📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?

    ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚಿತ್ರನಟ ವಿಜಯ್ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತ. ದುರ್ದೈವ ಅಂದರೆ, ವಿಜಯಗೆ ಪೂರ್ಣ ಬಹುಮತ ದೊರಕದೇ ಇರುವುದು. ಸರ್ಕಾರ ನಡೆಸಲು ಇನ್ನೂ 10 ಶಾಸಕರ ಬೆಂಬಲದ ಅಗತ್ಯತೆ ಇದೆ.

           ರಾಜಕೀಯ ಒಂದು ರೀತಿಯ ಚದುರಂಗದಾಟ ಅಂತಲೇ ಅನ್ನಿಸಿಕೊಳ್ಳುತ್ತದೆ. ಯಾವಾಗ, ಯಾರನ್ನು ,ಯಾರು ಹೊಡೆದು ಹಾಕುತ್ತಾರೋ?, ಯಾವಾಗ ಚೆಕ್ ನೀಡಲಾಗುತ್ತದೆಯೋ ಹೇಳಲಾಗದು. ಸ್ವಲ್ಪವೇ ಎಡವಟ್ಟು ಮಾಡಿಕೊಂಡರು ಚೆಕ್ ಮೀಟ್ ಆಗುವುದು ಖಚಿತ. ಆದರೂ ಅದೊಂದು ಪವರ್ ಫುಲ್ ಕ್ಷೇತ್ರ. ಆ ಪವರಿಗೋಸ್ಕರನೇ ರಾಜಕಾರಣದ ಹೆಬ್ಬಾಗಿಲಿನಲ್ಲಿ ಕಾಣಿಸಿಕೊಳ್ಳುತ್ತಾರೆ ಆಕಾಂಕ್ಷಿಗಳು. ಇದೇ ಮೊದಲ ಬಾರಿಗೆ, ತಮಿಳು ಸಿನಿಮಾ ಕ್ಷೇತ್ರದ ಜನಪ್ರಿಯ ನಟ ವಿಜಯ್, ಇದೀಗ ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುವ ಮೂಲಕ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ.

    ಮಾಧ್ಯಮ ಲೋಕ, ಸಿನಿ ಲೋಕ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಿಂದಲೂ ವಿಜಯ್ ಅವರ ಸಾಧನೆಗೆ ಬಹುಪರಾಕ್ ಹೇಳಲಾಗುತ್ತಿದೆ. ಸಕ್ಸಸ್ ಅನ್ನುವುದು ಹಾಗೆಯೇ ಬಿಡ. ಗೆಲುವಿನ ಜೊತೆಗೆ ಹೆಜ್ಜೆ ಹಾಕಲು, ಗೆಲುವಿನ ಜೊತೆಗೆ ಕಾಣಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ. ವಿಜಯ್ ಇಲ್ಲಿ  ಸಾಕಷ್ಟು ಜಾಗೃತೆಯಿಂದ ಇರಬೇಕಾಗುತ್ತದೆ. ಸಿನಿಮಾ ಕ್ಷೇತ್ರದಂತೆ ರಾಜಕೀಯ ಕ್ಷೇತ್ರವಲ್ಲ. ಅನವಶ್ಯಕವಾಗಿ, ಅರಿವೇ ಇಲ್ಲದಂತೆಯೇ, ಜೊತೆಗಿದ್ದುಕೊಂಡು ಕಾಲೆಳೆದು ಮಲಗಿಸಿ ಬಿಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಕುರ್ಚಿಯ ಸಹಿತ ಬೀಳಬೇಕಾಗುತ್ತದೆ.

