📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ

    ಪಶ್ಚಿಮ ಬಂಗಾಳ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. 294 ಕ್ಷೇತ್ರಗಳನ್ನು ಒಳಗೊಂಡ ದೊಡ್ಡ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆಯುತ್ತಿರುವ ಈ ರಾಜ್ಯದಲ್ಲಿ, ಎಡಪಕ್ಷಗಳು ಬಹುತೇಕವಾಗಿ ನಶಿಸಿಹೋಗಿವೆ. ಕಾಂಗ್ರೆಸ್ ಬೆರಳೆಣಿಕೆಯ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಹೋರಾಟದಲ್ಲಿದೆ.

    ಕಳೆದ 15 ವರ್ಷದಿಂದ ಆಡಳಿತ ನಡೆಸಿಕೊಂಡು ಬರುತ್ತಿರುವ ಮಮತಾದಿದಿ, ಈಗಲೂ ಇಲ್ಲಿನ ಜನರಿಗೆ  ಫೇವರೆಟ್ ನಾಯಕಿಯಾಗಿದ್ದಾರೆ. ಆಡಳಿತ ವಿರೋಧಿಯ ಅಲೆ, ಇಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಆದರೆ ಆಡಳಿತ ವಿರೋಧಿ ಅಲೆ, ಎಬ್ಬಿಸುವ ಪ್ರಯತ್ನವನ್ನು ನಡೆದಿದೆ. ಆ ಪ್ರಯತ್ನದಲ್ಲಿ ಸಣ್ಣನೆಯ ಯಶಸ್ಸು ಕೂಡ ಪ್ರಯತ್ನ ಪಟ್ಟವರಿಗೆ ಲಭಿಸಿದೆ ಅನ್ನಬಹುದು. ಇಷ್ಟಾದರೂ ಇಲ್ಲಿ ಮಮತಾ ನೇತ್ರತ್ವದ ಟಿಎಂಸಿ ಮಗದೊಮ್ಮೆ ಅಧಿಕಾರದ ಗದ್ದುಗೆ ಏರುವತ್ತ ಸಾಗುತ್ತಿದೆ ಎನ್ನುವುದು ಬಂಗಾಲಿಗರ ದೃಢವಾದ ಮಾತು.

    ಭಾರತೀಯ ಜನತಾ ಪಕ್ಷವು ಬಂಗಾಲದಲ್ಲಿ ಟಿಎಂಸಿ ಅಧಿಕಾರಕ್ಕೆ ಮತ್ತೊಮ್ಮೆ ಬಂದರೆ, ಬಂಗಾಳ ಬಾಂಗ್ಲಾದೇಶವಾಗುತ್ತದೆ ಎಂಬ ಸ್ಲೋಗನನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಕೆಲಸ ಮಾಡಿದರು. ಇದಕ್ಕೆ ಕೌಂಟರ್ ಆಗಿ, ಟಿಎಂಸಿಯೂ ಸಹ ಬಲವಾಗಿಯೇ ಲಾತಾ ಕೊಟ್ಟಿದೆ. ಅವರು ಬಂಗಾಳದ ಅಸ್ಮಿತೆಯನ್ನು ಎದುರು ಬಿಟ್ಟಿದ್ದಾರೆ. ಬಂಗಾಳದ  ಮೇಲೆ ಹೊರಗಿನವರ ಆಕ್ರಮಣದ ಬಗ್ಗೆ ಮಾತನಾಡುತ್ತಾ, ಸೈಲೆಂಟಾಗಿ ಭಾವನಾತ್ಮಕ ಟಚ್ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮೂರುವರೆ ಕೋಟಿಯಷ್ಟು ಮಹಿಳಾ ಮತದಾರರು ಮಮತಾ ಬ್ಯಾನರ್ಜಿಯ ವಿಚಾರದಲ್ಲಿ ಜೈ ಅನ್ನುತ್ತಿರುವುದು ಬಿಜೆಪಿಯ ಹಲವು ಸ್ಲೋಗನ್ಗಳು ಸರಿಯಾಗಿ ಕೆಲಸ ಮಾಡಿಲ್ಲ ಅನ್ನುವುದರ ಸೂಚನೆಯಾಗಿದೆ.

