📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ

    ಭಾರತೀಯ ಜನತಾ ಪಕ್ಷ ಕಳೆದ ಹತ್ತು ವರ್ಷದಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿಯೇ, ತರಹೆವಾರಿಯ ಪ್ಲಾನ್ ರೂಪಿಸಿಕೊಂಡು ಬಹುತೇಕವಾಗಿ ರಾಷ್ಟ್ರದಲ್ಲಿ  ನಡೆದ ಹಲವು ಚುನಾವಣೆಯಲ್ಲಿ, ದಿಗ್ವಿಜಯ ಸಾಧಿಸಿರುವ ಭಾರತೀಯ ಜನತಾ ಪಕ್ಷವಿವತ್ತು, ಪಶ್ಚಿಮ ಬಂಗಾಳವನ್ನೂ ಸಹ ಗೆದ್ದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶದ ಅಕ್ರಮ ನುಸುಳುಕೋರರ ಪರವಾಗಿರುವ ಸರ್ಕಾರ ಟಿಎಂಸಿ ಇದೆ ಎಂದು ಬಿಂಬಿಸಿಯೇ ಜನರ ಬೆಂಬಲ ಪಡೆದು ಆಯ್ಕೆಯಾಗಿರುವ ಬಿಜೆಪಿ,  ಈಗ ತತಕ್ಷಣವೇ ಆ ಎಲ್ಲಾ ಬಾಂಗ್ಲಾ ಅಕ್ರಮ ವಾಸಿಗಳನ್ನು ಅಂದರೆ ನುಸುಳುಕೋರರನ್ನು ಹೊರಗೆ ಅಟ್ಟಬೇಕು. ಆ ಕೆಲಸವು ಬಹುತೇಕವಾಗಿ, ತಿಂಗಳೊಳಗೆ ಆಗುತ್ತದೆ ಎನ್ನುವ ನಂಬಿಕೆ ದೇಶವಾಸಿಗಳದ್ದು.

               ಅದೆಲ್ಲವೂ ಇರಲಿ, ಅನೇಕ ಕಾರಣಗಳಿಂದ, ಸರ್ಕಾರದ ಗೊಂದಲಕಾರಿ ನೀತಿಗಳಿಂದಾಗಿ ಇಡೀ ದೇಶದ ಜನರು, ಅದರಲ್ಲೂ ಮಧ್ಯಮವರ್ಗ ಸಂಕಷ್ಟದಲ್ಲಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ವಿಪರೀತ ಸಂಕಷ್ಟದಿಂದ ಬಳಲುತ್ತಿದ್ದಾರೆ. ಅದಕ್ಕೆ ಕಾರಣ ಆರ್ಥಿಕ ದುಸ್ತಿತಿ. ಇವತ್ತು ಯಾರನ್ನು ಬೇಕಾದರೂ ಕೇಳಿ ಹಣ ಯಾರಹತ್ತಿರ ಇದೆ ಅಂದು, ಸರ್ಕಾರಿ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ A ಗ್ರೇಡ್ ರಾಜಕಾರಣಿಗಳ ಬಳಿ ಮಾತ್ರವೇ ಹಣವಿದೆ ಎಂದು, ಸಾಮಾನ್ಯ ಜನರೂ ಕೂಡ  ಹೇಳಿಕೊಳ್ಳುತ್ತಿದ್ದಾರೆ ಎಂದರೆ, ಪರಿಸ್ಥಿತಿ ಎಲ್ಲಿಗೆ ಬಂದಿದೆ ಅನ್ನುವುದನ್ನು ಊಹಿಸಿ ನೋಡಿ.