    ನಟ ವಿಜಯ್, ಬಹುಮತಕ್ಕೆ ಬೇಕಾಗುವ ಶಾಸಕರ ಬೆಂಬಲವನ್ನು ಪಡೆಯುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಸರ್ಕಾರವನ್ನು ನಡೆಸುತ್ತಾರೆ. ಆದರೆ, ರಾಜಕೀಯ ರಂಗಕ್ಕೆ ಹೊಸಬರಾಗಿರುವ ವಿಜಯ್ ಅವರನ್ನು ಹಾಗೂ ಅವರ ಪಕ್ಷವನ್ನು ರಾಜಕೀಯ ರಂಗದಲ್ಲಿ ಸಾಕಷ್ಟು ಪಟ್ಟುಗಳನ್ನು ಕಲಿತಿರುವಂತಹ ಸೀನಿಯರ್ ಲೀಡರ್ಸ್ಗಳು ಸುಮ್ಮನೆ ಬಿಡುತ್ತಾರೆಯೇ?  ಹಲವು ದಶಕಗಳಿಂದ ತಮಿಳುನಾಡನ್ನು ಡಿಎಂಕೆ ಹಾಗೂ ಎಐಡಿಎಂಕೆ ಸರದಿಯಂತೆ ಆಳುತ್ತಾ ಬಂದಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ, ಬೇರೆಯವರಿಗೆ ಆಸ್ಪದವೇ ಸಿಕ್ಕಿರಲಿಲ್ಲ. ಸಿನಿ ಕ್ಷೇತ್ರದ ಸಾಕಷ್ಟು ನಟರು ತಮ್ಮ ರಾಜಕೀಯ ಭವಿಷ್ಯವನ್ನು ಪರೀಕ್ಷೆಗೆ ಒಡ್ಡಿದ್ದರು. ಸಕ್ಸೆಸ್ ಮಾತ್ರ ಕಂಡಿರಲಿಲ್ಲ. ಎಂಜಿಆರ್ ನಂತರ ಜಯಲಲಿತಾ, ಈಗ ವಿಜಯ್. ಈ ಮೂವರು ಸಿನಿ ಕ್ಷೇತ್ರದಿಂದ ಬಂದು ರಾಜಕೀಯ ಅಖಾಡದಲ್ಲಿ ಸಕ್ಸಸ್ ಕಂಡಿದ್ದಾರೆ. ವಿಜಯ್ ವಿಚಾರದಲ್ಲಿ, ಸಕ್ಸಸ್ ಆಗುವ ಅಥವಾ ಅನ್ ಸಕ್ಸಸ್ ಬಗ್ಗೆ ಈಗಲೇ ಮಾತನಾಡುವ ಹಾಗಿಲ್ಲ, ಅವರ ಓಪನಿಂಗ್ ಎಂಟ್ರಿ ಸಖತ್ತಾಗಿಯೇ ಆಗಿದೆ. ಇನ್ನು ಹೇಗೆ ಆಟವಾಡುತ್ತಾರೆ ನೋಡಬೇಕು. ಎಂಜಿಆರ್ ಹಾಗೂ ಜೈಲಲಿತ ಇಬ್ಬರು ಸಾಕಷ್ಟು ವರ್ಷಗಳ ಕಾಲ ರಾಜಕೀಯದಲ್ಲೂ ಸಕ್ಸಸ್ ಆಟವನ್ನೇ ಆಡಿದ್ದಾರೆ. ಅದೇ ರೀತಿಯ ಸಕ್ಸಸ್ ಆಟ ವಿಜಯ್ ಅವರಿಂದಲೂ ಕಾಣುತ್ತದಾ ನೋಡಬೇಕಿದೆ.

    Also Read  ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ

    ವಿಜಯ್ ನೇತೃತ್ವದ ಟಿವಿಕೆ ಪಕ್ಷದಿಂದ ಹಣವಂತರು ಮಧ್ಯಮ ವರ್ಗದವರು ಬಡವರು ಹಾಗೂ ದ್ವನಿ ಇಲ್ಲದ ಸಮುದಾಯದವರು ಸಹ ಗೆದ್ದು ಬಂದಿರುವಂತದ್ದು, ರಾಜಕೀಯ ಲೋಕದಲ್ಲಿ ಆಶಾಭಾವನೆ ಮೂಡಿಸುತ್ತಿದೆ. ಇವತ್ತಿನ ದಿನವೂ,ಜನರು ಜಾತಿ ಮತ ನೋಡದೆಯೇ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಟಿವಿಕೆ ಪಕ್ಷವು ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ.

    ಆಟೋ ಓಡಿಸುತ್ತಿದ್ದ ವ್ಯಕ್ತಿ ಶಾಸಕರಾಗಿದ್ದಾರೆ, ಸಾಮಾನ್ಯ ಕ್ಷೇತ್ರದಲ್ಲಿ ಎಸ್ ಸಿ ಸಮುದಾಯದ ಅಭ್ಯರ್ಥಿ ಜಯಗಳಿಸಿದ್ದಾರೆ. ಇದೆಲ್ಲವೂ ಇವತ್ತಿನ ದಿನವೂ ಸಾಧ್ಯ ಅನ್ನುವುದನ್ನು ವಿಜಯ ನೇತೃತ್ವ ಟಿ ವಿ ಕೆ ಪಕ್ಷ ಸಾಬೀತು ಮಾಡಿ ತೋರಿಸಿದೆ. ಹಾಗಾಗಿ ವಿಜಯ್ ಅವರ ಈ ಒಂದು ದಿಗ್ವಿಜಯ ಇಡೀ ದೇಶಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದೆ.