    ಬಂಗಾಳದ ಮುಸ್ಲಿಂ ಮತದಾರರ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದ ಟಿಎಂಸಿ, ಈ ಬಾರಿ ಎರಡರಿಂದ ಮೂರು ಪರ್ಸೆಂಟ್ ಮುಸ್ಲಿಮರ ಮತವನ್ನು ಕಳೆದುಕೊಳ್ಳುವ ಸಂಭವವಿದೆ. ಅಸಾಉದ್ದಿನ ಓವೈಸಿ ನೇತೃತ್ವದ ಪಕ್ಷವನ್ನು ಬಿಜೆಪಿಯು ಇಲ್ಲಿ ಮತ ಒಡೆಯಲು ಬಿಟ್ಟಿದೆ ಎಂಬ ಪ್ರಚಾರವನ್ನು ಟಿಎಂಸಿಯ ಕೆಳಹಂತದ ನಾಯಕರು ಮನೆಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ, ದೊಡ್ಡ ಮಟ್ಟದ ನಷ್ಟವನ್ನು ಕಂಟ್ರೋಲ್ ಮಾಡಿದಂತಾಗಿದೆ ಎನ್ನಲಾಗುತ್ತಿದೆ. 

    Also Read  ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…

    2016ರಲ್ಲಿ ಟಿಎಂಸಿ, ಇಲ್ಲಿ 211 ಸ್ಥಾನವನ್ನು ಪಡೆದುಕೊಂಡಿದ್ದರೆ 2021 ರಲ್ಲಿ 215 ಸ್ಥಾನವನ್ನು ಪಡೆದುಕೊಂಡಿತ್ತು. ಬಿಜೆಪಿಯು 2021 ರಲ್ಲಿ ಭರ್ಜರಿ ಪ್ರದರ್ಶನ ನೀಡಿ 77 ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

    ಬಿಜೆಪಿಯು ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಮತಗಳ ಮೇಲೆ ಪ್ರಭಾವ ಬೀರಿತ್ತು ಅನ್ನುವುದನ್ನು ಆ ರಿಸಲ್ಟ್ ಎತ್ತಿ ತೋರಿಸಿತು. 2021ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೊನ್ನೆ ಸುತ್ತಿದ್ದವು. 

    ಈ ಬಾರಿಯೂ ಸಹ ಎಡ ಪಕ್ಷಗಳು ಚೇತರಿಸಿಕೊಳ್ಳುವ ಯಾವ ಕ್ಷಣವನ್ನು ತೋರಿಸುತ್ತಿಲ್ಲ. ಕಾಂಗ್ರೆಸ್ ಕೂಡ ಗೆಲ್ಲುವ ಹೋರಾಟದಲ್ಲಿ ಬಹಳ ಹಿಂದಿದೆ. ಸಿಂಗಲ್ ಡಿಜಿಟ್ ಕೌಂಟಿನಲ್ಲಿ ಪ್ರಯತ್ನ ನಡೆಸಿದೆಯೇ ಹೊರತು ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಪುರ ಬೆಹರಾಂಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಇರುವುವಿಕೆಯನ್ನು ತೋರ್ಪಡಿಸಿಕೊಳ್ಳುತ್ತಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಎಂಸಿ ನಡುವೆ ನೇರ ಫೈಟ್ ಇದೆ. ನಡುವೆ ಕಾಂಗ್ರೆಸ್ ಕೂಡ ಸಿಂಗಲ್ ಡಿಜಿಟ್ ಗೆಲುವಿಗಾಗಿ ಪ್ರಯತ್ನ ನಡೆಸುತ್ತಿರುವುದು ಈ ಕ್ಷೇತ್ರದಲ್ಲಿ ಕಾಣಿಸುತ್ತಿದೆ.

