📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?

    ಉಡುಪಿ/ಕುಂದಾಪುರ: ಜಾಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ತಕರಾರು ಕತ್ತಿ, ಹಾರೆ ಹಾಗೂ ದೊಣ್ಣೆಗಳಿಂದ ಹೊಡೆದಾಟದ ಮಟ್ಟಕ್ಕೆ ತಲುಪಿರುವ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಆಲೂರು ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

    ಆಲೂರು ಗ್ರಾಮದ ಸರೋಜ ಹಾಗೂ ನೆರೆಮನೆಯ ವಸಂತ ಶೆಟ್ಟಿ ಕುಟುಂಬದ ನಡುವೆ ಕೃಷಿ ಭೂಮಿಯ ಗಡಿ ಹಾಗೂ ಜಾಗದ ವಿಚಾರವಾಗಿ ಬಹುಕಾಲದಿಂದ ವಿವಾದವಿದ್ದು, ಈ ಸಂಬಂಧ ಸಿವಿಲ್ ನ್ಯಾಯಾಲಯದಲ್ಲಿಯೂ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಇದೇ ವಿವಾದಿತ ಜಾಗದ ಬೇಲಿಯನ್ನು ಸರಿಪಡಿಸುವ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ಬಳಿಕ ಹೊಡೆದಾಟ ನಡೆದಿದೆ.

    ವಸಂತ ಶೆಟ್ಟಿ ನೀಡಿರುವ ದೂರಿನ ಪ್ರಕಾರ, ಸರ್ವೇ ನಂಬರ್ 26/5ರಲ್ಲಿರುವ 28 ಸೆಂಟ್ಸ್ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದು, ಹಳೆಯ ಬೇಲಿಯನ್ನು ಸರಿಪಡಿಸಲು ಪುತ್ರ ಅಕ್ಷಯ ಶೆಟ್ಟಿ ಜತೆ ತೆರಳಿದ್ದರು. ಈ ವೇಳೆ ಸರೋಜ ಹಾಗೂ ಮೂಕಾಂಬು ಬೇಲಿ ಸರಿಪಡಿಸುವುದನ್ನು ತಡೆದು ಅವಾಚ್ಯವಾಗಿ ನಿಂದಿಸಿ, ಕೈಯಲ್ಲಿದ್ದ ಹಾರೆ ಹಾಗೂ ಕತ್ತಿಯನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಸರೋಜ ಅವರು ಮರದ ಕೋಲಿನಿಂದ ತಮ್ಮ ತಲೆಗೆ ಹೊಡೆದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    Also Read  ಮೊಬೈಲ್ ನಂಬರ್ ದುರ್ಬಳಕೆ; ನಿವೃತ್ತ ಉದ್ಯೋಗಿಯ ವಿವಿಧ ಬ್ಯಾಂಕ್ ಖಾತೆಗಳಿಂದ ₹2.12 ಕೋಟಿ ಆನ್‌ಲೈನ್ ವಹಿವಾಟು

    ಘಟನೆಯಲ್ಲಿ ಅಕ್ಷಯ ಶೆಟ್ಟಿ ಅವರ ತಲೆಗೆ ಗಾಯವಾಗಿದ್ದು, ರಕ್ತಸ್ರಾವವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವೈರಲ್ ವಿಡಿಯೋದಿಂದ ಎದ್ದಿರುವ ಪ್ರಶ್ನೆಗಳು

    ಇದೀಗ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಡಿಯೋದಲ್ಲಿನ ದೃಶ್ಯಗಳ ಆಧಾರದಲ್ಲಿ ನೋಡಿದಾಗ, ವಸಂತ ಶೆಟ್ಟಿ ಹಾಗೂ ಅಕ್ಷಯ ಶೆಟ್ಟಿ ಅವರು ವಿವಾದಿತ ಬೇಲಿಯನ್ನು ತೆರವುಗೊಳಿಸಲು ಮುಂದಾಗಿರುವುದು ಹಾಗೂ ಅವರ ಕೈಯಲ್ಲಿ ಕತ್ತಿ ಮತ್ತು ಹಾರೆ ಇರುವ ದೃಶ್ಯಗಳು ಕಂಡುಬರುತ್ತವೆ ಎನ್ನಲಾಗುತ್ತಿದೆ.

