📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ನಕಲಿ ಔಷಧ ದಂಧೆ: ಜೀವ ಉಳಿಸಬೇಕಾದ ಔಷಧವೇ ಹಣ ಮಾಡುವ ದಂಧೆಯಾಯಿತೇ?

    ಔಷಧಿ ಎಂದರೆ ಕೇವಲ ಒಂದು ಉತ್ಪನ್ನವಲ್ಲ… ಅದು ಒಬ್ಬರ ಜೀವದ ಮೇಲಿರುವ ನಂಬಿಕೆ. ನೋವು ಕಡಿಮೆ ಮಾಡಬೇಕು, ರೋಗ ಗುಣಪಡಿಸಬೇಕು, ಜೀವ ಉಳಿಸಬೇಕು ಎಂಬ ನಿರೀಕ್ಷೆಯಲ್ಲಿ ಜನರು ಔಷಧಿ ಖರೀದಿಸುತ್ತಾರೆ. ಆದರೆ ಇದೇ ನಂಬಿಕೆಯನ್ನು ಹಣ ಮಾಡುವ ಮಾರ್ಗವನ್ನಾಗಿ ಮಾಡಿಕೊಂಡಿರುವ ನಕಲಿ ಔಷಧ ದಂಧೆ ಈಗ ಆತಂಕಕ್ಕೆ ಕಾರಣವಾಗಿದೆ.

    ಬಿಡದಿ ಸಮೀಪದ ಹೆಜ್ಜಾಲದಲ್ಲಿ ಪರವಾನಗಿಯೇ ಇಲ್ಲದ ಘಟಕದಲ್ಲಿ ಪ್ರತಿಷ್ಠಿತ ಅಂತರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧಗಳನ್ನು ತಯಾರಿಸಿ, ಮರುಪ್ಯಾಕ್ ಮಾಡಿ ಮಾರುಕಟ್ಟೆಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಕಾರ್ಯಾಚರಣೆಯಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಗಳು ಹಾಗೂ ಕಚ್ಚಾವಸ್ತುಗಳು ವಶಕ್ಕೆ ಪಡೆದಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ.

    Also Read  ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?

    ಅಸಿಡಿಟಿ, ನೋವು ನಿವಾರಕ ಮಾತ್ರೆಗಳು ಹಾಗೂ ಆ್ಯಂಟಿಬಯೋಟಿಕ್‌ಗಳಂತೆ ಬಳಸುವ ಔಷಧಿಗಳಿಗೆ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ. ಅಂದರೆ ಗ್ರಾಹಕನಿಗೆ ಔಷಧಿ ನಿಜವೋ, ನಕಲಿಯೋ ಎಂಬ ಅನುಮಾನ ಬಾರದಂತೆ ಪ್ರತಿಷ್ಠಿತ ಕಂಪನಿಗಳ ಹೆಸರನ್ನೇ ಬಳಸಿಕೊಂಡಿರುವ ಆರೋಪವಿದೆ.

    ಇಲ್ಲಿ ಪ್ರಶ್ನೆ ಕೇವಲ 5 ಕೋಟಿ ಮೌಲ್ಯದ ನಕಲಿ ಔಷಧ ಪತ್ತೆಯಾಗಿದೆ ಎಂಬುದಲ್ಲ. ಇನ್ನೆಷ್ಟು ಔಷಧಿಗಳು ಈಗಾಗಲೇ ಮಾರುಕಟ್ಟೆಗೆ ಹೋಗಿವೆ? ಎಷ್ಟು ಜನ ಇವುಗಳನ್ನು ನಿಜವಾದ ಔಷಧಿ ಎಂದು ನಂಬಿ ಸೇವಿಸಿದ್ದಾರೆ? ಒಂದು ನಕಲಿ ಮಾತ್ರೆಯಿಂದ ಆರೋಗ್ಯ ಹದಗೆಟ್ಟರೆ, ಅದರ ಹೊಣೆ ಯಾರು?

    ಆಹಾರ ಕಲಬೆರಕೆಯಾದರೆ ಆರೋಗ್ಯಕ್ಕೆ ಅಪಾಯ. ಆದರೆ ಔಷಧಿಯೇ ನಕಲಿಯಾದರೆ, ಅದು ನೇರವಾಗಿ ಜೀವದ ಜೊತೆಗಿನ ಆಟ.ಜನರ ಅನಾರೋಗ್ಯವನ್ನು ಗುಣಪಡಿಸಬೇಕಾದ ಔಷಧವೇ ಕೆಲವರ ಪಾಲಿಗೆ ‘ಮನಿ ಮಿಂಟಿಂಗ್ ಮೆಷಿನ್’ ಆಗಿರುವುದು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

    Also Read  ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!