    ಇನ್ನುಳಿದಂತೆ, ಟಿಎಂಸಿ ಹಾಗೂ ಬಿಜೆಪಿ ಎರಡೂ ಪಕ್ಷಗಳು, ಮತದಾರರಿಗೆ ಬರಪೂರ ಗ್ಯಾರಂಟಿಗಳನ್ನು ಹಂಚುತ್ತಿವೆ. ಟಿಎಂಸಿಯ ಲಕ್ಷ್ಮಿ ಬಂಡಾರ ಯೋಜನೆ , ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ. 1500 ರಿಂದ 1700 ನೂರು ರೂಗೆ ಕೊಡುಗೆಯ ಮೊತ್ತ ಏರಿಸುವರುವುದು ಮಹಿಳೆಯರಲ್ಲಿ ಸಂತಸ ಮೂಡಿಸಿದೆ. ಬಿಜೆಪಿಯ ಮೂರು ಸಾವಿರದ ಗ್ಯಾರಂಟಿ, ವಿಶ್ವಾಸ ಗಳಿಸಲು ಸಾಧ್ಯವಾಗಿಲ್ಲ. ಇದರ ಅರ್ಥ ಇಷ್ಟೇ , ಟಿಎಂಸಿ ಈಗಲೂ ಬಂಗಾಳದಲ್ಲಿ ವಿಶ್ವಾಸವನ್ನು ಉಳಿಸಿಕೊಂಡ ಪಕ್ಷ. ಅದರಲ್ಲೂ ಮಹಿಳಾ ಮತದಾರರನ್ನು ತನ್ನೆಡೆ ಸೆಳೆದುಕೊಳ್ಳುವಲ್ಲಿ ಟಿಎಂಸಿ ಯಶಸ್ವಿಯಾಗಿದೆ. ಹಾಗೆಯೇ ಅದನ್ನು ಉಳಿಸಿಕೊಂಡಿದೆ ಕೂಡ.

    Also Read  TVKಗೆ ಟಕ್ಕರ್? ಅಜಿತ್ ಫ್ಯಾನ್ಸ್‌ TMMK ಎಂಟ್ರಿ!ದಳಪತಿಗೆ ಎದುರಾಗಿ ಅಜಿತ್ ಫ್ಯಾನ್ಸ್‌ ಪಕ್ಷ!

    ಭವಾನಿಪುರ 

    ಪಶ್ಚಿಮ ಬಂಗಾಳದ ಭವಾನಿಪುರ ಈ ಬಾರಿ ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತಿರುವ ಕ್ಷೇತ್ರವಾಗಿದೆ. ಕಾರಣ ಈ ಕ್ಷೇತ್ರದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ತನ್ನ ಪ್ರಭಾವವನ್ನು ಹೊಂದಿರುವುದು. ಆ ಪ್ರಭಾವವನ್ನು ಹೊಡೆದು ಹಾಕಲು, ಬಿಜೆಪಿಯ ಸುಮೆಂದು ಅಧಿಕಾರಿ ಈ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಈ ಹಿಂದೆ ನಂದಿ ಗ್ರಾಮದಲ್ಲಿ ಸೋಲಿಸಿದ ಹೆಗ್ಗಳಿಕೆಯನ್ನು ಹೊಂದಿರುವಂತಹ ಸುಮೆಂದು ಅಧಿಕಾರಿ ಅದೇ ಧೈರ್ಯದಲ್ಲಿ ಭವಾನಿಪುರದಲ್ಲೂ ಸಹ ಮಮತಾ ಎದುರು ಸ್ಪರ್ಧೆ ಮಾಡುತ್ತಿದ್ದಾರೆ.

