📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ

    ಬಂಟ್ವಾಳ: ವ್ಯಾಪಾರದ ಹಣ ಸಂಗ್ರಹಿಸಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯ ಉದ್ಯೋಗಿಯನ್ನು ಅಡ್ಡಗಟ್ಟಿ, ಕಣ್ಣಿಗೆ ಕಾರದ ಪುಡಿ ಎರಚಿ ಹಾಗೂ ತಲವಾರು ತೋರಿಸಿ ಬೆದರಿಸಿ ₹8.52 ಲಕ್ಷ ನಗದು ದೋಚಿಕೊಂಡು ನಾಲ್ವರು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಳೆ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

    ಮಂಗಳೂರಿನ ಕಣ್ಣೂರು ಮೂಲದ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ದರೋಡೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.

    ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ಅಂಗಡಿಗಳಿಂದ ನಗದು ಹಣ ಸಂಗ್ರಹಿಸಲು ಮಯ್ಯದಿ ಅವರು ಇಂದು ಬೆಳಗ್ಗೆ ಬೈಕ್‌ನಲ್ಲಿ ತೆರಳಿದ್ದರು. ವಿವಿಧ ಪ್ರದೇಶಗಳಲ್ಲಿ ಹಣ ಸಂಗ್ರಹಿಸಿದ ಬಳಿಕ ಬಂಟ್ವಾಳ ತಾಲೂಕಿನ ಕಕ್ಕಪದವಿನಿಂದ ಪಾಣೆಮಂಗಳೂರಿನತ್ತ ಬೈಕ್‌ನಲ್ಲಿ ಹಿಂದಿರುಗುತ್ತಿದ್ದರು.

    Also Read  ಪಶ್ಚಿಮ ಬಂಗಾಳದಲ್ಲಿ ಗುಂಡಾಗಿರಿ ಮುಂದುವರಿಕೆ

    ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಳೆ ಸಮೀಪದ ನಿರ್ಜನ ಪ್ರದೇಶಕ್ಕೆ ತಲುಪುತ್ತಿದ್ದಂತೆ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿ ಬಂದ ನಾಲ್ವರು ಅಪರಿಚಿತರು ಮಯ್ಯದಿ ಅವರ ಬೈಕ್‌ಗೆ ಅಡ್ಡಗಟ್ಟಿ ನಿಲ್ಲಿಸಿದ್ದಾರೆ ಎನ್ನಲಾಗಿದೆ.

    ಈ ವೇಳೆ ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿ, ತಲವಾರು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಬಳಿಕ ಅವರ ಬಳಿಯಿದ್ದ ₹8,52,000 ನಗದು ಹಣವಿದ್ದ ಬ್ಯಾಗ್‌ನ್ನು ಕಸಿದುಕೊಂಡು ಎರಡು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.

