📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!

    ಈಗಿನ ದಿನಗಳಲ್ಲಿ ಹೆಚ್ಚಿನ ರಸ್ತೆಗಳ ಪರಿಸ್ಥಿತಿ ಹೇಗಿದೆ ಅಂದ್ರೆ ಮಕ್ಕಳು ಹೊರಗೆ ಆಟ ಆಡೋದು ಕೂಡ ಅಪಾಯವಾಗಿದೆ. ನಿರ್ಭೀತಿಯಿಂದ ಸ್ವಚ್ಛಂದವಾಗಿ ರಸ್ತೆಯಲ್ಲಿ walk ಕೂಡ ಅಸಾಧ್ಯ.ಕೆಲವು ರಸ್ತೆಗಳಲ್ಲಿ Dogs ಗ್ಯಾಂಗ್ ಯಾವುದೇ ಸಮಯದಲ್ಲೂ attack ಮಾಡುವಂತ ಸ್ಥಿತಿ ಎದುರಾಗಿದೆ.ಇದು ಎಚ್ಚರಿಕೆ ಅಲ್ಲ… ಅಪಾಯದ ಗಂಟೆ!

    ಭಾರತದಾದ್ಯಂತ ನಾಯಿಕಚ್ಚುವ ಪ್ರಕರಣಗಳು ಆತಂಕಕಾರಿ ಮಟ್ಟಕ್ಕೆ ಏರಿರುವ ಹಿನ್ನೆಲೆಯಲ್ಲಿ, Supreme Court of India ತೀವ್ರ ಕಳವಳ ವ್ಯಕ್ತಪಡಿಸಿದೆ. 2026ರ ಮೊದಲ ನಾಲ್ಕು ತಿಂಗಳಲ್ಲಿ ಮಾತ್ರ ತಮಿಳುನಾಡಿನಲ್ಲಿ ಸುಮಾರು 2.63 ಲಕ್ಷ ಮತ್ತು ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚುವ ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಾಲಯ ಗಮನಿಸಿದೆ. ನ್ಯಾಯಾಲಯವು ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯದಿಂದ ಪರಿಸ್ಥಿತಿ “ಅತ್ಯಂತ ಆತಂಕಕಾರಿ” ಮಟ್ಟಕ್ಕೇರಿದೆ ಎಂದು ಹೇಳಿದೆ.

    Also Read  ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?

    ಪ್ರಮುಖ ಅಂಶಗಳು

    • ತಮಿಳುನಾಡಿನಲ್ಲಿ 2026ರ ಜನವರಿಯಿಂದ ಏಪ್ರಿಲ್‌ವರೆಗೆ ಸುಮಾರು 17 ಸಾವುಗಳು ದಾಖಲಾಗಿವೆ.
    • ಕರ್ನಾಟಕದಲ್ಲಿ ರೇಬೀಸ್ ಸಂಬಂಧಿತ ಕನಿಷ್ಠ 25 ಸಾವುಗಳು ವರದಿಯಾಗಿವೆ.
    • ಬೆಂಗಳೂರು ನಗರ ಪ್ರದೇಶದಲ್ಲೇ ಸಾವಿರಾರು ನಾಯಿ ಕಚ್ಚುವ ಪ್ರಕರಣಗಳು ದಾಖಲಾಗಿವೆ.
    • ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