    Also Read  ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!

    ನಿಜ, ಈ ಹಿಂದೆ ಅಮ್ಆದ್ಮಿ ಪಕ್ಷವು ತನ್ನ ಮೊದಲ ಯತ್ನದಲ್ಲೇ ಸಕ್ಸಸ್ ಕಂಡಿತ್ತು. ದೆಹಲಿಯ ಗದ್ದುಗೆಯನ್ನು ಆ ಪಕ್ಷವು ಏರಿತ್ತು. ಆ ಪಕ್ಷದಲ್ಲಿ ಬಹುತೇಕವಾಗಿ ಸುಶಿಕ್ಷಿತರಿದ್ದರು, ಆ ಪಕ್ಷದಲ್ಲಿ ಬಹುತೇಕವಾಗಿ ಪರವಾಗಿಲ್ಲ ಅನ್ನುವಷ್ಟು ಹಣವಂತರೂ ಇದ್ದರು. ಬಹುತೇಕವಾಗಿ ಮಧ್ಯಮ ವರ್ಗದವರನ್ನು ಅಮ್ ಆದ್ಮಿ ಪಕ್ಷವು ತನ್ನತ್ತ ಸೆಳೆದಿತ್ತು. ಆದರೆ ಬಡವರ ಮನದೊಳಕ್ಕೆ ಹೋಗಲು ಅವರಿಗೆ ಆಗಿರಲಿಲ್ಲ. ಬಡವರನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಧೈರ್ಯವನ್ನು ಅಮ್ ಆದ್ಮಿ ತೋರಿಸಿರಲಿಲ್ಲ. ಆ ಪಕ್ಷದಲ್ಲಿ ಬಹುತೇಕವಾಗಿ ಒಂದಿಷ್ಟು ಸ್ಟ್ಯಾಂಡರ್ಡ್ ಜನರು ಇದ್ದರು. ಅವರ ಯೋಚನೆಯು ಸ್ಟ್ಯಾಂಡರ್ಡ್ ಆಗಿಯೇ ಇತ್ತು. ಕರಪ್ಶನ್ ವಿರುದ್ಧ ಎತ್ತಿದ ಧ್ವನಿಯು ಅವರನ್ನು ಸಕ್ಸಸ್ ಕಡೆಗೆ ಕೊಂಡೊಯ್ದಿತ್ತು. ಆದರೆ ಆ ಪಕ್ಷಕ್ಕೆ, ಬಡವರು ಹಾಗೂ ಶ್ರೀಮಂತರ ಜೊತೆಗೆ ಬೆರೆಯಲು ಆಗಲಿಲ್ಲ. ಅವರ ವಿಶ್ವಾಸ ಗಳಿಸುವಲ್ಲಿ ಸೋತಿತು. ಮಧ್ಯಮ ವರ್ಗದವರಲ್ಲೂ ಸಹ ಎಲ್ಲರನ್ನೂ ತಲುಪಲಾಗಲಿಲ್ಲ.  ನಿಧಾನವಾಗಿ ಆ ಪಕ್ಷವು, ಹೋರಾಟವನ್ನಷ್ಟೇ ಮಾಡುತ್ತಿದೆಯೇನೋ ಎಂಬಂತೆ ಭಾಸವಾಗಲು ಪ್ರಾರಂಭವಾಯಿತು. ಆಡಳಿತ ಪಕ್ಷಕ್ಕೆ ಬಂದು ಕೂತ ಮೇಲೆ ಹೋರಾಟದ ವಿಚಾರವನ್ನು ಪಕ್ಕಕ್ಕಿಟ್ಟು ಜನರಿಗೆ ಬೇಕಾಗುವಂತಹ ಕೆಲಸದ ಕಡೆಗೆ, ರಾಜ್ಯದ ಅಭಿವೃದ್ಧಿಯ ಕಡೆಗೆ ದಾಪುಗಾಲಿಡಬೇಕಿತ್ತು. ಆ ಕಡೆ ದಾಪುಗಾಲು ಇಟ್ಟಿದ್ದು ನಿಜವೇ ಆದರೂ, ಕೇಂದ್ರ ಹಾಗೂ ಅಲ್ಲಿನ ಗೌರ್ನರ್ ಜೊತೆಗೆ ಬಹಿರಂಗವಾಗಿ ಕಿತ್ತಾಡಿದ್ದು, ಅದನ್ನು ಹೋರಾಟವಾಗಿ ಪರಿವರ್ತಿಸಿದ್ದನ್ನು ಜನರು ಒಪ್ಪಲಿಲ್ಲ. ಬುದ್ಧಿವಂತಿಕೆಯನ್ನು ಉಪಯೋಗಿಸುವುದರ ಬದಲು, ದಂಡವನ್ನು ಉಪಯೋಗಿಸಲು ಹೋಗಿ ಈಗ ಪೆಟ್ಟು ತಿಂದಿದ್ದಾರೆ. ಹಾಗಾಗಿ ಇದೀಗ ಅಮ್ಆದ್ಮಿ ಪಕ್ಷವೂ ವಿನಾಶದತ್ತ ಸಾಗುತ್ತಿದೆ