    ಘಟನೆಯಿಂದ ಆತಂಕಗೊಂಡ ಮಯ್ಯದಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಗುರುತು ಹಾಗೂ ದರೋಡೆಗೆ ಪೂರ್ವಯೋಜನೆ ನಡೆದಿತ್ತೇ ? ಗೊತ್ತಿದ್ದವರೇ ಈ ಕೆಲಸವನ್ನು ಅಪರಾಧಿಗಳಿಂದ ಮಾಡಿಸಿದರೆ? ಹಾಗೆ ಮಾಡಿಸಿದ್ದರೆ ಯಾರಿರಬಹುದು?  ಹಾಗೆಯೇ ಅವರು ಎಲ್ಲೆಲ್ಲಾ ಹಣ ಕಲೆಕ್ಷನ್ ಮಾಡಿಕೊಂಡು ಬಂದಿದ್ದಾರೋ ಅವರಲ್ಲಿ ಯಾರಾದರೂ ಈ ಕೆಲಸ ಮಾಡಿಸಿರಬಹುದು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯು ಯಾವಾಗಲೂ ಹಲವು ಆಯಾಮಗಳಲ್ಲಿ ಇರುತ್ತದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR
    ದಲಿತ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಆರೋಪಿಗಳು ಬಂಧನ
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
    KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತ್
    ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?
    ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    12 ದಿನಗಳ ಸಂಗೀತ ಸಂಭ್ರಮಕ್ಕೆ ವಿಶ್ವದಾಖಲೆಯ ಗರಿ! ಮಂಗಳೂರಿನ ಕೊಂಕಣಿ ಹಾಡುಗಳಿಗೆ ಗಿನ್ನೆಸ್ ಗೌರವ
    ಮಂಗಳೂರಿನ ಪ್ರಜ್ವಲ್ ಶೆಟ್ಟಿ ಈಗ ರಫೇಲ್ ಪೈಲಟ್‌! ಕರಾವಳಿಗೆ ಹೆಮ್ಮೆಯ ಸಾಧನೆ
    2029ರೊಳಗೆ 21 ಎನ್‌ಡಿಎ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
    ಹಿರಿಯಡ್ಕದ ಬಾರಿನಲ್ಲಿ ಸರಿ ಕುಡಿದು ಗುಂಡಾಗಿರಿ, ಬಿಯರ್ ಬಾಟಲಿಯಿಂದ ಹಲ್ಲೆ
    ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
    ಬಾಳೆಕುದ್ರು ಮಠದ ಸ್ವಾಮೀಜಿ ವಿರುದ್ಧ ಭಕ್ತರ ಆಕ್ರೋಶ; ಶಿರ್ವ, ಜಾಗೆಲೆ ಬೃಹತ್ ಪ್ರತಿಭಟನೆ
    ಸತೀಶ್’ ಆಗಿ ಹೋದವ, ‘ಸಲೀಂ’ ಆಗಿ ವಾಪಸ್ …!26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಮಗನ ಭಾವುಕ ಕಥೆ
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ಡೆಲಿವರಿ ಬಾಯ್ ಗೆ “₹500 ಟಿಪ್… !” video viral ಅಸಲಿ ಕಥೆ ಏನು..!?
    ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
    ಅಲ್ಪಸಂಖ್ಯಾತರ ಘಟಕ ಬರ್ಕಾಸ್ತು- ಡಿಕೆ ಶಿವಕುಮಾರ್ ಗಟ್ಟಿ ನಿರ್ಧಾರ.
    ಪಾಕಿಸ್ತಾನದಿಂದ ನೀರಿನ ವಿಚಾರದಲ್ಲಿ ಕಠಿಣ ಎಚ್ಚರಿಕೆ; ನೀರಿಗಾಗಿ ಯುದ್ದಕ್ಕೂ ಸಿದ್ದವೆಂದ ಪಾಕ್ ….!
    ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ..! ಸಾರ್ವಜನಿಕ ಸಾರಿಗೆ ಬಳಸಿ ,ಇಂಧನ ಉಳಿಸಿ ,Work From Home ಮಾಡಿ ಎಂದಿದ್ದ ಮೋದಿ… ಈಗ ಅದರ ಅರ್ಥ ಸ್ಪಷ್ಟವಾಗುತ್ತಿದೆಯೇ?
    ವಿಪರೀತ ಸೆಕೆಯಿಂದ ಬಳಲುತ್ತಿರುವಾಗಲೇ ಕರೆಂಟ್ ತೆಗೆದ ದುಷ್ಟ ಮೆಸ್ಕಾಂ
    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?
    ₹6,695 ಕೋಟಿಯ ಮೆಗಾ ಪ್ರಾಜೆಕ್ಟ್‌ಗೆ ಮಳೆಯ ಅಗ್ನಿಪರೀಕ್ಷೆ-ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ
    “ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು”: ಡಾ. ಅಲ್ಲಮಪ್ರಭು ಶ್ರೀಗಳು