ಕ್ರಮವನ್ನು ಖಂಡಿಸಿದರೆ, ಅಧಿಕಾರಿಗಳು ಪ್ರತಿಭಟನೆಯನ್ನು ನಿಯಂತ್ರಿಸುವ ಕ್ರಮ ಅಗತ್ಯವಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. 

    ಈ ಪ್ರತಿಭಟನೆಗೆ ಮತ್ತಷ್ಟು ಬಲ ನೀಡಿದ ,ಸೋನಂ ವಾಂಗ್ಚುಕ್ ನಡೆಸಿದ ಉಪವಾಸ ಸತ್ಯಾಗ್ರಹ. ನಂತರ ಅವರ ಆರೋಗ್ಯ ಹದಗೆಟ್ಟ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಹಿನ್ನೆಲೆಯಲ್ಲಿ ಚಳವಳಿಯ ನಾಯಕರು ಹಾಗೂ ಬೆಂಬಲಿಗರು ಇನ್ನಷ್ಟು ಆಕ್ರೋಶಗೊಂಡಿದ್ದಾರೆ. 

    ಸಂಸತ್ತಿನಲ್ಲೂ ಪ್ರತಿಧ್ವನಿ…!ಇದು ಸರ್ಕಾರಕ್ಕೆ ಎಷ್ಟು ದೊಡ್ಡ ಸವಾಲು?

    ದೆಹಲಿಯ ಬೀದಿಗಳಲ್ಲಿನ ಪ್ರತಿಭಟನೆ ಇದೀಗ ರಾಜಕೀಯ ಚರ್ಚೆಯಾಗಿ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಪ್ರತಿಪಕ್ಷ ನಾಯಕರು ಪೊಲೀಸ್ ಕ್ರಮವನ್ನು ಪ್ರಶ್ನಿಸಿದ್ದು, ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗದ ಬಗ್ಗೆ ಸರ್ಕಾರದಿಂದ ಉತ್ತರ ಕೇಳಿದ್ದಾರೆ. ಈ ಮೂಲಕ ‘ಕಾಕ್ರೋಚ್’ ಪ್ರತಿಭಟನೆ ಶಿಕ್ಷಣ ಸಮಸ್ಯೆಯಿಂದ ರಾಜಕೀಯ ಸಂಕಷ್ಟದ ಹಂತಕ್ಕೆ ತಲುಪಿದೆಯೇ? ಎಂಬ ಚರ್ಚೆ ಆರಂಭವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ, ನಿರುದ್ಯೋಗ ಮತ್ತು ಯುವಜನರ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನ—ಈ ಎಲ್ಲಾ ವಿಷಯಗಳು ಒಂದೇ ವೇದಿಕೆಯಲ್ಲಿ ಸೇರುತ್ತಿವೆ. ಆದ್ದರಿಂದ CJP ಪ್ರತಿಭಟನೆ ಕೇವಲ ಒಂದು ದಿನದ ವಿದ್ಯಾರ್ಥಿ ಪ್ರತಿಭಟನೆಯೇ ಅಥವಾ ದೇಶವ್ಯಾಪಿ ಯುವ ಚಳವಳಿಯಾಗಿ ಬೆಳೆಯುತ್ತದೆಯೇ ಎಂಬುದು ಈಗಿನ ದೊಡ್ಡ ಪ್ರಶ್ನೆ. ಇಂದಿನ ಸಂಸತ್ ಚಲೋ ಮತ್ತು ಪೊಲೀಸ್ ಕ್ರಮದ ನಂತರ ಚಳವಳಿಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ. 

    ##CockroachJantaParty #DelhiProtest #StudentProtest #DharmendraPradhan #ExamPaperLeak #EducationCrisis #ParliamentProtest

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    FSSAI ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ…!ಕಾರ್ಪೊರೇಟ್ ಒತ್ತಡಕ್ಕೆ ಮಣಿದಿರಾ?ಪ್ಯಾಕ್ ಆಹಾರಕ್ಕೆ ಎಚ್ಚರಿಕೆ ಲೇಬಲ್ ಕಡ್ಡಾಯ ಯಾಕಿಲ್ಲ? 
    Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
    ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
    ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    ಕೊಡಗಿನಲ್ಲಿ ಪ್ರವಾಸಿ ಬಸ್ ಪಲ್ಟಿ20 ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರು; ಜೆಸಿಬಿಯಿಂದ ಬಸ್‌ ರಕ್ಷಣೆ!
    ಬಿಡದಿಯ ಭೂಮಿ ಯಾರಿಗೆ? ಹೋರಾಟಕ್ಕೆ ಹೊಸ ತಿರುವು.! ಭೂಸಮರದ ಒಳನೋಟ…!
    ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?
    ಕರ್ನಾಟಕ CM ಬದಲಾವಣೆ ರಾಜಕೀಯ ಕೌಂಟ್‌ಡೌನ್ ಶುರುವಾಗಿದೆ! ತೆರೆಮರೆಯಲ್ಲಿ ಏನೋ ನಡೀತಿದೆ… 
    ಕರ್ನಾಟಕದಲ್ಲಿ ಹೈ ಅಲರ್ಟ್: ಕರಾವಳಿಯಲ್ಲಿ ಸತತ 4 ದಿನ ಭಾರೀ ಮಳೆ – ಮಕ್ಕಳು, ಮೀನುಗಾರರು ಮತ್ತು ನದಿ ಪಾತ್ರದ ಜನರು ವಿಶೇಷ ಎಚ್ಚರಿಕೆ ವಹಿಸಿ
    24 ಭಾರತೀಯರಿದ್ದ ಹಡಗಿನ ಮೇಲೆ ಅಮೆರಿಕಾ ದಾಳಿ: 3 ನಾವಿಕರ ಜೀವ ಬಲಿ
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಕ್ರೆಡಿಟ್ ಪಡೆದುಕೊಳ್ಳಲು ಶುರುವಾಯಿತು ಫೈಟ್
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
    ಕರ್ನಾಟಕದಲ್ಲಿ ಈಗ ಏನು ಟ್ರೆಂಡಿಂಗ್ ಗೊತ್ತಾ…! ಸಾಲು ಸಾಲು ಹಗರಣ, ಲಂಚವತಾರ , ಅಕ್ರಮ ನೇಮಕಾತಿ,ಟ್ರಾನ್ಸ್‌ಫರ್ ಮಾಫಿಯಾ ..ಒಂದೋ ಎರಡೋ….!??
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    “ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
    NSAದುರ್ಬಳಕೆ ಆರೋಪ: ಜಿಲ್ಲಾಧಿಕಾರಿಗೆ ₹5 ಲಕ್ಷ ದಂಡ!
    ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದ  ಪಾಪಿ ತಾಯಿ
    “ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”