    Also Read  ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!

    ಟೀವಿಕೆಯ ನಾಯಕ ವಿಜಯ್ ಇದನ್ನು ಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕಿದೆ. ನೂರಕ್ಕೆ ನೂರರಷ್ಟು, ಮುಂದಿನ ದಿನದಲ್ಲಿ ಅಭಿವೃದ್ಧಿಗೆ ಹಾಗೂ ಆಡಳಿತಕ್ಕೆ ಸಾಕಷ್ಟು ಅಡೆತಡೆಗಳನ್ನು ಎದುರಿಸ ಬೇಕಾಗುತ್ತದೆ. ಅದನ್ನು ಜಾಣಮೆಯಿಂದ ಎದುರಿಸಿ, ಮುಂದೆ ಸಾಗುವುದರ ಕಡೆ ಗಮನಹರಿಸಬೇಕೆ ಹೊರತು ಜಿದ್ದಿಗೆ ಬಿದ್ದು ಗುದ್ದಾಟಕ್ಕೆ ನಿಂತರೆ ಸಮಸ್ಯೆ ಆಗುವುದು ಟೀವೀಕೆಗೆನೆ. ಅದರ ಎಫೆಕ್ಟ್ ವಿಜಯ ಅನುಭವಿಸಬೇಕಾಗುತ್ತದೆ. ರಾಜಕಾರಣ ಎಂದರೆ ಹಣ, ಹಣ ಇಲ್ಲದಿದ್ದರೆ ರಾಜಕಾರಣ ಇಲ್ಲ, ಮಸಲ್ ಪವರ್ ಇರದಿದ್ದರೆ ರಾಜಕಾರಣದಲ್ಲಿ ಸಕ್ಸಸ್ ಕಾಣಲಾಗದು ಎಂಬಂತಹ ಹಲವು ನಂಬಿಕೆಗಳು ಇರುವಂತಹ ಸಂದರ್ಭದಲ್ಲಿ, ಅದೆಲ್ಲವನ್ನು ಸುಳ್ಳು ಅಂತ ಸಾಬೀತು ಪಡಿಸಿದ ಹೆಗ್ಗಳಿಕೆ ಟಿವಿಗೆ ಸಲ್ಲುತ್ತದೆ. ಜನರ ಅಭಿಮಾನ ಹಾಗೂ ಬೆಂಬಲವನ್ನು ಪಡೆದು, ಈ ಮಟ್ಟಕ್ಕೆ ಬೆಳೆದಿರುವ ವಿಜಯ್, ಆ ಬೆಂಬಲ ಮತ್ತು ಅಭಿಮಾನವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಅನವಶ್ಯಕವಾದಂತಹ ಕಿತ್ತಾಟ ಬಡಿದಾಟಕ್ಕಿಂತ ಜಾಣ್ಮೆಯಿಂದ ಕೆಲಸ ಮಾಡಿಸಿಕೊಳ್ಳುವುದರ ಕಡೆ ಯೋಚಿಸಿದರೆ ಸಾಕು, ವಿಜಯ್ ನೇತೃತ್ವದ  ಟಿವಿಕೆ, ಎಂ ಜಿ ಆರ್ ಹಾಗೂ ಜಯಲಲಿತಾರಂತೆ ಸಕ್ಸಸ್ ರಾಜಕಾರಣಿ ಆಗುವುದರಲ್ಲಿ ಯಾವ ಅನುಮಾನವೂ ಇರೋದಿಲ್ಲ. ವಿಜಯ್ ರಾಜಕೀಯ ರಂಗದಲ್ಲಿ ಲಾಂಗ್ ಟೈಮ್ ಉಳಿದುಕೊಳ್ಳುತ್ತಾರೆ ಅಂತರ್ಥ.

