📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್

    ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ವಿಚಾರವಾಗಿ ಸಿಡಿದು ನಿಂತಿರುವ ರಾಜ್ಯದ ಮಾಜಿ ಶಿಕ್ಷಣ ಸಚಿವ ಹೆಚ್ ವಿಶ್ವನಾಥ್,, ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    94% ಫಲಿತಾಂಶವು ರಾಜ್ಯದಲ್ಲಿ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಾತು ಪ್ರಾರಂಬಿಸಿದ ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಸುಳ್ಳು ಡೇಟಾ ಗಳನ್ನು ಸೃಷ್ಟಿಸಲಾಗುತ್ತಿದೆ. ಈ ಪ್ರಮಾಣದ ಫಲಿತಾಂಶ ಬರಲು ಸಾಧ್ಯವೇ ಇಲ್ಲ. ಈ ಫಲಿತಾಂಶವನ್ನು ತರಬೇಕು ಎಂಬ ಕಾರಣಕ್ಕೆ ತರಲಾಗಿದೆಯೇ ಹೊರತು, ಇದು ನೈಜ ಫಲಿತಾಂಶವಲ್ಲ ಎಂಬ ಗಂಭೀರ ಆರೋಪವನ್ನು ಮಾಜಿ ಸಚಿವರು ಮಾಡಿದ್ದಾರೆ.

    Also Read  ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: "ಕರಾವಳಿ ಪಡೆ" ಹೋರಾಟ ತೀವ್ರಗೊಳಿಸಲು ನಿರ್ಧಾರ

    ಕಳೆದೆವು ವರ್ಷ 83% ಇದ್ದ ಫಲಿತಾಂಶ, ಒಂದೇ ವರ್ಷದಲ್ಲಿ 94 ಪರ್ಸೆಂಟ್ಗೆ ಏರಲು ಸಾಧ್ಯವಾಗಿದ್ದಾದರೂ ಹೇಗೆ? ದೊಡ್ಡ ಪ್ರಮಾಣದಲ್ಲಿಯೇ  ರಾಜ್ಯದ ಹೈಸ್ಕೂಲ್ಗಳಲ್ಲಿ ಶಿಕ್ಷಕರ ಕೊರತೆ ಇದೆ. ಈ ಕೊರತೆಯ ಹೊರತಾಗಿಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಫಲಿತಾಂಶ ತರಲು ಸಾಧ್ಯವೇ ಇಲ್ಲ. ಈ ಸರ್ಕಾರ 94% ಫಲಿತಾಂಶವನ್ನು ತೋರಿಸಿ ತನ್ನ ಸಾಧನೆ ಅಂತ ಬಿಂಬಿಸಿಕೊಳ್ಳುತ್ತಿದೆ ಇಲಾಖೆ. ಇದು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವದರ ಮುನ್ಸೂಚನೆ ಎಂದು ಎಚ್ಚರಿಸಿದ್ದಾರೆ.

    ಶಿಕ್ಷಣದ ಬಲವರ್ಧನೆಗಾಗಿ ಎಡಿಬಿಯಿಂದ ಎರಡು ಸಾವಿರ ಕೋಟಿ ಹಣವನ್ನು ತರಲಾಗಿದ್ದರೂ ಅದರಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರವಾಗುತ್ತಿದೆ, ಕಿಕ್ ಬ್ಯಾಕ್ ವ್ಯವಹಾರ ನಡೆಯುತ್ತಿದೆ ಎಂದು ಡೈರೆಕ್ಟಾಗಿ ಗದಾಪ್ರಹಾರ ಮಾಡಿದ ಹೆಚ್ ವಿಶ್ವನಾಥ್, ಸಿದ್ರಾಮಯ್ಯನವರನ್ನು ನೇರವಾಗಿ ಟಾರ್ಗೆಟ್ ಮಾಡಿ, ಇಡೀ ರಾಜ್ಯವನ್ನು ಅಡವಿಟ್ಟ ಸಾಲಗಾರ ಮುಖ್ಯಮಂತ್ರಿ ಎಂಬ ಹೆಸರನ್ನು ಸಿದ್ದರಾಮಯ್ಯನವರು ಹೊತ್ತುಕೊಂಡಿದ್ದಾರೆ ಎಂದು ಧೂಷಿಸಿದರು. ಇಂತಹ ಮುಖ್ಯಮಂತ್ರಿಯಿಂದ ರಾಜ್ಯದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದೆ. ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆಂದು ಆರೋಪಿಸಿರುವ ಹೆಚ್ ವಿಶ್ವನಾಥ್, ರಾಜ್ಯದ ಎಸ್ ಎಸ್ ಎಲ್ ಸಿ ಫಲಿತಾಂಶ ದೊಡ್ಡ ಸ್ಕ್ಯಾಂಡಲ್ ಆಗಿ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಮುಂದುವರಿದು ಮಾತನಾಡಿದ ಎಚ್ ವಿಶ್ವನಾತ್, ಆಂತರಿಕ ಅಂಕವನ್ನು 20ಕ್ಕೆ 20ನ್ನೂ ವಿದ್ಯಾರ್ಥಿಗಳಿಗೆ ನೀಡಿದೆ. ಶಿಕ್ಷಣ ಇಲಾಖೆಯು, ಕೇವಲ ಹೆಚ್ಚು ಫಲಿತಾಂಶ ತರುವುದಕ್ಕಾಗಿ ಹೀಗೆ ಅಂಕವನ್ನು ನೀಡಿದೆ. ಆಂತರಿಕ ಅಂಕ ಸುಮ್ಮ ಸುಮ್ಮನೆ ಕೊಡುವಂಥದ್ದಲ್ಲ. ವಿದ್ಯಾರ್ಥಿಯ ನಡೆ-ನುಡಿ ಗುಣಮಟ್ಟ ದಿನಚರಿ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ನೀಡುವಂತ್ತದ್ದೆ ಆಂತರಿಕ ಅಂಕವಾಗಿದೆ. ಆದ್ರೆ ಇಲ್ಲಿ ಎಲ್ಲರಿಗೂ 20ಕ್ಕೆ 20 ಅಂಕ ನೀಡಲಾಗಿದೆ. ಪಾಸಾಗಲು ಉಳಿದ ಅಂಕ ಎಷ್ಟು ಬೇಕು ಹೇಳಿ. ಅಲ್ಲೂ ಸಹ ನಕಲು ಮಾಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಶಿಕ್ಷಣ ಸಚಿವ ಹೆಚ್ ವಿಶ್ವನಾಥ್, ಶಿಕ್ಷಣ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಷ್ಟೇ ಅಲ್ಲ,ಅವರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
    ಖಾಸಗಿ ಶಿಕ್ಷಕರಿಗೂ ಸಮಾನ ವೇತನ–ಸಾಮಾಜಿಕ ಭದ್ರತೆ?
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ರಷ್ಯಾ–ಉಕ್ರೇನ್ ಯುದ್ಧ ಡ್ರೋನ್ ದಾಳಿಗೆ ರಾಜೀವ್ ಗುಪ್ತಾರ “ಕುಸುಮ್ ಗ್ರೂಪ್‌-ಔಷಧ ಘಟಕ “ಧ್ವಂಸ….!
    ಒಂಟಿ – ಆಂಟಿಯರ ನಂಬಿಕೆ ಗಳಿಸಿ ಕೊಲೆಗೈಯುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ …!
    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    ಅಪ್ಪನ ಶವದ ಪಕ್ಕದಲ್ಲೇ ರಕ್ತದ ಮಡುವಿನಲ್ಲಿ ಮಗು…!ಧಾರವಾಡದಲ್ಲಿ ಬೆಚ್ಚಿಬೀಳಿಸಿದ ವೈದ್ಯ ಕುಟುಂಬ ದುರಂತ..!ಪತ್ನಿ ಪೊಲೀಸ್ ವಶದಲ್ಲಿ, ತನಿಖೆ ತೀವ್ರ .
    ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
    MRPLನಲ್ಲಿ ಭಾರೀ ಸ್ಫೋಟದ ಸದ್ದು “ಬಾಯ್ಲರ್ ಬ್ಲಾಸ್ಟ್”…!ಕಾಟಿಪಳ್ಳ, ಜೋಕಟ್ಟೆ , ಕೃಷ್ಣಾಪುರದ ಜನರಲ್ಲಿ ಆತಂಕ — ಫೇಸ್‌-3 ಘಟಕದ ಬಳಿ ಘಟನೆ ಶಂಕೆ
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ…ನಾಳೆ ನನ್ನ ಹೆಣವನ್ನೂ ನೋಡುತ್ತೀರಿ” ಎಂದ ಚೇತನ್!ಲಾವಣ್ಯಳ ತಂದೆಗೆ ಕರೆ ಮಾಡಿ ಶಾಕ್ ನೀಡಿದ ಆರೋಪಿ ಚೇತನ್ ಪೊಲೀಸ್ ವಶಕ್ಕೆ..!
    ವೈರಲ್ ‘Reservation Hatao Movement’ ಹಿಂದೆ ಏನಿದೆ? 7 ಗಂಟೆಗಳಲ್ಲಿ 90 ಸಾವಿರದಿಂದ 4 (40ಲಕ್ಷ) ಮಿಲಿಯನ್ ಫಾಲೋವರ್ಸ್‌! ಮೀಸಲಾತಿ ವಿರುದ್ಧದ ಅಭಿಯಾನಕ್ಕೆ ದೇಶಾದ್ಯಂತ ಭಾರೀ ಬೆಂಬಲ..
    ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
    ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
    ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
    ಉಡುಪಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ಸಂತೋಷ್ ಡಿ.ಎಸ್. ನೇಮಕ
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!
    ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
    ಟೇಕಾಫ್‌ ಬಳಿಕ RAF ಯುದ್ಧವಿಮಾನ ಪತನ: ಪೈಲಟ್‌ಗಳು ಪಾರು
    ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
    ಆಂಧ್ರದ ಪುಟ್ಟಪರ್ತಿಯಲ್ಲಿ ಅಡಗಿದೆ ಆ ದೊಡ್ಡ ರಹಸ್ಯ!ಆಕಾಶದಲ್ಲಿ ಕಣ್ಣಿಗೆ ಕಾಣದಂತೆ ಬೇಟೆಯಾಡುವ ಸಮಯ ಹತ್ತಿರದಲ್ಲಿದೆ!
    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
    ಸಚಿವ ಜಮೀರ್ ಕಥೆ ಗೋವಿಂದ!!!?
    ಪ್ರಕೃತಿಯ ಮುನಿಸಿಗೆ ಕರಗುತ್ತಿದೆ ಯುರೋಪ್ ….!ತಂತ್ರಜ್ಞಾನದ ಅಹಂಕಾರವನ್ನು ಸುಟ್ಟು ಬೂದಿ ಮಾಡುತ್ತಿರುವ ಯುರೋಪ್ ಹೀಟ್‌ವೇವ್!