📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!

    ದುಬೈ ಕನಸು ಕಂಡ ಯುವಕ… ಡ್ರಗ್ ಮಾಫಿಯಾದ ಬಲೆಗೆ ಬಿದ್ದು ಜೈಲು ಸೇರಿದ!

    ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ತಲಹ್ ಯಾನೆ ಅನ್ವರ್ ಯಾನೆ ಅನ್ಸಾರ್ (21) ದುಬೈಗೆ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆ ನಡೆಸಿದ್ದ. ಜುಲೈ 30ರ ಸಂಜೆ ವಿಮಾನ ಏರಿ ಹೊಸ ಜೀವನ ಆರಂಭಿಸುವ ಕನಸು ಆತನದಾಗಿತ್ತು. ಆದರೆ ಒಂದು ತಪ್ಪು ನಿರ್ಧಾರ, ಒಂದು ತಪ್ಪು ಸಂಪರ್ಕ ಆ ಕನಸನ್ನು ಕ್ಷಣಾರ್ಧದಲ್ಲಿ ಪುಡಿಗೈದಿದೆ.

    ಬೆಳ್ತಂಗಡಿ ಪೊಲೀಸರು ಬುಧವಾರ ರಾತ್ರಿ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ತಲಹ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನ ಬಳಿ 20 ಗ್ರಾಂ ಗಾಂಜಾ ಪತ್ತೆಯಾಯಿತು. ನಂತರ ಕಾರಿನ ಪರಿಶೀಲನೆಯಲ್ಲಿ 76 ಗ್ರಾಂ ಎಂಡಿಎಂಎಪತ್ತೆಯಾಗಿದ್ದು, ಒಟ್ಟು 15.41 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    Also Read  ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!

    ವಿಚಾರಣೆಯಲ್ಲಿ ತಲಹ್, ಗಾಂಜಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಖರೀದಿಸಿದ್ದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಹಮ್ಮತ್ ಕರಾರ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತಲಹ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಯುವಕರಿಗೆ ಎಚ್ಚರಿಕೆ

    ದುಬೈಗೆ ಹೋಗಿ ಉತ್ತಮ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದ ಯುವಕ, ಕೊನೆಗೆ ವಿಮಾನ ನಿಲ್ದಾಣದ ಬದಲು ಜೈಲಿನ ದಾರಿ ಹಿಡಿಯಬೇಕಾಯಿತು. ಕ್ಷಣಿಕ ಹಣದ ಆಸೆ, ತಪ್ಪು ಸ್ನೇಹ, ಡ್ರಗ್ ಜಾಲದ ಸಂಪರ್ಕ – ಇವೆಲ್ಲವೂ ಭವಿಷ್ಯವನ್ನೇ ನಾಶ ಮಾಡಬಹುದು.

    ಡ್ರಗ್ ಮಾಫಿಯಾ ಮೊದಲು ಹಣದ ಆಸೆ ತೋರಿಸುತ್ತದೆ; ನಂತರ ಕನಸು, ಕುಟುಂಬ, ವೃತ್ತಿ ಮತ್ತು ಜೀವನವನ್ನೇ ಕಸಿದುಕೊಳ್ಳುತ್ತದೆ. ಯುವಕರೇ, ಮಾದಕ ಜಾಲದಿಂದ ದೂರವಿರಿ. ಒಂದು ತಪ್ಪು ಹೆಜ್ಜೆ ಇಡೀ ಜೀವನವನ್ನು ಕತ್ತಲೆಗೆ ತಳ್ಳಬಹುದು.

    ##DrugMafia #DrugNetwork #MDMA #Belthangady #KarnatakaPolice #YouthAwareness #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    “ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
    ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
    ಕಾಂಗೋದಲ್ಲಿ ಭೀಕರ ವಿಮಾನ ಅಪಘಾತ: ಇಬ್ಬರು ಸೇನಾ ಲೆಫ್ಟಿನೆಂಟ್ ಜನರಲ್ ಸೇರಿ 14 ಮಂದಿ ಸಾವು
    ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
    ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?
    ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
    BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪುಡಿಗೈದ ಭಾರತದ ವನಿತೆಯರು !ಆರಂಭವೇ ವಿಜಯದ ಘರ್ಜನೆ!
    ಡೈಪರ್‌ನಲ್ಲಿ ಚಿನ್ನ! ಚಿನ್ನ ಕಳ್ಳಸಾಗಣೆಗೆ ಏನೆಲ್ಲಾ‘ಐಡಿಯಾ’? 8 ತಿಂಗಳ ಮಗುವನ್ನೂ ಬಿಟ್ಟಿಲ್ಲ!
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    “ಟೀಕೆ ಮಾಡಿ, ತೇಜೋವಧೆ ಬೇಡ” – ಹೈಕೋರ್ಟ್‌ನಿಂದ ಗಿರೀಶ್ ಮಟ್ಟೆಣ್ಣನವರ್‌ಗೆ ಖಡಕ್ ಎಚ್ಚರಿಕೆ
    ಮಂಗಳೂರು ಯೂಟ್ಯೂಬರ್‌ಗಳ ವಿರುದ್ಧ ಬಿಎನ್‌ಎಸ್ ಅಸ್ತ್ರ ಪ್ರಯೋಗಿಸಿದ ಖಾಕಿ!….
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ಮತದಾನದ ಹಕ್ಕು ಉಳಿಸಿಕೊಳ್ಳಿ: ಎಸ್‌ಐಆರ್ ಗಡುವು ಆಗಸ್ಟ್.17ರವರೆಗೆ ವಿಸ್ತರಣೆ
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಬ್ರೇಕಿಂಗ್ ನ್ಯೂಸ್..!final‘ಸಚಿವರ ಪಟ್ಟಿ’ ವೈರಲ್: ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ!
    ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