📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ವಿಜಯ್ vs ಡಿಕೆಶಿ ಅಲ್ಲ… ಅಮಿತ್ ಶಾ ಮುಂದೆ ಸೌತ್ ಪವರ್!ದಕ್ಷಿಣದ ಹಕ್ಕಿಗಾಗಿ ಒಂದೇ ಧ್ವನಿ!

    ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರ ಮರುವಿಂಗಡಣೆಯಲ್ಲಿ 1971ರ ಜನಗಣತಿಯನ್ನು ಆಧಾರವಾಗಿರಿಸಬೇಕು ಎಂದು ಒತ್ತಾಯಿಸಿದರು. ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ Delimitation ಮೂಲಕ ರಾಜಕೀಯವಾಗಿ ನಷ್ಟವಾಗಬಾರದು ಎಂಬುದು ಅವರ ಪ್ರಮುಖ ವಾದವಾಗಿತ್ತು.

    ಇನ್ನು ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರು ನಿನ್ನೆ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ, NEET, ಕಾವೇರಿ ನೀರು, ರಾಜ್ಯಗಳ ಹಣಕಾಸು ಹಕ್ಕು ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣ ರಾಜ್ಯಗಳಿಗೆ ಕ್ಷೇತ್ರ ಮರುವಿಂಗಡಣೆಯಿಂದ ರಾಜಕೀಯವಾಗಿ ಅನ್ಯಾಯವಾಗಬಾರದು ಎಂಬುದು ಅವರ ಪ್ರಮುಖ ಆತಂಕವಾಗಿತ್ತು.

    ನಿನ್ನೆಯ ಸಭೆಯಲ್ಲಿ ವಿಜಯ್ ಅವರ ಒತ್ತು ತಮಿಳುನಾಡಿನ NEET, ಕಾವೇರಿ, Delimitation ಮತ್ತು ಹಣಕಾಸಿನ ಹಕ್ಕುಗಳ ಮೇಲೆ ಇದ್ದರೆ, ಡಿಕೆಶಿ ಅವರು 1971ರ ಜನಗಣತಿ, 543 ಲೋಕಸಭಾ ಸ್ಥಾನಗಳ ರಕ್ಷಣೆ, ಮಹಿಳಾ ಮೀಸಲಾತಿ, ಮೇಕೆದಾಟು ಮತ್ತು ಕರ್ನಾಟಕದ ಕೇಂದ್ರ ಅನುದಾನಗಳ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಎರಡೂ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯವಿರುವ ಕಾವೇರಿ–ಮೇಕೆದಾಟು ವಿಚಾರದ ಜೊತೆಗೆ, ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗಬಾರದು ಎಂಬ ಸಾಮಾನ್ಯ ಕಳವಳವೂ ಸಭೆಯಲ್ಲಿ ಎದ್ದು ಕಾಣಿಸಿತು.

    Also Read 

    ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ, ಪ್ರಸ್ತಾವಿತ Delimitation ಪ್ರಕ್ರಿಯೆಯಿಂದ ತಮಿಳುನಾಡಿನಂತಹ ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯ ಕಡಿಮೆಯಾಗಬಾರದು. ಪ್ರಸ್ತುತ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯದ ಪಾಲು ಕುಸಿಯದಂತೆ ಕೇಂದ್ರದಿಂದ ಕಾನೂನುಬದ್ಧ ಭರವಸೆ ನೀಡಬೇಕು ಎಂದು ವಿಜಯ್ ಒತ್ತಾಯಿಸಿದರು.

    NEET ವಿಚಾರದಲ್ಲೂ ವಿಜಯ್ ತಮ್ಮ ನಿಲುವು ಸ್ಪಷ್ಟಪಡಿಸಿದರು. ತಮಿಳುನಾಡಿಗೆ NEET‌ನಿಂದ ವಿನಾಯಿತಿ ನೀಡಬೇಕು ಮತ್ತು ರಾಜ್ಯ ಕೋಟಾದ ವೈದ್ಯಕೀಯ ಸೀಟುಗಳಿಗೆ 12ನೇ ತರಗತಿ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲು ಅವಕಾಶ ಕಲ್ಪಿಸಬೇಕು ಎಂದು ಕೇಂದ್ರದ ಮುಂದೆ ಬೇಡಿಕೆ ಇಟ್ಟರು.