    ಇದೇ ವೇಳೆ ಎದುರಿನವರು ಬೇಲಿ ತೆರವುಗೊಳಿಸುವುದನ್ನು ತಡೆಯಲು ಮುಂದಾಗಿರುವಂತೆ ದೃಶ್ಯಗಳು ಕಾಣಿಸುತ್ತವೆ. ಅಕ್ಷಯ್ ಹಾಗೂ ಅವರ ತಂದೆ ಕತ್ತಿ ಹಾಗೂ ಹಾರೆ ಹಿಡಿದು ಮುಂದೆ ಬರುತ್ತಿರುವ ಸಂದರ್ಭದಲ್ಲಿ ನಡೆದ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಅಕ್ಷಯ ಶೆಟ್ಟಿ ಮುನ್ನುಗ್ಗಿದಂತೆ ಹೋದಾಗ ಅವರ ತಲೆಗೆ ಗಾಯವಾಗಿರುವ ಸಾಧ್ಯತೆ ಇದೆ. ಲಭ್ಯ ವಿಡಿಯೋವನ್ನು ನೋಡಿದವರಲ್ಲಿ  ನಾನಾ ಚರ್ಚೆಗೆ ಕಾರಣವಾಗಿದೆ.

    Also Read  ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…

    ಆದರೆ, ವಿಡಿಯೋದಲ್ಲಿನ ದೃಶ್ಯಗಳ ಆಧಾರದ ಮೇಲೆ ಮಾತ್ರ ಘಟನೆಯ ಸಂಪೂರ್ಣ ಸತ್ಯಾಸತ್ಯತೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಅನ್ನುವುದು ನಿಜಾನೇ. ವಿಡಿಯೋಗಿಂತ ಮೊದಲು ಏನಾಗಿದದೇ, ಯಾರು ಮೊದಲು ಹಲ್ಲೆಗೆ ಮುಂದಾದರು ಮತ್ತು ಗಾಯ ಹೇಗೆ ಸಂಭವಿಸಿತು ಎಂಬುದನ್ನು ಪೊಲೀಸ್ ತನಿಖೆ ಹಾಗೂ ಲಭ್ಯವಿರುವ ಸಂಪೂರ್ಣ ವಿಡಿಯೋ ದೃಶ್ಯಗಳ ಪರಿಶೀಲನೆಯಿಂದಲೇ ಸ್ಪಷ್ಟಪಡಿಸಬೇಕಿದೆ.

    ದೂರು ಸ್ವೀಕಾರದ ಬಗ್ಗೆಯೂ ಚರ್ಚೆ

    ಒಂದೆಡೆ ಜಾಗದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಬೇಲಿ ತೆರವುಗೊಳಿಸಲು ಮುಂದಾದ ಆರೋಪ ಕೇಳಿಬಂದಿದ್ದರೆ, ಮತ್ತೊಂದೆಡೆ ಅಕ್ಷಯ ಶೆಟ್ಟಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಡಿಯೋ ನೋಡುವಾಗ ಅಕ್ಷಯ್ ಶೆಟ್ಟಿ ಹಾಗೂ ಅವರ ತಂದೆಯವರ ತಪ್ಪು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅವರುಗಳೇ ಬೇಲಿಯನ್ನು ಮುರಿದು ಹಾಕುವ ಪ್ರಯತ್ನ ಹಾಗೂ ಎದುರಾಳಿಗಳನ್ನು ಬೆದರಿಸುವ ರೀತಿಯ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂತು. ಜೊತೆಗೆ ಕತ್ತಿ ಹಾಗೂ ಗುದ್ದಲಿಯ ಮೂಲಕ ಎದುರಾಳಿಗಳ ಮೇಲೆ ದಾಳಿ ಮಾಡುವ ರೀತಿಯಲ್ಲಿ ದೃಶ್ಯ ಕಂಡು ಬರುತ್ತದೆ ಹಾಗೆಯೇ ಅದೇ ಸಮಯದಲ್ಲಿ ಎದುರಾಳಿಗಳು ಹಿಂದಕ್ಕೆ ಸರದು ಮತ್ತೆ ಮರದ ಪೋಲನ್ನು ಬೀಸಿದ್ದು ಕಂಡುಬರುತ್ತದೆ. ಅದು ಅಕ್ಷಯ್ ತಲೆಗೆ ತಾಗಿದ್ದು ನಿಜಾನೇ ಹಾಗೂ ರಕ್ತ ಬಂದಿದ್ದು ನಿಜಾನೇ. ಅದರ ನಡುವೆಯೂ ಬೇಲಿಯನ್ನು ಕಿತ್ತು ಬಿಸಾಡುವ ರೀತಿಯಲ್ಲಿ ವರ್ತಿಸಿದ್ದು ಕಂಡು ಬರುತ್ತದೆ. ಹಾಗಾಗಿ ಇಲ್ಲಿ ವಿಡಿಯೋ ಕಥೆ ಬೇರೆ ಅದನ್ನೇ ಹೇಳುತ್ತಿದೆ.