    –ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಾರರ್ ಸಿನಿಮಾ ಸೀನ್ ಅಂತ ಅನಿಸ್ತು… ಆದರೆ ಇದು ನಿಜ ಘಟನೆ! ಟಾಯ್ಲೆಟ್ ಒಳಗಿಂದ ತಲೆ ಎತ್ತಿದ ವಿಷದ ರಾಜ…
    “ಅಮ್ಮಾ… ಉಸಿರಾಡಲು ಆಗ್ತಿಲ್ಲ!” — 2 ಗಂಟೆಯ ಕೊನೆಯ ಕರೆ ಬಳಿಕ 4:30ಕ್ಕೆ ಶವ… ನಿಮಿಷಾಳಿಗೆ ಏನಾಯ್ತು?
    ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ದಾವಣಗೆರೆ ಬೆಚ್ಚಿಬಿದ್ದಿದೆ! 41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ಕ್ಲೌಡ್ ಮಾರುಕಟ್ಟೆಗೆ ಮಾರ್ಕ್ ಜುಕರ್‌ಬರ್ಗ್ ಎಂಟ್ರಿ!?ಇಡೀ ಟೆಕ್ ಪ್ರಪಂಚವೇ ಬೆಚ್ಚಿಬೀಳುವಂತಿದೆ ಜುಕರ್‌ಬರ್ಗ್ ಮುಂದಿನ ನಡೆ!
    ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ
    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
    Train Travel ಇಷ್ಟನಾ? ಹಾಗಾದ್ರೆ ಈ ಸುದ್ದಿ ತಿಳ್ಕೊಳ್ಳಿ!ಬೆಂಗಳೂರು–ಮಂಗಳೂರು ಗೋವಾ ವಂದೇ ಭಾರತ್….!?
    ಬಸ್‌ ಚರಂಡಿಗೆ ಬಿದ್ದರೂ ಪ್ರಯಾಣಿಕರಿಗೆ ಏನೂ ಆಗಲಿಲ್ಲ!ಕಣ್ಣೆದುರೇ ಮಹಾ ಅವಘಡ… ಶ್ರೀಕೃಷ್ಣನೇ ಕಾಪಾಡಿದಂತೆ ಪಾರಾದ ಪ್ರಯಾಣಿಕರು!
    “ರೈಲಿನಲ್ಲೇ ಇಂಥಾ ಕೃತ್ಯ! ನಾಗರಿಕ ಪ್ರಜ್ಞೆ ಎಲ್ಲಿದೆ?”
    ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಮಂಗಳೂರು ಯೂಟ್ಯೂಬರ್‌ಗಳ ವಿರುದ್ಧ ಬಿಎನ್‌ಎಸ್ ಅಸ್ತ್ರ ಪ್ರಯೋಗಿಸಿದ ಖಾಕಿ!….
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
    ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
    ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
    ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ,15 ವಿದ್ಯಾರ್ಥಿಗಳು ಸಜೀವ ದಹನ ಹೃದಯವಿದ್ರಾವಕ ದುರಂತ
    Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
    ಪ್ರತಿಭಟನೆ ಜನರ ಹಕ್ಕು, ಜನರ ಧ್ವನಿ ಅಡಗಿಸಲು ಸಾಧ್ಯವಿಲ್ಲ! ದಿಲ್ಲಿ ಪೊಲೀಸರಿಗೆ ಸುಪ್ರೀಂ ಎಚ್ಚರಿಕೆ…
    ಶಾಲೆಗಳ ದುಸ್ಥಿತಿ ತೋರಿಸಲು CJP ಸಜ್ಜು; ‘ಹೊರಗಿನವರಿಗೆ ನೋ ಎಂಟ್ರಿ’ ಎಂದ ರಾಜಸ್ಥಾನ ಸರ್ಕಾರ!
    ಪವಾಡವೇ? 33 ದಿನ ,775 ಗಂಟೆಗಳ ಬಳಿಕ ಸಮಾಧಿಯಿಂದ ಹೊರಬಂದ ಶಿವಯೋಗಿ ಶ್ರೀಗಳು……!!!!ಗದಗದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆ!ಪರಮ ಯೋಗವೇ?
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?