    ಕಾವೇರಿ ನೀರಿನ ವಿಚಾರವೂ ಸಭೆಯಲ್ಲಿ ಪ್ರಮುಖವಾಗಿತ್ತು. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮತ್ತು ನ್ಯಾಯಮಂಡಳಿ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿಜಯ್ ಆಗ್ರಹಿಸಿದರು. ಮೇಕೆದಾಟು ಸೇರಿದಂತೆ ಅಂತಾರಾಜ್ಯ ನದಿ ನೀರಿನ ಯೋಜನೆಗಳಲ್ಲಿ ತಮಿಳುನಾಡಿನ ಹಿತಾಸಕ್ತಿಯನ್ನು ಪರಿಗಣಿಸಬೇಕು ಎಂಬ ನಿಲುವನ್ನೂ ಅವರು ಮುಂದಿಟ್ಟರು.

    Also Read  ಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿಗೆ ಬ್ರೇಕ್?...ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧತೆ

    ರಾಜ್ಯಗಳ ಹಣಕಾಸಿನ ಹಕ್ಕಿನ ಬಗ್ಗೆಯೂ ವಿಜಯ್ ಮಾತನಾಡಿದರು. ಜನಸಂಖ್ಯೆ ನಿಯಂತ್ರಣ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿರುವ ದಕ್ಷಿಣ ರಾಜ್ಯಗಳಿಗೆ ಕೇಂದ್ರದ ತೆರಿಗೆ ಹಂಚಿಕೆ ಮತ್ತು ಅನುದಾನದಲ್ಲಿ ನ್ಯಾಯಯುತ ಪಾಲು ದೊರೆಯಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟರು.

    ಲೋಕಸಭಾ ಸ್ಥಾನಗಳ ವಿಚಾರದಲ್ಲಿ, ಒಟ್ಟು 543 ಸ್ಥಾನಗಳ ಸಂಖ್ಯೆಯನ್ನು ಮುಂದಿನ 25 ವರ್ಷಗಳ ಕಾಲ ಕಾಯ್ದುಕೊಳ್ಳಬೇಕುಎಂದು ಡಿಕೆಶಿ ಪ್ರಸ್ತಾಪಿಸಿದರು. ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವಾಗಲೂ ಹೊಸ ಸ್ಥಾನಗಳನ್ನು ಹೆಚ್ಚಿಸುವ ಬದಲು ಹಾಲಿ 543 ಸ್ಥಾನಗಳ ಮಿತಿಯೊಳಗೇ ಮೀಸಲಾತಿ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

    ಮೇಕೆದಾಟು ಯೋಜನೆಯ ಬಗ್ಗೆಯೂ ಡಿಕೆಶಿ ಕರ್ನಾಟಕದ ನಿಲುವನ್ನು ಪುನರುಚ್ಚರಿಸಿದರು. ಈ ಯೋಜನೆ ಕರ್ನಾಟಕಕ್ಕೆ ಮಾತ್ರವಲ್ಲದೆ ತಮಿಳುನಾಡು ಮತ್ತು ಪುದುಚೇರಿಗೂ ನೀರು ನಿರ್ವಹಣೆಯಲ್ಲಿ ಪ್ರಯೋಜನಕಾರಿಯಾಗಬಹುದು ಎಂದು ಅವರು ಹೇಳಿದರು. ಯೋಜನೆ ಮುಂದುವರಿಸಲು ಅಗತ್ಯವಿರುವ ಕೇಂದ್ರದ ಅನುಮತಿಗೆ ಒತ್ತು ನೀಡಿದರು.ಇದರ ಜೊತೆಗೆ ಕರ್ನಾಟಕಕ್ಕೆ ಬಾಕಿ ಇರುವ ಕೇಂದ್ರದ ಅನುದಾನ, ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳು ಹಾಗೂ ರಾಯಚೂರಿನಲ್ಲಿ AIIMS ಸ್ಥಾಪನೆ ಸೇರಿದಂತೆ ಕರ್ನಾಟಕದ ವಿವಿಧ ಬೇಡಿಕೆಗಳನ್ನೂ ಕೇಂದ್ರದ ಗಮನಕ್ಕೆ ತರಲಾಯಿತು.