    ರಸ್ತೆ ಮೇಲೆ ನಡೆಯುವವರು ಮತ್ತು ಸೈಕಲ್ ಓಡಿಸುವ ಮಕ್ಕಳು ಗಮನಿಸಬೇಕಾದ ಸುರಕ್ಷತಾ ಸೂಚನೆಗಳು

    ಬೀದಿ ನಾಯಿಗಳಿಂದ ಸುರಕ್ಷತೆ – ನಡೆದುಕೊಂಡು ಹೋಗುವವರು

    • ನಾಯಿಯನ್ನು ನೋಡಿ ಓಡಬೇಡಿ; ಅದು ಬೆನ್ನಟ್ಟುವ ಸಾಧ್ಯತೆ ಹೆಚ್ಚುತ್ತದೆ.
    • ನಾಯಿಯ ಕಣ್ಣಿಗೆ ನೇರವಾಗಿ ನೋಡಬೇಡಿ; ಅದು ಸವಾಲು ಎಂದು ಭಾವಿಸಬಹುದು.
    • ಶಾಂತವಾಗಿ ನಿಧಾನವಾಗಿ ಹಿಂದೆ ಸರಿಯಿರಿ.
    • ಕೈಯಲ್ಲಿ ಕಲ್ಲು ಅಥವಾ ಕಡ್ಡಿ ಹಿಡಿದಂತೆ ನಟಿಸುವುದರಿಂದ ಕೆಲವೊಮ್ಮೆ ನಾಯಿ ದೂರ ಸರಿಯಬಹುದು.
    • ರಾತ್ರಿ ಒಬ್ಬರೇ ನಿರ್ಜನ ಪ್ರದೇಶಗಳಲ್ಲಿ ನಡೆಯುವುದನ್ನು ತಪ್ಪಿಸಿ.
    • ಆಹಾರ ತಿನ್ನುತ್ತಿರುವ ಅಥವಾ ಮರಿ ನಾಯಿಗಳ ಬಳಿ ಹೋಗಬೇಡಿ.
    • ಅಪರಿಚಿತ ನಾಯಿಗಳನ್ನು ಮುಟ್ಟಲು ಪ್ರಯತ್ನಿಸಬೇಡಿ.
    Also Read  60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!

    ಸೈಕಲ್ ಓಡಿಸುವ ಮಕ್ಕಳಿಗೆ ವಿಶೇಷ ಎಚ್ಚರಿಕೆ

    • ನಾಯಿಗಳು ಬೆನ್ನಟ್ಟಿದರೆ ಸೈಕಲ್ ವೇಗವಾಗಿ ಓಡಿಸಬೇಡಿ; ನಿಧಾನವಾಗಿ ನಿಲ್ಲಿಸಿ.ಸೈಕಲ್‌ನಿಂದ ಇಳಿದು ಶಾಂತವಾಗಿ ನಿಲ್ಲಿ.ಅಥವಾ ಹೆದರಿಸಲು ಮುಂದಾಗಿ ಅಪಾಯ ಎದುರಾದರೆ ಸಹಾಯಕ್ಕಾಗಿ ಜೋರಾಗಿ ಕಿರುಚಿ….
    • ಮಕ್ಕಳಿಗೆ ನಾಯಿಗಳನ್ನು ಕೆಣಕಬಾರದು ಎಂದು ತಿಳಿಸಿ.ಶಾಲೆಗೆ ಹೋಗುವ ದಾರಿಯಲ್ಲಿ ನಾಯಿಗಳ ಗುಂಪು ಇರುವ ಪ್ರದೇಶಗಳನ್ನು ತಪ್ಪಿಸಿ.
    • ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಮಕ್ಕಳನ್ನು ಒಬ್ಬರೇ ಕಳುಹಿಸಬೇಡಿ.ಪೋಷಕರು ಮಕ್ಕಳಿಗೆ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಕೇಳುವುದು ಹೇಗೆ ಎಂಬುದನ್ನು ಕಲಿಸಬೇಕು.

    ನಾಯಿ ಕಚ್ಚಿದರೆ ತಕ್ಷಣ ಮಾಡಬೇಕಾದದ್ದು

    1. ಗಾಯವನ್ನು ಕನಿಷ್ಠ 15 ನಿಮಿಷ ಸಾಬೂನು ಮತ್ತು ನೀರಿನಿಂದ ತೊಳೆಯಿರಿ.
    2. ತಕ್ಷಣ ಸಮೀಪದ ಆಸ್ಪತ್ರೆಗೆ ಹೋಗಿ.
    3. ರೇಬೀಸ್ ಲಸಿಕೆ ಪಡೆಯುವುದು ಅತ್ಯಂತ ಮುಖ್ಯ.
    4. ಗಾಯವನ್ನು ನಿರ್ಲಕ್ಷಿಸಬೇಡಿ, ಸಣ್ಣ ಕಚ್ಚುವಿಕೆಯಾದರೂ ಚಿಕಿತ್ಸೆ ಅಗತ್ಯ.
    Also Read  ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?

    ಸಾರ್ವಜನಿಕರಿಗೆ ಜಾಗೃತಿ

    • ಬೀದಿ ನಾಯಿಗಳಿಗೆ ಅಜಾಗರೂಕವಾಗಿ ಆಹಾರ ಹಾಕುವುದು ಸಮಸ್ಯೆಯನ್ನು ಹೆಚ್ಚಿಸಬಹುದು.
    • ಸ್ಥಳೀಯ ಆಡಳಿತಕ್ಕೆ ಆಕ್ರಮಣಕಾರಿ ನಾಯಿಗಳ ಬಗ್ಗೆ ಮಾಹಿತಿ ನೀಡಿ.
    • ಮಕ್ಕಳ ಸುರಕ್ಷತೆ ಬಗ್ಗೆ ಶಾಲೆಗಳು ಹಾಗೂ ಪೋಷಕರು ಹೆಚ್ಚು ಎಚ್ಚರಿಕೆಯಿಂದಿರಬೇಕು.

    ಇದಾಗಲೇ ಸುಪ್ರೀಂ ಕೋರ್ಟ್ ಮಾನವ ಜೀವ ಮತ್ತು ಸಾರ್ವಜನಿಕ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.

    ##DogBite #StrayDogs #StreetDogAttack #PublicSafety #RabiesAwareness #ChildSafety #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಉಮ್ಮತ್ತಿ ಹಣ್ಣು ಆನ್‌ಲೈನ್‌ನಲ್ಲೂ ಸಿಗುತ್ತಾ? ಗ್ರಾಹಕರೇ ಎಚ್ಚರ!
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಹೈಕೋರ್ಟ್‌ನ ಅಪರೂಪದ ಆದೇಶ..ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ವಕೀಲನಿಗೆ ಸಿಕ್ಕ ಶಿಕ್ಷೆ ಏನ್ ಗೊತ್ತಾ…?!!!
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    🩸 4 ಲಕ್ಷ ವಿದ್ಯಾರ್ಥಿಗಳು…!!??ಕರ್ನಾಟಕದ ‘ಜೀವ ರಕ್ಷಕ’ Blood Donor Pool!ಏನಿದು ಜೆನ್ ಜಿ ಹೊಸ ಸೋಚ್…
    ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
    ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    ನೀಟ್ ಪರೀಕ್ಷೆಯ ಎಡವಟ್ಟು….ಸುಳ್ಳು ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ ಅಧಿಕಾರಿಗಳು!!?
    ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
    ಹಾರ್ಮುಜ್ ಬಳಿ ಹಡಗುಗಳ ಹಿಂತಿರುಗುವ ಸರಣಿ!ಜಾಗತಿಕ ತೈಲ ಸರಬರಾಜಿಗೆ ಶಾಕ್ ⚠️
    ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಚರ್ಚೆ-ಕಾನೂನು ಬರೋ ಮುನ್ನವೇ ಮತ್ತೊಂದು ಲೀಕ್!
    ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ಒಬ್ಬನೇ ಯುವಕ… ಕೈಯಲ್ಲಿ ಗ್ಲೌಸ್, ಮನದಲ್ಲಿ ಸಂಕಲ್ಪ! ‘ಬಿಟ್ಟು ತಬಾಹಿ’ಗೆ ದೇಶದ ಸಲಾಂ
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    ಕೆಸರೆರಚಾಟದ ನಡುವೆ SIR-ಪ್ರಜಾಪ್ರಭುತ್ವದ ಹಬ್ಬವೋ, ರಾಜಕೀಯ ಗೊಂದಲದ ಗೂಡೋ?
    ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
    ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
    ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
    ಶಾಲೆಗಳ ದುಸ್ಥಿತಿ ತೋರಿಸಲು CJP ಸಜ್ಜು; ‘ಹೊರಗಿನವರಿಗೆ ನೋ ಎಂಟ್ರಿ’ ಎಂದ ರಾಜಸ್ಥಾನ ಸರ್ಕಾರ!
    ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
    ಪ್ರಧಾನಿ ಮೋದಿ ಇಂದು ಬಂಟ್ವಾಳ ಸೇರಿ ಕರ್ನಾಟಕದ 4 ನವೀಕೃತ ರೈಲುನಿಲ್ದಾಣಗಳು ಲೋಕಾರ್ಪಣೆ..!
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