    ಸುಮೇಂದು ಅಧಿಕಾರಿ ಭವಾನಿಪುರದ ಜೊತೆಗೂ ನಂದಿ ಗ್ರಾಮದಲ್ಲೂ ಸ್ಪರ್ಧೆಯಲ್ಲಿದ್ದಾರೆ. ಎರಡು ಕ್ಷೇತ್ರವನ್ನು ಟಿಎಂಸಿಯು ಈ ಬಾರಿ ತನ್ನದಾಗಿಸಿಕೊಳ್ಳಲು ತಂತ್ರಗಾರಿಕೆಯನ್ನು ಹೆಣೆದಿದೆ. ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಅಜೆಂಡಾ ಹೊಂದಿರುವ ಬಿಜೆಪಿ ನಾಯಕರಿಗೆ ಟಿಎಂಸಿ ಹಲವು ಕಡೆ ಮುಟ್ಟಿ ನೋಡಿಕೊಳ್ಳುವ ಪೆಟ್ಟನ್ನು ನೀಡುತ್ತಿದೆ. ಅದರ ಹೊರತಾಗಿಯೂ ಬಿಜೆಪಿ ಈ ಬಾರಿ 90ಕ್ಕೂ ಹೆಚ್ಚು ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುತ್ತದೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಬಿಜೆಪಿ ಹಾಗೂ ಅದರ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದರೂ, ಗುರುತರ ವಿಚಾರವನ್ನು ಎತ್ತಿ,ಪ್ರಸ್ತಾಪಿಸಿ ಟಿಎಂಸಿಯನ್ನು ಅಡಗತ್ತರಿಯಲ್ಲಿ ಸಿಲುಕಿಸುವ ಕೆಲಸ ಮಾಡುತ್ತಿದ್ದರೂ ಸಹ, ಬಿಜೆಪಿಯು ಇಲ್ಲಿ ದೊಡ್ಡ ಲಾಭವನ್ನು ಈ ಬಾರಿ ಮಾಡಿಕೊಳ್ಳುವುದಿಲ್ಲ ಅನ್ನುವುದು ಆ ವಿಶ್ಲೇಷಕರ ಸ್ಪಷ್ಟವಾದಂತಹ ನುಡಿಯಾಗಿದೆ. ಆದರೆ, ಟಿಎಂಸಿಯು ಕಳೆದ ಬಾರಿಗಿಂತ ಕಡಿಮೆ ಸೀಟು ಗೆಲ್ಲುವುದು ಪಕ್ಕಾ ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.

    Also Read  ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ

    ಟಿಎಂಸಿ ತನ್ನ ಸೀಟಿನ ಸಂಖ್ಯೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿಕೊಳ್ಳುತ್ತಿದೆ ಅಂದಮೇಲೆ, ಟಿಎಂಸಿ ಫೇವರೆಟ್ ಹೇಗಾಗುತ್ತದೆ ಎಂಬ ಪ್ರಶ್ನೆ ಎದ್ದೇಳುತ್ತದೆ. ಟಿಎಂಸಿ 15 ವರ್ಷಗಳ ಆಡಳಿತದ ನಂತರವೂ ಜನರ ವಿಶ್ವಾಸವನ್ನು ಯಶಸ್ವಿಯಾಗಿ ಇಟ್ಟುಕೊಂಡಿರುವ ಕಾರಣ, ಫೇವರೆಟ್ ಅಂತ ಕರೆದದ್ದು. ಐದು ವರ್ಷದಿಂದ ಬಂಗಾಳದ ಮೇಲೆ ಕಣ್ಣಿಟ್ಟು ನಡೆಯುತ್ತಿರುವಂತಹ ರಾಜಕೀಯ ಚಟುವಟಿಕೆ ಮತ್ತು ಆರೋಪ ಮತ್ತು ಹಿಂಸಾಚಾರ ಹಾಗೆಯೇ ದಾಳಿ ಇವೆಲ್ಲವನ್ನು ಮೆಟ್ಟಿ ನಿಲ್ಲುವುದು ಸುಲಭದ ಮಾತಲ್ಲ. ಆ ಕೆಲಸವನ್ನು ಮಮತಾದಿದಿ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ಅದರ ಪರಿಣಾಮವೇ ಹೊರಗಿನಿಂದ ಬರುವಂತಹ ಯಾವುದೇ ಆರೋಪ ಮತ್ತು ದಾಳಿಯ ವಿಚಾರದಲ್ಲಿ ಬಂಗಾಳದ ಜನರು ವಿಚಲಿತರಾದಂತೆ ಕಾಣುತ್ತಿಲ್ಲ. ದೀದಿಯ ಕಡೆ ಗಟ್ಟಿಯಾಗಿ ನಿಂತಂತೆ ಕಾಣುತ್ತಿದೆ. ಈ ಕಾರಣದಿಂದಾಗಿಯೇ ಟಿಎಂಸಿ 190 ಕ್ಷೇತ್ರದಲ್ಲಿ ಕಣ್ಣು ಮುಚ್ಚಿಕೊಂಡು ಗೆಲ್ಲುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಹೋರಾಟ ನಡೆಸಿದೆ. ಹೆಚ್ಚು ಕಡಿಮೆ 25 ಕ್ಷೇತ್ರದಲ್ಲಿ ಟಿಎಂಸಿ ಹಿಂದಿನ ಸೀಟನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ.