    Also Read  ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ

    ವೈರಲ್ ವಿಡಿಯೋದಲ್ಲಿನ ದೃಶ್ಯಗಳು ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿನ ಆರೋಪಗಳ ನಡುವೆ ಯಾವುದೇ ವ್ಯತ್ಯಾಸವಿದೆಯೇ? ಗಾಯಗೊಂಡ ಅಕ್ಷಯ ಶೆಟ್ಟಿ ಅವರ ಮೇಲೆ ದಾಳಿ ನಡೆದಿತ್ತೇ ಅಥವಾ ಗಲಾಟೆಯ ಸಂದರ್ಭದಲ್ಲಿ ಗಾಯವಾಗಿತ್ತೇ? ಬೇಲಿ ತೆರವುಗೊಳಿಸಲು ಯಾರು ಮೊದಲು ಮುಂದಾದರು? ಕತ್ತಿ ಮತ್ತು ಹಾರೆಗಳನ್ನು ಸ್ಥಳಕ್ಕೆ ಯಾರು ತಂದಿದ್ದರು? ಎಂಬ ಹಲವು ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.

    ಘಟನೆಯ ಎರಡೂ ಬದಿಗಳ ದೂರಿನ ಆಧಾರ, , ಸ್ಥಳ ಪರಿಶೀಲನೆ ಹಾಗೂ ವೈರಲ್ ವಿಡಿಯೋ ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸಿ ನಿಖರವಾದ ಸತ್ಯವನ್ನು ಹೊರತರಬೇಕಿದೆ. ನ್ಯಾಯಾಲಯದಲ್ಲಿ ಜಾಗದ ವಿವಾದ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಕಾನೂನು ಕೈಗೆತ್ತಿಕೊಳ್ಳುವ ಬದಲು ಎರಡೂ ಕುಟುಂಬಗಳು ನ್ಯಾಯಾಂಗ ಪ್ರಕ್ರಿಯೆಯನ್ನು ಗೌರವಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಹೋದರಿಯ ಎಲುಬುಗಳೊಂದಿಗೆ ಬ್ಯಾಂಕ್ ಗೆ ಬಂದ ಅಣ್ಣ…!ದಾಖಲೆ ನಿಯಮಗಳ ನಡುವೆ ಸೋತ ಮಾನವೀಯತೆ”
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
    ಕೋಟಿ ನಕಲಿ ಔಷಧ ಜಾಲದ ವಿರುದ್ಧ ಬಿಗಿ ಕ್ರಮ..ಕಿಂಗ್‌ಪಿನ್ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ಪತ್ತೆ…!
    ಮೋದಿ ಸರ್ಕಾರಕ್ಕೆ ಮತ್ತೊಂದು ಶಾಕ್ …ಕೇಂದ್ರ ಸಚಿವ ಸಂಪುಟಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
    30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
    ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
    ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    “ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
    ಒಬ್ಬರೇ ಹಾಗಾಗಿ ಕಾರಿನಲ್ಲಿ ಯಾಕೆ? ಫ್ಲೈಟ್ ಫೇರ್ ಜಾಸ್ತಿ ಇದೆ..ಟ್ರೈನ್ ಲೇಟ್ ಆಗುತ್ತೆ..so ಹೆಗೋಗೋಣ….!? ಹೀಗೂ ಹೋಗ್ಬಹುದು ತಿಳ್ಕೊಳ್ಳಿ..
    ದೇವರ ಮುಂದೆ ಸಾಲಿನಲ್ಲಿ ನಿಲ್ಲಲೇಬೇಕು! ಮಂತ್ರಿ ಇರಲಿ, ಸೆಲೆಬ್ರಿಟಿ ಇರಲಿ…ಅಧಿಕಾರ ಇರಲಿ, ಅಂತಸ್ತು ಇರಲಿ…”ವಿಐಪಿ ದರ್ಶನ”ಕ್ಕೆ ಹೈಕೋರ್ಟ್ ಕೊಟ್ಟ ಚಾವಟಿ ಏಟು!
    ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ – ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”
    ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
    ಖಾದರ್‌ರ “ಉರ್ದು ಹಬ್ಬ “ಪ್ರಸ್ತಾಪಕ್ಕೆ ಬ್ರೇಕ್ ,ವಿಧಾನಸೌಧದ ಮೆಟ್ಟಿಲಲ್ಲಿ ಖಾಸಗಿ ಕಾರ್ಯಕ್ರಮ…!?
    ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
    ಗುರುವಾಯನಕೆರೆ ಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
    ಸಂಸದ ಸಂಜಯ್ ಅರೋರ ಬಂಧನ…. ಉಳಿದ ಮೂರು ಸಂಸದರನ್ನು ಸೆಳೆಯಲು ಈ ಅನೈತಿಕ ಮಾರ್ಗ ಎಂದು ಎಎಪಿ.
    ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
    ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
    ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    ಕಾಂಗ್ರೆಸ್–ಮುಸ್ಲಿಂ ಸಮುದಾಯ ಸಂಬಂಧದಲ್ಲಿ ದೊಡ್ಡ ಬಿರುಕು?
    ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!