    Also Read  ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ

    ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ಸಾಮಾನ್ಯ ಜನರ ಕಷ್ಟದ ಬಗ್ಗೆ ಚಿಂತಿಸಬೇಕಿದೆ. ಆರೋಗ್ಯ ಭದ್ರತೆ, ಶಿಕ್ಷಣ ಭದ್ರತೆ ಹಾಗೂ ಉದ್ಯೋಗ ಭದ್ರತೆ ಕಡೆಗೆ ಚಿಂತನೆ ಯಾಗಬೇಕಿದೆ. ಈ ಮೂರೂ ಭದ್ರತೆಗಳು ಇಲ್ಲವೇ ಇಲ್ಲ. ಕೆಲವು ಬಾರಿ ಈ ವಿಚಾರಗಳು ಪ್ರಸ್ತಾಪವಾಗುತ್ತವೆ ನಿಜ. ಆದರೆ, ಅದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಭಾಷಣಕ್ಕೆ ಮಾತ್ರ ಸೀಮಿತವಾಗಿದೆ, ಸ್ಟೇಟ್ಮೆಂಟಿಗೆ ಮಾತ್ರ ಸೀಮಿತವಾಗಿದೆ. ಜನಸಾಮಾನ್ಯರಿಗೆ ಅದರ ಫಲವು ಲಭ್ಯವಾಗುತ್ತಿಲ್ಲ. ಬಡವರ ಬಿಪಿಎಲ್ ಕಾರ್ಡ್ ಅಥವಾ ಇನ್ನೇನೋ ಕಾರ್ಡಿನ ಅವಶ್ಯಕತೆ ಇದೆ ಎನ್ನಬಾರದು. ರಾಷ್ಟ್ರದ ಪ್ರತಿಯೊಬ್ಬ ಜನರಿಗೂ, ಉಚಿತವಾದಂತಹ ಆರೋಗ್ಯ ಭದ್ರತೆಯನ್ನ ಸರ್ಕಾರವು ಒದಗಿಸಬೇಕು, ಇಲ್ಲಿ ಯಾವುದೇ ಇನ್ಶೂರೆನ್ಸ್ ಕಂಪನಿಯನ್ನು ಅಡ್ಡ ತರುವ ಅವಶ್ಯಕತೆ ಇಲ್ಲ. ಕುದ್ದು ಸರ್ಕಾರವೇ ಅದರ ಹೊಣೆಯನ್ನು ಹೊರಬೇಕು. ಅದೇ ರೀತಿ ಶಿಕ್ಷಣ ವ್ಯವಸ್ಥೆ

    ಇವತ್ತು ಜನಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯಕೋಸ್ಕರ ಉತ್ತಮ ಶಿಕ್ಷಣಕ್ಕಾಗಿ ಅನಿವಾರ್ಯ ಅಥವಾ ಹಾಗೆ  ಬಿಂಬಿತವಾಗಿರುವ ಟ್ರೆಂಡಿನ ಕಾರಣದಿಂದಾಗಿ ಉತ್ತಮ ಶಿಕ್ಷಣದ ಕನಸುಗಳನ್ನು ಹೊತ್ತು ಆರ್ಥಿಕ ಹೊರೆಯನ್ನು ಹೊರುತ್ತಿದ್ದಾರೆ. ಆ ಹೊರೆಯನ್ನು ಇಳಿಸುವ ಕೆಲಸ ಖುದ್ದು ಸರ್ಕಾರವೇ ಮಾಡಬೇಕಿದೆ. ಇಲ್ಲಿಯೂ ಸಹ, ಯಾವುದೇ ರೀತಿಯ ಬಡವ ಶ್ರೀಮಂತ ಜಾತಿ ಧರ್ಮ ಇದ್ಯಾವುದೂ ಇಲ್ಲದೆ, ರಾಷ್ಟ್ರದ ಪ್ರತಿ ಮಕ್ಕಳಿಗೂ ಉಚಿತ ಶಿಕ್ಷಣವನ್ನು ಸರ್ಕಾರ ನೀಡಲೇಬೇಕು. ಹಾಗೆಯೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿಚಾರವಾಗಿ, ಕಠಿಣ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಕರೆಕ್ಟ್ ಸಮಯ.

    Also Read  ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?

    ಉದ್ಯೋಗ ಭದ್ರತೆ

    ಹಾಗೆಯೇ, ಉದ್ಯೋಗ ಭದ್ರತೆಯ ಅವಶ್ಯಕತೆ ಇದೆ. ರಾಷ್ಟ್ರದ ಪ್ರತಿಯೊಬ್ಬನಿಗೂ ಉದ್ಯೋಗ ಕೊಡುವುದು ಸುಲಭವಲ್ಲ, ಅದು ಅಸಂಭವ ಅನ್ನುವುದು ಗೊತ್ತಿದೆ. ಆದರೆ, ಶಿಕ್ಷಣ ಪೂರೈಸಿದ ವ್ಯಕ್ತಿಯ ಟ್ಯಾಲೆಂಟಿಗೆ ಅನುಗುಣವಾಗಿ ಹಾಗೂ ಅರ್ಹತೆಗೆ ಅನುಗುಣವಾಗಿ ಆತನನ್ನು ಸಮಾಜ ಕಟ್ಟುವ, ರಾಷ್ಟ್ರ ಕಟ್ಟುವ ವಿಚಾರದಲ್ಲಿ ಬಳಸಿಕೊಳ್ಳಬೇಕು. ಸರ್ಕಾರದ ಕೆಲಸ. ಸರ್ಕಾರವು ತನ್ನ ಆ ಕೆಲಸದ ಕಡೆಗೆ ಇಲ್ಲಿವರೆಗೂ ನೋಡಿಲ್ಲ ಇನ್ನು ಮುಂದಾದರೂ ನೋಡಬೇಕು. ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ನೆಮ್ಮದಿಯಿಂದ ಬದುಕಲು, ನೆಮ್ಮದಿಯಿಂದ ನಿದ್ದೆ ಮಾಡಲು, ನೆಮ್ಮದಿಯಿಂದ ಊಟ ಮಾಡಲು ಅವಕಾಶ ಸಕ್ಕಲ್ಪಿಸಿದರೆ ರಾಷ್ಟ್ರದ 90% ಸಮಸ್ಯೆ ನಿವಾರಣೆ ಯಾಗುತ್ತದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮುಂದಡಿ ಇಡಬೇಕಿದೆ. ಕೇವಲ ಚುನಾವಣೆಯನ್ನು ಗೆಲ್ಲುವುದು ಮಾತ್ರ ಅದರ ಉದ್ದೇಶವಾಗಬಾರದು. ಚುನಾವಣೆಯಲ್ಲಿ ಗೆದ್ದ ನಂತರ, ಜನಸಾಮಾನ್ಯರಿಗೆ ನಿಯತ್ತಾಗಿ, ಹಾಗೂ ನೈಜವಾಗಿ ಸಂಪೂರ್ಣ ಬೆಂಬಲದೊಂದಿಗೆ ಅವರ ಏಳಿಗೆಯನ್ನು ಬಯಸಬೇಕು. ಇಲ್ಲಿಯವರೆಗೆ ಆಗಿಲ್ಲ ಅನ್ನುವುದು ಎಷ್ಟು ಸತ್ಯವೋ, ಮುಂದೆ ಆಗುತ್ತದೆಯೇ ಎಂಬ ಪ್ರಶ್ನೆ ಇರುವುದು ಕೂಡ ಅಷ್ಟೇ ಸತ್ಯ.

    Also Read  ಗೋವಾ ಕ್ಯಾಲಂಗಟ್ ರೆಸಾರ್ಟ್‌ನಲ್ಲಿ ಕರಾವಳಿಯ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ನಾಪತ್ತೆಯಾದ ಆ ಮಹಿಳೆಗಾಗಿ ತೀವ್ರ ಶೋಧ…

    ರಾಷ್ಟ್ರದ ಜನರು, ಕೇಂದ್ರ ಸರ್ಕಾರದ ವಿಚಾರವಾಗಿ ಚುನಾವಣೆಯ ಗೆಲುವಿನ ವಿಚಾರವನ್ನು ಬದಿಗಿಟ್ಟು ದೇಶದ ಜನಸಾಮಾನ್ಯರ ಸ್ಥಿತಿ-ಗತಿಯ ಕಡೆ ಗಮನಹರಿಸಿ ಎಂಬ ಮೆಸೇಜನ್ನು ನೀಡುತ್ತಿದ್ದಾರೆ ಸಾಮಾನ್ಯ ಜನರು. ಅವರ ಪ್ರಕಾರ, ರಾಷ್ಟ್ರದ ಮಧ್ಯಮ ವರ್ಗವು ವಿಪರೀತ ಅನ್ನುವಷ್ಟು ಕಷ್ಟದಲ್ಲಿದೆ. ಅವರ ಬೆಂಬಲಕ್ಕೆ ಸರ್ಕಾರವು ಬರಬೇಕಿದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಏನೆಂದರೆ, ಈ ವಿಚಾರದಲ್ಲೂ ಬಿಪಿಎಲ್ ಕಾರ್ಡ್ ಅಥವಾ ಜಾತೀಯ ಟ್ರಂಪ್ ಕಾರ್ಡ್ ಬಳಸಬೇಡಿ ಅನ್ನುವುದಾಗಿದೆ. ಮಧ್ಯಮ ವರ್ಗದ ಎಲ್ಲಾ ಧರ್ಮ ಹಾಗೂ ಸಮುದಾಯದ ಜನರಿಗೂ, ಸರ್ಕಾರದ ನೀತಿಗಳಿಂದಾಗಿ ಸಾಕಷ್ಟು ತೊಂದರೆಗಳು ದೊಡ್ಡ ಪ್ರಮಾಣದಲ್ಲಿಯೂ ಆಗಿದೆ. ಮಾಧ್ಯಮ ವರ್ಗದವರ ಧ್ವನಿ ಬಲವಾಗಿಲ್ಲದ ಕಾರಣದಿಂದಾಗಿ ಅದು ಆಡಳಿತ ನಡೆಸುವವರ ಕಿವಿಗೆ ತಲುಪುವುದೇ ಇಲ್ಲ. ಆಡಳಿತ ನಡೆಸುವವರ ಕಿವಿಗೆ ತಲುಪಿಸುವ ಕೆಲಸವನ್ನು ಈ ಮಾಧ್ಯಮ ಸಂಸ್ಥೆಯು ಮಾಡುತ್ತಿದೆ. ಈಗಾದರೂ ಎಚ್ಚೆತ್ತುಕೊಳ್ಳಬೇಕಿದೆ ಕೇಂದ್ರ ಸರ್ಕಾರ. ಜನರ ಹಿತದೃಷ್ಟಿಯಿಂದ ಸಂಕಷ್ಟದಲ್ಲಿರುವವರ ಕೈಹಿಡಿಯುವ ಕೆಲಸ ಆಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
    ಮಂಗಳೂರಿನ ಟ್ರಾಫಿಕ್‌ಗೆ ಬ್ರೇಕ್ ಹಾಕಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್!ಯಾವೆಲ್ಲ ಬದಲಾವಣೆ ಬರಲಿದೆ?
    ಬ್ರಹ್ಮಾವರ ಅಪಾರ್ಟ್‌ಮೆಂಟ್ ರೂಮಿನಲ್ಲಿ ಯುವತಿಯ ನಿಗೂಢ ಸಾವು
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
    ಡಿಸ್ಟಿಂಕ್ಷನ್ ಪಡೆದರೆ ಸಂಭ್ರಮಿಸುತ್ತಿದ್ದ ಕಾಲ ಹೋಗಿ, ಇಂದು 99% ಬಂದರೂ ಬೀದಿಯಲ್ಲಿ ನಿಂತು ಅಳಬೇಕಾದ ದುಸ್ಥಿತಿ ..ಇದು ನಮ್ಮಇಂದಿನ ಶಿಕ್ಷಣ ವ್ಯವಸ್ಥೆ!
    ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
    ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಹುಡುಗಾಟಿಕೆ ಆಡುತ್ತಿರುವ ರಾಮಲಿಂಗಾರೆಡ್ಡಿ-ಕ್ಷೇತ್ರದ ಜನರಲ್ಲಿ ಅಸಮಾಧಾನ
    ಮೋದಿ ಸಂಪುಟದ ಒಂದು ವಿಕೆಟ್ ಪತನವಾಗುತ್ತಾ?
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯ: ಮೊದಲ ಮಹಿಳಾ ಏರ್ ವೈಸ್ ಮಾರ್ಷಲ್ ಆದ ಶಕ್ತಿ ಶರ್ಮಾ
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ಸ್ಟರ್ಲಿಂಗ್ ವಸತಿ ಶಾಲೆಯ ಶಿಸ್ತಿನ ಹೆಸರಲ್ಲಿ 12 ವರ್ಷದ ಮುಗ್ಧನ ಜೀವ ಕಸಿದ ಕ್ರೌರ್ಯ!ಅನುಮಾನಾಸ್ಪದ ಸಾವಿನ ಸುತ್ತ ಹರಡಿದ ಆಘಾತಕಾರಿ ಸತ್ಯ…ಇಲ್ಲಿದೆ
    ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
    ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
    ಗೃಹಲಕ್ಷ್ಮಿ ಹಣ ಪಡೆಯೋರೇ ಗಮನಿಸಿ! ಪತಿ ಆಧಾರ್‌ನಿಂದ ಬ್ಯಾಂಕ್ ಖಾತೆವರೆಗೆ ಹೊಸ ರೂಲ್ಸ್
    ಶಾಲೆ ಹತ್ತಿರವಿದ್ದರೂ,ಮಕ್ಕಳ ಹೆಲ್ಮೆಟ್ ನಿರ್ಲಕ್ಷಿಸಬೇಡಿ!4 ವರ್ಷದೊಳಗಿನ ಮಗುಗೂ ಹೆಲ್ಮೆಟ್ ಕಡ್ಡಾಯ!
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಪತ್ರ ಕಳುಹಿಸುವ ಅಂಚೆ ಕಚೇರಿ ಈಗ ಜೀವವಿಮೆಗೂ ಆಸರೆ ..!ಅಂಚೆ ಕಚೇರಿಯಲ್ಲೇ ಕುಟುಂಬದ ಭವಿಷ್ಯಕ್ಕೆ ಭದ್ರತೆ!
    ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
    ಡಾನ್ -3 ಸಿನಿಮಾ ಕಥೆ ಗೋವಿಂದ….!
    TVKಗೆ ಟಕ್ಕರ್? ಅಜಿತ್ ಫ್ಯಾನ್ಸ್‌ TMMK ಎಂಟ್ರಿ!ದಳಪತಿಗೆ ಎದುರಾಗಿ ಅಜಿತ್ ಫ್ಯಾನ್ಸ್‌ ಪಕ್ಷ!
    ಭರತ್ ತಿವಾರಿ ಎನ್‌ಕೌಂಟರ್ -ಬಿಹಾರ ಎಡಿಜಿಪಿಯಿಂದಲೇ ಪೊಲೀಸ್ ಲೋಪದ ಒಪ್ಪಿಗೆ: ಶಾಹಪುರ SHO ಸೇರಿ 5 ಅಧಿಕಾರಿಗಳು ಸಸ್ಪೆಂಡ್!
    ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…