    ಐದು ವರ್ಷದಿಂದ ಮಾಡಿಕೊಂಡು ಬರುತ್ತಿರುವ ಪ್ರಯತ್ನ ಈ ಬಾರಿಯೂ ಸಕ್ಸಸ್ ಕೊಡುವ ದಿಕ್ಕಿನಲ್ಲಿ ಹೋಗುತ್ತಿಲ್ಲ. ಇನ್ನೂ ಒಂದು ಟರ್ಮ್, ಕಾಯ ಬೇಕಾಗಬಹುದು. ತನ್ನ ಬಲವನ್ನು 10 ರಿಂದ 15 ಕ್ಷೇತ್ರದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ ಅನ್ನೋದು ಮಾತ್ರ ಸತ್ಯ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಕರ್ನಾಟಕಕ್ಕೆ ಮಳೆ ಅಲರ್ಟ್‌ | ಸೆ.24ರಂದು ಕರಾವಳಿಗೆ ರೆಡ್‌ ಅಲರ್ಟ್‌
    ಭರ್ಜರಿ ಬಿಜೆಪಿ ವಿಜಯೋತ್ಸವ ಬೆಂಗಳೂರಲ್ಲಿ ..!ಪ್ರಧಾನಿ ಮೋದಿ ಬರ್ತಿದ್ದಾರೆ.
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
    ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
    ರಷ್ಯಾ–ಉಕ್ರೇನ್ ಯುದ್ಧ ಡ್ರೋನ್ ದಾಳಿಗೆ ರಾಜೀವ್ ಗುಪ್ತಾರ “ಕುಸುಮ್ ಗ್ರೂಪ್‌-ಔಷಧ ಘಟಕ “ಧ್ವಂಸ….!
    ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
    Forex ಟ್ರೇಡಿಂಗ್ ಹೆಸರಲ್ಲಿ 3.5 ಲಕ್ಷ ವಂಚನೆ – ಆರೋಪಿ ವಿರುದ್ಧ ಪ್ರಕರಣ ದಾಖಲು
    ₹5.85 ಕೋಟಿ ಯೋಜನೆಯ ಜಪ್ಪು ಮಂಗಳಾದೇವಿ ಬಸ್ ಟರ್ಮಿನಲ್ ಉದ್ಘಾಟನೆಗೆ ಎರಡು ಬಾರಿ ಗೌಜಿ ಸಮಾರಂಭ; ಬಸ್ ಸಂಚಾರಕ್ಕೆ ಮಾತ್ರ ಇನ್ನೂ ಮೀನ ಮೇಷ !
    ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
    ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?
    ಆಪಲ್‌ಗೆ ಭಾರತದಲ್ಲಿ ದೊಡ್ಡ ಕಾನೂನು ಶಾಕ್? App Store ನಿಯಮಗಳ ಮೇಲೆ ಆಪಲ್ vs ಭಾರತ CCI ಜಟಾಪಟಿ 
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ಕರಾವಳಿಯಲ್ಲಿ ಅಕ್ರಮ 109 ಹೋಂಸ್ಟೇಗಳು, 21ರೆಸಾರ್ಟ್‌ಗಳಿಗೆ ಶಾಕ್ ಲೋಕಾಯುಕ್ತ ಬೀಗ!ರೆಸಾರ್ಟ್‌ಗಳು ಬಂದ್!
    ಸಹೋದರಿಯ ಎಲುಬುಗಳೊಂದಿಗೆ ಬ್ಯಾಂಕ್ ಗೆ ಬಂದ ಅಣ್ಣ…!ದಾಖಲೆ ನಿಯಮಗಳ ನಡುವೆ ಸೋತ ಮಾನವೀಯತೆ”
    ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!
    “ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು