📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!

    ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ಬೋಟ್‌ನ ಕ್ಯಾಬಿನ್‌ನಲ್ಲಿ ಇಬ್ಬರು ಮೀನುಗಾರ ಕಾರ್ಮಿಕರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಓರ್ವ ಕಾರ್ಮಿಕ ಚೂರಿ ಇರಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

    ಮೃತರನ್ನು ಚಿಕ್ಕಮಗಳೂರು ಮೂಲದ ಅಭಿಷೇಕ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೋವಿಂದ ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

    ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಸೋಮವಾರ ರಾತ್ರಿ ಬೋಟ್‌ನಲ್ಲಿದ್ದ ಅಭಿಷೇಕ್ ಹಾಗೂ ಗೋವಿಂದ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿತ್ತು. ಬಳಿಕ ಮಂಗಳವಾರ ಬೆಳಗಿನ ಜಾವ ಇದೇ ವಿಚಾರ ಮತ್ತೆ ಉಲ್ಬಣಗೊಂಡಿದ್ದು, ಜಗಳದ ವೇಳೆ ಅಭಿಷೇಕ್ ಮೇಲೆ ಚೂರಿಯಿಂದ ದಾಳಿ ನಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅಭಿಷೇಕ್ ಮೃತಪಟ್ಟಿದ್ದಾರೆ.

    Also Read  ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ

    ಘಟನೆ ಬಳಿಕ ಆರೋಪಿ ಗೋವಿಂದ ಸ್ಥಳದಿಂದ ಪರಾರಿಯಾಗಿದ್ದ. ಮಾಹಿತಿ ದೊರೆಯುತ್ತಿದ್ದಂತೆ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿ ಅನೀಲ್ ಕುಮಾರ್ ಡಿ. ಹಾಗೂ ಸಿಬ್ಬಂದಿ ಆದರ್ಶ ಮತ್ತು ಕುಬೇರ ಕಾರ್ಯಾಚರಣೆಗೆ ಇಳಿದು ಆರೋಪಿಯ ಪತ್ತೆಗೆ ಬಲೆ ಬೀಸಿದರು.

    ಪೊಲೀಸರ ಪ್ರಕಾರ, ಆರೋಪಿ ಉಡುಪಿ ರೈಲು ನಿಲ್ದಾಣದ ಮೂಲಕ ಹೈದರಾಬಾದ್ ಅಥವಾ ಮುಂಬೈ ಕಡೆಗೆ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

    ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ, ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

    Also Read  'ಪೊಲೀಸರಿಗೆ ದೂರು ಕೊಡ್ತೀಯಾ?'... ಗಾಂಜಾ ವ್ಯಸನಕ್ಕೆ ಸೈಜು ಕಲ್ಲಿನಿಂದ ಅಜ್ಜಿಯ ತಲೆ ಪುಡಿ ಮಾಡಿದ ಮೊಮ್ಮಗ!ಅಜ್ಜಿಯೇ ಬಲಿ!

    ಆದರೆ ಅಭಿಷೇಕ್ ಮತ್ತು ಗೋವಿಂದ ನಡುವೆ ನಿಖರವಾಗಿ ಯಾವ ವಿಚಾರಕ್ಕೆ ಗಲಾಟೆ ನಡೆದಿತ್ತು?, ಘಟನೆಗೆ ಬಳಸಲಾಗಿದೆ ಎನ್ನಲಾದ ಆಯುಧ ಹೇಗೆ ಬಂತು ಹಾಗೂ ಹತ್ಯೆಯ ಹಿಂದಿನ ನಿಖರ ಉದ್ದೇಶವೇನು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

    ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

    ಒಂದು ಸಣ್ಣ ಗಲಾಟೆ ಕ್ಷಣಾರ್ಧದಲ್ಲಿ ಜೀವವನ್ನೇ ಕಸಿದುಕೊಂಡಿದ್ದು, ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸುರಕ್ಷತೆ ಹಾಗೂ ಬೋಟ್‌ಗಳಲ್ಲಿ ಉಂಟಾಗುವ ವಿವಾದಗಳನ್ನು ನಿಯಂತ್ರಿಸುವ ಅಗತ್ಯದ ಬಗ್ಗೆಯೂ ಈ ಘಟನೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್
    ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು
    ಇನ್‌ಸ್ಟಾಗ್ರಾಮ್ ವ್ಯಾಮೋಹಕ್ಕೆ ಹೆತ್ತ ತಾಯಿಗೇ ವಿಷವಿಕ್ಕಿದ ಮಗಳು..ಪ್ರೀತಿಯ ಹೆಸರಲ್ಲಿ ಹಾದಿ ತಪ್ಪಿದ ಹದಿಹರೆಯ ಮುಂದೇನಾಯತು?
    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    2 ನಿಮಿಷ ತಡವಾದರೆ ಒಂದು ವರ್ಷ ಶಿಕ್ಷೆಯೇ? –ವಿದ್ಯಾರ್ಥಿಯ ಭವಿಷ್ಯಕ್ಕಿಂತ ಗಡಿಯಾರದ ಮುಳ್ಳು ದೊಡ್ಡದಾಯಿತೇ? 
    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಉಡುಪಿ ಜಿಲ್ಲಾಆಸ್ಪತ್ರೆಯಲ್ಲಿ ಹಗರಣ, ತಾರತಮ್ಯದ ಆರೋಪ: ವೀಣಾದೇವಿ ವಿರುದ್ಧದಕ್ರಮ ಕಣ್ಣೊರೆಸುವ ತಂತ್ರ
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
     ಡಿಗ್ರಿಗೂ ಮುನ್ನ ಹ್ಯಾಕರ್ ಗೆ IIT ಉದ್ಯೋಗ! ಪ್ರತಿಭೆ ಇದ್ದರೆ ಅವಕಾಶವೇ ನಿಮ್ಮ ಮನೆ ಬಾಗಿಲು ತಟ್ಟುತ್ತದೆ!” ಅನ್ನೋದಕ್ಕೆ ಸ್ಫೂರ್ತಿ ಈ ನಿಸರ್ಗ ಅಧಿಕಾರಿ..
    ಸಹಕಾರ ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಡಿಕೆಶಿ ಜೊತೆ ಸಮಾಲೋಚನೆ
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ
    ಕರ್ನಾಟಕ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: 123 ಕೇಂದ್ರಗಳ ಪಾಸ್ ವಿತರಣ –ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ, ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತದೆಯೇ?
    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ
    ತಾಯಿಯನ್ನೇ ಮದುವೆಗೆ ಆಹ್ವಾನಿಸದ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಯುವಕ…!
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ಸಂಸತ್ ಕಾರಿಡಾರ್‌ನಲ್ಲಿ ವಿವಾದಿತ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ರೇಣುಕಾ ಚೌಧರಿ ತರಾಟೆ
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!
    ಸೆಪ್ಟೆಂಬರ್‌ನಲ್ಲಿ ಚಿನ್ನ-ಬೆಳ್ಳಿ ಭಾರಿ ಕುಸಿತ: ಮುಂದಿನ ದಿನಗಳಲ್ಲೂ ಏರಿಳಿತ ಸಾಧ್ಯತೆ