    ##TamilNadu #Karnataka #Vijay #DKShivakumar #Delimitation #NEET #CauveryWater

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಜಮೀರ್ ಅಹಮದ್ ಉಚ್ಛಾಟನೆಗೆ ಕ್ಷಣಗಣನೆ
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    ಸೋಶಿಯಲ್ ಮೀಡಿಯಾದ ವೈರಲ್ ವಿಡಿಯೋದಿಂದ ಕೋರ್ಟ್ ತನಕ..!ರಸ್ತೆ ರೇಜ್ ಪ್ರಕರಣದಲ್ಲಿ ಹೊಸ ತಿರುವು
    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
    MRPL ಸ್ಫೋಟ FIR… ದಾಖಲು…MRPL ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ…!
    ವಿಮಾನ ಪ್ರಯಾಣ ದುಬಾರಿ: ಟಿಕೆಟ್ ದರ ಏರಿಕೆ ವಿರುದ್ಧ PIL: ಸರ್ಕಾರಕ್ಕೆ ಸುಪ್ರೀಂ ನೋಟಿಸ್
    ಮತದಾರರೇ…ಕರ್ನಾಟಕ SIR ನಲ್ಲಿ 47 ಲಕ್ಷ ಹೆಸರುಗಳು ಡಿಲೀಟ್…..‌! 2002ರ ಪಟ್ಟಿ ವಿವರ ಇಲ್ಲದಿದ್ದರೆ ನೋಟಿಸ್? ಮುಂದೆ ಏನು ಮಾಡಬೇಕು?
    ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ “ಕಜ್ಜ” ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ
    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
    Pahalgam ದಾಳಿಗೆ ಪ್ರತೀಕಾರ ತೀರಿಸಿದ್ದ ‘ಆಪರೇಷನ್ ಸಿಂದೂರ್’: ವರ್ಷದ ಬಳಿಕ ಹುತಾತ್ಮ ಯೋಧರ ವಿವರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ…
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
    35 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದ 50 ವರ್ಷದ ಮಹಿಳೆ: ಇಂಟರ್ನೆಟ್‌ಗೆ ಸ್ಫೂರ್ತಿಯಾದ ಕಥೆ
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    ವಾಲ್ಮೀಕಿ ಹಗರಣಕ್ಕೆ ನಾಗೇಂದ್ರ ತಲೆದಂಡ? ರಾಜೀನಾಮೆ ಚರ್ಚೆ ನಡುವೆ ಕಾಂಗ್ರೆಸ್‌ಗೆ ಹೊಸ ಸಂಕಷ್ಟ!
    ಕ್ಲೌಡ್ ಮಾರುಕಟ್ಟೆಗೆ ಮಾರ್ಕ್ ಜುಕರ್‌ಬರ್ಗ್ ಎಂಟ್ರಿ!?ಇಡೀ ಟೆಕ್ ಪ್ರಪಂಚವೇ ಬೆಚ್ಚಿಬೀಳುವಂತಿದೆ ಜುಕರ್‌ಬರ್ಗ್ ಮುಂದಿನ ನಡೆ!
    ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಪುಟ್ಟ ಜೀವವೊಂದು ಬಲಿ.. ಕೆಲವು ಮಕ್ಕಳಿಗೆ ಗಾಯ..
    ನೇಪಾಳ ಪ್ರವಾಹ: ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ- ನೇಪಾಳ ಪ್ರಧಾನಿಗೆ ಸಹಕಾರದ ಭರವಸೆ
    ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…