    ಹಣಕ್ಕಾಗಿ ನಕಲಿ ಉತ್ಪನ್ನ ತಯಾರಿಸುವುದು ವ್ಯಾಪಾರದಲ್ಲಿ ಮೋಸವಾಗಬಹುದು; ಆದರೆ ನಕಲಿ ಔಷಧ ತಯಾರಿಸುವುದು ಮನುಷ್ಯನ ಆರೋಗ್ಯ ಮತ್ತು ಜೀವದ ಮೇಲೆ ನಡೆಸುವ ಅಪಾಯಕಾರಿ ವಂಚನೆ. ಆದ್ದರಿಂದ ಈ ಪ್ರಕರಣದಲ್ಲಿ ಕೇವಲ ನಕಲಿ ಔಷಧ ವಶಪಡಿಸಿಕೊಳ್ಳುವುದಷ್ಟೇ ಅಲ್ಲ, ಇದರ ಹಿಂದೆ ಇರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ, ಔಷಧಗಳು ಎಲ್ಲಿಗೆಲ್ಲ ಪೂರೈಕೆಯಾಗಿದ್ದವು ಎಂಬುದನ್ನೂ ತನಿಖೆ ಮಾಡುವುದು ಅತ್ಯಂತ ಅಗತ್ಯ.

    ಅಧಿಕಾರಿಗಳ ಕಾರ್ಯಾಚರಣೆ ಒಂದು ಜಾಲವನ್ನು ಬಯಲಿಗೆಳೆದಿದೆ. ಆದರೆ ದೊಡ್ಡ ಪ್ರಶ್ನೆ ಇನ್ನೂ ಉಳಿದಿದೆ — ಜೀವ ಉಳಿಸುವ ಔಷಧಕ್ಕೂ ಬೆಲೆ ಕಟ್ಟುವ ಈ ದಂಧೆ ಇನ್ನೆಷ್ಟು ಆಳಕ್ಕೆ ಹೋಗಿದೆ?

    ##FakeMedicines #DrugScam #MedicineFraud #HealthcareSafety #PharmaFraud #FakeDrugs #DrugControl

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
    ಕರ್ನಾಟಕ CM ಬದಲಾವಣೆ ರಾಜಕೀಯ ಕೌಂಟ್‌ಡೌನ್ ಶುರುವಾಗಿದೆ! ತೆರೆಮರೆಯಲ್ಲಿ ಏನೋ ನಡೀತಿದೆ… 
    50 ವರ್ಷಗಳ ನಂತರ NCERT 9ನೇ ತರಗತಿಗೆ ‘ತುರ್ತು ಪರಿಸ್ಥಿತಿ’ಯ ವಾಸ್ತವ ಪಾಠ!
    ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ 10 ವರ್ಷ ಜೈಲು, ₹10 ಕೋಟಿ ದಂಡ!
    ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
    ಆದಾಯ ತೆರಿಗೆ ಬದಲಾವಣೆಗಳನ್ನು ತಿಳಿದುಕೊಳ್ಳಿ, ತಪ್ಪುಗಳನ್ನು ತಪ್ಪಿಸಿ…ಹೊಸ ITR ನಿಯಮಗಳು
    ಅಕ್ರಮ ಕಸಾಯಿ ಖಾನೆಗೆ ದಾಳಿ ಇಬ್ಬರನ್ನು ಬಂಧಿಸಿದ ಬಂಟ್ವಾಳದ ಪೊಲೀಸರು
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ಕೋರ್ಟ್‌ ಮೆಟ್ಟಿಲು ಹತ್ತಿ ಸುಸ್ತಾದವರಿಗೆ ಆಸರೆಯಾದ ‘ಅದಾಲತ್‌’: ಮತ್ತೆ ಒಂದಾದ ನೂರಾರು ದಂಪತಿಗಳು,₹3,000 ಕೋಟಿ ಪರಿಹಾರ,ದಾಖಲೆಯ 78.79 ಲಕ್ಷ ಕೇಸ್‌ಗಳಿಗೆ ಶಾಶ್ವತ ಮುಕ್ತಿ!
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
    NEET ಹಂಗಾಮ ನೀಟಾಗಿ ಅಂತ್ಯ ಕಾಣುತ್ತಾ…?!ಮೋದಿಯ ‘ತಡವಾದ ಪ್ರತಿಕ್ರಿಯೆ’-ಕೊನೆಗೂ ವಾಂಗ್ಚುಕ್ ಉಪವಾಸ ಅಂತ್ಯ… ಆದರೆ … ‘ಕಾಕ್ರೋಚ್’ ಹೋರಾಟ ಮುಂದುವರಿಕೆ!ಮುಂದೇನು??
    ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!
    ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
    5 ದಿನಗಳ ಬಿಡದಿ ಹೋರಾಟಕ್ಕೆ ಪೊಲೀಸರ ಬ್ರೇಕ್! ರೈತರು ವಶಕ್ಕೆ,“ಭೂಮಿ ಉಳಿಸಲು ಜೈಲಿಗೂ ಸಿದ್ಧ” ಎಂದ ದೇವೇಗೌಡ…!
    ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
    ತನ್ನ ಹಾಗೂ ನಾದಿನಿಯ ಮೂರುವರೇ ವರ್ಷದ ಮಕ್ಕಳನ್ನು ಬಾವಿಗೆ ಎಸೆದ ತಾಯಿ…!
    ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
    ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    ಕರಾವಳಿ ಗಣೇಶೋತ್ಸವ ಭರ್ಜರಿ ಸಿದ್ಧತೆ… ಭದ್ರತೆಯ ನಡುವೆ ಭಕ್ತಿ, ಸಂಭ್ರಮ!
    🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
    ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!